ತ್ಯಾಗ, ಬಲಿದಾನ ಸಂದೇಶದ ಬಕ್ರೀದ್ ಆಚರಣೆ
Team Udayavani, Sep 2, 2017, 8:15 AM IST
ಕಾಸರಗೋಡು: ತ್ಯಾಗ, ಬಲಿದಾನದ ಸಂದೇಶ ವನ್ನು ಸಾರುವ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಶುಕ್ರವಾರದಂದು ಸಂಭ್ರಮ ಸಡಗರದಿಂದ ಆಚರಿಸಿದರು.
ಇಸ್ಲಾಮಿಕ್ ಕ್ಯಾಲೆಂಡರ್‌ನ ಕೊನೆಯ ತಿಂಗಳಾದ ದುಲ್‌ಹಜ್ ತಿಂಗಳ 10 ನೇ ದಿನದಂದು ಆಚರಿಸುವ ಬಕ್ರೀದ್ ಹಬ್ಬ ಧಾರ್ಮಿಕ ಚೌಕಟ್ಟಿನೊಳಗೆ ಆಚರಿಸುವ ಹಬ್ಬ. ಜಗತ್ತಿಗೆ ತ್ಯಾಗದ ಸಂದೇಶದೊಂದಿಗೆ ಸಮಾನತೆಯ ಸಂದೇಶವನ್ನೂ ನೀಡುತ್ತದೆ. ಅಲ್ಲಾಹು ಅಕºರ್…ಅಲ್ಲಾಹು ಅಕºರ್…ಎಂಬ ದೈವ ಕೀರ್ತನೆ ಎಲ್ಲೆಡೆ ಮೊಳಗಿದಾಗ ಹಬ್ಬಕ್ಕೆ ಮುಹೂರ್ತ ದೊರೆಯುತ್ತದೆ. ಹಬ್ಬದ ಅಂಗವಾಗಿ ಮುಂಜಾನೆ ಬೇಗ ಎದ್ದು ಹೊಸ ಉಡುಪು ಧರಿಸಿ, ಸುಗಂಧ ದ್ರವ್ಯ ಸಿಂಪಡಿಸಿ ಮಸೀದಿಗೆ ತೆರಳಿದರು.
ಮಸೀದಿಯಲ್ಲಿ ಬೆಳಗ್ಗೆ ವಿಶೇಷ ನಮಾಜು ನಡೆದ ಬಳಿಕ ಬಂಧು ಮಿತ್ರಾದಿಗಳ ಮನೆಗೆ ತೆರಳಿ ಪರಸ್ಪರ ಸಂಬಂಧವನ್ನು ಸುದೃಢಗೊಳಿಸಿಕೊಂಡರು. ಈದ್ ನಮಾಜಿನ ಬಳಿಕ ಬಂಧು ಮಿತ್ರಾದಿಗಳು ಪರಸ್ಪರ ಹಸ್ತದಾನ, ಆಲಿಂಗನ ಮಾಡಿಕೊಂಡು ಹಬ್ಬದ ಸಂದೇಶವನ್ನು ಹಂಚಿಕೊಂಡರು. ಕಾಸರಗೋಡು ಜಿಲ್ಲೆಯಾದ್ಯಂತ ಮಸೀದಿಗಳಲ್ಲಿ ನಮಾಜು ನಡೆಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.