ಜನತೆಯ ಕಷ್ಟಕ್ಕೆ ಸ್ಪಂದಿಸುವ ಆಶಾ ಕಾರ್ಯಕರ್ತೆಯರು: ಕೃಷ್ಣ ಭಟ್
ಬದಿಯಡ್ಕ ಗ್ರಾ.ಪಂ. ಆಶಾ ಕಾರ್ಯಕರ್ತೆಯರಿಂದ ಓಣಂ ಸಂಭ್ರಮ
Team Udayavani, Sep 10, 2019, 5:36 AM IST
ಬದಿಯಡ್ಕ: ಸ್ನೇಹಾಲಯದ ವೃದ್ಧ ಮಾತೆಯರೊಂದಿಗೆ ಓಣಂ ಸಂಭ್ರಮ ವನ್ನು ಆಚರಿಸಿ ಬದಿಯಡ್ಕ ಗ್ರಾಮ ಪಂಚಾಯ ತ್ ಆಶಾ ಕಾರ್ಯಕರ್ತೆಯರು ತಮ್ಮ ಮಾತೃತ್ವವನ್ನು ತೋರ್ಪಡಿಸಿದ್ದಾರೆ. ಊರಿನ ಜನತೆಯ ಕಷ್ಟವನ್ನರಿತು ಅವರಿಗೆ ಅಗತ್ಯವುಳ್ಳ ಸೌಲಭ್ಯವನ್ನು ಒದಗಿಸುವಲ್ಲಿ ಆಶಾ ಕಾರ್ಯಕರ್ತೆಯರ ಶ್ರಮವಿದೆ ಎಂದು ಬದಿಯಡ್ಕ ಗ್ರಾಮ ಪಂಚಾಯ ತ್ ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್ ಹೇಳಿದರು.
ಬದಿಯಡ್ಕ ಗ್ರಾಂಡ್ ಪ್ಲಾಜಾ ಸಭಾಂಗಣದಲ್ಲಿ ಬದಿಯಡ್ಕ ಗ್ರಾ.ಪಂ.ಆಶಾ ಕಾರ್ಯಕರ್ತೆಯರ ಓಣಂ ಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮವಸ್ತ್ರ ಘೋಷಣೆ
ಆಶಾ ಕಾರ್ಯಕರ್ತೆಯರಿಗೆ ವೈಯಕ್ತಿಕವಾಗಿ ಸಮವಸ್ತ್ರವನ್ನು ನೀಡುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸೆ„ಬುನ್ನೀಸಾ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ವಿದ್ಯಾಭ್ಯಾಸ ಹಾಗೂ ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಸದಸ್ಯರಾದ ಮುನೀರ್, ಶಾಂತಾ ಬಾರಡ್ಕ, ವಿಶ್ವನಾಥ ಪ್ರಭು, ಸಿರಾಜ್ ಮುಹಮ್ಮದ್, ಮಾಜಿ ಗ್ರಾ.ಪಂ. ಅಧ್ಯಕ್ಷ ಮಾಹಿನ್ ಕೇಳ್ಳೋಟ್, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬಂದಿ ಶುಭಹಾರೈಸಿದರು.
ಬದಿಯಡ್ಕ ಅಸೀಸಿ ಸ್ನೇಹಾಲಯದ ವೃದ್ಧ ಮಾತೆಯರನ್ನು ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ಉಡುಗೊರೆಗಳನ್ನು ನೀಡಿ ಗೌರವಿಸಿದರು.
ಸಾಜಿದಾ ಸ್ವಾಗತಿಸಿದರು. ಲೀಲಾವತಿ ಕನಕಪ್ಪಾಡಿ ಕಾರ್ಯ ಕ್ರಮ ನಿರೂಪಿಸಿದರು. ಸುಮತಿ, ಸುಜಾತಾ, ಶಾಲಿನಿ ಪ್ರಾರ್ಥನೆಯನ್ನು ಹಾಡಿದರು. 25 ಮಂದಿ ಆಶಾ ಕಾರ್ಯರ್ತೆಯರು ಒಟ್ಟು ಸೇರಿ ಆಕರ್ಷಕವಾದ ಹೂವಿನ ರಂಗೋಲಿಯನ್ನು ರಚಿಸಿದ್ದರು.ಮಧ್ಯಾಹ್ನ ಓಣಂ ಭೋಜನವನ್ನು ಏರ್ಪಡಿಸಲಾಗಿತ್ತು.
ಆಶಾ ಕಾರ್ಯಕರ್ತೆಯರ ಮಾಸಿಕ ಭತ್ತೆ ಹೆಚ್ಚಲಿ ಗ್ರಾಮ ಪಂಚಾಯತ್ ಸದಸ್ಯರಿಗಿಂತ ಹೆಚ್ಚು ಜನರನ್ನು ಅತೀ ಹತ್ತಿರದಿಂದ ಬಲ್ಲವರಾದ ಆಶಾ ಕಾರ್ಯರ್ತೆಯರ ಮಾಸಿಕ ಭತ್ತೆಯನ್ನು ಹೆಚ್ಚಿಸಬೇಕಿದೆ. ಆರೋಗ್ಯ ಇಲಾಖೆಯಲ್ಲಿ ಅವರ ಪಾತ್ರ ಮಹತ್ತರ.
-ಶಾಮ ಪ್ರಸಾದ ಮಾನ್ಯ
ಅಧ್ಯಕ್ಷ, ವಿದ್ಯಾಭ್ಯಾಸ,
ಆರೋಗ್ಯ ಸ್ಥಾಯೀ ಸಮಿತಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.