ಮಾದಕ ಪದಾರ್ಥ ಬಳಕೆ ವಿರುದ್ಧ ಜಾಗೃತಿ: ಕಿರುಚಿತ್ರ ಸಿದ್ಧ


Team Udayavani, Jun 27, 2019, 5:09 AM IST

aaaz

ಕಾಸರಗೋಡು: ಮದ್ಯ ಮತ್ತು ಮಾದಕ ಪದಾರ್ಥ ಬಳಕೆ ಪರಿಣಾಮ ಹಾದಿ ತಪ್ಪುತ್ತಿರುವ ಯುವಜನತೆ ಮತ್ತು ಕುಟುಂಬಗಳಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ‘ಕನಲೆರಿಯುಂ ಬಾಲ್ಯಂ (ಬೆಂಕಿಯಲ್ಲಿ ಸುಡುವ ಬಾಲ್ಯ)’ ಎಂಬ ಕಿರುಚಿತ್ರವೊಂದು ಸಿದ್ಧವಾಗಿದೆ.

ಕಿನಾನೂರು-ಕರಿಂದಳಂ ಗ್ರಾ. ಪಂ. ವತಿಯಿಂದ ರಾಜ್ಯ ಅಬಕಾರಿ, ಆರೋಗ್ಯ, ಶಿಕ್ಷಣ ಇಲಾಖೆಗಳ ಸಹಕಾರದೊಂದಿಗೆ ಈ ಚಿತ್ರ ನಿರ್ಮಾಣ ನಡೆದಿದೆ. ವಿಜ್ಯೋರ್‌ ಫಿಲಂಸ್‌ ಲಾಂಛನದಡಿ ನಿರ್ಮಿಸಿದ ಚಿತ್ರಕ್ಕೆ ಅಜಿ ಕುಟ್ಟಮತ್‌ ಅವರು ಕಥೆ, ಚಿತ್ರಕಥೆ, ಸಂಭಾಷಣೆ ರಚಿಸಿ, ನಿರ್ದೇಶಿಸಿದ್ದಾರೆ. ಇವರು ನಿರ್ದೇಶಿಸಿದ ‘ವಿಷಕಾಟ್ (ವಿಷಗಾಳಿ)’ ಎಂಬ ಸಿನೆಮಾ ಈಗಾಗಲೇ ಜನಪ್ರಿಯವಾಗಿದೆ. ಅಬಕಾರಿ ಇಲಾಖೆ ಜಾರಿಗೊಳಿಸುವ ‘ವಿಮುಕ್ತಿ’ ಯೋಜನೆಯ ಅಂಗವಾಗಿ ಈ ಕಿರುಚಿತ್ರ ಸಿದ್ಧಗೊಂಡಿದೆ.

ಮಾದಕ ಪದಾರ್ಥಗಳ ಬಳಕೆ ವಿರುದ್ಧ ಸಾಧಾರಣ ಗತಿಯಲ್ಲಿ ನಡೆಸುವ ಜಾಗೃತಿ ತರಗತಿ ಇತ್ಯಾದಿಗಳಿಗಿಂತ ಭಿನ್ನವಾಗಿ ಹೆಚ್ಚುವರಿ ಪರಿಣಾಮ ನೀಡಲಿದೆ ಎಂಬ ಕಾರಣಕ್ಕಾಗಿ ಕಿರುಚಿತ್ರ ನಿರ್ಮಿಸುವ ಯೋಜನೆ ಕಿನಾನೂರು-ಕರಿಂದಳಂ ಗ್ರಾಮ ಪಂಚಾಯತ್‌ ಹಮ್ಮಿಕೊಂಡಿದೆ. ಇದಕ್ಕೆ ವಿವಿಧ ಇಲಾಖೆಗಳ ಬೆಂಬಲವೂ ಲಭಿಸಿದಾಗ ನಿರೀಕ್ಷೆಗೂ ಮೀರಿ ತ್ವರಿತ ಗತಿಯಲ್ಲಿ ಚಿತ್ರೀಕರಣ ಪೂರ್ಣಗೊಳಿಸಲು ಸಾಧ್ಯವಾಗಿತ್ತು ಎಂದು ಚಿತ್ರ ನಿರ್ದೇಶಕ ಅಜಿ ಕುಟ್ಟಮತ್‌ ತಿಳಿಸಿದರು.

ಕಳೆದ ನವೆಂಬರ್‌ ತಿಂಗಳಲ್ಲಿ ಚಾಯೋತ್‌ ಶಾಲೆಯಲ್ಲಿ ಕಂದಾಯ ಸಚಿವ ಇ. ಚಂದ್ರಶೇಖರನ್‌ ಚಿತ್ರೀಕರಣಕ್ಕೆ ಸ್ವಿಚ್ ಆನ್‌ ನಡೆಸಿ ಚಾಲನೆ ನೀಡಿದ್ದರು.

ರಾಜ್ಯಾದ್ಯಂತ ಶಿಕ್ಷಣಾಲಯಗಳಲ್ಲಿ ಈ ಚಿತ್ರ ಪ್ರದರ್ಶನ ನಡೆಸುವ ಉದ್ದೇಶವಿದೆ ಎಂದು ಚಿತ್ರತಂಡ ಅಭಿಪ್ರಾಯಪಟ್ಟಿದೆ.

ಕಾಸರಗೋಡು, ಪರಪ್ಪ, ನೀಲೇಶ್ವರ, ಶಿವಮೊಗ್ಗ, ವಳಪಟ್ಟಣ ಮೊದಲಾದ ಪ್ರದೇಶಗಳಲ್ಲಿ ಈ ಕಿರುಚಿತ್ರದ ಚಿತ್ರೀಕರಣ ನಡೆದಿದ್ದು, 90ಕ್ಕೂ ಅಧಿಕ ಮಂದಿ ಅಭಿನಯಿಸಿದ್ದಾರೆ. ಒಂದೂವರೆ ಗಂಟೆ ಅವಧಿಯ ಈ ಕಿರುಚಿತ್ರ ಮುಂದಿನ ತಿಂಗಳ ಮೊದಲ ವಾರ ಬಿಡುಗಡೆಗೊಳ್ಳಲಿದೆ.

ಟಾಪ್ ನ್ಯೂಸ್

DK-Shivakuamar

Guarantee: ಮಹಾರಾಷ್ಟ್ರ ಬಿಜೆಪಿಗರ ಕರ್ನಾಟಕ ಪ್ರವಾಸಕ್ಕೆ ವಿಶೇಷ ವಿಮಾನ: ಡಿ.ಕೆ.ಶಿವಕುಮಾರ್‌

Pramod-Muthalik

Waqf Issue: ವಕ್ಫ್ ವಿರುದ್ಧ ಹಿಂದೂಗಳು ಒಗ್ಗೂಡಲಿ: ಪ್ರಮೋದ್‌ ಮುತಾಲಿಕ್‌

arrested

Baba Siddique ಹ*ತ್ಯೆ: ಶೂಟರ್‌ ಸೇರಿ ಮೂವರ ಬಂಧನ

pinarayi

Jamaat ಬೆಂಬಲ ಹೇಳಿಕೆ: ಪಿಣರಾಯಿ, ಪ್ರಿಯಾಂಕಾ ವಾದ್ರಾ ಮಧ್ಯೆ ವಾಕ್ಸಮರ!

Sheik Hasina

Bangladesh; ಶೇಖ್‌ ಹಸೀನಾ ಪಕ್ಷದ ಬೆಂಬಲಿಗರನ್ನು ಬಂಧಿಸಿದ ಸೇನೆ

Manipal: ಶಿಕ್ಷಣದ ಜತೆ ಆರೋಗ್ಯ ಸುಧಾರಣೆಗೂ ಆದ್ಯತೆ

Manipal: ಶಿಕ್ಷಣದ ಜತೆ ಆರೋಗ್ಯ ಸುಧಾರಣೆಗೂ ಆದ್ಯತೆ

Kukke Shree Subrahmanya ಕ್ಷೇತ್ರದಲ್ಲಿ ಭಕ್ತ ಸಂದಣಿ

Kukke Shree Subrahmanya ಕ್ಷೇತ್ರದಲ್ಲಿ ಭಕ್ತ ಸಂದಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

ಹೊಸ ಸೇರ್ಪಡೆ

DK-Shivakuamar

Guarantee: ಮಹಾರಾಷ್ಟ್ರ ಬಿಜೆಪಿಗರ ಕರ್ನಾಟಕ ಪ್ರವಾಸಕ್ಕೆ ವಿಶೇಷ ವಿಮಾನ: ಡಿ.ಕೆ.ಶಿವಕುಮಾರ್‌

Pramod-Muthalik

Waqf Issue: ವಕ್ಫ್ ವಿರುದ್ಧ ಹಿಂದೂಗಳು ಒಗ್ಗೂಡಲಿ: ಪ್ರಮೋದ್‌ ಮುತಾಲಿಕ್‌

Vimana 2

Passenger ನಿಂದಲೇ ವಿಮಾನಕ್ಕೆ ಹುಸಿ ಬಾಂಬ್‌ ಬೆದರಿಕೆ ಕರೆ!

AANE 2

Madhya Pradesh; ಮರಿ ಆನೆ ಸಾ*ವು: ಒಟ್ಟು 11ಕ್ಕೆ ಏರಿಕೆ

sudha-murthy

Air travel ಅಗ್ಗದ ಟಿಕೆಟ್‌ ಖರೀದಿ: ಸುಧಾಮೂರ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.