ವಿಧಾನಸಭಾ ಉಪ ಚುನಾವಣೆ : ಮಂಜೇಶ್ವರ ಬಿರುಸಿನ ಪ್ರಚಾರ


Team Udayavani, Oct 11, 2019, 5:09 AM IST

manjeshwara-birusina-prachara

ಕುಂಬಳೆ: ಮಂಜೇಶ್ವರ ವಿಧಾನ ಸಭಾ ಉಪಚುನಾವಣೆಯ ದಿನಾಂಕ ಸಮೀಪಿಸುತ್ತಿದೆ.ಅಭ್ಯರ್ಥಿಗಳ ಬಿರುಸಿನ ಪ್ರಚಾರ ನಡೆಯುತ್ತಿದೆ. ಆಮಂತ್ರಣವಿಲ್ಲದೆಯೂ ಕಾರ್ಯಕ್ರಮಗಳಿಗೆ ಅತಿಥಿಗಳಾಗಿ ಭಾಗವಹಿಸಿ ಮತ ಯಾಚಿಸುವರು.

ಆಯಾ ಪಕ್ಷಗಳ ಕಾರ್ಯಕರ್ತರು ಮನೆ ಮನೆಗಳಿಗೆ ತೆರಳಿ ತಮ್ಮ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ನಿರತರಾಗಿರುವರು. ಐಕ್ಯರಂಗ, ಎನ್‌ಡಿಎ, ಎಡರಂಗಗಳ ಪ್ರಧಾನ ತ್ರಿಕೋನ ಸ್ಫರ್ಧೆ ನಡೆಯುತ್ತಿರುವ ಈ ಕೇÒತ್ರದಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಬಣ್ಣ ಬಣ್ಣದ ವಾಹನಗಳಲ್ಲಿ ಅಬ್ಬರದ ಮೈಕ್‌ಪ್ರಚಾರ ನಡೆಯುತ್ತಿದೆ. ಡಿಸ್ಕೋ, ಜಾನಪದ, ಯಕ್ಷಗಾನ ಹಾಡುಗಳಲ್ಲಿ ಮತದಾರರನ್ನು ರಂಜಿಸುವ ವಾಹನಗಳು ಹಳ್ಳಿಗಳಲ್ಲಿ ಸಂಚರಿಸುತ್ತಿವೆ. ಕೇಂದ್ರ ರಾಜ್ಯ ಸರಕಾರಗಳ ಯೋಜನೆಗಳು, ಆಡಳಿತ ಸಫಲ, ವೈಫ‌ಲ್ಯಗಳು, ಅಭ್ಯರ್ಥಿಗಳ ಆಶ್ವಾಸನೆಯ ಕರಪತ್ರಗಳು ಮತದಾರರಿಗೆ ವಿತರಣೆ ಯಾಗುತ್ತಿವೆೆ.

ಐಕ್ಯರಂಗದ ಅಭ್ಯರ್ಥಿ ಎಂ.ಸಿ. ಕಮರುದ್ದೀನ್‌ ಮುಂಬಯಿಗೆ ಮತಯಾಚಿಸಲು ತೆರಳಿದರೆ ಎನ್‌ಡಿಎ ಅಭ್ಯರ್ಥಿ ಕುಂಟಾರು ರವೀಶ ತಂತ್ರಿ ಯವರು ಟೆಂಪಲ್‌ ರನ್‌ನೊಂದಿಗೆ ಕ್ಷೇತ್ರದಲ್ಲಿ ಪ್ರಚಾರದಲ್ಲಿ ನಿರತರಾಗಿರುವರು. ಎಡರಂಗ ಅಭ್ಯರ್ಥಿ ಎಂ. ಶಂಕರ ರೈ ಮಾಸ್ಟರ್‌ ರವರು ಕ್ಷೇತ್ರಾದ್ಯಂತ ಬಿರುಸಿನ ಮತಯಾಚನೆಯಲ್ಲಿ ತೊಡಗಿರುವರು.ಮೂರೂ ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿರುವ ಈ ಚುನಾವಣೆಯಲ್ಲಿ ಹೇಗಾದರೂ ಮಾಡಿ ಗೆಲ್ಲಲೇಬೇಕೆಂಬ ಛಲದಲ್ಲಿ ಗೆಲ್ಲುವ ತಂತ್ರವನ್ನು ಹೂಡಿದ್ದಾರೆ. ರಾಷ್ಟ್ರ ಮತ್ತು ರಾಜ್ಯ ಮಟ್ಟದ ನಾಯಕರು ಚುನಾವಣೆಯ ಪ್ರಚಾರಕ್ಕೆ ಆಗಮಿಸಲು ತೊಡಗಿರುವರು.

ರಾಜ್ಯದ ಐದು ಕ್ಷೇತ್ರಗಳಲ್ಲಿ ಮಾತ್ರ ಉಪಚುನಾವಣೆ ನಡೆಯಲಿರು ವುದರಿಂದ ತಮ್ಮ ಪಕ್ಷಗಳ ಅಭ್ಯರ್ಥಿಗಳ ಪರ ಮನೆಮನೆ ಪ್ರಚಾರಕ್ಕೂ ಅನ್ಯ ವಿಧಾನ ಸಭಾಕ್ಷೇತ್ರಗಳಿಂದ ನಾಯಕರು ಮತ್ತು ಪಕ್ಷದ ಕಾರ್ಯಕರ್ತರು ಬಂದು ಈ ಕ್ಷೇತ್ರದಲ್ಲಿ ಸಕ್ರಿಯರಾಗಿರುವರು.ಚುನಾವಣೆಗೆ ಮುನ್ನಾದಿನದ ತನಕ ಇಲ್ಲಿ ಇವರಿಗೆ ಪ್ರಚಾರಕ್ಕೆ ಅವಕಾಶವಿದ್ದು ಚುನಾವಣೆಯ ದಿನ ಕ್ಷೇತ್ರದಲ್ಲಿರಲು ಇವರಿಗೆ ನಿರ್ಬಂಧವಿರುವ ಕಾರಣ ಇಲ್ಲಿಂದ ಮರಳಲೇ ಬೇಕಾಗಿದೆ.

ಪ್ರತಿಷ್ಠೆಯ ಕಣ
ಕಳೆದ ಬಾರಿ ಗೆದ್ದ ಐಕ್ಯರಂಗದ ಶಾಸಕ ಪಿ.ಬಿ. ಅಬ್ದುಲ್‌ ರಝಾಕ್‌ ಅವರ ನಿಧನದಿಂದಾಗಿ ತೆರವಾಗಿರುವ ಸ್ಥಾನವನ್ನು ಈ ಬಾರಿ ಐಕ್ಯರಂಗದ ಅಭ್ಯರ್ಥಿ ಎಂ.ಸಿ. ಕಮರುದ್ದೀನ್‌ ಗೆಲ್ಲಲೇ ಬೇಕೆಂಬ ಪಣ ಯುಡಿಎಫ್‌ನದು.
ಕಳೆದ ಬಾರಿ ಶಾಸಕರು ಕೈಗೊಂಡ ಅಭಿವೃದ್ಧಿಯನ್ನು ಪೂರ್ಣ ಗೊಳಿಸಲು ಐಕ್ಯರಂಗದ ಅಭ್ಯರ್ಥಿಯೇ ಗೆಲ್ಲಬೇಕೆಂಬ ಛಲ ಇವರದು.

ಕೇವಲ 89 ಮತಗಳ ಅಂತರದಿಂದ ಸೋತು ವಿಜಯದ ಬಾಗಿಲ ತನಕ ತಲಪಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಸುರೇಂದ್ರನ್‌ ಅವರ ಸೋಲನ್ನು ಸವಾಲಾಗಿ ಸ್ವೀಕರಿಸಿರುವ ಪಕ್ಷ ಈ ಬಾರಿ ಇಲ್ಲಿ ಕುಂಟಾರು ರವೀಶ ತಂತ್ರಿಯವರು ಗೆಲ್ಲುವುದು ಶಥಸಿದ್ಧವೆಂಬ ವಿಶ್ವಾಸದಲ್ಲಿರುವರು.ಕೇಂದ್ರ ಸರಕಾರದ ಅಭಿವೃದ್ಧಿ ಕ್ರಾಂತಿ ರಾಜ್ಯದ ಪ್ರತಿ ಮತದಾರರ ಮನದಲ್ಲೂ ಮೂಡಿದ್ದು ಗೆಲುವು ನಿಶ್ಚತವೆಂಬುದಾಗಿ ಇವರು ನಂಬಿರುವರು. ಕಳೆದ ಬಾರಿ ತೃತೀಯ ಸ್ಥಾನದಲ್ಲಿದ್ದರೂ ಎಡರಂಗದ ಸ್ಥಳೀಯ ಅಭ್ಯರ್ಥಿ ಎಂ. ಶಂಕರ ರೈ ಅವರಿಗೆ ಇತರ ಪಕ್ಷಗಳ ಮತದಾರರೂ ಮತ ಚಲಾಯಿಸಿಯಾರೆಂಬ ಬಲವಾದ ವಿಶ್ವಾಸದಲ್ಲಿರುವರು. ರಾಜ್ಯವನ್ನಾಳುವ ಎಡರಂಗ ಸರಕಾರದ ಜನಪರ ಆಡಳಿತವನ್ನು ಮೆಚ್ಚಿ ಮತದಾರರು ಮತ ನೀಡಿ ಕಳೆದ 2006ರಲ್ಲಿ ಎಡರಂಗ ಅಚ್ಚರಿಯ ಗೆಲುವು ಸಾಧಿಸಿದಂತೆ ಈ ಬಾರಿ ಗೆಲುವು ತಮ್ಮದೇ ಎಂಬ ಧೃಢ ವಿಶ್ವಾಸ ಎಲ್‌ಡಿಎಫ್‌ನವರದು.

ಸಮರ್ಥ ಅಭ್ಯರ್ಥಿಗಳು
2016ರಲ್ಲಿ ಕಾಸರಗೋಡು ವಿಧಾನ ಸಭಾ ಕ್ಷೇತ್ರದಿಂದ ವಿಧಾನಸಭೆಗೆ ಮತ್ತು 2019ರಲ್ಲಿ ಕಾಸರಗೋಡು ಲೋಕಸಭಾ ಕ್ಷೇತ್ರದಿಂದ ಎನ್‌ಡಿಎ ವತಿಯಿಂದ 2 ಬಾರಿ ಸ್ಫರ್ಧಿಸಿದ ಅನುಭವ ಕುಂಟಾರು ರವೀಶ ತಂತ್ರಿಯವರದು.

ಉಚಿತ ಬಸ್ಸಿನ ವ್ಯವಸ್ಥೆ
ವಿದೇಶದಲ್ಲಿರುವ ಎನ್‌ಆರ್‌ಐಗಳನ್ನು ಚುನಾವಣೆಗೆ ವಿಮಾನ ಮೂಲಕ ಕರೆತರಲು ಓರ್ವ ಅಭ್ಯರ್ಥಿ ಮುಂದಾಗಿದ್ದಾ‌ರಂತೆ. ಮುಂಬಯಿ, ಬೆಂಗಳೂರು ಮುಂತಾದ ದೂರದೂರಿನಲ್ಲಿ ಉದ್ಯೋಗದಲ್ಲಿರುವ ಮತದಾರರಿಗೆ ಮತದಾನಕ್ಕೆ ಆಗಮಿಸಲು ಉಚಿತ ಬಸ್ಸಿನ ವ್ಯವಸ್ಥೆಯನ್ನು ಎಲ್ಲ ಪಕ್ಷಗಳ ವತಿಯಿಂದ ಏರ್ಪಾಡು ಮಾಡಲಾಗಿದೆಯಂತೆ.

ಟಾಪ್ ನ್ಯೂಸ್

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

Ravikumar

Session: ಕಾಂಗ್ರೆಸಿಗರ ವೀಡಿಯೋಗೆ ಯಾವ ಬೆಲೆಯೂ ಇಲ್ಲ: ಎಂಎಲ್‌ಸಿ ರವಿಕುಮಾರ್‌

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?

Parliament: ಸಂಸದರ ತಳ್ಳಾಟ: ಇಂದು ಸಂಸತ್‌ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Parameahwar

Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್‌

UP-Killed

Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್‌: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ

CM-siddu

Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ

Coffe-Grower

Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್‌ ಗೋಯಲ್‌

V.Somanna

Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.