Battery Theft: ಎಂಟು ಬ್ಯಾಟರಿ ಸಹಿತ ಇಬ್ಬರ ಬಂಧನ
Team Udayavani, Aug 7, 2023, 10:15 PM IST
ಕಾಸರಗೋಡು: ರಸ್ತೆ ಬದಿಗಳಲ್ಲಿ ನಿಲ್ಲಿಸಲಾಗಿದ್ದ ವಾಹನಗಳ ಬ್ಯಾಟರಿ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಮುಟ್ಟತ್ತೋಡಿ ನಾಯಮ್ಮಾರಮೂಲೆ ನಾಸಿಕ್ ಮಿನಿ ಸ್ಟೇಡಿಯಂ ಬಳಿಯ ಮಿಶಾìದ್ ಎನ್.ಎ(36) ಮತ್ತು ಮುಟ್ಟತ್ತೋಡಿ ರಹ್ಮಾನಿಯಾ ನಗರ ರುಕ್ಯಾ ಮಂಜಿಲ್‌ನ ಮೊಹಮ್ಮದ್ ಜಾಶೀರ್ ಟಿ.ಎ(33)ನನ್ನು ಪೊಲೀಸರು ಬಂಧಿಸಿದ್ದಾರೆ.
ವರ್ಕಾಡಿ ಮೆಟಲ್ಸ್ ಸಂಸ್ಥೆಗಾಗಿ ಲಾರಿಗಳಲ್ಲಿ ಸಾಮಗ್ರಿಗಳನ್ನು ಸಾಗಿಸುವ ಆಲಂಪಾಡಿ ನಿವಾಸಿ ಹಂಸ ಅವರ ಲಾರಿಗಳಿಂದ ಬ್ಯಾಟರಿಗಳನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ವಿದ್ಯಾನಗರ ವರ್ಕ್‌ಶಾಪ್ ಒಂದರ ಬಳಿಯ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಮೂರು ಲಾರಿಗಳ ಬ್ಯಾಟರಿ ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದರು.
ಹೀಗೆ ಒಟ್ಟು 10 ಬ್ಯಾಟರಿಗಳನ್ನು ಕಳವು ಮಾಡಲಾಗಿದೆ. ಕಳವು ಮಾಡಿದ ಬ್ಯಾಟರಿಗಳನ್ನು ವಿವಿಧೆಡೆ ಮಾರಾಟ ಮಾಡಿದ್ದರು. ಆ ಪೈಕಿ ಅವರು ಒಂದು ಬ್ಯಾಟರಿಯನ್ನು ಅಂಗಡಿಯೊಂದಕ್ಕೆ ಮಾರಾಟ ಮಾಡಿದಾಗ ಆ ಅಂಗಡಿಯವರು ಮಾರಾಟ ಮಾಡಿದ ವ್ಯಕ್ತಿಯ ಆಧಾರ್ ಕಾರ್ಡ್ ಪ್ರತಿಯನ್ನು ಕೇಳಿ ಪಡಕೊಂಡಿದ್ದರು. ಬ್ಯಾಟರಿ ಮಾರಾಟದ ಬಗ್ಗೆ ಲಭಿಸಿದ ಮಾಹಿತಿಯಂತೆ ಆ ಅಂಗಡಿಗೆ ಸಾಗಿ ಪೊಲೀಸರು ಪರಿಶೀಲನೆ ನಡೆಸಿದಾಗ ಆ ಅಂಗಡಿಗೆ ಬ್ಯಾಟರಿ ಮಾರಾಟ ಮಾಡಿದ ವ್ಯಕ್ತಿಯ ಆಧಾರ್ ಕಾರ್ಡ್‌ನ ಪ್ರತಿಯನ್ನು ಅಂಗಡಿಯ ಮಾಲಕ ಪೊಲೀಸರಿಗೆ ನೀಡಿದ್ದರು. ಅದರ ಜಾಡು ಹಿಡಿದು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರನ್ನು ಬಂಧಿಸಲಾಯಿತು. ಬಂಧಿತರು ಸಂಚರಿಸುತ್ತಿದ್ದ ಸ್ಕೂಟರನ್ನೂ ವಶಪಡಿಸಲಾಗಿದೆ.
ಈ ಸ್ಕೂಟರನ್ನು ಬಂಟ್ವಾಳ ಸಿಟಿಯಿಂದ ಕಳವು ಮಾಡಿದ್ದು ಎಂದು ಸ್ಪಷ್ಟಗೊಂಡಿದೆ. ಕಳವುಗೈದ 8 ಬ್ಯಾಟರಿಗಳನ್ನು ವಶಪಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆರಳ ತುದಿಯಲ್ಲೇ ಸಿಗಲಿದೆ ಕನ್ನಡ ರಂಗಭೂಮಿ ಮಾಹಿತಿ; ಇಂದು ಜಾಲತಾಣಕ್ಕೆ ಸಿಎಂ ಚಾಲನೆ
Ticket price hike: ಬಿಜೆಪಿ ಕೋಪ : ಜನರ ಕ್ಷಮೆ ಕೇಳಿ ಪ್ರತಿಭಟನೆ!
Mangaluru; ಸದ್ಯ ಖಾಸಗಿ ಬಸ್ ಟಿಕೆಟ್ ದರ ಏರಿಕೆ ಇಲ್ಲ
Kasaragod:ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊ*ಲೆ; 10 ಮಂದಿಗೆ ಅವಳಿ ಜೀವಾವಧಿ ಸಜೆ
Bus ಪ್ರಯಾಣ ದರ ಏರಿಕೆ; ಮೊದಲು ಉದ್ದೇಶ ಅರಿಯಲಿ: ಖಾದರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.