ಮಲೆಯಾಳಿ ಅಧ್ಯಾಪಕರ ನೇಮಕ : ಪ್ರತಿಭಟನೆಗೆ ಮಣಿದು ಹಿಂದಿರುಗಿದರು!
Team Udayavani, Jan 12, 2019, 4:30 AM IST
ಕುಂಬಳೆ: ಪೈವಳಿಕೆ ಕಾಯರ್‌ಕಟ್ಟೆ ಮತ್ತು ಬೇಕೂರು ಸರಕಾರಿ ಹೈಯರ್ ಸೆಕೆಂಡರಿ ವಿದ್ಯಾಲಯಗಳಿಗೆ ಮಲೆಯಾಳಿ ಅಧ್ಯಾಪಕರನ್ನು ನೇಮಕಗೊಳಿಸಿದ್ದರ ವಿರುದ್ಧ ಭಾರೀ ಪ್ರತಿಭಟನೆ ನಡೆದು ಅಧ್ಯಾಪಕರು ಮರಳಿದ್ದಾರೆ.
ಈ ಶಾಲೆಗಳಿಗೆ ಫಿಸಿಕಲ್ ಸಯನ್ಸ್ ಕನ್ನಡ ವಿಭಾಗಕ್ಕೆ ತಿರುವನಂತಪುರದ ಇಬ್ಬರು ಮಲೆಯಾಳಿ ಅಧ್ಯಾಪಕರನ್ನು ಇಲಾಖೆ ನೇಮಕಗೊಳಿಸಿತ್ತು. ಇವರು ಶುಕ್ರವಾರ ಬೆಳಗ್ಗೆ ಶಾಲೆಗಳಿಗೆ ಕರ್ತವ್ಯಕ್ಕೆ ಹಾಜರಾಗಲು ಸರಕಾರದ ಆದೇಶ ಸಹಿತ ಆಗಮಿಸಿದಾಗ ಶಾಲಾ ರಕ್ಷಕರ ನೇತೃತ್ವದಲ್ಲಿ ತಡೆಯಲಾಯಿತು. ಕಾಸರಗೋಡು ಜಿ. ಪಂ. ಸದಸ್ಯರಾದ ಫರೀದಾ ಝಕೀರ್ ಮತ್ತು ಆಯಾ ಶಾಲೆಯ ಮಕ್ಕಳ ರಕ್ಷಕರು ಪ್ರತಿಭಟನೆ ನಡೆಸಿದರು. ಕನ್ನಡ ಅರಿಯದ ಶಿಕ್ಷಕರನ್ನು ಕರ್ತವ್ಯ ನಿರ್ವಹಿಸಲು ಬಿಡುವುದಿಲ್ಲವೆಂಬ ಬಲವಾದ ನಿಲುವು ವ್ಯಕ್ತಪಡಿಸಿದರು. ಪ್ರತಿಭಟನೆಗೆ ಮಣಿದು ಈ ಅಧ್ಯಾಪಕರು ಹಿಂದಿರುಗಬೇಕಾಯಿತು.
ಬದಿಯಡ್ಕದ ಪೆರಡಾಲ ಸರಕಾರಿ ಶಾಲೆಯಲ್ಲೂ ಇದೇ ರೀತಿ ಪ್ರತಿಭಟನೆ ನಡೆದ ಘಟನೆ ವರದಿಯಾಗಿದೆ.
ಮಂಗಲ್ಪಾಡಿ ಸರಕಾರಿ ಹೈಯರ್ ಸೆಕೆಂಡರಿ ವಿದ್ಯಾಲಯಕ್ಕೆ ಕನ್ನಡ ಗಣಿತ ತರಗತಿಗೆ ಮಲೆಯಾಳಿ ಅಧ್ಯಾಪಕರನ್ನು ನೇಮಿಸಿದ ವಿರುದ್ಧ ರಕ್ಷಕರಿಂದ ಮತ್ತು ವಿವಿಧ ಕನ್ನಡ ಸಂಘಟನೆಗಳಿಂದ ಭಾರೀ ಪ್ರತಿಭಟನೆ ನಡೆದು, ಅಧ್ಯಾಪಕ ದೀರ್ಘ ರಜೆಯಲ್ಲಿ ತೆರಳಿ ಬಳಿಕ ಬೇರೆ ಉದ್ಯೋಗಕ್ಕೆ ಸೇರಿ ಸಮಸ್ಯೆಗೆ ಪರಿಹಾರವಾಗಿತ್ತು. ಈಗ ಮೂರು ಶಾಲೆಗಳಲ್ಲಿ ಮತ್ತೆ ಇದೇ ಸಮಸ್ಯೆ ಉಂಟಾಗಿದ್ದು ಕನ್ನಡ ಸಂಘಟನೆಗಳು ಪ್ರತಿಭಟನೆಗೆ ಸಿದ್ಧವಾಗಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.