ಸಂಗ್ರಹಯೋಗ್ಯ ಬೃಹತ್‌ ಗ್ರಂಥ ‘ಚಿನ್ನ ಚಿತ್ತಾರ’


Team Udayavani, Feb 2, 2018, 8:37 PM IST

Chinna-2-2.jpg

ಕಾಸರಗೋಡು: ‘ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು’ ಎಂಬುದಾಗಿ ಕುವೆಂಪು ಒಂದೆಡೆ ಹೇಳುತ್ತಾರೆ. ಈ ಮಾತು ಕಾಸರಗೋಡು ಚಿನ್ನಾ ಅವರಿಗೆ ಎಷ್ಟು ಸರಿಹೊಂದುತ್ತದೆ ಎಂಬುದಕ್ಕೆ ಅವರ ಸಾಧನೆಯೇ ದಾಖಲೆಯಾಗಿದೆ. ಹೌದು ಕಾಸರಗೋಡು ಚಿನ್ನಾ ಅಪ್ಪಟ ಚಿನ್ನವೇ. ಗಡಿನಾಡಿನ ಪ್ರತಿಭೆಯಾಗಿರುವ ಕಾಸರಗೋಡು ಚಿನ್ನಾ ಕನ್ನಡ ನಾಡಿನ ಹಾಗೂ ಕೇರಳದ ನಡುವಣ ಸೇತುವೆಯಾಗಿ ಸಾಧಿಸಿದ ಎಲ್ಲಾ ಸಾಧನೆಯನ್ನು ಹಿಡಿದಿಡಲು ಸಾಧ್ಯವಾಗುವುದಿಲ್ಲ. ಆದರೂ ‘ಚಿನ್ನಾ ಚಿತ್ತಾರ’ ಕೃತಿ ಕಾಸರಗೋಡು ಚಿನ್ನಾ ಅವರ ಸಾಧನೆಯನ್ನು ಅಕ್ಷರ ರೂಪದಲ್ಲಿ ತೆರೆದಿಡುವ ಪ್ರಯತ್ನ ಮಾಡಿದ್ದಂತೂ ಸುಳ್ಳಲ್ಲ.

ಸಾಂಸ್ಕೃತಿಕ ರಾಯಭಾರಿಯಾಗಿರುವ ಕಾಸರಗೋಡು ಚಿನ್ನಾ ಅವರು ಕಾಸರಗೋಡಿನ ಕನ್ನಡ ಪರ ಹೋರಾಟದೊಂದಿಗೆ ಕನ್ನಡ, ಕೊಂಕಣಿ, ತುಳು ಇತ್ಯಾದಿ ಭಾಷೆಗಳ ಉಳಿವು ಹಾಗೂ ಬೆಳವಣಿಗೆಗೆ ನೀಡಿದ ಕೊಡುಗೆಯಂತು ವರ್ಣಿಸಲು ಸಾಧ್ಯವಾಗದು. ಈ ಎಲ್ಲಾ ಭಾಷೆಗಳಲ್ಲಿ ಹಾಗೂ ಮಲಯಾಳ, ಇಂಗ್ಲೀಷ್‌ ಭಾಷೆಯ ನಾಟಕಗಳಲ್ಲಿ ಅಭಿನಯಿಸಿದ್ದು, ನಿರ್ದೇಶಿಸಿದ್ದು, ಸಿನಿಮಾ – ಧಾರವಾಹಿಗಳಲ್ಲಿ ಅಭಿನಯಿಸಿದ್ದು, ನಿರ್ದೇಶಿಸಿದ್ದು, ವಿದೇಶಗಳಲ್ಲೂ ಕನ್ನಡ ನಾಟಕದ – ಮೂಕಾಭಿನಯದ ಕಂಪನ್ನು ಹರಡಿದ್ದು, ಅಲ್ಲೂ ನಾಟಕ ನಿರ್ದೇಶನ ಮಾಡಿದ್ದು… ಹೀಗೆ ಅವರ ಸಾಧನೆಗಳ ಸರಮಾಲೆ ಬೆಳೆಯುತ್ತಾ ಹೋಗುತ್ತದೆ. ಈ ಎಲ್ಲಾ ಸಾಧನೆಗಳನ್ನು ಹಿಡಿದಿಡುವ ಅಪೂರ್ವ ಹಾಗೂ ಸಂಗ್ರಹಯೋಗ್ಯ ಕೃತಿಯೇ “ಚಿನ್ನ ಚಿತ್ತಾರ’. ಕಾಸರಗೋಡು  ಚಿನ್ನಾ ಅವರ ಸಾಧನೆಯ ಹೂರಣ ಯುವ ಪ್ರತಿಭೆಗಳಿಗೆ ಪ್ರೇರಣೆಯಾಗಲಿದೆ.

ವಿವಿಧ ಭಾಷೆಗಳ ನಾಟಕೋತ್ಸವಗಳ ಸರಮಾಲೆಗಳನ್ನೇ ಆಯೋಜಿಸಿದ ಕಾಸರಗೋಡು ಚಿನ್ನಾ ಅವರು ಸಂಗೀತ ರಥ, ಯಕ್ಷತೇರು, ಸಾಹಿತ್ಯಾಭಿಯಾನ, ವಠಾರ ನಾಟಕ, ಲಾರಿ ನಾಟಕ, ಘರ್‌ ಘರ್‌ ಕೊಂಕಣಿ    ಅಭಿಯಾನಗಳ ಮೂಲಕ ಭಾಷೆ, ಸಂಸ್ಕೃತಿಯ ಮೌಲ್ಯವನ್ನು ಎಲ್ಲೆಡೆ ಬಿತ್ತರಿಸುವ ಪ್ರಯತ್ನವಂತೂ ಅಸದಳ. ಮಲಯಾಳ, ಕೊಂಕಣಿ, ಕನ್ನಡ ಭಾಷೆಯ ನಾಟಕಗಳನ್ನು  ತನಗೆ ಬೇಕಾದ ಭಾಷೆಗಳಿಗೆ ತಾನೇ ಅನುವಾದಿಸಿಕೊಂಡದ್ದು, ಕನ್ನಡದ ಅತ್ಯುತ್ತಮ ಮೂವತ್ತು ಕತೆಗಳನ್ನು ಕೊಂಕಣಿಗೆ ಅನುವಾದಿಸಿ “ತೀಸ್‌ ಕಾಣಿಯೋ’ ಎಂಬ ಬೃಹತ್‌ ಗ್ರಂಥ ರಚಿಸಿದ್ದು ಹೀಗೆ ಅವರ ಸಾಧನೆಯನ್ನು ದಾಖಲಿಸುತ್ತಾ ಹೋಗಬಹುದು.


ಕಾಸರಗೋಡು ಚಿನ್ನಾ ಅವರು ಅರುವತ್ತು ಸಂವತ್ಸರಗಳನ್ನು ಪೂರೈಸಿದ ಸಂಭ್ರಮದಲ್ಲಿ ಕಾಸರಗೋಡು ಚಿನ್ನಾ ಅಭಿನಂದನ ಸಮಿತಿ ಆಶ್ರಯದಲ್ಲಿ ಮಂಗಳೂರು ಪುರಭವನದಲ್ಲಿ ಆಯೋಜಿಸಿದ ಅಭಿನಂದನಾ ಕಾರ್ಯ ಕ್ರಮದಲ್ಲಿ ‘ಚಿನ್ನಾ ಚಿತ್ತಾರ’ ಬಿಡುಗಡೆಗೊಳಿಸಲಾಗಿತ್ತು. ಡಾ| ನಾ. ದಾಮೋದರ ಶೆಟ್ಟಿ ಪ್ರಧಾನ ಸಂಪಾದಕರಾಗಿರುವ ಸಂಪಾದಕೀಯ ಮಂಡಳಿಯಲ್ಲಿ ಸಾಹಿತಿಗಳಾದ ಶಾ.ಮಂ.ಕೃಷ್ಣರಾಯ, ಗೋಪಾಲಕೃಷ್ಣ  ಪೈ, ಹಿರಿಯ ಪತ್ರಕರ್ತರಾದ ಮನೋಹರ ಪ್ರಸಾದ್‌, ಬಿ.ಎನ್‌.ಸುಬ್ರಹ್ಮಣ್ಯ, ಉದ್ಘೋಷಕಿ ಶಕುಂತಲಾ ಆರ್‌.ಕಿಣಿ ಅವರು ಸಹಕರಿಸಿದ್ದಾರೆ. ಸಂಪಾದಕರೇ ಹೇಳಿರುವಂತೆ ಬಹಳ ವಿಸ್ತಾರವಾದ ಕ್ಯಾನ್ವಾಸ್‌ನಲ್ಲಿ ವರ್ಣರಂಜಿತ ಮುದ್ರೆಗಳನ್ನೊತ್ತಿದ ಚಿನ್ನಾರನ್ನು ನಿರ್ದಿಷ್ಟವಾಗಿ ಕಂಡರಿಸುವುದು ಬಹು ಪ್ರಯಾಸದ ಕೆಲಸ. ಅಪರೂಪದ ಕೆಲವರಷ್ಟೇ ಈ ರೀತಿ ಇರುವುದು ಸಾಧ್ಯ. ಚಿನ್ನಾ ಅವರ ವ್ಯಕ್ತಿತ್ವದ ಕುರಿತ, ಅವರು ಕೈಗೊಂಡ ಕಾಯಕಗಳ ಕುರಿತ, ಅವರ ಹವ್ಯಾಸ ವೈವಿಧ್ಯಗಳ ಕುರಿತ ಅಸಂಖ್ಯ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ, ವಿವಿಧ ಸಂದರ್ಭಗಳಲ್ಲಿ ಪ್ರಕಟಗೊಂಡಿವೆ. ಅವುಗಳಲ್ಲಿ ಒಂದಷ್ಟನ್ನು ಆಯ್ದು ಕೊಲಾಜ್‌ ರೂಪದಲ್ಲಿ ಕೊಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಅವರ ಸವ್ಯಸಾಚಿತ್ವವನ್ನು ಬೆಳಕಿಗೆ ತರುವ ಸಾವಿರಾರು ಚಿತ್ರಗಳಲ್ಲಿ ಒಂದಷ್ಟು ಚಿತ್ರಗಳನ್ನು ಆಯ್ದು ಫೋಟೋ ಆಲ್ಬಮ್‌ ಸಿದ್ಧಪಡಿಸಿ ಕೊಡಲಾಗಿದೆ.

ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿ ಕೊಂಡಿರುವ 111 ಮಂದಿ ವಿದ್ವಾಂಸರು, ಸಾಹಿತಿಗಳು, ಕಲಾವಿದರು, ಪತ್ರಕರ್ತರು, ಅಭಿಮಾನಿಗಳು ಚಿನ್ನಾ ಕುರಿತಾಗಿ ಬರೆದ ಲೇಖನಗಳನ್ನು ಈ ಕೃತಿಯಲ್ಲಿ ಜೋಡಿಸಲಾಗಿದೆ. ಚಿನ್ನಾ ಚಿತ್ತಾರವೊಂದು ದಾಖಲೆಯ, ಜೋಪಾನವಾಗಿ ಇರಿಸಿಕೊಳ್ಳಬೇಕಾದ, ಸಂಗ್ರಾಹ್ಯಯೋಗ್ಯವಾದ ಗ್ರಂಥವಾಗಿ ರೂಪುಗೊಂಡಿದೆ. ಇದೊಂದು ಬೃಹತ್ತಾದ ಗ್ರಂಥವೇ ಸರಿ.

ಟಾಪ್ ನ್ಯೂಸ್

24 Karnataka players in IPL Mega Auction; Here is the list

IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police

Kumbala: ಸಂತ್ರಸ್ತೆಯ ತಾಯಿ ಆತ್ಮಹ*ತ್ಯೆ: ಸಚಿತಾ ರೈ ವಿರುದ್ಧ ಮತ್ತೊಂದು ದೂರು ದಾಖಲು

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Untitled-1

Kasaragod ಅಪರಾಧ ಸುದ್ದಿಗಳು

Untitled-5

Kasaragod: ಮಾನ್ಯ ಅಯ್ಯಪ್ಪ ಭಜನ ಮಂದಿರದಿಂದ ಕಳವು; ಓರ್ವನ ಬಂಧನ

Arrest

Kasaragodu: ಆಸ್ತಿ ವಿವಾದ: ಅಣ್ಣನ ಕೊಲೆ, ಇಬ್ಬರಿಗೆ ಇರಿತ; ತಮ್ಮನ ಸೆರೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ

24 Karnataka players in IPL Mega Auction; Here is the list

IPL Mega Auction: ಅದೃಷ್ಟ ಪರೀಕ್ಷೆಯಲ್ಲಿ ಕರ್ನಾಟಕದ 24 ಮಂದಿ ಆಟಗಾರರು; ಇಲ್ಲಿದೆ ಪಟ್ಟಿ

7-bng

Bengaluru: ಉದ್ಯೋಗ, ಹೂಡಿಕೆ ನೆಪದಲ್ಲಿ ಜನರಿಗೆ ವಂಚನೆ: ನಾಲ್ವರ ಸೆರೆ

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು

jamia

Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.