ತಾಳಮದ್ದಳೆಯಿಂದ ಬದುಕಿನ ಉನ್ನತಿಗೂ ನೆರವು: ನಾಗರಾಜ ಸೋಂದಾ
Team Udayavani, Mar 15, 2019, 1:00 AM IST
ಸಿರಿಬಾಗಿಲು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ನಡೆಸಿಕೊಂಡು ಬರುತ್ತಿರುವ ಯಕ್ಷಗಾನ ಸರಣಿ ಕಾರ್ಯಕ್ರಮಗಳ ಮುಂದುವರಿಕೆಯಾಗಿ ಅರ್ಥಾಂತರಂಗ-12 ಕಾರ್ಯಕ್ರಮ ಸಿರಸಿಯ ಪ್ರಬೋಧ ಯಕ್ಷಬಳಗ ಸಂಸ್ಥೆಯ ಸಹಯೋಗದೊಂದಿಗೆ ಹಾಗೂ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಯ ಸಹಕಾರದೊಂದಿಗೆ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಯೋಗಮಂದಿರಲ್ಲಿ ಜರಗಿತು. ಕಾರ್ಯಕ್ರಮವನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ನಾಗರಾಜ ಸೋಂದಾ ಅವರು ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು ತಾಳಮದ್ದಳೆ ಹಾಗೂ ಯಕ್ಷಗಾನದಿಂದ ವ್ಯಕ್ತಿಯ ಬದುಕಿನ ಉನ್ನತಿಗೂ ನೆರವಾಗುತ್ತದೆ. ನಮ್ಮ ಕಲೆಗಳು ಸಂಸ್ಕೃತಿಯ ಜೀವಾಳ. ಕಲೆಯನ್ನು ಆಸ್ವಾದಿಸುತ್ತಲೇ ಅನೇಕರು ಬಹು ಸಾಧನೆಯನ್ನು ಮಾಡಿದವರು ಇದ್ದಾರೆ. ಸಿರಿಬಾಗಿಲು ಪ್ರತಿಷ್ಠಾನದವರು ಹಮ್ಮಿಕೊಂಡಿರುವ ಅರ್ಥಾಂತರಂಗ ಸರಣಿ ಕಾರ್ಯಕ್ರಮ ಅರ್ಥವತ್ತಾಗಿದೆ. ಅರ್ಥಗಾರಿಕೆಯ ಒಳತೋಟಿಗಳನ್ನು ಕಲಿಯಲು ಇದು ಮಾರ್ಗದರ್ಶಿ ಎಂದು ಅಭಿಪ್ರಾಯಪಟ್ಟರು.
ಖ್ಯಾತ ತಾಳಮದ್ದಳೆ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ಅವರ ನಿರ್ದೇಶನ ಹಾಗೂ ನಿರ್ವಹಣೆಯಲ್ಲಿ ಜರಗಿದ ಅರ್ಥಾಂತರಂಗದಲ್ಲಿ “ಆಶು ಸಂಭಾಷಣೆಯ ಆಯಾಮಗಳು, ಅನಿಸಿಕೆ, ಅವಲೋಕನ, ಸಂವಾದ’ ವಿಷಯವನ್ನೊಳಗೊಂಡ ಸಂವಾದಗಳು ಪ್ರಸ್ತುತಿಗೊಂಡವು. . ಗೋವಿಂದ ಭಟ್ ಅವರಿಂದ ಹಂಸಧ್ವಜನ ಪೀಠಿಕೆ ಹಾಗೂ ಸ್ವಗತ, ಈಶ್ವರ ಪ್ರಸಾದ ಧರ್ಮಸ್ಥಳ ಹಾಗೂ ಗೋವಿಂದ ಭಟ್ಟರಿಂದ ಸುಧನ್ವಾರ್ಜುನ ಸಂಭಾಷಣೆ, ರಾಧಾಕೃಷ್ಣ ಕಲ್ಚಾರ್ ಹಾಗೂ ಹರೀಶ ಬಳಂತಿಮೊಗರು ಅವರಿಂದ ಕೃಷ್ಣ ದೂರ್ವಾಸ ಸಂಭಾಷಣೆ, ರಾಮ ಭರತ ಸಂಭಾಷಣೆ ಮಂಡಿಸಲಾಯಿತು. ಹಿಮ್ಮೇಳದಲ್ಲಿ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಅಡೂರು ಲಕ್ಷಿ$¾àನಾರಾಯಣ, ಚಂದ್ರಶೇಖರ ಸರಪಾಡಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.