ಉಪ ಬೆಳೆ ಕದಳಿ ಬಾಳೆ 

Team Udayavani, Sep 11, 2017, 6:20 AM IST

Banana.jpg

ಕದಳಿ ಬಾಳೆ ಹಣ್ಣು ಸಾಂಪ್ರದಾಯಿಕ ಆಚರಣೆಗಳು, ಪೂಜೆ, ಆಹಾರ ಪದ್ಧತಿಗಳಲ್ಲಿ, ಔಷಧೀಯವಾಗಿಯೂ ಅತ್ಯಂತ ಪ್ರಮುಖವಾಗಿ ಬಳಕೆಯಾಗುವ ಹಣ್ಣು. ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದರೂ ಪೂರೈಕೆ ಕಡಿಮೆ ಇರುವುದರಿಂದ ಬೆಲೆ ಏರಿಕೆಯಾಗುತ್ತಲೇ ಇದೆ. ಹೀಗಾಗಿ ರೈತರು ಪ್ರಮುಖ ಬೆಳೆಯಾಗಿ ಅಲ್ಲದಿದ್ದರೂ ಉಪಬೆಳೆಯಾಗಿ ಕದಳಿ ಬಾಳೆ ಕೃಷಿಯ ಕಡೆಗೆ ಒಲವು ತೋರಬೇಕಾಗಿದೆ.

ಕರಾವಳಿ ಭಾಗದಲ್ಲಿ ಕದಳಿ ಬಾಳೆ ಕೃಷಿ ನೇಂದ್ರ, ಕ್ಯಾವಂಡಿಸ್‌ನಂತೆ ಮುಖ್ಯಬೆಳೆಯಾಗಿ, ಎಡೆಬೆಳೆಯಾಗಿ ಅಥವಾ ಉಪಬೆಳೆಯಾಗಿ ರೈತರಿಗೆ ಸಹಾಯಕವಾಗಿತ್ತು. ಆದರೆ ವಾಣಿಜ್ಯ ಬೆಳೆಯಾಗಿ ಬೆಳೆಸುವ ಬಾಳೆ ತಳಿಗಳ ಮಧ್ಯೆ ಕದಳಿ ಬಾಳೆಯನ್ನು ಬೆಳೆಸುವವರು ವಿರಳವಾಗಿದ್ದಾರೆ.

ಕದಳಿ ಬಾಳೆ ಹಣ್ಣನ್ನು ಹೆಚ್ಚಾಗಿ ದ.ಕ., ಕಾಸರಗೋಡು, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಪ್ರಸ್ತುತ ದ.ಕ. ಜಿಲ್ಲೆಯಲ್ಲಿ ಬೇಡಿಕೆಯಷ್ಟು  ಪೂರೈಕೆ ಇಲ್ಲದಿರುವ ಹಿನ್ನೆಲೆಯಲ್ಲಿ ಕಾಸರಗೋಡು, ಹಾಸನ ಭಾಗಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಕದಳಿ ಬಾಳೆಯಲ್ಲೂ ನೈಕದಳಿ, ಕಾವಿರ ಕದಳಿ, ಏಲಕ್ಕಿ ಕದಳಿ ಮೊದಲಾದ ಉಪ ತಳಿಗಳಿವೆ.

ಕದಳಿ ಬಾಳೆಗಿಡ ಮುಖ್ಯವಾಗಿ ಕಾಂಡಹುಳು ಬಾಧೆಗೆ ಒಳಗಾಗುತ್ತಿರುವುದು, ಮುಂಡುತಿರಿಗೆ ಒಳಗಾಗುವುದು. ಗೊನೆ ಹಾಕುವಾಗ ದರವಿಲ್ಲದಿರುವುದು, ಉಳಿದ ಬಾಳೆ ಗಿಡಗಳಿಗಿಂತ ಫಲ ನೀಡಲು ಹೆಚ್ಚು ಸಮಯ ಹಿಡಿಯುವುದು, ವಾಣಿಜ್ಯ ಬೆಳೆಯಾಗಿ ಕದಳಿ ಬೆಳೆಯನ್ನು ಬೆಳೆಸಲು ಆಸಕ್ತಿ ತೋರದಿರುವುದು, ತೂಕ, ಗಾತ್ರದಲ್ಲಿ ಉಳಿದ ಬಾಳೆತಳಿಗಳಿಗಿಂತ ಕಡಿಮೆ ತೂಗುವುದರಿಂದ ಬೆಲೆಯೂ ಕಡಿಮೆ ಲಭಿಸುವುದು ಕದಳಿ ಒಲವು ಕಡಿಮೆಯಾಗಲು ಕಾರಣವಾಗಿದೆ.

ಹಣ್ಣಿನ ಮಾರುಕಟ್ಟೆಯಲ್ಲಿ ನೇಂದ್ರ ಬಾಳೆಹಣ್ಣಿಗೆ ಹಾಗೂ ಕದಳಿ ಬಾಳೆಹಣ್ಣಿಗೆ ಹೆಚ್ಚಿನ ಬೇಡಿಕೆ ಇದೆ. ನೇಂದ್ರ ಬಾಳೆಹಣ್ಣಿನ ಬೆಳೆಗಾರರು ಇಲ್ಲಿ ಹೆಚ್ಚು ಇಲ್ಲದಿದ್ದರೂ ಕದಳಿ ಬಾಳೆಹಣ್ಣನ್ನು ಉಪಬೆಳೆಯಾಗಿ ಬೆಳೆಯುತ್ತಿದ್ದರು. 5 ವರ್ಷದ ಹಿಂದಕ್ಕೆ ಹೋಲಿಸಿದರೆ ಶೇ. 50 ಪ್ರಮಾಣದಲ್ಲಿ ಕದಳಿ ಬಾಳೆ ಕಡಿಮೆಯಾಗಿದೆ ಎನ್ನುತ್ತಾರೆ ಬಾಳೆಹಣ್ಣಿನ ವ್ಯಾಪಾರಿಗಳು.

ದರ ಏರುಪೇರಾಗುವುದಿಲ್ಲ
ಕದಳಿ ಬಾಳೆಗೆ ಹೆಚ್ಚು ಬೇಡಿಕೆ ಇದೆ. ಆದರೆ ಬೆಳೆಯುವವರ ಪ್ರಯಾಣ ಕಡಿಮೆಯಾಗಿರುವುದರಿಂದ ವ್ಯಾಪಾರಿಗಳು ಮನೆಗೆ ಬಂದು ಖರೀದಿಸುತ್ತಾರೆ. ಉಳಿದ ಬಾಳೆಹಣ್ಣುಗಳ ದರದಲ್ಲಿ ಹೆಚ್ಚಿನ ಏರುಪೇರು ಉಂಟಾದರೂ ಕದಳಿಗೆ ಈ ರೀತಿ ಆಗುವುದಿಲ್ಲ. ಪ್ರಸ್ತುತ ಉಳಿದವುಗಳಿಗಿಂತಲೂ ಕದಳಿ ಬಾಳೆ ಹೆಚ್ಚು ಆದಾಯ ತಂದುಕೊಡುತ್ತಿದೆ.

–  ರಾಜೇಶ್‌ ಪಟ್ಟೆ

ಟಾಪ್ ನ್ಯೂಸ್

Puttur ಸರ್ವೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

Puttur ಸರ್ವೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

Manipal: ಕಾರು ಅಪಘಾತ: ಪ್ರಯಾಣಿಕರು ಪಾರು

Manipal: ಕಾರು ಅಪಘಾತ: ಪ್ರಯಾಣಿಕರು ಪಾರು

Mangaluru: ಮಾದಕ ವಸ್ತು ಸೇವನೆ ಆರೋಪ; 5 ಮಂದಿ ಸೆರೆ

Mangaluru: ಮಾದಕ ವಸ್ತು ಸೇವನೆ ಆರೋಪ; 5 ಮಂದಿ ಸೆರೆ

ಮುಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್‌ ವಶಕ್ಕೆ ನೀಡಲ್ಲ

High Court: ಮುಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್‌ ವಶಕ್ಕೆ ನೀಡಲ್ಲ

Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ

Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ

24 ಕಂಬಳ ಕೂಟಕ್ಕೆ ತಲಾ 5 ಲಕ್ಷದಂತೆ ಅನುದಾನ: ಸಚಿವ ಎಚ್‌.ಕೆ. ಪಾಟೀಲ್‌

24 ಕಂಬಳ ಕೂಟಕ್ಕೆ ತಲಾ 5 ಲಕ್ಷದಂತೆ ಅನುದಾನ: ಸಚಿವ ಎಚ್‌.ಕೆ. ಪಾಟೀಲ್‌

Mandya; ಕನ್ನಡ ಸಾಹಿತ್ಯ ಸಮ್ಮೇಳನ: “ಉದಯವಾಣಿ’ ವಿಶೇಷ ಪುರವಣಿ ಬಿಡುಗಡೆ

Mandya; ಕನ್ನಡ ಸಾಹಿತ್ಯ ಸಮ್ಮೇಳನ: “ಉದಯವಾಣಿ’ ವಿಶೇಷ ಪುರವಣಿ ಬಿಡುಗಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod: ಅಪರಾಧ ಸುದ್ದಿಗಳು; ಕಾರ್ಮಿಕ ಆತ್ಮಹ*ತ್ಯೆ

Kasaragod: ಅಪರಾಧ ಸುದ್ದಿಗಳು; ಕಾರ್ಮಿಕ ಆತ್ಮಹ*ತ್ಯೆ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

21-sabarimala

Sabarimala: ಭಕ್ತರ ಸುರಕ್ಷೆಗಾಗಿ ಮಾರ್ಗಸೂಚಿ ಪ್ರಕಟ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

KSA-Nia-Arrest

Operation: ಕಾಸರಗೋಡಿನಲ್ಲಿ ಎನ್‌.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Puttur ಸರ್ವೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

Puttur ಸರ್ವೆ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ

Manipal: ಕಾರು ಅಪಘಾತ: ಪ್ರಯಾಣಿಕರು ಪಾರು

Manipal: ಕಾರು ಅಪಘಾತ: ಪ್ರಯಾಣಿಕರು ಪಾರು

Mangaluru: ಮಾದಕ ವಸ್ತು ಸೇವನೆ ಆರೋಪ; 5 ಮಂದಿ ಸೆರೆ

Mangaluru: ಮಾದಕ ವಸ್ತು ಸೇವನೆ ಆರೋಪ; 5 ಮಂದಿ ಸೆರೆ

ಮುಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್‌ ವಶಕ್ಕೆ ನೀಡಲ್ಲ

High Court: ಮುಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್‌ ವಶಕ್ಕೆ ನೀಡಲ್ಲ

Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ

Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.