ಎ.29 : “ರಂಗಚಿನ್ನಾರಿ ಪ್ರಶಸ್ತಿ’ ಪ್ರದಾನ ಸಮಾರಂಭ


Team Udayavani, Apr 28, 2018, 6:30 AM IST

Dr-Ramananda-Banari,-Shiva.jpg

ಕಾಸರಗೋಡು: ಸಾಮಾಜಿಕ – ಸಾಂಸ್ಕೃತಿಕ ಸಂಸ್ಥೆಯಾಗಿರುವ ರಂಗ ಚಿನ್ನಾರಿ ಕಾಸರಗೋಡು ಇದರ ಹನ್ನೆರಡನೇ ವಾರ್ಷಿ ಕೋತ್ಸವ ಮತ್ತು “ರಂಗಚಿನ್ನಾರಿ  ಪ್ರಶಸ್ತಿ’ ಮತ್ತು “ರಂಗಚಿನ್ನಾರಿ ಯುವ ಪ್ರಶಸ್ತಿ’ ಪ್ರದಾನ ಸಮಾರಂಭ ಎ.29 ರಂದು ಕಾಸರಗೋಡು ಮುನ್ಸಿಪಲ್‌ ಕಾನ್ಫರೆನ್ಸ್‌ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇದರ ಸಹಯೋಗದೊಂದಿಗೆ ನಡೆಯಲಿದೆ. 

ಖ್ಯಾತ ವೈದ್ಯ, ಸಾಹಿತಿ ಡಾ|ರಮಾನಂದ ಬನಾರಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ಶಿವಧ್ವಜ್‌ ಶೆಟ್ಟಿ ಅವರನ್ನು ರಂಗಚಿನ್ನಾರಿ ಪ್ರಶಸ್ತಿ ಮತ್ತು ಪ್ರಶಸ್ತಿ ವಿಜೇತ ಗಾಯಕಿ ಶಿವರಂಜಿನಿ ಐ.ಭಟ್‌, ಖ್ಯಾತ ನೃತ್ಯಪಟು ಸಾತ್ವಿಕ್‌ರಾಜ್‌ ಪಟ್ಟಾಜೆ ಅವರನ್ನು “ರಂಗಚಿನ್ನಾರಿ ಯುವ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.

ಡಾ| ರಮಾನಂದ ಬನಾರಿ 
ವೈದ್ಯರಾಗಿ, ಕವಿಯಾಗಿ, ಬರಹ ಗಾರರಾಗಿ, ಯಕ್ಷಗಾನದ ಅರ್ಥಧಾರಿ ಯಾಗಿ, ಸಂಘಟಕರಾಗಿ, ಸ್ನೇಹಜೀವಿ ಯಾಗಿ, ಕನ್ನಡ ಪರ ಹೋರಾಟಗಾರರಾಗಿ ಕರ್ನಾಟಕದ ಗಡಿನಾಡಿಗೆ ಸಾಂಸ್ಕೃತಿಕ ಸೇತುವೆಯನ್ನು ಕಟ್ಟಿದ ಡಾ|ರಮಾನಂದ ಬನಾರಿ ಉತ್ತಮ ವಿಮರ್ಶಕರು. “ಎಳೆಯರ ಗೆಳೆಯ ಮಕ್ಕಳ ಕವನ ಸಂಕಲನ, ಕೊಳಲು, ತೊಟ್ಟಿಲು ಕವನ ಸಂಕಲನ, ಕವಿತೆಗಳೇ ಬನ್ನಿ, ಜೀವವೃಕ್ಷ, ನೋಟದೊಳಗಿನ ನೋಟ, ನಮ್ಮಿಬ್ಬರ ನಡುವೆ, ನೆನಪುಗಳ ನೆರಳಿನಲ್ಲಿ, ಆರೋಗ್ಯ ಗೀತೆ-ವೈದ್ಯಕೀಯ ಕವನ ಸಂಕಲನ, ಗುಟುಕುಗಳು – ಹನಿಗವನಗಳ ಸಂಕಲನ, ಬಿಂದುಗಳು, ಮಧುಸಿಂಚನ, ಕದಿರುಗಳು, ಕಾವ್ಯಶ್ರೀ – ಪರಮಪೂಜ್ಯ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರು ಹಾಡಿದ ಧ್ವನಿ ಸುರುಳಿ, ಅರವೆ – ಪ್ರಬಂಧ ಸಂಕಲನ, ಆರೋಗ್ಯ ಸಂವಿಧಾನ – ವೈದ್ಯಕೀಯ ಲೇಖನಗಳ ಸಂಕಲನ, ಡೌನ್‌ ಮೆಮರಿ ಲೇನ್‌(ಆಂಗ್ಲ ಭಾಷಾಕೃತಿ) ಪ್ರೊ|ಎಂ.ಎಲ್‌.ಸಾಮಗ ಅವರೊಂದಿಗೆ ಸಹಕೃತಿಕಾರ, ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಒಂದು ಸಿಂಹಾವಲೋಕನ ಗದ್ಯಕೃತಿ, ಪರಾಗಸ್ಪರ್ಶ ಬನಾರಿ ಸಮಗ್ರ ಕವಿತೆಗಳು ಮೊದಲಾದವು ಪ್ರಕಟಿತ ಕೃತಿಗಳಾಗಿವೆ. ಹಲವು ಸಂಪಾದಿತ ಕೃತಿಗಳನ್ನು ಬಿಡುಗಡೆಗೊಳಿಸಿರುವ ಬನಾರಿ ಅವರು ಹಲವಾರು ಪ್ರಶಸ್ತಿ, ಸಮ್ಮಾನ, ಗೌರವಾದರಗಳಿಗೆ ಪಾತ್ರರಾಗಿದ್ದಾರೆ. ಹತ್ತಾರು ಸಂಘ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದು ತನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಖ್ಯಾತಿಗೆ ಪಾತ್ರರಾಗಿದ್ದಾರೆ.

ಶಿವಧ್ವಜ್‌  
ಶಾಲಾ ದಿನಗಳಿಂದಲೇ ರಂಗಭೂಮಿ ಯಲ್ಲಿ ತೊಡಗಿಸಿಕೊಂಡಿದ್ದ ಶಿವ ಧ್ವಜ್‌ ಸಿನಿಮಾ ನಟ, ನಿರ್ದೇಶಕರಾಗಿ ಗುರುತಿಸಿ ಕೊಂಡವರು. ಅವರು ನಿರ್ದೇಶಿಸಿದ “ಗಗ್ಗರ’ ತುಳು ಚಿತ್ರ ರಾಷ್ಟ್ರ ಪ್ರಶಸ್ತಿ ಪಡೆದು ಸಂಚಲನ ಮೂಡಿಸಿದರು. ಟಿ.ವಿ. ಧಾರಾವಹಿಗಳ ಮೂಲಕ ತೆರೆಯೇರಿದ ಇವರು ಮುಂದೆ ಕನ್ನಡ, ತುಳು ಹಾಗೂ ಕೊಂಕಣಿ, ಕೊಡವ ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿ, ನಿರ್ದೇಶಿಸಿ ಪ್ರಸಿದ್ಧಿಗೆ ಬಂದರು. 1999ರಲ್ಲಿ ಇದು ಎಂಥ ಪ್ರೇಮವಯ್ಯ, 2000ರಲ್ಲಿ ಗಾಜಿನ ಮನೆ, ಭಕ್ತ ಅಯ್ಯಪ್ಪ, 2001ರಲ್ಲಿ ನೀಲ, 2002 ರಲ್ಲಿ ಪ್ರೇಮ, ನಾಗರಹಾವು, ಡಕೋಟ ಎಕ್ಸ್‌ಪ್ರೆಸ್‌, 2003 ರಲ್ಲಿ ಗೇಮ್‌ ಫಾರ್‌ ಲವ್‌, ಆನಂದ ನಿಲಯ, ತಾಯಿ ಇಲ್ಲದ ತಬ್ಬಲಿ, ಸಿಂಗಾರವ್ವ, ಪ್ರೀತ್ಸೋದು ತಪ್ಪ, 2006ರಲ್ಲಿ ಶುಭಂ, 2007 ರಲ್ಲಿ ಈ ರಾಜೀವ್‌ ಗಾಂಧಿ ಅಲ್ಲ, ದಾನಮ್ಮ ದೇವಿ, 2008ರಲ್ಲಿ ಜ್ಞಾನ ಜ್ಯೋತಿ ಶ್ರೀ ಸಿದ್ಧಗಂಗ, 2009ರಲ್ಲಿ ಚೈತನ್ಯ, ಮಿಸ್ಟರ್‌ ಪೈಂಟರ್‌, 2011ರಲ್ಲಿ ಕೊಂಕಣಿ ಸಿನೆಮಾ ಉಜ್ವಾಡ್‌, 2012ರಲ್ಲಿ ಭಾಗೀರಥಿ, 2013ರಲ್ಲಿ ಮಾನಸ, ಬಂಗಾರದ ಕುರಲ್‌, 2014 ರಲ್ಲಿ ಬಿಲಿಯನ್‌ ಡಾಲರ್‌ ಬೇಬಿ, ಮಕ್ಕಳೆ ಮಾಣಿಕ್ಯ, 2015ರಲ್ಲಿ ಏರೆಗ್ಲ ಪನೋಡಿc, 2016ರಲ್ಲಿ ಪ್ರಿಯಾಂಕ, ಪನೊಡ ಬೋಡc ಮೊದಲಾದ ಚಲನ ಚಿತ್ರಗಳಲ್ಲಿ ಅಭಿನಯಿಸಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಕಾಸರಗೋಡಿನಲ್ಲಿ ಹುಟ್ಟಿ ಬೆಳೆದ ಶಿವಧ್ವಜ್‌ ಕಾಸರಗೋಡು ನಗರದ ಬಿ.ಇ.ಎಂ. ಪ್ರೌಢ ಶಾಲೆಯಲ್ಲಿ ಹೈಸ್ಕೂಲ್‌ ಶಿಕ್ಷಣ ಮುಗಿಸಿದ್ದರು. ಆ ಬಳಿಕ ಮುಂದಿನ ಶಿಕ್ಷಣವನ್ನು ಕರ್ನಾಟಕದಲ್ಲಿ ನಡೆಸಿದ್ದರು. ಇವರ ತಂದೆ ತಿಮ್ಮಪ್ಪ ಶೆಟ್ಟಿ ಅವರೂ ಉತ್ತಮ ನಟ, ಸಂಘಟಕರಾಗಿದ್ದರು.

ಶಿವರಂಜಿನಿ ಐ. ಭಟ್‌
ಕರ್ನಾಟಕ ಶಾಸ್ತಿÅàಯ ಸಂಗೀತದ ಜನ್ಯರಾಗವೊಂದರ ಹೆಸರನ್ನು ಹೊತ್ತ ಶಿವರಂಜಿನಿ ಐ. ಭಟ್‌ ಜನಿಸಿದ್ದು ಸಂಗೀತ ಕಲಾವಿದ ದಂಪತಿಯಾದ ಉಷಾ- ಈಶ್ವರ ಭಟ್‌ ಅವರ ಮಗಳಾಗಿ. ತನ್ನ ಮೂರನೇ ವಯಸ್ಸಿನಲ್ಲಿಯೇ ತನ್ನ ತಾಯಿಯೊಂದಿಗೆ ಬಾಲ್ಯದಾಟವಾಡುತ್ತಾ ರಾಗಕ್ಕೆ ಸಾಥ್‌ ನೀಡುತ್ತಿದ್ದ ಶಿವರಂಜಿನಿ ಅಭಿಜಾತ ಕಲಾವಿದೆ. ಸುಮಾರು 2003 ರಲ್ಲಿ ಈಕೆ ಪುರಂದರ ದಾಸರ ಗೀತೆಗಳನ್ನು ಹಾಡುತ್ತಿರುವ ದೃಶ್ಯ ಖಾಸಗಿ ಚಾನೆಲ್‌ವೊಂದರಲ್ಲಿ ಬಿತ್ತರಗೊಂಡಿತ್ತು. ಅಂದಿನಿಂದಲೇ ಶಿವರಂಜಿನಿಗೆ ಸಂಗೀತದಲ್ಲಿ ಆಸಕ್ತಿ ಮತ್ತು ಅರಿವು ಪ್ರಕಟಗೊಂಡಿತ್ತು. ಎಡನೀರಿನ ಶ್ರೀ ಸ್ವಾಮೀಜೀಸ್‌ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ ಪ್ಲಸ್‌ ಟು ವಿದ್ಯಾರ್ಥಿನಿಯಾಗಿರುವ ಈಕೆ ಶಾಲಾ ಮಟ್ಟದಲ್ಲಿ ಹಲವು ವರ್ಷಗಳಿಂದ ಬಹುಮಾನ ಗಳಿಸುತ್ತಾ ಬಂದಿದ್ದಾಳೆ. ಹಲವಾರು ಕಾರ್ಯಕ್ರಮಗಳಲ್ಲಿ ತನ್ನ ತಾಯಿ ಮತ್ತು ಗುರು ವಿದುಷಿ ಉಷಾ ಈಶ್ವರ ಭಟ್‌ ಅವರೊಂದಿಗೆ ಸಹಗಾಯನ ನಡೆಸಿ ಶಹಬ್ಟಾಸ್‌ ಪಡೆದು ಕಾಂಞಂಗಾಡಿನ ತ್ಯಾಗರಾಜ ಆರಾಧನಾ ಮಹೋತ್ಸವದ ಪಂಚರತ್ನ ಗೋಷ್ಠಿ ಗಾಯನದಲ್ಲಿ ಹಿರಿಯ ಕಲಾವಿದರೊಂದಿಗೆ ಸಾಥ್‌ ನೀಡಿದ ಗರಿಮೆ ಈಕೆಯದು. ರಾಜ್ಯಮಟ್ಟದ ಹೈಯರ್‌ ಸೆಕೆಂಡರಿ ವಿಭಾಗದಲ್ಲಿ ಎಡನೀರು ಸ್ವಾಮೀಜೀಸ್‌ ಹೈಯರ್‌ ಸೆಕೆಂಡರಿ ಶಾಲೆಯನ್ನು ಪ್ರತಿನಿಧಿಸಿ ಕನ್ನಡ ಕಾವ್ಯ ಕಂಠಪಾಠ, ಸಮೂಹ ಗಾನ, ದೇಶಭಕ್ತಿ ಗಾಯನಗಳಲ್ಲಿ “ಎ’ ಗ್ರೇಡ್‌(2016-18) ಪಡೆದಿದ್ದಾರೆ. ಹಲವೆಡೆ ಸಮ್ಮಾನ, ಗೌರವಾದರಗಳಿಗೆ ಪಾತ್ರರಾಗಿರುವ ಈಕೆ ಪ್ರಮುಖ ಸಂಗೀತ ಕಚೇರಿಗಳಲ್ಲಿ ಭಾಗವಹಿಸಿದ್ದಾಳೆ.

ಸಾತ್ವಿಕ್‌ರಾಜ್‌ ಪಟ್ಟಾಜೆ 
ಕಾಸರಗೋಡು ಚಿನ್ಮಯ ವಿದ್ಯಾಲಯದ 10ನೇ ತರಗತಿ ವಿದ್ಯಾರ್ಥಿ ಯಾಗಿರುವ (ಸಿಬಿಎಸ್‌ಇ) ಸಾತ್ವಿಕ್‌ ರಾಜ್‌ ಪಟ್ಟಾಜೆ ಭರತನಾಟ್ಯದಲ್ಲಿ ಭರವಸೆ ಮೂಡಿಸಿದ ಯುವ ಪ್ರತಿಭೆ. ಸತತ ನಾಲ್ಕು ವರ್ಷಗಳಿಂದ ಸಿಬಿಎಸ್‌ಇ ರಾಜ್ಯ ಮಟ್ಟದ ಕಲೋತ್ಸವದಲ್ಲಿ ಭರತನಾಟ್ಯ ವಿಭಾಗದಲ್ಲಿ ಭಾಗವಹಿಸಿ ವಿವಿಧ ಬಹುಮಾನಗಳನ್ನು ಗಳಿಸಿದ್ದಾರೆ. 2014-15 ರಲ್ಲಿ ಎ ಗ್ರೇಡ್‌ನೊಂದಿಗೆ ದ್ವಿತೀಯ ಸ್ಥಾನ, 2015-16 ರಲ್ಲಿ ಭರತನಾಟ್ಯದಲ್ಲಿ ಪ್ರಥಮ ಮತ್ತು ಜನಪದ ನೃತ್ಯದಲ್ಲಿ ಎ ಗ್ರೇಡ್‌, 2016-17 ರಲ್ಲಿ ಎ ಗ್ರೇಡ್‌ ಪಡೆದಿದ್ದಾರೆ. ಪ್ರಸ್ತುತ ವರ್ಷ ಕಣ್ಣೂರು ಜಿಲ್ಲಾ ಸಿಬಿಎಸ್‌ಇ ಕಲೋತ್ಸವದಲ್ಲಿ ಎ ಗ್ರೇಡ್‌ ದ್ವಿತೀಯ ಸ್ಥಾನಕ್ಕೆ ಪಾತ್ರರಾಗಿದ್ದಾರೆ. ಕೇಂದ್ರ ಸರಕಾರದಿಂದ ದೊರೆಯುವ ಸಿಸಿಆರ್‌ಟಿ ಭರತನಾಟ್ಯ ವಿಭಾಗದಲ್ಲಿ ಸ್ಕಾಲರ್‌ಶಿಪ್‌ಗೆ ಆಯ್ಕೆಯಾಗಿದ್ದಾರೆ. ನಾಟ್ಯ ಗುರು ಬಾಲಕೃಷ್ಣ ಮಂಜೇಶ್ವರ ಅವರ ನೇತೃತ್ವದಲ್ಲಿ ನಡೆಯುವ ನಾಟ್ಯ ನಿಲಯಂ ಸಂಚಾರಿ ತಂಡದಲ್ಲಿ ಹಲವು ವರ್ಷಗಳಿಂದ ದೇಶದಾದ್ಯಂತ ವಿವಿಧ ರಂಗ ಪ್ರದರ್ಶನಗಳಲ್ಲಿ ಭಾಗವಹಿಸಿ ಮೆಚ್ಚುಗೆ ಗಳಿಸಿದ್ದಾರೆ. ಮುಂಬಯಿ, ಕರ್ನಾಟಕದ ಬಾಳೆಹೊನ್ನೂರು, ಕುಂದಾ ಪುರ, ಉಡುಪಿ, ಕಾರ್ಕಳ, ಧರ್ಮಸ್ಥಳ, ಮಂಗಳೂರು, ಕಣ್ಣೂರು, ಗುರು ವಾಯೂರು, ತೃಶ್ಶೂರು, ತಿರುವನಂತಪುರ ಮೊದಲಾದೆಡೆ ಪ್ರದರ್ಶನ ನೀಡಿದ್ದಾರೆ. ಸತತ ಮೂರು ವರ್ಷಗಳಿಂದ ಮೂಡ ಬಿದಿರೆಯ ಆಳ್ವಾಸ್‌ ನುಡಿಸಿರಿಯಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. ಭರತನಾಟ್ಯ ವಲ್ಲದೆ ಶಾಸ್ತಿÅàಯ ಸಂಗೀತವನ್ನು ಗಾನ ಪ್ರವೀಣ ಯೋಗೀಶ್‌ ಶರ್ಮಾ ಬಳ್ಳಪದವು ಅವರಲ್ಲಿ ಅಭ್ಯಾಸ ಮಾಡುತ್ತಿ ದ್ದಾರೆ. ಕರಾಟೆ, ಚಿತ್ರಕಲೆ, ಯಕ್ಷಗಾನ ಮೊದಲಾದ ಪ್ರಕಾರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ.
 

ಟಾಪ್ ನ್ಯೂಸ್

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ

BJP FLAG

Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

8

Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್‌ ಗೆಲುವು: ಬೊಮ್ಮಾಯಿ ಆರೋಪ

RSS

Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kumbale: ವರ್ಕಾಡಿ ಪ್ಲೈವುಡ್‌ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ

Kumbale: ವರ್ಕಾಡಿ ಪ್ಲೈವುಡ್‌ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ

1

Kasargod: ಬೆಕ್ಕಿಗಾಗಿ ಬಾವಿಗಿಳಿದ ವಿದ್ಯಾರ್ಥಿಯ ರಕ್ಷಣೆ

Arrest

Kasaragodu: ಸಿವಿಲ್‌ ಪೊಲೀಸ್‌ ಆಫೀಸರ್‌ ಕೊಲೆ ಪ್ರಕರಣ: ಪತಿಯ ಸೆರೆ

Police

Kasragodu: ನರ್ಸಿಂಗ್‌ ವಿದ್ಯಾರ್ಥಿನಿ ಸಾವು : ಕ್ರೈಂ ಬ್ರ್ಯಾಂಚ್‌ ತನಿಖೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Modi-Tour

Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

Syed Mushtaq Ali Trophy T20: ಕರ್ನಾಟಕಕ್ಕೆ 6 ರನ್‌ಗಳ ಸೋಲು

Syed Mushtaq Ali Trophy T20: ಕರ್ನಾಟಕಕ್ಕೆ 6 ರನ್‌ಗಳ ಸೋಲು

ICC Champions Trophy: ನ.26ಕ್ಕೆ ಐಸಿಸಿ ತುರ್ತು ಸಭೆ?

ICC Champions Trophy: ನ.26ಕ್ಕೆ ಐಸಿಸಿ ತುರ್ತು ಸಭೆ?

16

Pro Kabaddi: ಗುಜರಾತ್‌ಗೆ ರೋಚಕ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.