ಬೇಕಲಕೋಟೆ – ರಾಣಿಪುರ ಪ್ರವಾಸೋದ್ಯಮಕ್ಕೆ ಸ್ಕೈಬಸ್
Team Udayavani, May 13, 2018, 1:40 PM IST
ಕಾಸರಗೋಡು: ಕಾಸರಗೋಡು ಜಿಲ್ಲೆಯ ಪ್ರಧಾನ ಪ್ರವಾಸೋ ದ್ಯಮ ಕೇಂದ್ರಗಳಾದ ಬೇಕಲಕೋಟೆ ಹಾಗೂ ರಾಣಿಪುರವನ್ನು ಸಂಪರ್ಕಿಸುವ ಸ್ಕೈಬಸ್ ಪ್ರಸ್ತಾವನೆಯನ್ನು ಕಾಂಞಂ ಗಾಡು – ಕಾಣಿಯೂರು ರೈಲ್ವೇ ಯೋಜನೆಯ ಪ್ರಮುಖ ರೂವಾರಿ, ಪ್ರಖ್ಯಾತ ಎಂಜಿನಿಯರ್ ಜೋಸ್ ಕೊಚ್ಚಿಕುನ್ನಿಲ್ ಮುಂದಿಟ್ಟಿದ್ದಾರೆ.
ಕಾಸರಗೋಡಿನ ಪ್ರವಾಸೋದ್ಯಮದ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಕೇಂದ್ರ ಪ್ರವಾಸೋದ್ಯಮ ಇಲಾಖೆ ಸಚಿವ ಅಲೊ#àನ್ಸ್ ಕಣ್ಣಂತಾನಂ ನೇತೃತ್ವದಲ್ಲಿ ಇತ್ತೀಚೆಗೆ ಕಾಸರಗೋಡಿನಲ್ಲಿ ಜರಗಿದ ವಿಶೇಷ ಸಭೆಯಲ್ಲಿ ಯೋಜನೆಯ ಸಮಗ್ರ ಮಾಹಿತಿಯನ್ನು ಜೋಸ್ ಕೊಚ್ಚಿಕುನ್ನಿಲ್ ಅವರು ಸಚಿವರಿಗೆ ಸಲ್ಲಿಸಿದ್ದಾರೆ.
ಅಂತಾರಾಷ್ಟ್ರೀಯ ಪ್ರವಾಸಿ ಕೇಂದ್ರ ವಾದ ಬೇಕಲಕೋಟೆ ಹಾಗೂ ಕೇರಳದ ಊಟಿ ಎಂದೇ ಪ್ರಸಿದ್ಧಿ ಪಡೆದಿರುವ ರಾಣಿಪುರ ಇವುಗಳ ಮಧ್ಯೆ ಪ್ರವಾಸಿಗ ರಿಗೆ ಪರಿಸರ ಸೌಂದರ್ಯವನ್ನು ಸವಿ ಯಲು ಕಡಿಮೆ ವೆಚ್ಚದಲ್ಲಿ ಆಕಾಶ ಯಾತ್ರೆಯ ಕುರಿತು ಜೋಸ್ ಕೊಚ್ಚಿಕುನ್ನಿಲ್ ವಿವರಿಸಿದ್ದಾರೆ. ಇದು ಜಿಲ್ಲೆಯ ಪ್ರವಾಸೋದ್ಯಮದ ದೊಡ್ಡ ಕ್ರಾಂತಿಗೆ ಕಾರಣ ವಾಗಬಹುದು ಎಂಬ ಆತ್ಮವಿಶ್ವಾಸ ವನ್ನು ಅವರು ವ್ಯಕ್ತಪಡಿಸಿದ್ದಾರೆ.
ವಿದೇಶಗಳಲ್ಲಿ ಪ್ರಮುಖ ಪ್ರವಾಸೋ ದ್ಯಮ ಕೇಂದ್ರಗಳನ್ನು ಜೋಡಿಸುವ ಇಂತಹ ಸ್ಕೈಬಸ್ ವ್ಯವಸ್ಥೆಯನ್ನು ಅವರು ತಮ್ಮ ನಿರ್ದೇಶನದಲ್ಲಿ ಉಲ್ಲೇಖೀಸಿ ದ್ದಾರೆ. ಭಾರತದಲ್ಲಿ ಪುಣೆ, ಮುಂಬಯಿ ಮೊದಲಾದ ಕಡೆಗಳಲ್ಲಿ ಇಂತಹ ಪ್ರವಾಸೋ ದ್ಯಮ ಕೇಂದ್ರಗಳನ್ನು ಸಂಯೋಜಿಸುವ ಆಕಾಶನೌಕೆ ಸ್ಥಾಪಿಸುವ ಕುರಿತಾದ ಆಲೋ ಚನೆಯೂ ನಡೆಯುತ್ತಿದೆ.
ಬೇಕಲಕೋಟೆ – ರಾಣಿಪುರ ಪ್ರವಾಸೋ ದ್ಯಮ ಕೇಂದ್ರಗಳನ್ನು ಸಂಯೋಜಿಸುವ ಸಲುವಾಗಿ ಕಾಞಂಗಾಡು -ಪಾಣತ್ತೂರು ರಾಜ್ಯ ಹೆದ್ದಾರಿಗೆ ಸಮಾನಾಂತರವಾಗಿ ಕಾಂಕ್ರೀಟ್ ಕಂಬಗಳನ್ನು ಸ್ಥಾಪಿಸಿ ಅದರ ಮೇಲೆ ರೋಪ್ ವೇ ಉಪಯೋಗಿಸಿ ಸ್ಕೈಬಸ್ ಸೇವೆ ಆರಂಭಿಸಬಹುದೆಂಬ ನಿರ್ದೇಶನವನ್ನು ಅವರು ನೀಡಿದ್ದಾರೆ.
ಈ ಸ್ಕೈಬಸ್ ಯೋಜನೆಗೆ ಹೆದ್ದಾರಿ ಯನ್ನು ನಿರ್ಮಿಸುವ ಅರ್ಧದಷ್ಟು ಮಾತ್ರ ವೆಚ್ಚ ತಗಲುವುದಾಗಿದೆ. ಅದಲ್ಲದೆ ಭೂಸ್ವಾಧೀನದ ಅಗತ್ಯವೂ ಇರುವುದಿಲ್ಲ ಎಂಬುದಾಗಿ ಎಂಜಿನಿಯರ್ ಜೋಸ್ ಕೊಚ್ಚಿಕುನ್ನಿಲ್ ಹೇಳಿದ್ದಾರೆ. ಮಾತ್ರವಲ್ಲದೆ ಗಂಟೆಗೆ 500 ಕಿಲೋ ಮೀಟರ್ ವೇಗದಲ್ಲಿ ಸಂಚರಿಸಲು ಸಾಧ್ಯವಾಗುವ ರೀತಿಯಲ್ಲಿ ಸೌರ ವಿದ್ಯುತ್ ಉಪಯೋಗಿಸುವಂತಹ ಯೋಜನೆಯ ಪ್ರತ್ಯೇಕತೆಯನ್ನು ಈ ಪ್ರಸ್ತಾವನೆಯಲ್ಲಿ ವಿವರಿಸಲಾಗಿದೆ.
ಈ ಯೋಜನೆಯ ಮೂಲಕ ರಸ್ತೆಯ ವಾಹನ ದಟ್ಟಣೆ ಕಡಿಮೆ ಮಾಡಲು ಸಾಧ್ಯವಾಗುವುದು. ಪ್ರಸ್ತುತ ಜಿಲ್ಲೆಗೆ ಆಗಮಿಸುವ ಪ್ರವಾಸಿಗಳು ಕೇವಲ ಬೇಕಲಕೋಟೆಗೆ ಮಾತ್ರ ಭೇಟಿ ನೀಡಿ ಹಿಂದಿರುಗುತ್ತಾರೆ. ರಾಣಿಪುರಕ್ಕೆ ತೆರಳಲು ಸಮಯದ ಅಭಾವವಿರುವುದರಿಂದ ಅಲ್ಲಿಗೆ ಯಾರೂ ಸಂದರ್ಶಿಸುವುದಿಲ್ಲ.
ಪ್ರಕೃತಿ ಸೌಂದರ್ಯ ವೀಕ್ಷಣೆ
ನೂತನ ಸ್ಕೈಬಸ್ ವ್ಯವಸ್ಥೆಯನ್ನು ಸಜ್ಜುಗೊಳಿಸುವ ಮೂಲಕ ಪ್ರಕೃತಿಯ ಸೃಷ್ಟಿಯಾದ ರಾಣಿಪುರದ ಸೌಂದರ್ಯವನ್ನು ಸವಿಯಲು ಮತ್ತು ಕಾಸರಗೋಡು ಜಿಲ್ಲೆಯ ಸೌಂದರ್ಯವನ್ನು ಸ್ಕೈಬಸ್ ಪ್ರಯಾಣದ ಸಂದರ್ಭದಲ್ಲಿ ವೀಕ್ಷಿಸಲು ಸಾಧ್ಯವಾಗುವುದು. ಇದು ಜಿಲ್ಲೆಯ ಪ್ರವಾಸೋದ್ಯಮಕ್ಕೆ ದೊಡ್ಡ ಕೊಡುಗೆಯನ್ನು ನೀಡಬಲ್ಲುದು. ಈ ಯೋಜನೆಯ ಬಗ್ಗೆ ಕೇಂದ್ರ ಸಚಿವ ಅಲೊ#àನ್ಸ್ ಕಣ್ಣಂತಾನಂ ಅವರು ಅನುಕೂಲಕರವಾದ ನಿಲುವು ಹೊಂದಿದ್ದಾರೆ. ಆದ್ದರಿಂದ ಯೋಜನೆಯು ಆದಷ್ಟು ಬೇಗನೇ ಜಾರಿಗೆ ಬರುವ ನಿರೀಕ್ಷೆ ಇರಿಸಲಾಗಿದೆ. ಈ ಮೂಲಕ ಕಾಸರಗೋಡು ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರವು ಸಮಗ್ರ ಅಭಿವೃದ್ಧಿ ಹೊಂದಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
PM Modi;ಇಂದು 71000ಕ್ಕೂ ಅಧಿಕ ಮಂದಿಗೆ ಉದ್ಯೋಗ ಪತ್ರ ವಿತರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.