ಬೇಕಲ ಕೋಟೆ ಮೇಳ: ಜನಪ್ರವಾಹ
Team Udayavani, Dec 27, 2019, 8:11 PM IST
ಕಾಸರಗೋಡು: ಜಿಲ್ಲೆಯ ಐತಿಹಾಸಿಕ ಪ್ರಸಿದ್ಧವಾದ ಬೇಕಲ ಕೋಟೆಯಲ್ಲಿ ನಡೆಯುತ್ತಿರುವ ಪುಷ್ಪ- ಫಲ ಮೇಳಕ್ಕೆ ಭಾರೀ ಪ್ರಮಾಣದ ಜನಪ್ರವಾಹ ಹರಿದು ಬರುತ್ತಿದೆ. ಕೃಷಿ ಇಲಾಖೆಯ ವಿವಿಧ ಸ್ಟಾಲ್ ಗಳು, ವಿವಿಧ ನರ್ಸರಿಗಳ ಸಹಿತ ಸಮೃದ್ಧವಾಗಿರುವ ಮೇಳ ದಿನದಿಂದ ದಿನಕ್ಕೆ ಜನಾಕರ್ಷಣೆ ಪಡೆಯುತ್ತಿದೆ. ಕುಟುಂಬ ಸಮೇತರಾಗಿ ಬರುವ ಜಿಲ್ಲೆಯ ಮತ್ತು ವಿವಿಧೆಡೆಗಳ ಮಂದಿ ಕೈತುಂಬ ಹೂ ಸಸಿಗಳನ್ನು, ಫಲ ಬಿಡುವ ಸಸಿಗಳನ್ನು, ಬೀಜಗಳನ್ನು, ಗೊಬ್ಬರ ಇತ್ಯಾದಿಗಳನ್ನು ಖರೀದಿಸಿ ಮರಳುವ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತಿದೆ. ತಮ್ಮ ಕೃಷಿ ಜಾಗಗಳ ಮಣ್ಣಿನ ಸ್ಯಾಂಪಲ್ ತರುವ ಮಂದಿ ಇಲ್ಲಿನ ಮೊಬೈಲ್ ಮಣ್ಣು ತಪಾಸಣೆ ಪ್ರಯೋಗಾಲಯದ ಪ್ರಯೋಜನ ಪಡೆಯುತ್ತಿದ್ದಾರೆ. ಕುಟುಂಬಶ್ರೀ ಘಟಕಗಳ ಆಹಾರಾಲಯಗಳೂ ಜನಪ್ರೀತಿ ಪಡೆಯುತ್ತಿವೆ. ದಾಸವಾಳ ಹೂವಿನ ಜ್ಯೂಸ್ ಸಹಿತ ಅನೇಕ ಅಪರೂಪದ ಆಕರ್ಷಣೆಗಳೂ ಇಲ್ಲಿವೆ. ಮಕ್ಕಳಿಗೆ ಆಟವಾಡುವ ವಿಭಾಗವೂ ಇದೆ.
ಪ್ರಕೃತಿಗೆ ಹಾನಿಮಾಡದ ಜೈವಿಕ ರೀತಿಯ ಕೀಟನಾಶಕಗಳು, ಗೊಬ್ಬರಗಳು ಇಲ್ಲಿ ಲಭಿಸುತ್ತಿವೆ. ಜೊತೆಗೆ ಇವುಗಳನ್ನು ಬಳಸುವ ರೀತಿ, ಅಗತ್ಯದ ಉಪಕರಣಗಳೂ ಇಲ್ಲಿ ನೀಡಲಾಗುತ್ತವೆ. ಗೋಮೂತ್ರ, ಸೆಗಣಿ, ಬೇವಿನ ಸೊಪ್ಪು ಇತ್ಯಾದಿ ಬಳಸಿದ ಶುದ್ಧ ಆಯುರ್ವೇದ ಔಷಧಗಳು ಲಭ್ಯವಿವೆ. ಗ್ರೋಬ್ಯಾಗ್, ತೆಂಗಿನ ನಾರಿನ ಮಣ್ಣು ಇತ್ಯಾದಿಗಳೂ ಇವೆ. ಮನೆ ಚಿಕ್ಕದಾಗಿದ್ದರೆ ಪೂರಕವಾದ ಅಡುಗೆ ಮನೆ ಸಸಿಗಳ ಕಿಟ್ ಕೂಡ ಇಲ್ಲಿದೆ.
ಬೀಜಗಳ ಉತ್ಪನ್ನ
ಹಾರ್ಟಿ ಕಲ್ಚರ್ ಮಿಷನ್ ನೇತೃತ್ವದ ಪರಂಪರಾಗತ ಬೀಜಗಳ ಉತ್ಪನ್ನಗಳು, ಈ ಬಗ್ಗೆ ಜಾಗೃತಿ ಮೂಡಿಸುವ ಕೇಂದ್ರ ಇಲ್ಲಿ ಗಮನ ಸೆಳೆಯುತ್ತದೆ. 67 ವಿಧದ ಭತ್ತದ ಬೀಜಗಳು, 80 ವಿಧದ ಅಲಸಂಡೆ ಬೀಜಗಳು, ಒಂದು ಎಕ್ರೆ ಜಾಗದಲ್ಲಿ ಕೃಷಿ ನಡೆಸಬಹುದಾದ ಬೀಜಗಳು, ಒಂದು ವರ್ಷದ ವರೆಗೆ ಕೆಟ್ಟು ಹೋಗದಂತೆ ಬಳಸ ಬಹುದಾದ ಗ್ರಾಮೀಣ ಶೈಲಿಯ (ಪರಂಪರಾಗತ) ಔಷಧಗಳು ಹೊಂದಿರುವ ಕಿಟ್ ಇಲ್ಲಿ ಲಭ್ಯವಿದೆ.
ಕಾಂಞಂಗಾಡ್ ಬ್ಲಾಕ್ ಅಗ್ರೋ ಸರ್ವೀಸ್ ಸೆಂಟರ್ ನೇತೃತ್ವದಲ್ಲಿ ಕೃಷಿ ಕಾಯಕ ಉಪಕರಣಗಳು, ಮನೆಯ ಬಳಕೆ ಉಪಕರಣಗಳು ಇತ್ಯಾದಿ ಪ್ರದರ್ಶನದಲ್ಲಿವೆ. ನೀಲೇಶ್ವರ ಬ್ಲಾಕ್ ವತಿಯಿಂದ ಅಣಬೆ ಬೀಜ, ಕೃಷಿ ಸಂಬಂಧ ಪ್ರದರ್ಶನ, ಕಾರಡ್ಕ ಬ್ಲಾಕ್ ವತಿಯಿಂದ ಹಾಳೆಯ ಮುಟ್ಟಾಳೆ, ಪಾತ್ರೆ, ಕಲಾಕೃತಿಗಳು ಸಹಿತ ಉತ್ಪನ್ನಗಳು, ಪರಪ್ಪ ಬ್ಲಾಕ್ ವತಿಯಿಂದ ಯಶಸ್ವಿ ಯೋಜನೆಗಳ ಮಾದರಿ ಪ್ರದರ್ಶನಗಳು ಇಲ್ಲಿದ್ದು, ಕೃಷಿ, ಗ್ಯಾಸ್ ಪ್ಲಾಟ್, ಗೋಶಾಲೆ, ಮೇಕೆ ಗೂಡು ಸಹಿತದ ಮನೆಯ ಮಾದರಿ ಇಲ್ಲಿ ಆಕರ್ಷಕವಾಗಿದೆ. ಮಣ್ಣು ಸಂರಕ್ಷಣೆಯ ಮಾದರಿ ನವ ಕೇರಳ ನಿರ್ಮಾಣ ಸಂಕಲ್ಪಕ್ಕೆ ಪೂರಕವಾಗಿದೆ.
ಬಣ್ಣ ಬಣ್ಣದ ಹೂ-ಹಣ್ಣುಗಳು
ಎಲ್ಲವನ್ನೂ ಮೀರಿ ಅತ್ಯಾಕರ್ಷಕ ಬಣ್ಣ, ಗಾತ್ರಗಳಿಂದ ನಳನಳಿಸುವ ಹೂವಿನ, ಹಣ್ಣುಗಳ ಸಸಿಗಳು ಗ್ರಾಹಕರನ್ನು ಕೈಬೀಸಿ ಕರೆಯುತ್ತಿವೆ. ಗುಲಾಬಿ, ಜೀನಿಯಾ, ಕಟಾಜಿಯಾ, ಜರೇನಿಯಂ, ಕೋನಿಯನ್ ಸಿಟ್ಟಿಯ, ಡಾಲಿಯಾ, ಚೆಟ್ಟಿ, ದಾಸವಾಳ, ಆರ್ಕಿಡ್ ಸಹಿತ ಹೂವಿನ ಸಸ್ಯಗಳೂ, ಮಾವು, ಹಲಸು, ಮರದ್ರಾಕ್ಷಿ, ಸಾಂತೋಲ್ ಫ್ರುಟ್, ರುದ್ರಾಕ್ಷಿ, ಸ್ಟ್ರಾಬೆರಿ, ರಂಬೂಟಾನ್ ಸಹಿತ ಫಲ ಬಿಡುವ ಸಸಿಗಳು ಗಮನಸೆಳೆಯುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
Badminton; ಸಯ್ಯದ್ ಮೋದಿ ಇಂಟರ್‌ನ್ಯಾಶನಲ್: ಸಿಂಧು, ಸೆನ್ ಕ್ವಾರ್ಟರ್‌ಫೈನಲಿಗೆ
Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ
Cricket; ವೇಗಿ ಸಿದ್ದಾರ್ಥ್ ಕೌಲ್ ನಿವೃತ್ತಿ
Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.