ಆಚರಣೆಯಿಂದ ದೇವರ ಶಕ್ತಿ ಅರಿವು: ವಜ್ರದೇಹಿ ಶ್ರೀ
Team Udayavani, Feb 26, 2017, 5:53 PM IST
ಕುಂಬಳೆ: ಸಮಾಜಮುಖೀ ಚಿಂತನೆಗಳಿಂದ ಮನುಷ್ಯ ಭಗವಂತನನ್ನು ಸೇರುತ್ತಾನೆ. ಸಮಾಜ ಮತ್ತು ಭಗವಂತ ಪರಸ್ಪರ ಮಲ್ಲಿಗೆ ಮತ್ತು ದಾರದ ಸಂಬಂಧವಿದ್ದಂತೆ. ಅಂತೆಯೇ ಧರ್ಮ ಯುತವಾದ ಜೀವನದಲ್ಲಿ ಆಚರಣೆಯಿದ್ದಲ್ಲಿ ಮಾತ್ರ ದೇವರ ಶಕ್ತಿ ಯನ್ನು ಅರಿಯಲು ಸಾಧ್ಯವಾಗುವುದು. ಧರ್ಮದ ಹೊರತು ಭಗವಂತನ ಅಸ್ತಿತ್ವವಿಲ್ಲ.ಅಂತೆಯೇ ಭಗವಂತನಿಲ್ಲದೆ ಧರ್ಮವಿಲ್ಲ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ನುಡಿದರು.
ಶಿರಿಯ ಸೀರೆ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಶನಿವಾರ ಜರಗಿದ ಮಹಾಶಿವರಾತ್ರಿ ಮತ್ತು ಸೀರೆ ಶ್ರೀ ಶಂಕರನಾರಾಯಣ ಕಲಾ ಭವನವನ್ನು ಲೋಕಾರ್ಪಣೆಗೊಳಿಸಿ ಬಳಿಕ ಜರಗಿದ ಸಭಾ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಸೀರೆ ಎಂಬ ಗ್ರಾಮದಲ್ಲಿ ಶ್ರೀದೇವರು ಸೀರೆಯನ್ನಾಶ್ರಯಿಸಿ ನೆಲೆಸಿದ್ದಾರೆ. ಅಂತೆಯೇ ಗ್ರಾಮದ ಮಂದಿ ಹಣದ ಶ್ರೀಮಂತಿಕೆ ಯಿಂದಿಲ್ಲದಿದ್ದರೂ, ಹೃದಯ ಶ್ರೀಮಂತಿಕೆಯಿಂದ ಇರುವುದು ಸಂತೋಪ. ಧರ್ಮ ಸಮೃದ್ಧಿಯನ್ನು ಸಂಕೇತಿಸಿದರೆ ರಾಜಕೀಯ ನಾಶವನ್ನು ಪ್ರತಿಪಾದಿಸುತ್ತದೆ. ರಾಜನೀತಿಯಲ್ಲಿ ಧರ್ಮ ಮೇಳೈಸಬೇಕು. ಯಾಕೆಂದರೆ ಅಲ್ಲಿ ವಿವೇಚನೆ ಅಗತ್ಯ. ಆಗ ಮಾತ್ರ ಮೋಕ್ಷ ಸಾಧ್ಯ. ಆದುದರಿಂದ ಇಂದಿನ ಸಮಾಜವನ್ನು ತಪ್ಪುದಾರಿಗೊಯ್ಯುತ್ತಿರುವ ರಾಜಕೀಯದಿಂದ ಹೊರಬಂದು ರಾಜನೀತಿಯನ್ನು ಅಳವಡಿಸುವ ಪ್ರಯತ್ನ ಮಾಡಬೇಕೆಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉಡುಪಿ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ ಭಾಗವಹಿಸಿ, ನಮ್ಮದಲ್ಲದ ಜನನ ಮರಣದ ಮಧ್ಯೆ ಇರುವ ಪವಿತ್ರ ಬದುಕನ್ನು ಸಮಾಜಕ್ಕೆ ಮುಡಿಪಾಗಿರಿಸಬೇಕು. ಶೀಲವಿಲ್ಲದ ಶಿಕ್ಷಣ, ನ್ಯಾಯವಿಲ್ಲದ ವ್ಯಾಪಾರ, ತತ್ವರಹಿತ ರಾಜಕಾರಣಗಳಿಂದ ಸಮಾಜ ಕಳೆಗುಂದಿದೆ. ಇದರ ಬದಲು ಜಗತ್ತಿನಲ್ಲಿ ಶ್ರೀಮಂತನಾಗದಿದ್ದರೂ, ಬದುಕಿನಲ್ಲಿ ಶ್ರೀಮಂತನಾಗುವಂತೆ ಜೀವನ ನಡೆಸಬೇಕೆಂದರು.
ಉದ್ಯಮಿ ದಾನಿ ಬದಿಯಡ್ಕ ವಸಂತ ಪೈ ಅಧ್ಯಕ್ಷತೆ ವಹಿಸಿದ್ದರು. ಮಾಗಣೆ ಪ್ರಮುಖ ದಾಸಣ್ಣ ಆಳ್ವ ಕುಳೂರು ಬೀಡು, ಕ್ಷೇತ್ರ ಆಡಳಿತ ಮಂಡಳಿಯ ಶಶಿಧರ ಶೆಟ್ಟಿ ಉಪಸ್ಥಿತರಿದ್ದರು. ಧನ್ಯಶ್ರೀ ರೈ ಪ್ರಾರ್ಥನೆ ಹಾಡಿದರು. ಶ್ರೀಕ್ಷೇತ್ರದ ಪ್ರಮುಖರಾದ ಗೋಪಾಲ.ಎಂ. ಬಂದ್ಯೋಡು ಸ್ವಾಗತಿಸಿದರು, ನ್ಯಾಯವಾದಿ ವಾನಂದೆ ಬಾಲಕೃಷ್ಣ ಶೆಟ್ಟಿ ವಂದಿಸಿದರು. ಶಶಿಕಲಾ ಟೀಚರ್ ನಿರೂಪಿಸಿದರು.
ಶ್ರೀಕ್ಷೇತ್ರದಲ್ಲಿ ಮಹಾಶಿವರಾತ್ರಿ ಉತ್ಸವದ ಅಂಗವಾಗಿ ಬ್ರಹ್ಮ ಶ್ರೀಬಡಾಜೆ ಗೋಪಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ಶನಿವಾರ ಬೆಳಗ್ಗೆ ದೀಪ ಪ್ರತಿಷ್ಠೆ, ಸಹಸ್ರ ಬಿಲ್ವಾರ್ಚನೆ, ಗಣಹೋಮ, ನವಕ ಕಲಶ ಮತ್ತು ಏಕಾದಶ ರುದ್ರಾಭಿಷೇಕ, ನಾಗ ತಂಬಿಲ, ವೀರ ಭದ್ರ ತಂಬಿಲ. ಮಹಾಪೂಜೆ ಬಳಿಕ ಅನ್ನಸಂತರ್ಪಣೆ ಜರಗಿತು.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಕಯ್ನಾರು ಪೊನ್ನೆತ್ತೋಡು ಮಹಿಳಾ ಯಕ್ಷಕೂಟದಿಂದ ಪಂಚವಟಿ ಎಂಬ ಯಕ್ಷಗಾನ ತಾಳಮದ್ದಳೆ ಹಾಗೂ ಸ್ಥಳೀಯ ಅರಳು ಪ್ರತಿಭೆಗಳಿಂದ ನೃತ್ಯ ಜರಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಇಂದು ಕಾಶ್ಮೀರದ ಜೆಡ್-ಮೋರ್ ಸುರಂಗ ಲೋಕಾರ್ಪಣೆ; ಪ್ರಧಾನಿ ಮೋದಿಯಿಂದ ಚಾಲನೆ
Kamala Harris ಸೇರಿ ಸೆಲೆಬ್ರಿಟಿಗಳ ಅಂಗಳಕ್ಕೆ ತಲುಪಿದ ಬೆಂಕಿ; ಸಾವಿನ ಸಂಖ್ಯೆ 18ಕ್ಕೇರಿಕೆ
Wankhede Stadium-50: ಗಾವಸ್ಕರ್, ವಿನೋದ್ ಕಾಂಬ್ಳಿಗೆ ಸಮ್ಮಾನ
Ramanagara: ಡ್ರೋನ್ ಮೂಲಕ ಕೃಷಿಭೂಮಿ ಮರು ಸರ್ವೇ ಯಶಸ್ವಿ: ದೇಶದಲ್ಲೇ ಮೊದಲು
Bengaluru: ಏಳನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್‌ಗೆ ಚಾಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.