ನೀರ್ಚಾಲು ಮದಕ: ಜಲ ಮರುಪೂರಣ ಸಾಹಸ
ಸರೋವರ ಯೋಜನೆ ಕಾಮಗಾರಿಗೆ ಚಾಲನೆ
Team Udayavani, Jul 19, 2019, 5:12 AM IST
ಕಾಸರಗೋಡು: ಶತಮಾನದ ಇತಿಹಾಸವಿರುವ ನೀರ್ಚಾಲು ಮದಕವನ್ನು ಅಭಿವೃದ್ಧಿಪಡಿಸಿ ಜಲ ಮರುಪೂರಣಗೈಯುವ ಕಾಮಗಾರಿ ಪುನರಾರಂಭಗೊಂಡಿದೆ. 2016 ಜ. 1ರಂದು ಸಿ.ಪಿ.ಸಿ.ಆರ್.ಐ. ಡೈರೆಕ್ಟರ್ ಡಾ| ಪಿ. ಚೌಡಪ್ಪ ಹಾಗೂ ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್ ಅವರ ಉಪಸ್ಥಿತಿಯಲ್ಲಿ ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು ಅವರು ಮದಕದ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದರು.
ಶಿಲಾನ್ಯಾಸ ಕಾರ್ಯವನ್ನು ಬಹಿಷ್ಕರಿಸುವ ಮೂಲಕ ಹಲವಾರು ಸಮಸ್ಯೆಗಳಿಗೆ ಕಾರಣವಾಗಿ ನಿರ್ಮಾಣದ ಕೆಲಸಗಳು ಸ್ಥಗಿತಗೊಳ್ಳು ವಂತಾಯಿತು. ಸರಕಾರದ ಕಂದಾಯ ಇಲಾಖೆ, ಭೂಗರ್ಭ ಇಲಾಖೆ, ಕೇರಳ ಭೂ ಅಭಿವೃದ್ಧಿ ನಿಗಮ, ಮಣ್ಣು ಜಲ ಸಂರಕ್ಷಣ ಇಲಾಖೆ, ಜಲಶಕ್ತಿ ಅಭಿಯಾನ ಇಲಾಖೆ, ನಬಾರ್ಡ್, ಸಣ್ಣ ನೀರಾವರಿ ಇಲಾಖೆ, ಬದಿಯಡ್ಕ ಗ್ರಾಮ ಪಂಚಾಯತ್ ಮತ್ತು ವಿವಿಧ ಇಲಾಖಾ ಮಟ್ಟದಲ್ಲಿ ಯೋಜನೆಯ ಸತ್ಯಾವಸ್ಥೆಯ ಅವಲೋಕನದ ಬಳಿಕ ಜಲಸಂರಕ್ಷಣೆಗೆ ಆದ್ಯತೆ ನೀಡಿ ಜಿಲ್ಲಾಧಿಕಾರಿಯವರು ಅಧಿಕಾರಿಗಳ ಮಟ್ಟದ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಂಡರು. ಕೃಷಿ ಹಾಗೂ ಕುಡಿಯುವ ನೀರು ಲಭ್ಯತೆಗೆ ಈ ಮದಕವನ್ನು ಅಭಿವೃದ್ಧಿಪಡಿಸುವುದರಿಂ ಶಾಶ್ವತ ಜಲ ಕ್ಷಾಮಕ್ಕೆ ಪರಿಹಾರ ಸಿಗಬಹುದಾಗಿದೆ.
2011ರಿಂದ ಕೃಷಿ ಇಲಾಖೆ, ಗ್ರಾಮ ಕಚೇರಿ, ತಾಲೂಕು, ಜಿಲ್ಲಾಧಿಕಾರಿ, ಕಂದಾಯ ಉಪಜಿಲ್ಲಾಧಿಕಾರಿ ಕಾರ್ಯಾಲಯಗಳ ಕಡತಗಳ ಸೂಕ್ಷ್ಮ ಪರಿಶೋಧನೆಗಳಿಗೆ ಒಳಪಟ್ಟು ನಬಾರ್ಡ್ ಆರ್.ಐ.ಡಿ.ಎಫ್.ಸಹಸ್ರ ಸರೋವರ ಯೋಜನೆಯನ್ನು ಹಿಂದಿನ ಸರಕಾರದ ಕೃಷಿ ಸಚಿವ ಕೆ.ಪಿ. ಮೋಹನನ್ ಅವರು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಯೋಜನೆಗೆ ಅಂಗೀಕಾರವನ್ನು ನೀಡಿದ್ದರು. ಅನುದಾನವಾಗಿ 94 ಲಕ್ಷ ರೂಪಾಯಿ ಮಂಜೂರಾತಿ ನೀಡಿದ್ದರು.
8 ವರ್ಷಗಳ ಪರಿಶ್ರಮ
ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಸಂಪರ್ಕಿಸಿ ಯೋಜನೆಯನ್ನು ಅನುಷ್ಠಾನಗೊಳಿಸುವಲ್ಲಿ ಕಳೆದ 8 ವರ್ಷಗಳಿಂದ ನಿರಂತರ ಶ್ರಮಿಸುವಲ್ಲಿ ನೀರ್ಚಾಲು ಮದಕ ಅಭಿವೃದ್ಧಿ ಸಮಿತಿ ಸಂಚಾಲಕ ಎಂ. ಎಚ್. ಜನಾರ್ದನ ಅವರು ಪ್ರಮುಖ ಪಾತ್ರವಹಿಸಿದ್ದರು.
ಕೆರೆಯ ಪಾರ್ಶ್ವದಲ್ಲಿ ಉಳಿಕೆಯಿರುವ ಸ್ಥಳದಲ್ಲಿ ಔಷಧೀಯ ಹಾಗು ಹೂವಿನ ತೋಟ ನಿರ್ಮಿಸುವ ಯೋಜನೆಯು ಕಾರ್ಯಗತಗೊಳ್ಳಲಿದೆ.
ಪ್ರದೇಶಕ್ಕೆ ಅತ್ಯಂತ ಆವಶ್ಯಕತೆಯಾಗಿರುವ ಬದಿಯಡ್ಕ, ನೀರ್ಚಾಲು ಅಗ್ನಿಶಮನ ರಕ್ಷಾ ಕೇಂದ್ರವು ಈ ಮದಕದ ಸಮೀಪವೇ ನಿರ್ಮಾಣಗೊಳ್ಳಲಿರುವುದು ಒಂದು ವೈಶಿಷ್ಟ್ಯವಾಗಿದೆ. ಅಗ್ನಿಶಮನ ಕೇಂದ್ರ ಹಾಗೂ ನೀರು ಒಂದೆಡೆಯೇ ಸಂಗಮಿಸುವುದು ಈ ಊರಿನ ಜನರ ಭಾಗ್ಯವಾಗಲಿದೆ.
ನೀರು ಶುದ್ಧಗೊಳಿಸಲು ರೀಚಾರ್ಜ್ ಪಿಟ್
ಮದಕವನ್ನು 156 ಮೀ. ಉದ್ದ, 20 ಮೀ. ಅಗಲ, 5 ಮೀ. ಆಳಗೊಳಿಸಿ ದಕ್ಷಿಣ ಭಾಗದಲ್ಲಿ ಯಥೇಷ್ಟ ಸ್ಥಳ ಉಳಿಸಿಕೊಂಡು ಪಶ್ಚಿಮದಲ್ಲಿ 10 ಅಡಿ ಕಾಲುದಾರಿ ಪೂರ್ವಕ್ಕೆ 5 ಮೀ. ಸ್ಥಳಾವಕಾಶದೊಂದಿಗೆ ಕೆರೆಯ ಸುತ್ತು ಒಂದೂವರೆ ಮೀಟರ್ ಎತ್ತರದ ತಡೆಗೋಡೆ ನಿರ್ಮಾಣ ವಾಗಲಿದೆ. ಇದರೊಂದಿಗೆ ನೀರಿನ ಸ್ವಚ್ಛತೆಗೆ ರೀಚಾರ್ಜ್ ಪಿಟ್ ನಿರ್ಮಾಣಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Ex-CJI ಚಂದ್ರಚೂಡ್ ರಾಜಕಾರಣಿಗಳಿಗೆ ಕಾನೂನಿನ ಭಯ ತೆಗೆದುಹಾಕಿದ್ದಾರೆ : ರಾವತ್
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
IPL Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.