ಮಾ.19- 24: ಅಡ್ಕ ಶ್ರೀ ಭಗವತೀ ಕ್ಷೇತ್ರ ಕಳಿಯಾಟ ಮಹೋತ್ಸವ


Team Udayavani, Mar 16, 2018, 8:55 AM IST

Kaliyata-14-3.jpg

ಕುಂಬಳೆ: ಮಂಗಲ್ಪಾಡಿ ಅಡ್ಕ ಶ್ರೀ ಭಗವತೀ ಕ್ಷೇತ್ರದಲ್ಲಿ ಮಾ. 15 ಮತ್ತು 16ರಂದು ಬ್ರಹ್ಮಕಲಶಾಭಿಷೇಕ ಹಾಗೂ ಮಾ. 19ರಿಂದ ಮಾ. 24ರ ತನಕ ಕಳಿಯಾಟ ಮಹೋತ್ಸವವು ಜರಗಲಿರುವುದು. ಮಾ.9 ರಂದು ಬೆಳಗ್ಗೆ ಬ್ರಹ್ಮಕಲಶ ದಿನಾಚರಣೆ ಪ್ರಯುಕ್ತ ಬ್ರಹ್ಮಶ್ರೀ ಬಡಾಜೆ ಗೋಪಾಲಕೃಷ್ಣ ತಂತ್ರಿಯವರ ದಿವ್ಯಹಸ್ತದಲ್ಲಿ ನವಕ ಕಲಶ ಹಾಗೂ ಹೂವಿನ ಪೂಜೆ ನಡೆಯಿತು. ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮದಂಗವಾಗಿ ಮಾ.15ರಂದು ಸಂಜೆ 5 ಗಂಟೆಗೆ  ಸಾಮೂಹಿಕ ಪ್ರಾರ್ಥನೆ,ಸ್ಥಳ ಶುದ್ಧಿ ಹಾಗೂ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಭಗವತೀ ಮಾತೆಯ ನೂತನವಾಗಿ ನಿರ್ಮಿಸಿದ ಬಿಂಬ ಅಧಿವಾಸ ಹಾಗೂ ಕಲಶಾಧಿವಾಸ ಜರಗಿತು.

ಮಾ. 16ರಂದು ಬೆಳಗ್ಗೆ 6.30ರಿಂದ ಗಣಪತಿ ಹೋಮ, 7.50ರ ಮೀನ ಲಗ್ನದ ಶುಭ ಮೂಹೂರ್ತದಲ್ಲಿ ಬ್ರಹ್ಮಶ್ರೀ ಬಡಾಜೆ ಗೋಪಾಲಕೃಷ್ಣ ತಂತ್ರಿಯವರ ದಿವ್ಯಹಸ್ತದಲ್ಲಿ ಶ್ರೀ ಭಗವತೀ ಮಾತೆಯ ಬಿಂಬ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಮಹಾ ಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.

ಮಾ. 19ರಂದು ಬೆಳಗ್ಗೆ 8.30ಕ್ಕೆ ಗಣಹೋಮ ಮತ್ತು ಚಪ್ಪರ ಮುಹೂರ್ತ,ಮಧ್ಯಾಹ್ನ ಅನ್ನದಾನ,ಸಂಜೆ 7 ಗಂಟೆಗೆ ಭಂಡಾರ ಆರೋಹಣ ಮತ್ತು ನಡೋದಿ ಉತ್ಸವದ ಬಳಿಕ ರಾತ್ರಿ ಅನ್ನದಾನ ನಡೆಯಲಿದೆ.

ಮಾ. 20ರಂದು ಬೆಳಗ್ಗೆ ಗಂಟೆ 11.30ಕ್ಕೆ ನಾಗ ತಂಬಿಲದ ಬಳಿಕ ಮಧ್ಯಾಹ್ನ ಅನ್ನದಾನ ನಡೆಯಲಿದೆ. ಸಂಜೆ 4ರಿಂದ ಪುಲ್ಲೂರ್‌ ಕಣ್ಣನ್‌, ಕಾಳಪುಲಿಯನ್‌, ಪುಲಿಕಂಡನ್‌ ವೇಟಕ್ಕುರು ಮಗನ್‌ ದೈವಗಳ ವೆಳ್ಳಾಟಂ, ರಾತ್ರಿ 9.30ಕ್ಕೆ ಮೊದಲ್ಕಳಿಯಾಟ ಆರಂಭ, ಕರಿಂದ ನಾಯರ್‌ ವೆಳ್ಳಾಟಂ, ಕೆಂಡ ಸೇವೆ ಬಲಿ, ಬಿಂಬ ದರ್ಶನ ಪುಲ್ಲೂರಾಳಿ ದೈವದ ತೋಟ್ಟಂ ಬಳಿಕ ರಾತ್ರಿ ಅನ್ನದಾನ ನಡೆಯಲಿದೆ. ರಾತ್ರಿ 1 ಗಂಟೆಯಿಂದ ಪುಲಿಚೋಗನ್‌ ದೈವ, 3ರಿಂದ ಕರಿಂದಿರ ನಾಯರ್‌ ದೈವ ದರ್ಶನ ನಡೆಯಲಿದೆ.

ಮಾ. 21ರಂದು ಬೆಳಗ್ಗೆ 6ರಿಂದ ಕಾಳಪುಲಿಯನ್‌ ದೈವ, 8ರಿಂದ ವೇಟಕ್ಕುರುಮಗನ್‌ ದೈವ, 10ರಿಂದ ಪಿಲಿಕಂಡನ್‌ ದೈವ, 11ರಿಂದ ಪುಲ್ಲೂರಾಳಿ ದೈವದ ಬಳಿಕ ಮಧ್ಯಾಹ್ನ ಅನ್ನದಾನ ನಡೆಯಲಿದೆ. ಸಂಜೆ 4 ರಿಂದ ಪುಲ್ಲೂರು ಕಣ್ಣನ್‌, ಕರಿಂದರ ನಾಯರ್‌, ವೇಟಕ್ಕುರು ಮಗನ್‌, ಕಾಳಪುಲಿಯನ್‌ ದೈವಗಳ ವೆಳ್ಳಾಟಂ. ರಾತ್ರಿ ಗಂಟೆ 7ರಿಂದ ನಡು ಕಳಿಯಾಟ ಆರಂಭ,ರಾತ್ರಿ ಅನ್ನದಾನ, 10.30ಕ್ಕೆ ಹೂವಿನ ಪೂಜೆ,ರಾತ್ರಿ ಗಂಟೆ 11.30ಕ್ಕೆ  ಪ್ರಧಾನ ಉತ್ಸವ, ಪುಲಿಕಂಡನ್‌ ದೈವದ ವೆಳ್ಳಾಟಂ, ಕೆಂಡಸೇವೆ, ಬಲಿ, ಬಿಂಬ ದರ್ಶನ ಪುಲ್ಲಿಕರಿಂಗಾಳಿ ಮತ್ತು ಪುಲ್ಲುರಾಳಿ ದೈವದ ತೋಟ್ಟಂ,ರಾತ್ರಿ ಗಂಟೆ 2.00ಕ್ಕೆ ಪುಲಿಕಂಡನ್‌ ದೈವದ ದರ್ಶನಪಾತ್ರಿ ದೈವದರ್ಶನದೊಂದಿಗೆ ಐಲ ಶ್ರೀ ದುರ್ಗಾಪರಮೇಶ್ವರಿ ದೇವಿಯ ಭೇಟಿಗೆ ಹೊರಡುವುದು.

ರಾತ್ರಿ ಗಂಟೆ 8 ರಿಂದ  ಶ್ರೀ ವಯನಾಡು ಕುಲವನ್‌ ಯುವಕ ಸಂಘ,ಮಾವಿನ ಕೊಪ್ಪಳ, ತರುಣ ಕಲಾವೃಂದ,ವೀರನಗರ, ಅಡ್ಕ ಶಿರಿಯ, ಶ್ರೀ ಭಗವತೀ ಯುವಜನ ಸೇವಾ ಸಂಘ ಅಡ್ಕ, ಶ್ರೀ ಭಗವತೀ ಕೃಪಾ ವೀರಾಂಜನೇಯ ವ್ಯಾಯಾಮ ಶಾಲೆ, ಭಗವತೀ ನಗರ, ಅಡ್ಕ ತಾಲೀಮು ಪ್ರದರ್ಶನದೊಂದಿಗೆ,ಶಕ್ತಿ ನ್ಪೋರ್ಟ್ಸ್ ಮತ್ತು ಆರ್ಟ್ಸ್ ಕ್ಲಬ್‌ ಬಂದ್ಯೋಡು ಇವರಿಂದ ಉಲ್ಪೆ ಸಮರ್ಪಣೆ ನಡೆಯಲಿದೆ.

ಮಾ. 22ರಂದು ಬೆಳಗ್ಗೆ ಗಂಟೆ 5ಕ್ಕೆ ಪುಳ್ಳಿಕರಿಂಗಾಳಿ ದೈವ, ಆಯಿರತ್ತಿರಿ ದೈವೋತ್ಸವ, ಪ್ರಸಾದ ವಿತರಣೆ,ಬೆಳಗ್ಗೆ ಗಂಟೆ 10.30ಕ್ಕೆ ಕಾಳಪುಲಿಯನ್‌ ದೈವ, 11.30ಕ್ಕೆ ಕರಿಂದಿರ ನಾಯರ್‌ ದೈವ, 12.30ಕ್ಕೆ ವೇಟಕ್ಕುರು ಮಗನ್‌ ದೈವದ ಬಳಿಕ ಮಧ್ಯಾಹ್ನ ಅನ್ನದಾನ ನಡೆಯಲಿದೆ. 

ಸಂಜೆ ಗಂಟೆ 6ಕ್ಕೆ ಪುಲಿಕಂಡನ್‌ ದೈವ, ವಿಷ್ಣುಮೂರ್ತಿ ದೈವ ಶಿರಿಯ ಶ್ರೀ ಶಂಕರನಾರಾಯಣ ದೇವರ ಭೇಟಿಗೆ ಹೊರಡುವುದು.ರಾತ್ರಿ ಅನ್ನದಾನ 10ಕ್ಕೆ ಪುಲ್ಲೂರಾಳಿ ದೈವ, ರಾತ್ರಿ ಗಂಟೆ 9ರಿಂದ ಶ್ರೀ ಗೋಪಾಕೃಷ್ಣ ಯುವಕ ಕಲಾವೃಂದ ಬಂದ್ಯೋಡು ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿರುವುದು.

ಮಾ. 23ರಂದು ಮಧ್ಯಾಹ್ನ ಅನ್ನದಾನ,ಸಂಜೆ 4ರಿಂದ ಪುಲಿಕಂಡನ್‌, ಕರಿಂದಿರ ನಾಯರ್‌, ವೇಟಕ್ಕುರು ಮಗನ್‌, ಕಾಳಪುಲಿಯನ್‌ ದೈವಗಳ ವೆಳ್ಳಾಟಂ, ಸಂಜೆ ಗಂಟೆ 6ಕ್ಕೆ ಕಡೇ ಕಳಿಯಾಟ ಆರಂಭ, ರಾತ್ರಿ 8.30ರಿಂದ ಅನ್ನದಾನ, 9.30ಕ್ಕೆ ಹೂವಿನ ಪೂಜೆ,ರಾತ್ರಿ ಗಂಟೆ 10ರಿಂದ ಕೆಂಡ ಸೇವೆ, ಬಲಿ, ಬಿಂಬ ದರ್ಶನ  ಅನಂತರ ಪುಲ್ಲೂರ್‌ ಕಣ್ಣನ್‌ ದೈವದ ವೆಳ್ಳಾಟಂ ಪುಲ್ಲೂರಾಳಿ ದೈವದ ತೋಟ್ಟಂ,ರಾತ್ರಿ ಗಂಟೆ 1ಕ್ಕೆ ಪುಲಿಕಂಡನ್‌ ದೈವ,2.30ಕ್ಕೆ ಕರಿಂದಿರ, ರಾತ್ರಿ 8ರಿಂದ ಹೇರೂರು ಯುವಕರಿಂದ, ಅಡ್ಕ ಶ್ರೀ ಭಗವತೀ ಮಹಿಳಾ ಸೇವಾ ಸಮಿತಿ ಶ್ರೀ ಭಗವತೀ ಕೃಪಾ ವೀರಾಂಜನೇಯ ವ್ಯಾಯಾಮ ಶಾಲೆ ಅಡ್ಕ ಇವರಿಂದ ಉಲ್ಪೆ ಸಮರ್ಪಣೆ ನಡೆಯಲಿದೆ.

ಮಾ 24ರಂದು ಮುಂಜಾನೆ ಗಂಟೆ 4ಕ್ಕೆ ಗುಳಿಗ ಕೋಲ, 6ಕ್ಕೆ ಕಾಳಪುಲಿಯನ್‌ ದೈವ, 9ಕ್ಕೆ ಪುಲ್ಲೂರಾಳಿ ದೈವ, ಮಧ್ಯಾಹ್ನ 1ಕ್ಕೆ ಶ್ರೀ ವಿಷ್ಣುಮೂರ್ತಿ ಮತ್ತು ಹೂಮುಡಿ ಉತ್ಸವ, ಅನ್ನದಾನ ನಡೆಯಲಿದೆ. ರಾತ್ರಿ ಗಂಟೆ 7ಕ್ಕೆ ಭಂಡಾರ ಅವರೋಹಣದ ಬಳಿಕ ರಾತ್ರಿ ಅನ್ನದಾನದೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.

ಟಾಪ್ ನ್ಯೂಸ್

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

egg

Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

CT Ravi case:ಬೆಳಗಾವಿ ಕೋರ್ಟ್‌ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್‌ ಅನಿಸಿತು…

22-hunsur

Hunsur: ಒಂದೆಡೆ ಚಿರತೆ ಸೆರೆ, ಮತ್ತೊಂದೆಡೆ ಅಪಘಾತ

CDS ಬಿಪಿನ್‌ ರಾವತ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನಕ್ಕೆ ಮಾನವ ಲೋಪವೇ ಕಾರಣ: ವರದಿ

Human Error: ಮಾನವ ಲೋಪದಿಂದಲೇ CDS ರಾವತ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನ: ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

21-sabarimala

Sabarimala: ಭಕ್ತರ ಸುರಕ್ಷೆಗಾಗಿ ಮಾರ್ಗಸೂಚಿ ಪ್ರಕಟ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

KSA-Nia-Arrest

Operation: ಕಾಸರಗೋಡಿನಲ್ಲಿ ಎನ್‌.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ

POlice

Kasaragod: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಎಸೆದು ಘರ್ಷಣೆಗೆ ಯತ್ನ; ಕೇಸು ದಾಖಲು

crimebb

Kasaragod ಅಪರಾಧ ಸುದ್ದಿಗಳು; ತಂಬಾಕು ಉತ್ಪನ್ನಗಳ ಸಹಿತ ಇಬ್ಬರ ಬಂಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

6

Gangolli-ಕುಂದಾಪುರ ಬಾರ್ಜ್‌ ಕನಸಿಗೆ ತಣ್ಣೀರು

5

Mangaluru: ಮಳೆ ನೀರು ಹರಿಯುವ ಕಾಲುವೆಗೆ ಪೈಪ್‌!

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

4

Kinnigoli: ಘನ ವಾಹನ ನಿರ್ಬಂಧ; ಜನ ಪರದಾಟ

ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.