ಚರಿತ್ರೆ ಪುಟ ತೆರೆದಿಡುವ ಪ್ರಾಚ್ಯವಸ್ತು ಪ್ರದರ್ಶನ
Team Udayavani, Jan 14, 2019, 7:22 AM IST
ಬದಿಯಡ್ಕ: ಅನೇಕ ಆಂದೋಲನ- ಹೋರಾಟಗಳ ಫಲವಾಗಿ ರೂಪುಗೊಂಡ ರಾಜ್ಯದ ಪ್ರಜಾಪ್ರಭುತ್ವ ತಳಹದಿಯ ವಿವಿಧ ಹಂತಗಳನ್ನು ಜನತೆಯ ಮುಂದೆ ತೆರೆದಿಡುವ ವಿಧಾನಸಭೆ ಪ್ರಾಚ್ಯವಸ್ತು ಪ್ರದರ್ಶನ ಆರಂಭಗೊಂಡಿದೆ.
ಮಂಜೇಶ್ವರ ಎಸ್.ಎ.ಟಿ. ಶಾಲೆಯಲ್ಲಿ ಈ ಪ್ರದರ್ಶನ ಆರಂಭಗೊಂಡಿದ್ದು, ಕೇರಳ ವಿಧಾನಸಭೆ ಪ್ರಾಚ್ಯವಸ್ತು ಇಲಾಖೆ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ವತಿಯಿಂದ ಸಾಕ್ಷರತಾ ಮಿಷನ್ ಪ್ರಾಧಿಕಾರದ ಸಹಕಾರದೊಂದಿಗೆ ಜರಗುತ್ತಿದೆ.
ಪ್ರಜಾಪ್ರಭುತ್ವ ನೀತಿಯ ಮೌಲ್ಯಗಳನ್ನು ದೇಶದ ಸಂವಿಧಾನದ ಹಿನ್ನೆಲೆಯಲ್ಲಿ ಜನತೆಗೆ ತಿಳಿಸುವ ಮಹತ್ತರ ಉದ್ದೇಶದಿಂದ ಜ.14 ಮಂಜೇಶ್ವರದಿಂದ ಆರಂಭಗೊಂಡು ತಿರುವನಂತಪುರಂ ಜ.24 ರ ವರೆಗೆ ಪರ್ಯಟನೆ ನಡೆಸುವ ಸಂವಿಧಾನ ಸಂದೇಶ ಯಾತ್ರೆಯ ಪೂರ್ವಭಾವಿಯಾಗಿ ಈ ಪ್ರದರ್ಶನ ನಡೆಯುತ್ತಿದೆ.
2006ರಲ್ಲಿ ಉದ್ಘಾಟನೆಗೊಂಡ ಕೇರಳ ವಿಧಾನಸಭೆಯ ಸುವರ್ಣ ಮಹೋತ್ಸವ ಮ್ಯೂಸಿಯಂ ನಲ್ಲಿ ಕೇರಳ ರಾಜ್ಯ ರಚನೆಯ ಹಿಂದಿನ ಮತ್ತು ನಂತರದ ಕಾಲಯಾನದೊಂದಿಗೆ, ವಿಧಾನಸಭೆಯ ಚಟುವಟಿಕೆಗಳ, ಸರಕಾರಗಳ ವ್ಯವಸ್ಥೆಗಳ, ಜನನಾಯಕರ, ಜನಪ್ರತಿನಿಧಿಗಳ ಕುರಿತಾದ ಸಮಗ್ರ ದಾಖಲೆಗಳು, ಮಾಹಿತಿಗಳು ಇಲ್ಲಿವೆ. ವಿಧಾನಸಭೆಯ ಅಧ್ಯಕ್ಷರು, ಮುಖ್ಯಮಂತ್ರಿಗಳು, ಸಭಾಪತಿಗಳು, ಸಚಿವರು, ಪ್ರತಿಪಕ್ಷ ನಾಯಕರು, ರಾಜ್ಯಪಾಲರು, ಅವರ ಪ್ರತಿಜ್ಞಾ ಸ್ವೀಕಾರದ ಚಿತ್ರಗಳು ಸಹಿತ ಅಪರೂಪದ ಚಿತ್ರ ಪ್ರದರ್ಶನಗಳಿವೆ. ಪ್ರಜಾಪ್ರಭುತ್ವ ನೀತಿಯ ಮಹತ್ವವನ್ನು ಜನತೆಗೆ ತಿಳಿಸುವ ಉದ್ದೇಶದಿಂದ ಮ್ಯೂಸಿಯಂನ ಜಿಲ್ಲಾ ಮಟ್ಟದ ಪ್ರದರ್ಶನಗಳನ್ನು ನಡೆಸಲಾಗುತ್ತಿದೆ.
ವಿಧಾನಸಭೆಯ ನಿಯಮಾವಳಿಗಳು, ಶಿಸ್ತು ಸಂಹಿತೆಗಳು ಇತ್ಯಾದಿ ಮಾಹಿತಿಗಳು ಇಲ್ಲಿವೆ. ಇವುಗಳ ಜತೆಗೆ ”ನಮ್ಮುಡೆ ನಿಯಮಸಭಾ(ನಮ್ಮ ವಿಧಾನಸಭೆ)” ಎಂಬ ಹೆಸರಿನ ಸಾಕ್ಷ್ಯಚಿತ್ರ, ರಾಜ್ಯ ಸಚಿವ ಸಂಪುಟ ಕುರಿತಾದ ”ವಜ್ರ ಕೇರಳಂ” ಎಂಬ ಸಾಕ್ಷ್ಯಚಿತ್ರಗಳ ಪ್ರದರ್ಶನವೂ ಇಲ್ಲಿ ನಡೆಯುತ್ತಿದೆ. ಒಟ್ಟಿನಲ್ಲಿ ಪ್ರಜಾಪ್ರಭುತ್ವ ನೀತಿ ಬಗ್ಗೆ, ಕೇರಳದ ಇತಿಹಾಸದ ಬಗ್ಗೆ ಕುತೂಹಲಿಗಳಾದ ಮಂದಿಯ ಕಣ್ಮನ ತಣಿಸುವ ಮಾಹಿತಿಗಳೊಂದಿಗೆ ಸಾರ್ಥಕ ಪ್ರದರ್ಶನವೊಂದು ಆರಂಭಗೊಂಡಂತಾಗಿದೆ.
ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ.ಅಶ್ರಫ್ ಪ್ರದರ್ಶನವನ್ನು ಉದ್ಘಾಟಿಸಿದರು. ಮಂಜೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷ ಅಬ್ದುಲ್ ಅಝೀಝ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಕೇರಳ ವಿಧಾನಸಭೆ ವಿಭಾಗ ಅಧಿಕಾರಿ ಎ.ವಿಜಯನ್ ಅಮೃತರಾಜ್ ಶುಭಾಶಂಸನೆಗೈದರು.
ಬ್ಲಾಕ್ ಪಂಚಾಯತ್ ಉಪಾಧ್ಯಕ್ಷೆ ಮಮತಾ ದಿವಾಕರ್, ಸ್ಥಾಯೀ ಸಮಿತಿ ಅಧ್ಯಕ್ಷರಾದ ಬಹರೈನ್ ಮಹಮ್ಮದ್, ಮಹಮ್ಮದ್ ಮುಸ್ತಫ, ಮಂಜೇಶ್ವರ ಗ್ರಾಮ ಪಂಚಾಯತ್ ಮುಕ್ತಾರ್, ಕೆ.ಎಂ.ಕೆ.ಅಬ್ದುಲ್ ರಹಮಾನ್ ಹಾಜಿ, ಸದಸ್ಯೆ ಸುಪ್ರಿಯ ಶೆಣೆ„, ಜಿಲ್ಲಾ ಸಾಕ್ಷರತಾ ಮಿಷನ್ ಯೋಜನೆ ಸಂಚಾಲಕ ಶಾಜು ಜೋನ್, ಸಹಾಯಕ ಸಂಚಾಲಕ ಶಾಸ್ತಾ ಪ್ರಸಾದ್, ಗೀತಾ ಟೀಚರ್, ನೋಡೆಲ್ ಪ್ರೇರಕ್ ಗ್ರೇಸಿ ವೇಗಸ್ ಮೊದಲಾದವರು ಉಪಸ್ಥಿತರಿದ್ದರು.
ಬೆಳಕು ಚೆಲ್ಲುವ ಪ್ರಯತ್ನ
ಕೇರಳದಲ್ಲಿ ಪ್ರಜಾಪ್ರಭುತ್ವ ನೀತಿ ಅರಳುವ ಮುನ್ನ ಇದ್ದ ಆಡಳಿದ ಸ್ವರೂಪವನ್ನು ಸ್ಪಷ್ಟವಾಗಿ ಈ ಪ್ರದರ್ಶನ ಚಿತ್ರಿಸುತ್ತದೆ. ಸಮಾನತೆಯ ಮೂಲಮಂತ್ರದೊಂದಿಗೆ ಮಾನವಬದುಕಿಗೆ ಬೇಕಾದ ತಳಹದಿಗೆ ನಡೆಸಲಾದ ನಿನ್ನೆಗಳ ಹೋರಾಟಗಳ ಹಂತಗಳಿಗೆ ಬೆಳಕು ಚೆಲ್ಲುವ ಯತ್ನ ಈ ಪ್ರದರ್ಶನ ನಡೆಸುತ್ತದೆ. ತಿರುವಾಂಕೂರು ಆಡಳಿತದಿಂದ ತೊಡಗಿ ಇಂದಿನ ಜನರ ಕೈಗೆ ಅಧಿಕಾರ ಲಭಿಸಿರುವ (ಪ್ರಜಾಪ್ರಭುತ್ವ ರೀತಿಯ) ಸಚಿವ ಸಂಪುಟ ರಚನೆ ವರೆಗಿನ ಕ್ರಾಂತಿಕಾರಿ ಬೆಳವಣಿಗೆಗಳನ್ನು ತಿಳಿಸುತ್ತದೆ. ಗಣತಂತ್ರ ಕೇರಳದ ಪರಂಪರೆಯ ಹೆಜ್ಜೆಗಳನ್ನು ಸಂರಕ್ಷಿಸುವ ದಾಖಲೆಗಳು ಇಲ್ಲಿವೆ. ಛಾಯಾಚಿತ್ರಗಳ, ವೀಡಿಯೋ ಸಹಿತ ಪ್ರದರ್ಶನ ಇಲ್ಲಿ ನಡೆಯುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kasaragod: ರಸ್ತೆಯಲ್ಲಿ ಬಿಯರ್ ಬಾಟ್ಲಿ ಎಸೆದು ಘರ್ಷಣೆಗೆ ಯತ್ನ; ಕೇಸು ದಾಖಲು
Kasaragod ಅಪರಾಧ ಸುದ್ದಿಗಳು; ತಂಬಾಕು ಉತ್ಪನ್ನಗಳ ಸಹಿತ ಇಬ್ಬರ ಬಂಧನ
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Kasaragod: ಮುಖವಾಡ ಧರಿಸಿದ ವ್ಯಕ್ತಿಯಿಂದ ವಿದ್ಯಾರ್ಥಿಗೆ ಇರಿತ; ಪ್ರಕರಣ ದಾಖಲು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.