ತ್ಯಾಜ್ಯ ವಸ್ತುಗಳಿಂದ ಎಟಿವಿ ಕ್ವಾಡ್ ಬೈಕ್ ನಿರ್ಮಿಸಿದ ಆದರ್ಶ್
Team Udayavani, Jan 28, 2019, 12:50 AM IST
ಕಾಸರಗೋಡು: ಬಳಸಿ ಎಸೆಯುವ ತ್ಯಾಜ್ಯ ವಸ್ತುಗಳಿಂದ ಎಟಿವಿ ಬೈಕ್ ನಿರ್ಮಿಸಿ ವಿದ್ಯಾರ್ಥಿಯೊಬ್ಬ ಗಮನ ಸೆಳೆದಿದ್ದಾರೆ. ಬಿರಿಕ್ಕುಳದ ಕಾರ್ಪೆಂಟರಿ ಕಾರ್ಮಿಕ ಕೆ. ದಾಮೋದರನ್ ಹಾಗೂ ಇ.ಎನ್.ಅಶ್ವತಿ ದಂಪತಿಯ ಪುತ್ರ ಕೆ.ಡಿ. ಆದರ್ಶ್ ಈ ಸಾಧನೆ ಮಾಡಿ ಮಾದರಿಯಾಗಿದ್ದಾರೆ. ಉಪೇಕ್ಷಿಸಲಾದ ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ಜೋಡಿಸಿ ಎಟಿವಿ ಕ್ವಾಡ್ ಬೈಕ್ ತಯಾರಿಸುವ ಮೂಲಕ ‘ಕಸದಿಂದ ರಸ’ ಎಂಬ ಮಾತನ್ನು ಅನ್ವರ್ಥಗೊಳಿಸಿದ್ದಾರೆ.
ಹೀರೋ ಹೋಂಡಾ ಬೈಕ್‌ನ ಎಂಜಿನ್, ಆಟೋ ರಿಕ್ಷಾ ಹಾಗೂ ಸ್ಕೂಟಿಯ ತಲಾ ಎರಡು ಚಕ್ರಗಳು ಮೊದಲಾದವುಗಳನ್ನು ಉಪಯೋಗಿಸಿ ಎಟಿವಿ ಬೈಕ್ ತಯಾರಿಸಿ ಗಮನ ಸೆಳೆಯುತ್ತಿದ್ದಾರೆ. ಸ್ವಂತವಾಗಿ ಬಿಡಿಸಿದ ಮಾದರಿಯನ್ನು ಅನುಸರಿಸಿ ಐದು ತಿಂಗಳ ಪ್ರಯತ್ನದ ಫಲವಾಗಿ ಬೈಕ್ ನಿರ್ಮಿಸಲಾಗಿದೆ. ಯಾವುದೇ ರಸ್ತೆಗಳಲ್ಲೂ ಈ ಬೈಕ್‌ನ್ನು ಓಡಿಸಬಹುದು ಎಂಬುದು ವಿಶೇಷತೆಯಾಗಿದೆ. ಅಂಗವಿಕಲರು ಸುಗಮ ವಾಗಿ ಈ ಬೈಕ್‌ನ್ನು ಚಾಲನೆ ಮಾಡಬಹುದು. ಹೆಚ್ಚಿನ ಪ್ರೋತ್ಸಾಹ, ನೆರವು ಲಭಿಸಿದರೆ ವಾಣಿಜ್ಯ ಆಧಾರದಲ್ಲಿ ಇಂತಹ ವಾಹನಗಳನ್ನು ಹಾಗೂ ಹಲವು ಇಂಧನಗಳಲ್ಲಿ ಓಡಿಸಲು ಸಾಧ್ಯವಾಗುವ ವಾಹನ ನಿರ್ಮಿಸಬೇಕು ಎಂಬುದು ಆದರ್ಶ್‌ನ ಆಶಯ.
ತೃಕ್ಕರಿಪುರ ಇ.ಕೆ.ಎನ್.ಎಂ. ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಎಲೆಕ್ಟ್ರಾನಿಕ್ ಡಿಪ್ಲೊಮಾ ವಿದ್ಯಾರ್ಥಿಯಾಗಿರುವ ಆದರ್ಶ್ ಆಟೋಮೊಬೈಲ್‌ನಲ್ಲಿರುವ ಅಭಿರುಚಿ ಆತನನ್ನು ಇಂತಹದೊಂದು ಕೆಲಸಕ್ಕೆ ಪ್ರೇರೇಪಿಸಿದೆ. ಎಳವೆಯಿಂದಲೇ ಮರ ದಿಂದ, ಲೋಹಗಳಿಂದ ನಾನಾ ಉಪಕರಣ ಗಳನ್ನು ನಿರ್ಮಿಸುವುದು ಅವರ ಹವ್ಯಾಸವಾಗಿತ್ತು. ಏರ್‌ಗನ್, ಕಾರ್ಬೇಡ್ ಗನ್, ಬ್ಲೂಟೂತ್ ಕಂಟ್ರೋಲ್ಡ್ ಆಡಿಯೋ ಪ್ಲೇಯರ್ ಇತ್ಯಾದಿ ನಿರ್ಮಿಸಿದ್ದಾರೆ.
ವೃತ್ತಿ ಪರಿಚಯ ಮೇಳದಲ್ಲಿ ಜಿಲ್ಲಾ ಮಟ್ಟದಲ್ಲಿ ಆದರ್ಶ್ ಗೆಲುವು ಸಾಧಿಸಿದ್ದರು. ತಂದೆ- ತಾಯಿ ಮತ್ತು ಸಹೋದರ ಅನುರಾಗ್ ಅವರ ಪ್ರೋತ್ಸಾಹದಿಂದ ಈ ಕೆಲಸದಲ್ಲಿ ತೊಡಗಿಸಿಕೊಳ್ಳಲು ಕಾರಣವಾಗಿದೆ ಎಂಬುದಾಗಿ ಅವರು ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.