ಅಂತ್ಯೋದಯ ರೈಲು : ಜ. 5ರಂದು ಕಾಸರಗೋಡಿನಲ್ಲಿ ಕೊನೆಯ ನಿಲುಗಡೆ
Team Udayavani, Dec 26, 2018, 2:10 AM IST
ಕಾಸರಗೋಡು: ಅಂತ್ಯೋದಯ ರೈಲು ಎಕ್ಸ್‌ಪ್ರೆಸ್‌ಗೆ ಜನವರಿಯಿಂದ ಎರಡು ನಿಲುಗಡೆ ಕಡಿಮೆಯಾಗಲಿದೆ. ತಾತ್ಕಾಲಿಕವಾಗಿ ಮಂಜೂರು ಮಾಡಿದ ಕಾಸರಗೋಡು, ಆಲಪ್ಪುಳ ನಿಲುಗಡೆಗಳ ಕಾಲಾವಧಿ ಮುಂದಿನ ತಿಂಗಳು ಮುಗಿಯುವುದರಿಂದ ಈ ಎರಡು ನಿಲುಗಡೆಗಳು ರದ್ದಾಗಲಿವೆ. ಅದರಂತೆ ಕಾಸರಗೋಡಿನಲ್ಲಿ ಜ. 5ರವರೆಗೂ ಆಲಪ್ಪುಳದಲ್ಲಿ ಜ. 12ರ ತನಕವೂ ನಿಲುಗಡೆ ಮಂಜೂರು ಮಾಡಲಾಗಿತ್ತು. ಈ ನಿಲುಗಡೆಗಳು ನಿಗದಿತ ಕಾಲಾವಧಿ ಮುಗಿದ ಕೂಡಲೇ ರದ್ದಾಗಲಿವೆ. ಇದೇ ವೇಳೆ ತಿರೂರಿನಲ್ಲಿ ನೀಡಿದ ನಿಲುಗಡೆ ಮಾರ್ಚ್ ತಿಂಗಳಿಗೆ ಮುಗಿಯಲಿದೆ.
6 ತಿಂಗಳಿಗೆ ತಾತ್ಕಾಲಿಕವಾಗಿ ಮಂಜೂರು ಮಾಡಿದ ನಿಲುಗಡೆಗಳನ್ನು ಬಳಿಕ ಸಾಮಾನ್ಯವಾಗಿ ಮುಂದುವರಿಸಲಾಗುವುದು. ಆದರೆ ರೈಲ್ವೇ ಟೈಮ್ ಟೇಬಲ್‌ನಿಂದ ರೈಲು ಸಂಚಾರದ ವರೆಗೆ ಸಮಸ್ಯೆ ಸೃಷ್ಟಿಸಿದ ಅಂತ್ಯೋದಯದ ಈ ನಿಲುಗಡೆಗಳು ಇನ್ನು ಮುಂದುವರಿಯದು ಎಂಬ ಆತಂಕದಲ್ಲಿ ಪ್ರಯಾಣಿಕರಿದ್ದಾರೆ. ಈಗಾಗಲೇ ಆದಾಯ ಕಡಿಮೆ ಎಂದೂ ಹೇಳಲಾಗುತ್ತಿದೆ. ಸಂಪೂರ್ಣ ಜನರಲ್ ಕಂಪಾರ್ಟ್‌ಮೆಂಟ್‌ಗಳಾಗಿ ಸಾಗುವ ಈ ರೈಲುಗಾಡಿಗೆ ಕೊಚ್ಚುವೇಳಿಯಿಂದ ಮಂಗಳೂರು ಮಧ್ಯೆ ಕೇವಲ 9 ನಿಲುಗಡೆ ಮಾತ್ರವಿದೆ. ಕೊಲ್ಲಂ, ಆಲಪ್ಪುಳ, ಎರ್ನಾಕುಳಂ ಜಂಕ್ಷನ್, ತೃಶ್ಶೂರು, ಶೋರ್ನೂರು, ತಿರೂರು, ಕಲ್ಲಿಕೋಟೆ, ಕಣ್ಣೂರು, ಕಾಸರಗೋಡು ಇವುಗಳು ರೈಲಿನ ನಿಲುಗಡೆ ಕೇಂದ್ರಗಳು.
ವಾರದಲ್ಲಿ ಎರಡು ದಿನ ಮಾತ್ರ ಈ ರೈಲು ಗಾಡಿ ಸಂಚರಿಸುತ್ತಿದೆ. ಗುರುವಾರ ಮತ್ತು ಶನಿವಾರಗಳಂದು ಕೊಚ್ಚುವೇಳಿಯಿಂದ ಹೊರಟರೆ ಶುಕ್ರವಾರ ಹಾಗೂ ರವಿವಾರಗಳಂದು ಮಂಗಳೂರಿನಿಂದ ಹಿಂದಿರುಗುತ್ತದೆ. ರಾತ್ರಿ 9.25ಕ್ಕೆ ಕೊಚ್ಚುವೇಳಿಯಿಂದಲೂ, ರಾತ್ರಿ 8ಗಂಟೆಗೆ ಮಂಗಳೂರಿನಿಂದಲೂ ಈ ರೈಲು ಸಂಚಾರ ನಡೆಸುತ್ತಿದೆ. ಈ ರೈಲು ಗಾಡಿಗೆ ಕಾಸರಗೋಡಿನಲ್ಲಿ ನಿಲುಗಡೆ ನೀಡಬೇಕೆಂದು ನಡೆಸಿದ ಹೋರಾಟದ ಫಲವಾಗಿ ನಿಲುಗಡೆ ಲಭಿಸಿತ್ತು. ಜುಲೈ 6ರಂದು ಪ್ರಥಮವಾಗಿ ಕಾಸರಗೋಡಿನಲ್ಲಿ ಮತ್ತು ಜುಲೈ 12ರಂದು ಆಲಪ್ಪುಳದಲ್ಲಿ ರೈಲು ಗಾಡಿಗೆ ನಿಲುಗಡೆ ಕೊಡಲಾಗಿತ್ತು. ಈ ಹಿನ್ನೆಲೆಯಲ್ಲಿ 6 ತಿಂಗಳು ಕಳೆಯುವ ಜನವರಿ 5ರಂದು ಕಾಸರಗೋಡಿನಲ್ಲಿ ಮತ್ತು ಜನವರಿ 12ರಂದು ಆಲಪ್ಪುಳದಲ್ಲಿ ನಿಲುಗಡೆ ರದ್ದಾಗಲಿದೆ. ಈ ಮಧ್ಯೆ ನಿಲುಗಡೆ ಮುಂದುವರಿಸುವ ಯಾವುದೇ ಆದೇಶವನ್ನು ರೈಲ್ವೇ ವಿಭಾಗವು ಇನ್ನೂ ಹೊರಡಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.