ತೋಡಿನಲ್ಲಿ ವರ್ಷವಿಡೀ ನೀರು ಹರಿಸುವ ವಿಶ್ವಾಸ
Team Udayavani, May 25, 2019, 6:10 AM IST
ಬದಿಯಡ್ಕ:ವರ್ಷದಿಂದ ವರ್ಷಕ್ಕೆ ಬರ ಪರಿಸ್ಥಿತಿಯು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತೋಡಿನ ಸಂರಕ್ಷಣೆ ಮತ್ತು ಪುನರುದ್ಧಾರದ ಮೂಲಕ ವರ್ಷಪೂರ್ತಿ ತೋಡಲ್ಲಿ ನೀರು ಹರಿಸುವ ಕನಸನ್ನು ಸಾಕಾರಗೊಳಿಸುವತ್ತ ಪ್ರಯತ್ನಗಳು ಪ್ರಾರಂಭವಾಗಿದ್ದು ಅದಕ್ಕಾಗಿ ತೋಡಿನ ಉಗಮಸ್ಥಾನ ಕಿಂಞ್ಞಣ್ಣಮೂಲೆಯಿಂದ ಪೊಯೆÂ ಅಜಕ್ಕಳ ಮೂಲೆ ತನಕ ಜಲತಜ್ಞರ ತಂಡ ಸುಮಾರು 7ಕಿ,ಮೀ. ನಡಿಗೆಯ ಮೂಲಕ ಸಾಗಿ ಅಧ್ಯಯನ ನಡೆಸಿದರು.
ಈ ಪ್ರದೇಶದ ಸ್ಥಳೀಯ ಕೃಷಿಕರು ನೀರು ಸಂಗ್ರಹಕ್ಕಾಗಿ ನಿರ್ಮಿಸುವ ಕಟ್ಟಗಳ ಸಂಖ್ಯೆ ಬಹಳ ಕಡಿಮೆಯಾಗಿದ್ದು ತೋಡಲ್ಲಿ ನೀರು ಬƒಗನೆ ಬತ್ತಿ ಹೋಗಲು ಇದೂ ಒಂದು ಕಾರಣವಾಗಿದೆ. ಸ್ವರ್ಗ ಮೊಳಕ್ಕಾಲು, ಪಾಲೆಪ್ಪಾಡಿ, ಪೊಯೆÂಗಳಲ್ಲಿ ಕಟ್ಟ ನಿರ್ಮಿಸದೇ ಇರುವುದು ಈ ಬಾರಿಯ ಜಲಕ್ಷಾಮಕ್ಕೆ ಕಾರಣವಾಗಿದೆ ಎಂದು ಜಲತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹೆಚ್ಚುತ್ತಿರುವ ಕೊಳವೆಬಾವಿಗಳ ಉಪಯೋಗ ಕೃಷಿಕರನ್ನು ಕಟ್ಟಗಳಿಂದ ವಿಮುಖರನ್ನಾಗಿಸುತ್ತಿರುವುದೇ ಈ ಪ್ರದೇಶದಲ್ಲಿ ಕಟ್ಟಗಳ ಸಂಖ್ಯೆ ಕಡಿಮೆಯಾಗಲು ಹಾಗೂ ಆ ಮೂಲಕ ಬೇಗನೆ ತೋಡು ಬತ್ತಿ ಹೋಗಲು ಪ್ರಮುಖ ಕಾರಣವಾಗಿದೆ.
ಅಧ್ಯಯನ ತಂಡವು ಕೃಷಿಕರೊಂದಿಗೆ ಈ ಕುರಿತಾಗಿ ಚರ್ಚಿಸಿ ಮುಂದಿನ ವರ್ಷ ಸರಕಾರ ಹಾಗೂ ಸ್ಥಳಿಯಾಡಳಿತ ವ್ಯವಸ್ಥೆಗಳ ಸಹಾಯಕ್ಕೆ ಕಾಯದೆ ಹಿಂಗಾರು ಮಳೆ ಬಳಿಕ 7 ಕಿ.ಮೀ. ತೋಡಿನಲ್ಲಿ ಅಲ್ಲಲ್ಲಿ ಕಟ್ಟಗಳನ್ನು ನಿರ್ಮಿಸಿ ನೀರು ಸಂಗ್ರಹಿಸಿ ಕೃಷಿ ಅಗತ್ಯಗಳಿಗೆ ಬಳಸುವ ತೀರ್ಮಾನಕ್ಕೆ ಬರಲಾಯಿತು.
ಆಲತಜ್ಞರ ಅಂದಾಜು ಪ್ರಕಾರ ಈ ತೋಡಿನಲ್ಲಿ ಸುಮಾರು 30ರಿಂದ 40ರಷ್ಟು ಕಟ್ಟಗಳನ್ನು ಕಟ್ಟಬಹುದಾಗಿದೆ.
ಪ್ರಥಮವಾಗಿ ನಿರ್ಮಿಸುವ ಕಟ್ಟದ ಉದ್ಘಾಟನೆಯನ್ನು ಉತ್ತಮ ರೀತಿಯಲ್ಲಿ ನಡೆಸುವ ಮೂಲಕ ಇತರರಿಗೂ ಕಟ್ಟ ನಿರ್ಮಾಣಕ್ಕೆ ಪ್ರೇರಣೆ ನೀಡುವುದರೊಂದಿಗೆ ಸರಣಿ ಕಟ್ಟಗಳ ನಿರ್ಮಾಣಕ್ಕೆ ಚಾಲನೆ ನೀಡಿ ಆಂದೋಲನವನ್ನು ಸƒಷ್ಟಿಸುವ ಉತ್ಸಾಹದಲ್ಲಿದ್ದಾರೆ ಈ ಪ್ರದೇಶದ ಕೃಷಿಕರು.ಮಾತ್ರವಲ್ಲದೆ ಕಟ್ಟಗಳ ನಿರ್ಮಾಣದ ಔಚಿತ್ಯ ಹಾಗೂ ಮಹತ್ವವನ್ನು ಕೃಷಿಕರಿಕೆ ತಿಳಿಯಪಡಿಸುವ ಮೂಲಕ ಜಾಗƒತಿ ಮೂಡಿಸುವ ನಿಟ್ಟಿನಲ್ಲಿ ಕಟ್ಟಗಳು ಎಂಬ ಮಾಹಿತಿಪೂರ್ಣ ಪುಸ್ತಕವನ್ನು ವಿತರಿಸುವ ಯೋಜನೆಯನ್ನೂ ಕೈಗೊಳ್ಳಲಾಯಿತು. ಹಾಗೆಯೇ ಬಾವಿ, ಕೊಳವೆಬಾವಿಗಳಿಗೆ ನೀರಿನ ಮರುಪೂರಣೆಯ ಬಗ್ಗೆ ಮಾರ್ಗದರ್ಶನ ನೀಡುವ ಯೋಜನೆಯನ್ನೂ ರೂಪಿಸಲಾಗಿದೆ.
ಮನೆಯಂಗಳದ ಹರಿಯುವ ನೀರನ್ನು ತಡೆಹಿಡಿದು ಸುತ್ತುಬಳಸಿ ಸಾಗುವಂತೆ ಮಾಡುವ ಕ್ರಿಯಾ ಯೋಜನೆಯನ್ನೂ ಹಮ್ಮಿಕೊಂಡಿದ್ದು ಅದರಿಂದ ನೀರಿಂಗಿಸುವ ಹಾಗೂ ಎದುರಾಗುವ ûಾಮವನ್ನು ತಕ್ಕಮಟ್ಟಿಗೆ ಕಡಿಮೆಗೊಳಿಸುವ ಸರಳ ಸೂತ್ರವನ್ನು ಜನರಿಗೆ ಮನದಟ್ಟು ಮಾಡುವ ಪ್ರಯತ್ನ ಪ್ರಾರಂಭವಾಗಲಿದೆ. ಈ ರೀತಿ ಒಗ್ಗಟ್ಟಿನಿಂದ ಊರ ಜನರು ಒಂದಾಗಿ ಶ್ರಮವಹಿಸಿದರೆ ಮುಂದಿನ ವರ್ಷಗಳಲ್ಲಿ ಸ್ವರ್ಗ ಹಾಗೂ ಸುತ್ತುಮುತ್ತಲ ಪ್ರದೇಶಗಳಲ್ಲಿ ನೀರಿನ ಕೊರತೆ ಎದುರಾಗದು ಎಂಬುದು ಜಲತಜ್ಞರ ಬಲವಾದ ವಿಶ್ವಾಸ.ವರ್ಷಗಳ ಹಿಂದೆ ಉದ್ಯೋಗಿ ಖಾತರಿ ಯೋಜನೆಯಡಿಯಲ್ಲಿ ಖಾಸಗಿ ಜಾಮೀನು ಹಾಗೂ ಗುಡ್ಡೆಗಳಲ್ಲಿ ಬಹಳಷ್ಟು ಇಂಗು ಗುಂಡಿಗಳನ್ನು ನಿರ್ಮಿಸಲಾಗಿತ್ತಾದರೂ ಅವೈಜ್ಞಾನಿಕ ರೀತಿಯಲ್ಲಿ ಇಂಗು ಗುಂಡಿ ನಿರ್ಮಿಸಿರುವುದರಿಂದ ನೀರಿಂಗಿಸುವ ಪ್ರಯತ್ನ ಸಫಲವಾಗಿಲ್ಲ. ಮಣ್ಣಿನ ನೀರಿಂಗಿಸುವ ಗುಣದ ಅಧ್ಯಯನ ಹಾಗೂ ನೀರಿನ ಹರಿವನ್ನು ಸೂಕ್ಷ್ಮವಾಗಿ ಗಮನಿಸಿ ಅಧ್ಯಯನ ನಡೆಸಿ ಇಂಗುಗುಂಡಿಗಳನ್ನು ನಿರ್ಮಿಸುವ ಪ್ರಾಯೋಗಿಕ ಮತ್ತು ಉತ್ತಮ ರೀತಿಯ ಮರು ಪೂರಣದ ಸಾಧ್ಯೆತೆಗನುಸರಿಸಿ ಯೋಜನೆಗಳನ್ನು ರೂಪೀಕರಿಸಲಾಗುವುದು ಮತ್ತು ನೈಸರ್ಗಿಕ ಜಲಮೂಲಗಳ ಪುನಶ್ಚೇತನಕ್ಕೆ ಒತ್ತು ನೀಡಲಾಗುವುದು ಎಂದು ಜಲತಜ್ಞ ಶ್ರೀಪಡ್ರೆ ಅಭಿಪ್ರಾಯ ಪಟ್ಟರು.
ಇಂಗುವ ಸಾಧ್ಯತೆ
ಮಳೆನೀರು ಗುಡ್ಡದ ಭಾಗದಿಂದ ಸುಲಭವಾಗಿ ಕೆಳಗಿಳಿದು ಬರುತ್ತದೆ. ಅದರಿಂದ ನೀರಿಂಗುವ ಸಾಧ್ಯೆತೆಯೂ ಕಡಿಮೆಯಾಗುತ್ತದೆ. ಆದುದರಿಂದ ಗುಡ್ಡ ಹಾಗೂ ಇನ್ನಿತರ ಎತ್ತರದ ಪ್ರದೇಶಗಳಿಂದ ನೀರು ಇಳಿದು ಬರುವ ವೇಗವನುj ನಿಯಂತ್ರಿಸುವುದಕ್ಕಾಗಿ ಇಂಗು ಗುಂಡಿಗಳನ್ನು ನಿರ್ಮಿಸಿದಲ್ಲಿ ಭೂಮಿಯಲ್ಲಿ ನೀರು ಇಂಗುವ ಸಾಧ್ಯತೆ ಬಹಳಷ್ಟು ಹೆಚ್ಚಾಗುತ್ತದೆ.
ಮಾತ್ರವಲ್ಲದೆ ಈ ನೀರು ಒರತೆಯಾಗಿ ತಿಂಗಳುಗಳ ಕಾಲ ತೋಡು, ಬಾವಿಗಳಿಗೆ ಬಂದು ಸೇರುವ ಕಾರಣ ಅವುಗಳೂ ಸುಲಭದಲ್ಲಿ ಬತ್ತುವುದಿಲ್ಲ. ಹಾಗಾಗಿ ಸ್ವರ್ಗ ತೋಡಿಗೆ ನೀರುಣಿಸುವ ಮುಖ್ಯ ಕೇಂದ್ರಗಳನ್ನು ಗುರುತಿಸಿ ಎತ್ತರದ ಪ್ರದೇಶಗಳಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಿ ನೀರಿಂಗಲು ಅನುವು ಮಾಡಿಕೊಡಲಾಗುವುದು. ತೋಡಿನ ಎರಡೂ ಬದಿಗಳಲ್ಲಿ ಮಳೆಗಾಲದಲ್ಲಿ ನೀರು ಹರಿಯುಗವ ಕಣಿವೆಗಳನ್ನು ಗುರುತಿಸಿ ನೀರಿಂಗಿಸುವ ಸಾಧ್ಯೆತಗಳನ್ನು ಹೆಚ್ಚಿಸಲು ಪ್ರಯತ್ನಿಸಲಾಗುವುದು. ಶ್ರೀಪಡ್ರೆ ಜಲತಜ್ಞ
– ಅಖೀಲೇಶ್ ನಗುಮುಗಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.