ಸಂಹಿತೆ ಕಾಯ್ದುಕೊಳ್ಳುವಲ್ಲಿ ಆ್ಯಂಟಿ ಡಿಫೇಸ್‌ಮೆಂಟ್ ಸ್ಕ್ವಾಡ್ ಗಳ ಸಕ್ರಿಯ ಚಟುವಟಿಕೆ
Team Udayavani, Apr 9, 2019, 2:59 PM IST
ಬದಿಯಡ್ಕ : ಕಾಸರಗೋಡು ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಸಂಬಂಧ ರಚಿಸಿರುವ ಆ್ಯಂಟಿ ಡಿಫೇಸ್‌ಮೆಂಟ್ ಸ್ಕ್ವಾಡ್ ಗಳ ಚಟುವಟಿಕೆ ಸಕ್ರಿಯವಾಗಿ ನಡೆಯುತ್ತಿದೆ.
ಚುನಾವಣೆ ಆಯೋಗ ಸಾರ್ವಜನಿಕರಿಗೆ ಒದಗಿಸಿರುವ ಸಿ – ವಿಝಿಲ್ ಆ್ಯಪ್ ಮೂಲಕ ಲಭಿಸುವ ಎಲ್ಲ ದೂರುಗಳಿಗೆ 100 ನಿಮಿಷಗಳ ಅವಧಿಯಲ್ಲಿ ಇವರು ಪರಿಹಾರ ಒದಗಿಸುತ್ತಾರೆ. ಅರ್ಧರಾತ್ರಿಗೆ ಜನ ಕರೆ ಮಾಡಿದರೂ ತಕ್ಷಣ ಪರಿಹಾರಕ್ಕೆ ಧಾವಿಸುವುದು ಸ್ಕ್ವಾಡ್ ನ ಕ್ರಮವಾಗಿದೆ. ಸಾರ್ವಜನಿಕ ಪ್ರದೇಶಗಳಲ್ಲಿ , ಖಾಸಗಿ ವ್ಯಕ್ತಿಯ ಅನುಮತಿ ಇಲ್ಲದೆ ರಾಜಕೀಯ ಲಾಂಛನಗಳು, ಭಿತ್ತಿಪತ್ರ, ಬ್ಯಾನರ್ ಇತ್ಯಾದಿ ಸ್ಥಾಪಿಸಿದ್ದರೆ ಅದನ್ನು ತೆರವುಗೊಳಿಸಲು ರಚಿಸಿರುವ ದಳವೇ ಆ್ಯಂಟಿ ಡಿಫೇಸ್‌ಮೆಂಟ್ ಸ್ಕ್ವಾಡ್.
ಚುನಾವಣೆ ಅಧಿಸೂಚನೆ ಪ್ರಕಟಗೊಂಡ ನಂತರ ಈ ದಳ ಚಟುವಟಿಕೆ ಆರಂಭಿಸಿದೆ. ಜಿಲ್ಲೆಯ 5 ವಿಧಾನಸಭೆ ಕ್ಷೇತ್ರಗಳನ್ನು ಪ್ರಧಾನವಾಗಿರಿಸಿ ರಚಿಸಿರುವ 5 ದಳಗಳು, ಒಂದು ಜಿಲ್ಲಾ ಮಟ್ಟದ ದಳ ಸಹಿತ 6
ಸ್ಕ್ವಾಡ್ ಗಳು ಈ ನಿಟ್ಟಿನಲ್ಲಿ ಚಟುವಟಿಕೆ ನಡೆಸುತ್ತಿದೆ. 5 ಮಂದಿ ಸದಸ್ಯರು ಪ್ರಧಾನವಾಗಿ ಒಂದು ತಂಡದಲ್ಲಿದ್ದಾರೆ. ನ್ಯಾಯಮೂರ್ತಿ, ಎ.ಎಸ್.ಐ., ಕಾನ್‌ಸ್ಟೆಬಲ್, ಸಹಾಯಕ, ವಿಡಿಯೋಗ್ರಾಫರ್, ಚಾಲಕ ಒಂದು ತಂಡದಲ್ಲಿ ಕರ್ತವ್ಯಲ್ಲಿದ್ದಾರೆ.
ಸಿ – ವಿಝಿಲ್ ಮೂಲಕ ಲಭಿಸುವ ದೂರುಗಳನ್ನು ಇವರು ಪ್ರಧಾನವಾಗಿ ಪರಿಹರಿಸುತ್ತಾರೆ. ಸಿ – ವಿಝಿಲ್ ಮೂಲಕ ದೂರು ಲಭಿಸದೇ ಇದ್ದರೂ ಎಲ್ಲಿ ನೀತಿ ಸಂಹಿತೆ ಉಲ್ಲಂಘನೆ ಕಂಡರೂ ಸ್ವಯಂ ಪ್ರೇರಣೆಯಿಂದ ತಂಡ ಕ್ರಮ ಕೈಗೊಳ್ಳತ್ತದೆ. ಲೋಕಸಭೆ ಚುನಾವಣೆಯನ್ನು ಪ್ರಕೃತಿ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಚುನಾವಣೆ ಆಯೋಗ ಆದೇಶ ಹೊರಡಿಸಿದೆ. ಹಸುರು ಸಂಹಿತೆ ಕಡ್ಡಾಯವಾಗಿ ಪಾಲಿಸುವಲ್ಲಿ ಈ ದಳ ಸಕ್ರಿಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.