ರೋಗ ತರುವ ಮಿತಿಗಳನ್ನು ಹಿಂದಿಕ್ಕಿ ಇತರರಿಗೆ ಮಾದರಿಯಾದ ಆಶ್ರಯ್‌

Team Udayavani, May 10, 2019, 12:31 PM IST

ar

ಬದಿಯಡ್ಕ: ತಮಗಿರುವ ಮಿತಿಗಳನ್ನು ಹಿಂದೇಟು ಹಾಕಿಸಿ ಹೈಯರ್‌ ಸೆಕೆಂಡರಿ ಪರೀಕ್ಷೆಯಲ್ಲಿ 1200 ದಲ್ಲಿ 1133 ಅಂಕಗಳಿಸಿರುವ ಅಶ್ರಯ್‌ ಕುಮಾರ್‌ ಇತರರಿಗೆ ಮಾದರಿಯಾಗಿದ್ದಾರೆ.

ಜಿಲ್ಲೆಯ ಕುಳತ್ತೂರು ನಿವಾಸಿಯಾಗಿರುವ ಇವರು ಬೆಷಿಟ್‌ಡಿಸೀಸ್‌ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹಂತ ಹಂತವಾಗಿ ದೇಹದ ಎಲ್ಲ ಅಂಗಾಗಳನ್ನು ಕ್ಷೀಣಿಸುವಂತೆ ಮಾಡುವ ಈ ರೋಗ ಈಗಾಗಲೇ ಇವರನ್ನು ಸಾಕಷ್ಟು ಬಳಲಿಸಿದೆ. ಮಾತನಾಡಲು, ಬಾಯಿ ತೆರೆಯಲೂ ಸಾಧ್ಯವಿಲ್ಲದ ಸ್ಥಿತಿಯಲ್ಲಿ ಇವರು ತೊಳಲುತ್ತಿದ್ದಾರೆ. ಅಶ್ರಯ್‌ ಚಟ್ಟಂಚಾಲ್‌ ಹೈಯರ್‌ ಸೆಕೆಂಡರಿ ಶಾಲೆಯ ವಿದ್ಯಾರ್ಥಿಯಾಗಿದ್ದಾರೆ.

ವಿಜ್ಞಾನ ಇವರ ಪ್ರಧಾನ ಕಲಿಕಾ ವಿಷಯವಾಗಿದೆ. ರೋಗಭಾದೆಯ ಪರಿಣಾಮ ಕೆಲವು ತಿಂಗಳು ಮಾತ್ರ ಶಾಲೆಗೆ ತೆರಳಲು ಇವರಿಗೆ ಸಾಧ್ಯವಾಗಿತ್ತು. ಮನೆಯಲ್ಲಿ ಕುಳಿತು ಇವರು ನಡೆಸಿದ ಅಹೋರಾತ್ರೆಯ ಕಲಿಕೆಯ ಹಿನ್ನಲೆಯಲ್ಲಿ ಹೈಯರ್‌ ಸೆಕೆಂಡರಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿ ನಾಡಿಗೆ ಅಭಿಮಾನ ತಂದಿದ್ದಾರೆ.

ಎಸ್‌.ಎಸ್‌.ಎಲ್‌.ಸಿ.ಯಲ್ಲೂ ಇವರು ಎಲ್ಲ ವಿಷಯಗಳಲ್ಲೂ ಎ ಶ್ರೇಣಿ ಪಡೆದಿದ್ದರು. ವಿಜ್ಞಾನದಲ್ಲಿ ಈಗಾಗಲೇ ಇವರು ತಮ್ಮ ನೈಪುಣ್ಯವನ್ನು ಖಚಿತಪಡಿಸಿದ್ದಾರೆ. ದೇಶದ ಅತಿ ಶ್ರೇಷ್ಠ ವಿಜ್ಞಾನ ಮೇಳಗಳಲ್ಲಿ ಒಂದಾದ ಐರಿಶ್‌ ವಿಜ್ಞಾನ ಮೇಳದಲ್ಲಿ ಎರಡು ರಾಜ್ಯದ ಪ್ರತಿನಿಧಿಯಗಿ ಭಾಗವಹಿಸಿ ಸೈ ಎನಿಸಿದ್ದಾರೆ. 2018 ರಲ್ಲಿ ಐರಿಶ್‌ ವಿಜ್ಞಾನ ಮೇಳದಲ್ಲಿ ಆಯ್ಕೆಗೊಂಡಿದ್ದ ಮೂರು ಪ್ರಬಂಧಗಳಲ್ಲಿ ಒಂದು ಇವರದ್ದಾಗಿತ್ತು. ಎಂಡೋಸಲ್ಫಾನ್‌ ಸಂತ್ರಸ್ತ ಮಕ್ಕಳ ಉದದರದಲ್ಲಿ ಮೈಕ್ರೋ ಆರ್ಗನೈಸಂನ ಕುರಿತು ಇವರು ಅಂದು ಪ್ರಬಂಧ ರಚಿಸಿ, ಮಂಡಿಸಿದ್ದರು. ಕೂಲಿ ಕಾರ್ಮಿಕ ರವೀಂದ್ರನ್‌ ಅವರ ಅಕಾಲಿಕ ಮರಣದ ನಂತರ ಕೊಳತ್ತೂರು ಗ್ರಾಮ ಕಚೇರಿಯಲ್ಲಿ ತಾತ್ಕಾಲಿಕ ಹುದ್ದೆಯಲ್ಲಿರುವ ದೀಪಾ ಅವರ ಅಲ್ಪವೇತನವೇ ಈ ಮನೆಗೆ ಆಧಾರವಾಗಿದೆ. ನರ್ಸಿಂಗ್‌ ಕಲಿಕೆ ನಡೆಸುತ್ತಿರುವ ಅಣ್ಣ ಮತ್ತು ಹತ್ತನೇ ತರಗತಿಯಲ್ಲಿ ಕಲಿಕೆ ನಡೆಸುತ್ತಿರುವ ತಮ್ಮನೂ ಆಶ್ರಯ್‌ಗೆ ಇದ್ದಾರೆ. ಬೆಳಗ್ಗೆ 5 ರಿಂದ 7 ಗಂಟೆಗೆ ವರೆಗೆ, ರಾತ್ರಿ 7 ರಿಂದ 11 ಗಂಟೆವರೆಗೆ ಇವರು ಕಲಿಕೆ ನಡೆಸುತ್ತಾರೆ.

ತಮ್ಮ ಕಲಿಕೆ ಅತ್ಯಧಿಕ ಪ್ರೋತ್ಸಾಹ ನೀಡುತ್ತಿರುವ ತಮ್ಮ ತಾಯಿ, ಕೇಂದ್ರ ವಿವಿಯ ಸಹಾಯಕ ಪ್ರಾಚಾರ್ಯ ಟೋನಿ ಗ್ರೇಸ್‌ ಮತ್ತು ಶಾಲಾ ಪ್ರಾಂಶುಪಾಲ ನಾರಾಯಣನ್‌ ಅವರನ್ನು ಆಶ್ರಯ್‌ ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಾರೆ. ಒಬ್ಬ ಉತ್ತಮ ಡಾಕ್ಟರ್‌ ಆಗಬೇಕು ಎಂಬುದು ಅಶ್ರಯ್‌ ಅವರ ಬದುಕಿನ ಕನಸಾಗಿದೆ.

ಟಾಪ್ ನ್ಯೂಸ್

MUDA Case: ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ವಿಶೇಷ ಕೋರ್ಟ್‌ ಆದೇಶ

MUDA Case: ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ವಿಶೇಷ ಕೋರ್ಟ್‌ ಆದೇಶ

8-uv-fusion

School Memories: ತರಗತಿಯಲ್ಲಿ ಉಪ್ಪುಖಾರ

Veer Savarkar ಚಿತ್ರ ಆಸ್ಕರ್‌ ಗೆ ಸಲ್ಲಿಕೆಯಾಗಿದೆಯೇ? ಫಿಲ್ಮ್ ಫೆಡರೇಶನ್‌ ಹೇಳಿದ್ದೇನು…

Veer Savarkar ಚಿತ್ರ ಆಸ್ಕರ್‌ ಗೆ ಸಲ್ಲಿಕೆಯಾಗಿದೆಯೇ? ಫಿಲ್ಮ್ ಫೆಡರೇಶನ್‌ ಹೇಳಿದ್ದೇನು…

High court: ಕಲಿಯುಗ ಬಂದಂತೆ ತೋರುತ್ತಿದೆ…ವೃದ್ಧ ದಂಪತಿಯ ಜೀವನಾಂಶ ಕಾನೂನು ಹೋರಾಟ!

High court: ಕಲಿಯುಗ ಬಂದಂತೆ ತೋರುತ್ತಿದೆ…ವೃದ್ಧ ದಂಪತಿಯ ಜೀವನಾಂಶ ಕಾನೂನು ಹೋರಾಟ!

6-belthanagdy

ಬೆಳ್ತಂಗಡಿ:ಅತ್ಯುತ್ತಮ ಸಾಹಸಿಕ ಪ್ರವಾಸಿ ತಾಣ ‘ಕುತ್ಲೂರು ಗ್ರಾಮ’ ರಾಷ್ಟ್ರಪ್ರಶಸ್ತಿಗೆ ಆಯ್ಕೆ

Jayam Ravi: ಜಯಂ ರವಿಯನ್ನು ಮನೆಯಿಂದ ಹೊರಹಾಕಿದ ಮಾಜಿ ಪತ್ನಿ; ಪೊಲೀಸರ ಮೊರೆ ಹೋದ ನಟ

Jayam Ravi: ಜಯಂ ರವಿಯನ್ನು ಮನೆಯಿಂದ ಹೊರಹಾಕಿದ ಮಾಜಿ ಪತ್ನಿ; ಪೊಲೀಸರ ಮೊರೆ ಹೋದ ನಟ

1-kangg

BJP; ಆಕ್ರೋಶದ ಬಳಿಕ ಹೇಳಿಕೆ ಹಿಂಪಡೆದುಕೊಂಡ ಕಂಗನಾ ರಣಾವತ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

MUDA Case: ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ವಿಶೇಷ ಕೋರ್ಟ್‌ ಆದೇಶ

MUDA Case: ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ವಿಶೇಷ ಕೋರ್ಟ್‌ ಆದೇಶ

8-uv-fusion

School Memories: ತರಗತಿಯಲ್ಲಿ ಉಪ್ಪುಖಾರ

Veer Savarkar ಚಿತ್ರ ಆಸ್ಕರ್‌ ಗೆ ಸಲ್ಲಿಕೆಯಾಗಿದೆಯೇ? ಫಿಲ್ಮ್ ಫೆಡರೇಶನ್‌ ಹೇಳಿದ್ದೇನು…

Veer Savarkar ಚಿತ್ರ ಆಸ್ಕರ್‌ ಗೆ ಸಲ್ಲಿಕೆಯಾಗಿದೆಯೇ? ಫಿಲ್ಮ್ ಫೆಡರೇಶನ್‌ ಹೇಳಿದ್ದೇನು…

2(2)

Vitla: ಟ್ರಾಫಿಕ್‌ ಜಾಮ್‌ ವಿಟ್ಲ ಪೇಟೆಯಲ್ಲಿ ನಿತ್ಯ ಸಂಕಟ

7-uv-fusion

Trip: ಕೊನೆಗೂ ಈಡೇರಿತು ತ್ರಿಮೂರ್ತಿಗಳ ಪ್ರವಾಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.