![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Oct 4, 2023, 11:19 PM IST
ಬದಿಯಡ್ಕ: ಕಾಸರಗೋಡು ಸರಕಾರಿ ಕಾಲೇಜಿನ ಪ್ರಾಧ್ಯಾಪಕ ರೆಹಮಾನ್ ಅವರ ಮನೆಯಿಂದ ಅ. 3ರಂದು ಮಧ್ಯ ರಾತ್ರಿ ಕಳವು ಯತ್ನ ನಡೆದಿದೆ.
ಕಪಾಟಿನಿಂದ ಬಟ್ಟೆಗಳನ್ನು ಎಳೆದು ಎಸೆಯಲಾಗಿದೆ. ಚಿನ್ನಾಭರಣ, ಹಣ, ಬೆಲೆಬಾಳುವ ವಸ್ತುಗಳು ಇರದ
ಕಾರಣ ಕಳ್ಳನಿಗೆ ಏನೂ ಲಭಿಸಿಲ್ಲ.ಕಳ್ಳರು ಮುಂಭಾಗದ ಬಾಗಿಲು ಮುರಿದು ಒಳಗೆ ಪ್ರವೇಶಿಸಿದ್ದರು.
ಅಧ್ಯಾಪಕ ಮತ್ತು ಅವರ ಕುಟುಂಬದ ತರವಾಡು ಮನೆ ಇದಾಗಿದ್ದು ವಾರಕ್ಕೊಮ್ಮೆ ಮಾತ್ರ ಇಲ್ಲಿಗೆ ಬರುತ್ತಾರೆ. ಇದೇ ಮನೆ ಯಿಂದ ಈ ಹಿಂದೆ ಕಳವು ಯತ್ನ ನಡೆದಿದ್ದುದರಿಂದ ಸಿಸಿ ಕೆಮರಾ ಅಳವಡಿಸಲಾಗಿತ್ತು. ಅದರ ಹಾರ್ಡ್
ಡಿಸ್ಕ್ ಅನ್ನು ರಹಸ್ಯ ಸ್ಥಳದಲ್ಲಿರಿಸಲಾ ಗಿತ್ತು. ಅದನ್ನು ಕಳ್ಳರು ಕದ್ದೊಯ್ದಿದ್ದಾರೆ. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.