ಮಧೂರಿನಲ್ಲಿ ಆನೆಗುಂದಿಶ್ರೀ ಚಾತುರ್ಮಾಸ್ಯ: ಬದಿಯಡ್ಕ ಪ್ರಾಂತ್ಯ ಸಮಿತಿ ರೂಪೀಕರಣ


Team Udayavani, Apr 21, 2019, 6:30 AM IST

anegundi-shree

ಕಾಸರಗೋಡು: ಸಮರ್ಪಣಾ ಭಾವದಿಂದ ಗುರುಸೇವೆಯಲ್ಲಿ ತೊಡಗಿಸಿದಾಗ ಮಾತ್ರವೇ 2020ರ ಆನೆಗುಂದಿ ಶ್ರೀಗಳವರ ಚಾತುರ್ಮಾಸ್ಯವನ್ನು ಯಶಸ್ವಿಯಾಗಿ ಜರಗಿಸಲು ಸಾಧ್ಯವೆಂದು ಆನೆಗುಂದಿ ಪ್ರತಿಷ್ಠಾನದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಮತ್ತು ಮಧೂರು ಮಠದ ಉಪಾಧ್ಯಕ್ಷ ವೈ.ಧರ್ಮೇಂದ್ರ ಆಚಾರ್ಯ ಮಧೂರು ಹೇಳಿದರು.

ಶ್ರೀಮತ್‌ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ 2020ರ ಶಾರ್ವರಿನಾಮ ಸಂವತ್ಸ‌ರದ ಚಾತುರ್ಮಾಸ್ಯ ವ್ರತಾಚರಣೆಯನ್ನು ಮಧೂರು ಶ್ರೀ ಕಾಳಿಕಾಂಬಾ ಮಠದಲ್ಲಿ ನಡೆಯಲಿದ್ದು ಈ ಬಗ್ಗೆ ಬದಿಯಡ್ಕ ಸುಂದರ ಆಚಾರ್ಯ ಅವರ ನಿವಾಸದಲ್ಲಿ ನಡೆದ ಬದಿಯಡ್ಕ ಪ್ರಾಂತ್ಯ ಸಮಿತಿ ರೂಪೀಕರಣ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಈ ಕಾರ್ಯಕ್ರಮದ ಯಶಸ್ವಿಗಾಗಿ ಜರಗಿಸುವ ಸಲುವಾಗಿ ಮಧೂರು ಶ್ರೀ ಮಠದ ಪದಾಧಿಕಾರಿಗಳು ಸಂದರ್ಶಿಸಿದರು. ಗುರು ಪೀಠದ ಪುನರ್‌ನಿರ್ಮಾಣ ಕಾಲದಲ್ಲಿ ಮಧೂರು ಮಠದ ಸಮಾಜ ಬಾಂಧವರು ಹಿರಿಯರು, ಕಿರಿಯರು ಅವಿರತವಾಗಿ ಸಮರ್ಪಣಾ ಭಾವದಿಂದ ಶ್ರಮಿಸಿದ್ದರು, ಇದೀಗ ಅಂತಹ ಪ್ರಯತ್ನ ಮತ್ತೂಮ್ಮೆ ಅಗತ್ಯವಿದೆ ಎಂದು ಅವರು ಈ ಹಿಂದಿನ ಘಟನೆಗಳ ವಿವರಣೆ ನೀಡಿದರು.

ಗುರುವರ್ಯರ 2020ರ ಚಾತುರ್ಮಾಸ್ಯದಂತಹ ಪುಣ್ಯಕಾರ್ಯವನ್ನು ಜರಗಿಸಲು ಇಂದಿನಿಂದಲೇ ಕಟಿಬದ್ಧರಾಗಿ ದುಡಿಯಬೇಕೆಂದು ಸಭೆಯ ಅಧ್ಯಕ್ಷತೆ ವಹಿಸಿದ ಮಧೂರು ಶ್ರೀ ಮಠದ ಅಧ್ಯಕ್ಷ ಎನ್‌. ಪರಮೇಶ್ವರ ಆಚಾರ್ಯ ಸಭೆಯಲ್ಲಿ ಕರೆ ನೀಡಿದರು.

ಮಧೂರು ಮಠದಲ್ಲಿ ಆನೆಗುಂದಿ ಶ್ರೀಗಳವರ 2020ರ ಚಾತುರ್ಮಾಸ್ಯವನ್ನು ಯಶಸ್ವಿಯಾಗಿಸಲು ಹಮ್ಮಿ ಕೊಳ್ಳಬಹುದಾದ ಯೋಜನೆಗಳ ಮಾಹಿತಿ ಯನ್ನು ಶ್ರೀಮತ್‌ ಆನೆಗುಂದಿ ಜಗದ್ಗುರು ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್‌.ಎಂ.ಬಿ. ಆಚಾರ್‌ ಕಂಬಾರು ಅವರು ನೀಡಿದರು.

ಸಮಿತಿ ರಚನೆ

ಇದೇ ಸಂದರ್ಭದಲ್ಲಿ ಬದಿಯಡ್ಕ ಪ್ರಾಂತ್ಯ ಚಾತುರ್ಮಾಸ್ಯ ಸಮಿತಿ ಯನ್ನು ರೂಪೀಕರಿಸಲಾಯಿತು. ಸಮಿತಿಯ ಉಸ್ತುವಾರಿ ಯಾಗಿ ಎಂ. ಪುರುಷೋತ್ತಮ ಆಚಾರ್ಯ ನೆಕ್ರಾಜೆ, ಅಧ್ಯಕ್ಷರಾಗಿ ಸುಂದರ ಆಚಾರ್ಯ ಬದಿಯಡ್ಕ, ಗೌರವ ಉಪಾಧ್ಯಕ್ಷರಾಗಿ ಸುಬ್ರಹ್ಮಣ್ಯ ಆಚಾರ್ಯ ಮೂಕಂಪಾರೆ, ಏತಡ್ಕ ರಾಮಚಂದ್ರ ಆಚಾರ್ಯ ಬದಿಯಡ್ಕ ಮತ್ತು ಪ್ರಮೋದ್‌ ಆಚಾರ್ಯ ಬದಿಯಡ್ಕ, ಉಪಾಧ್ಯಕ್ಷರಾಗಿ ಪುಷ್ಪರಾಜ್‌ ಆಚಾರ್ಯ ಬದಿಯಡ್ಕ, ಪುಂಡಲೀಕ ಆಚಾರ್ಯ ಬದಿಯಡ್ಕ ಮತ್ತು ಪ್ರಫುಲ್ಲ ಪುಂಡಲೀಕ ಆಚಾರ್ಯ ಬದಿಯಡ್ಕ, ಕಾರ್ಯದರ್ಶಿಯಾಗಿ ಸತೀಶ ಆಚಾರ್ಯ ಬದಿಯಡ್ಕ, ಜೊತೆ ಕಾರ್ಯದರ್ಶಿಗಳಾಗಿ ಸುರೇಶ ಆಚಾರ್ಯ ನೆಕ್ರಾಜೆ, ಯತಿರಾಜ್‌ ಆಚಾರ್ಯ ನೆಕ್ರಾಜೆ, ದಿನೇಶ್‌ ಆಚಾರ್ಯ ಬದಿಯಡ್ಕ, ವೇಣುಗೋಪಾಲ ಆಚಾರ್ಯ ನೆಕ್ರಾಜೆ, ಮಮತಾ ಸುಂದರ ಆಚಾರ್ಯ ಬದಿಯಡ್ಕ ಮತ್ತು ಕೋಶಾಧಿಕಾರಿಯಾಗಿ ಸುಬ್ರಹ್ಮಣ್ಯ ಆಚಾರ್ಯ ನೆಕ್ರಾಜೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಮಿತಿಯ ಕಾರ್ಯಕಾರಿ ಸದಸ್ಯರಾಗಿ ಶಿವಕುಮಾರ ಆಚಾರ್ಯ ಬದಿಯಡ್ಕ, ದಿವಾಕರ ಆಚಾರ್ಯ ಬದಿಯಡ್ಕ, ಭುವನೇಶ ಆಚಾರ್ಯ ಬದಿಯಡ್ಕ, ರಾಜೇಶ ಆಚಾರ್ಯ ಬದಿಯಡ್ಕ, ಬಾಲಕೃಷ್ಣ ಆಚಾರ್ಯ ಬದಿಯಡ್ಕ, ಸುಧೀಶ ಆಚಾರ್ಯ ಬದಿಯಡ್ಕ, ಯಶೋದ ಶಿವಕುಮಾರ್‌ ಆಚಾರ್ಯ ಬದಿಯಡ್ಕ, ಪುಷ್ಪಲತ ಪುರುಷೋತ್ತಮ ಆಚಾರ್ಯ ಬದಿಯಡ್ಕ, ದಯಾಮಣಿ ರಾಮಚಂದ್ರ ಆಚಾರ್ಯ ಬದಿಯಡ್ಕ, ಗೀತಾ ಯಾದವ ಆಚಾರ್ಯ ಏತಡ್ಕ, ಹರಿಣಿ ಸತೀಶ ಆಚಾರ್ಯ ಬದಿಯಡ್ಕ, ಮನೋಜ್‌ ಆಚಾರ್ಯ ಬದಿಯಡ್ಕ, ರೇಣುಕ ಸುಬ್ರಹ್ಮಣ್ಯ ಆಚಾರ್ಯ ಬದಿಯಡ್ಕ ಮತ್ತು ಅರುಣ್‌ ಕುಮಾರ್‌ ಆಚಾರ್ಯ ಬದಿಯಡ್ಕ ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಮಧೂರು ಮಠದ ಕೋಶಾಧಿಕಾರಿ ಕೆ. ನಾರಾಯಣ ಆಚಾರ್ಯ ಕಂಬಾರು, ಕಾರ್ಯದರ್ಶಿ ತಾರಾನಾಥ ಆಚಾರ್ಯ ಮಧೂರು, ಯುವಕ ಸಂಘದ ಅಧ್ಯಕ್ಷ ಮಹೇಶ್‌ ಆಚಾರ್ಯ ಮಧೂರು ಮಾತನಾಡಿದರು.
ಭಜನ ಸಂಘ, ಮಹಿಳಾ ಸಂಘಗಳ ಸದಸ್ಯರು, ಸಹಿತ ಉಪಸ್ಥಿತರಿದ್ದು ವಿವಿಧ ಸಲಹೆ ಸೂಚನೆಯನ್ನು ನೀಡಿದರು.

ಎಂ.ಪುರುಷೋತ್ತಮ ಆಚಾರ್ಯ ನೆಕ್ರಾಜೆ ಸ್ವಾಗತಿಸಿದರು. ಸುಬ್ರಹ್ಮಣ್ಯ ಆಚಾರ್ಯ ನೆಕ್ರಾಜೆ ವಂದಿಸಿದರು. ಸುರೇಶ ಆಚಾರ್ಯ ನೆಕ್ರಾಜೆ ಕಾರ್ಯಕ್ರಮ ನಿರ್ವಹಿಸಿದರು. ವಂಶಿಕಾ ಆಚಾರ್ಯ ಬದಿಯಡ್ಕ ಪ್ರಾರ್ಥಿಸಿದರು.

ಟಾಪ್ ನ್ಯೂಸ್

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Perth test: Jasprit Bumrah’s bowling style in doubt: What is the controversy?

Perth test: ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ ಶೈಲಿ ಅನುಮಾನ: ಏನಿದು ವಿವಾದ?

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

1

Arrested: ಉದ್ಯಮಿ ಅಪಹರಣ: ಪ್ರೇಯಸಿ ಸೇರಿ 7 ಮಂದಿ ಸೆರೆ

8-madikeri

Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.