ಮಧೂರಿನಲ್ಲಿ ಆನೆಗುಂದಿ ಶ್ರೀ ಚಾತುರ್ಮಾಸ್ಯ
Team Udayavani, Apr 14, 2019, 6:30 AM IST
ಕಾಸರಗೋಡು: ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ 2020ರ ಶಾರ್ವರಿನಾಮ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆಯನ್ನು ಮಧೂರು ಶ್ರೀ ಕಾಳಿಕಾಂಬಾ ಮಠದಲ್ಲಿ ಜರಗಿಸುವುದಾಗಿ ನಿರ್ಣಯಿಸಲಾಗಿದೆ.
ಈ ಪುಣ್ಯಕಾರ್ಯವನ್ನು ಅತ್ಯಂತ ಯಶಸ್ಸುಗೊಳಿಸುವ ನಿಟ್ಟಿನಲ್ಲಿ ಮಧೂರು ಶ್ರೀ ಮಠದ ಪದಾಧಿಕಾರಿಗಳು ಸಂಬಂಧಪಟ್ಟ ಎಲ್ಲ ಪ್ರಾಂತ್ಯಗಳನ್ನು ಸಂದರ್ಶಿಸಿ ಶಿಷ್ಯ ವೃಂದದವರಲ್ಲಿ ಜಾಗೃತಿಯನ್ನು ಮೂಡಿಸುವರೇ ಜರಗಿದ ಆಡಳಿತ ಮಂಡಳಿಯ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಮುಂದಿನ ಎಲ್ಲ ರವಿವಾರದಂದು ಜರಗುವ ಪ್ರಾಂತ್ಯ ಸಂದರ್ಶನದ ಕಾರ್ಯಸೂಚಿ ಈ ರೀತಿ ಇದೆ. ಎ.14 ರಂದು ಬೆಳಗ್ಗೆ 10.30ಕ್ಕೆ ಬದಿಯಡ್ಕ ಪ್ರಾಂತ್ಯ, ಎ.21 ರಂದು ಬೆಳಗ್ಗೆ 10.30ಕ್ಕೆ ಪುತ್ತೂರು, ಅಪರಾಹ್ನ 3 ಕ್ಕೆ ಸುಳ್ಯ ಪ್ರಾಂತ್ಯ, ಮೇ 5 ರಂದು ಅಪರಾಹ್ನ° 12 ಕ್ಕೆ ಮಧೂರು, ಅಪರಾಹ್ನ 3ಕ್ಕೆ ಕಾಸರಗೋಡು, ಸಂಜೆ 5 ಕ್ಕೆ ಕಂಬಾರು ಪ್ರಾಂತ್ಯ, ಮೇ 12 ರಂದು ಬೆಳಗ್ಗೆ 10 ಕ್ಕೆ ಮೌವಾರು, ಅಪರಾಹ್ನ 2ಕ್ಕೆ ಮುಳ್ಳೇರಿಯ, ಸಂಜೆ 5ಕ್ಕೆ ಬೋವಿಕ್ಕಾನ ಪ್ರಾಂತ್ಯ, ಮೇ 19ರಂದು ಬೆಳಿಗ್ಗೆ 10ಕ್ಕೆ ಮಂಗಲ್ಪಾಡಿ, ಅಪರಾಹ್ನ 3ಕ್ಕೆ ಕೋಟೆಕ್ಕಾರು ಪ್ರಾಂತ್ಯ, ಮೇ 26ರಂದು ಬೆಳಗ್ಗೆ 10.30ಕ್ಕೆ ಪೆರ್ಲ, ಅಪರಾಹ್ನ 3ಕ್ಕೆ ಸೀತಾಂಗೋಳಿಯಲ್ಲಿ ಮಾಯಿಪ್ಪಾಡಿ – ಸೀತಾಂಗೋಳಿ – ಪುತ್ತಿಗೆ ಮತ್ತು ಕುಂಬಳೆ ಪ್ರಾಂತ್ಯಗಳ ಸಂದರ್ಶನವು ನಡೆಯಲಿದೆ.
ಮಧೂರು ಮಠದ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರುಗಳ ಪ್ರಾಂತ್ಯ ಸಂದರ್ಶನದಲ್ಲಿ, ಪ್ರಾಂತ್ಯ ಸಮಿತಿ, ಯುವಕ ಸಂಘ, ಮಹಿಳಾ ಸಂಘ ಸದಸ್ಯರು ಅಲ್ಲದೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಮಠದ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.