ಬೆಳ್ಳೂರು ಬೃಹತ್‌ ಕುಡಿಯುವ ನೀರು ಸರಬರಾಜು ಯೋಜನೆ


Team Udayavani, Apr 17, 2017, 4:08 PM IST

17-KASRGOD-3.jpg

ಮುಳ್ಳೇರಿಯ: ಬೆಳ್ಳೂರು ಗ್ರಾ.ಪಂ.ಗೆ ಸಮಗ್ರವಾಗಿ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ರಾಜ್ಯ ಸರಕಾರದ ನೆರವಿನೊಂದಿಗೆ ಜಲನಿಧಿ ಯೋಜನೆಯಂತೆ ಪಯಸ್ವಿನಿ ನದಿಯ ನೀರನ್ನು ಕುಂಟಾರು ಪ್ರದೇಶದಿಂದ ಹಾಯಿಸುವ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದೆ.

ಬೆಳ್ಳೂರು ಗ್ರಾಮ ಪಂಚಾಯತ್‌ಗೆ ಸಮಗ್ರವಾಗಿ ಕುಡಿಯುವ ನೀರನ್ನು ಒದಗಿಸುವ  ಸಲುವಾಗಿ ಈ ಬೃಹತ್‌ ಕುಡಿಯುವ ನೀರಿನ ಯೋಜನೆಗೆ 6.5 ಕೋಟಿ ರೂಪಾಯಿ ವೆಚ್ಚದಲ್ಲಿ ರೂಪು ನೀಡಲಾಗಿದೆ. ಕುಂಟಾರು ಶ್ರೀ ಕ್ಷೇತ್ರ ಸಮೀಪದಲ್ಲಿ ಹರಿಯುವ ಪಯಸ್ವಿನಿ ನದಿಯಿಂದ ನೀರನ್ನು  ನದಿಗೆ ಹೊಂದಿಕೊಂಡು ಬೃಹತ್‌ ಬಾವಿಯೊಂದನ್ನು ಕೊರೆದು, ಇದಕ್ಕೆ 50 ಅಶ್ವಶಕ್ತಿಯ ನೀರೆತ್ತುವ ಪಂಪನ್ನು ಜೋಡಿಸಿ, ಕುಂಟಾರು-ಮಾಯಿಲಂಕೋಟೆ ಮೂಲಕ ಮಿಂಚಿಪ ದವಿನಲ್ಲಿ ನಿರ್ಮಿಸಿದ ಸಂಗ್ರಹಣಾ ಟ್ಯಾಂಕಿಯಲ್ಲಿ ಶೇಖರಿಸಿ ಅಲ್ಲಿಂದ ಬೆಳ್ಳೂರನ್ನು ತಲಪಿಸುವ ಯೋಜನೆ ಇದಾಗಿದೆ. ಇದಕ್ಕಾಗಿ ಸುಮಾರು 10 ಕಿ.ಮೀ. ಉದ್ದಕ್ಕೆ ಕೊಳವೆಯನ್ನು ಜೋಡಿಸುವ ಕಾಮಗಾರಿ ನಡೆಯುತ್ತಿದೆ.  ಇದರಿಂದಾಗಿ ಬೆಳ್ಳೂರು ಗ್ರಾಮ ಪಂಚಾಯತ್‌ಗೆ ಸೇರಿದ 1,200 ಕುಟುಂಬ ಫಲಾನುಭವಿಗಳ ಸುಮಾರು 12 ಸಾವಿರ ಮಂದಿ ಪ್ರಯೋಜನ ಪಡೆಯಲಿದ್ದಾರೆ ಎನ್ನಲಾಗಿದೆ.

ಕರ್ನಾಟಕದ ಕೊಡಗಿನಲ್ಲಿ ಕೇರಳದ ಅಸಂಖ್ಯಾಕ ಜನರ ಜೀವಜಲ ನದಿ ಪಯಸ್ವಿನಿ. ಭತ್ತದ ಕೃಷಿಕರು, ಅಡಿಕೆ ಕೃಷಿಕರು, ತೆಂಗಿನ ಕೃಷಿಕರ ಹೊರತಾಗಿ ಕುಡಿಯುವ ನೀರಿಗಾಗಿ ಉಪಯೋಗಿಸುವ ಜನರು ಈ ನದಿಯ ಇಕ್ಕಡೆಯಲ್ಲಿ ವಾಸಿಸುತ್ತಿದ್ದಾರೆ. 

ನದಿ ಪರಿಸರದ ಜನರ ಆಕ್ಷೇಪ: ಕಿರು ನೀರಾವರಿ ಯೋಜನೆ ಗಳು, ಕುಡಿಯುವ ನೀರಿನ ಯೋಜನೆಗಳು ಪಯಸ್ವಿನಿಯ ಉದ್ದಗಲಕ್ಕೂ ಹರಡಿಕೊಂಡಿದೆ. ನದಿ ಬತ್ತಿದಾಗ ಪ್ರಾಣಿ- ಪಕ್ಷಿಗಳ, ಜಲ ಚರಗಳು ವಿಲಿವಿಲಿ ಒದ್ದಾಡ ಬೇಕಾಗುತ್ತದೆ.  ಏಪ್ರಿಲ್‌-ಮೇ ತಿಂಗಳಲ್ಲಿ ಅತೀ ಹೆಚ್ಚು ನೀರಿನ ಉಪಯೋಗವಾಗುವ ಕಾರಣ ಬಲು ಬೇಗ ನದಿ ಬತ್ತುತ್ತದೆ. ಇಂದಿನ ಪರಿಸ್ಥಿತಿಯೂ ಇದೇ ಆಗಿದೆ. ನೀರು ಬತ್ತಿ ನದಿಯ ಅಸ್ಥಿಪಂಜರ ಕಾಣತೊಡಗಿದೆ. ಹೀಗಿರುವಾಗ ಕುಂಟಾರು ಶ್ರೀ ಮಹಾವಿಷ್ಣು ಮೂರ್ತಿ ದೇಗುಲ ಪರಿಸರದಲ್ಲಿ ಪಯಸ್ವಿನಿ ನದಿಯಿಂದ ನೀರನ್ನು ಬೃಹತ್‌ ಪ್ರಮಾಣದಲ್ಲಿ ಕುಡಿಯುವ ನೀರಿನ ಯೋಜನೆಯ ಮೂಲಕ ಸಾಗಿಸುವ ಯೋಚನೆಯ ಬಗ್ಗೆ ಈ ಪ್ರದೇಶದ ಜನರು ಆಕ್ಷೇಪ ವ್ಯಕ್ತ ಪಡಿಸಿದ್ದರು. 

ಈ ಯೋಜನೆಯ ಯಶಸ್ವಿಯ ಬಗ್ಗೆ ಆಲೋಚಿಸಿದರೆ ಇದರಿಂದಾಗಿ ಪ್ರಯೋಜನಕ್ಕಿಂತಲೂ ಭಾರೀ ಸಮಸ್ಯೆಯೇ ಹುಟ್ಟಿಕೊಳ್ಳುವ ಆತಂಕ ಸ್ಥಳೀಯರಿಗಿದೆ. ಎಪ್ರಿಲ್‌-ಮೇ ತಿಂಗಳು ಬಂದರೆ ಪಯಸ್ವಿನಿಯ ಹರಿವು ನಿಂತು ಅಲ್ಲಲ್ಲಿ ಇರುವ ಹೊಂಡಗಳೇ ನದೀ ಪರಿಸರವಾಸಿಗಳಿಗೆ ನೀರಿಗೆ ಆಶ್ರಯವಾಗುವುದು ಸಹಜ. ಇಲ್ಲಿನ ಕೃಷಿಕರು ಹಾಗೂ ಓಟೆ ಪ್ರಮಾಣ ಕುಡಿಯುವ ನೀರಿನ ಯೋಜನೆಗೇ ನೀರಿಲ್ಲದ ಪರಿಸ್ಥಿತಿ ಎದುರಾಗಬಹುದಾಗಿದೆ. 

ಹೀಗಿರುವಾಗ ಬೆಳ್ಳೂರು ಪಂಚಾಯತ್‌ನ ನೀರುಣಿ ಸುವ ಈ ಯೋಜನೆಯಿಂದ ಅನುಕೂಲಕ್ಕಿಂತಲೂ ಅನನು ಕೂಲಗಳೇ ಎದುರಾಗಬಹುದು. ನದಿಯನ್ನು ಆಶ್ರಯಿಸಿ ಬದುಕುವ ದೇಲಂಪಾಡಿ ಗ್ರಾಮ ಪಂಚಾಯತ್‌ ಹಾಗೂ ಕಾರಡ್ಕ ಗ್ರಾಮ ಪಂಚಾಯತ್‌ನ ಕೃಷಿಕರು ಹಾಗೂ ಜನ ಸಾಮಾನ್ಯರು ಭಾರೀ ಸಮಸ್ಯೆ ಎದುರಿಸ ಬೇಕಾದೀತು ಎಂಬ ಭಯವೂ ಇಲ್ಲದಿಲ್ಲ. ಮುಂದೆ ಎದುರಾಗಬಹುದಾದ ಸಮಸ್ಯೆಯನ್ನು ಮನಗಂಡ ಕುಂಟಾರು ನಿವಾಸಿಗಳು ಬಾವಿ ಕೊರೆಯುವ ಕೆಲಸವನ್ನು ಎರಡು ವರ್ಷಗಳ ಹಿಂದೆ ತಡೆ ಹಿಡಿದು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರು. ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ ಯೋಜನೆ ಬಗ್ಗೆ ಅಧಿಕಾರಿಗಳು ಭೇಟಿ ನೀಡಿ ಸ್ಥಳೀಯ ಜನರೊಂದಿಗೆ ಮಾತುಕತೆ ನಡೆಸಿದ್ದರು.  ಪಯಸ್ವಿನಿ ನದಿಗೆ ಕುಂಟಾರು ಪ್ರದೇಶದಲ್ಲಿ ನಬಾರ್ಡ್‌ ನೇತೃತ್ವದಲ್ಲಿ ಚೆಕ್‌ ಡ್ಯಾಂ ನಿರ್ಮಿ ಸಲು ಹಾಗೂ ಆ ಮೂಲಕ ಜನರಿಗೆ ಆಗಬಹುದಾದ ಸಮಸ್ಯೆ ನೀಗಿಸುವ ಬಗ್ಗೆ ಯೋಜನೆ  ಮುಂದಿಟ್ಟಿದ್ದರು.

ಚೆಕ್‌ ಡ್ಯಾಂ ನಿರ್ಮಾಣ: ಕುಡಿಯುವ ನೀರಿನ ಯೋಜನೆಯ ಕರಾರಿನ ಪ್ರಕಾರ ಪಯಸ್ವಿನಿಗೆ ಚೆಕ್‌ ಡ್ಯಾಂ ನಿರ್ಮಿಸುವ ಕುರಿತು ಸ್ಥಳ ಪರಿಶೀಲನೆ ನಡೆಸಿದರು. ಇರಿಗೇಶನ್‌ ಇಲಾಖೆಯ ಅಸಿಸ್ಟೆಂಟ್‌ ಎಂಜಿನಿಯರ್‌ ರತ್ನಾಕರ ಈ ಬಗ್ಗೆ ಕುಂಟಾರು ಶ್ರೀ ಕ್ಷೇತ್ರದ ಸಮೀಪ, ಓಟೆ ಪ್ರಮಾಣ ಜಲ ವಿತರಣಾ ವ್ಯವಸ್ಥೆಯ ಸಮೀಪ ಚೆಕ್‌ ಡಾಂ ನಿರ್ಮಾಣಕ್ಕೆ ಸೂಕ್ತವಾಗಿದೆ ಎಂದು ಕಂಡುಕೊಂಡರು. ಸ್ಥಳೀಯ ಕೃಷಿಕರೊಂದಿಗೆ ಮಾತುಕತೆ ನಡೆಸಿದ್ದಾರೆ. 

ಕೃಷಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಗಂಗಾಧರ ರಾವ್‌ ಮಾಟೆಡ್ಕ, ಸಂಚಾಲಕ ರಾಘವನ್‌ ನಾಯರ್‌, ಕೋಶಾಧಿಕಾರಿ ಕೆ.ಎಸ್‌.ಮೊಹಮ್ಮದ್‌, ಕೃಷಿಕರಾದ ಕುಂಞಿ ಕಣ್ಣನ್‌ ನಾಯರ್‌, ಗಂಗಾಧರ ಕಾಂತಡ್ಕ, ಶ್ರೀಧರನ್‌ ಕಟ್ಟತ್ತಬಯಲು, ಚಂದ್ರನ್‌ ನಾಯರ್‌, ರಾಧಾಕೃಷ್ಣ  ಉಪಸ್ಥಿತರಿದ್ದರು. ಪಯಸ್ವಿನಿ ನದಿಗೆ ಕುಂಟಾರು ಪ್ರದೇಶದಲ್ಲಿ ಚೆಕ್‌ ಡ್ಯಾಂ  ನಿರ್ಮಿಸಿದರೆ  ಜನರಿಗೆ ಆಗಬಹುದಾದ ಸಮಸ್ಯೆಗಳನ್ನು ನೀಗಿಸಲು ಸಾಧ್ಯ ಎಂದು ತೀರ್ಮಾನಿಸಲಾಗಿತ್ತು. 

ಈಗಾಗಲೇ ಬತ್ತಿ ಬರಡಾದ ಪಯಸ್ವಿನಿಯಿಂದ ಬೆಳ್ಳೂರಿನ ಜನತೆಗೆ ಸಾಕಷ್ಟು ನೀರು ಲಭ್ಯವಾದೀತೇ ಎಂಬ ಬಗ್ಗೆ ಸಂಶಯವು ಜನರಲ್ಲಿದೆ. ಹಾಗೆಯೇ ಮಳೆಗಾಲ ನಿಕಟವಾಗುತ್ತಿರುವ ಕಾರಣ ಚೆಕ್‌ ಡ್ಯಾಂ ನಿರ್ಮಾಣ ಕಾಮಗಾರಿ ಮುಂದಿನ ವರ್ಷ ನಡೆಸಲು ಸಾಧ್ಯವಾದೀತು. ಕರಾರು ಪ್ರಕಾರ ಚೆಕ್‌ ಡ್ಯಾಂ ನಿರ್ಮಾಣ ನಡೆಸದೆ ಬೆಳ್ಳೂರಿಗೆ ನೀರು ಹರಿಸುವಂತಿಲ್ಲ. ಅಂದರೆ ಒಂದು ವರ್ಷ ಕಳೆಯದೆ ಯೋಜನೆ ಪೂರ್ತಿಗೊಳ್ಳಲಾರದು. 

ಹಾಗೆಯೇ ಈಗಾಗಲೇ ಕುಂಟಾರಿನಿಂದ ಮಿಂಚಿಪದವು ಪ್ರದೇಶಕ್ಕೆ ಕೊಳವೆ ಜೋಡಣೆ ಕಾಮಗಾರಿ ನಡೆಯುತ್ತಿದೆ. ಚೆರ್ಕಳ-ಸುಳ್ಯ ಪ್ರಧಾನ ರಸ್ತೆಯ ಪಕ್ಕದಲ್ಲಿ ಕೊಳವೆ ಜೋಡಿಸುವ ಕಾಮಗಾರಿ ಪೂರ್ತಿಗೊಂಡಿದ್ದರೂ ಚರಂಡಿ ಯನ್ನು ಮುಚ್ಚಿ ಕಾಮಗಾರಿ ನಡೆಸಿದ ಕಾರಣ ಭಾರೀ ಸಮಸ್ಯೆಗೆ ಕಾರಣವಾದೀತು. ಇತ್ತೀಚೆಗೆ ಸುರಿದ ಒಂದು ಮಳೆಗೆ ರಸ್ತೆ ಕೆಸರುಮಯವಾಗಿದೆ. ಜನ ಸಂಚಾರ, ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಈ ಸಮಸ್ಯೆಗಳ ಬಗ್ಗೆ ಅಧಿಕೃತರು ಕರಾರುದಾರರಿಗೆ ತುರ್ತು ಕ್ರಮಕ್ಕೆ ಸೂಚಿಸಬೇಕಾಗಿದೆ.

ಬೆಳ್ಳೂರಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರ?
ಗ್ರಾಮೀಣ ಪ್ರದೇಶವಾಗಿರುವ ಬೆಳ್ಳೂರು ಗ್ರಾಮ ಪಂಚಾಯತ್‌ಗೆ ಈ ಕುಡಿಯುವ ನೀರಿನ ಯೋಜನೆ ವರದಾನವಾದೀತೇ? ಇಲ್ಲಿನ ಬಹಳಷ್ಟು ಕುಟುಂಬಗಳಿಗೆ ಬೇಸಗೆ ಬಂದರೆ ನೀರಿಗಾಗಿ ತೊಂದರೆ ಆರಂಭವಾಗುತ್ತದೆ. ಪರ್ಲಾಂಗುಗಳ ತನಕ ನೀರಿಗಾಗಿ ಸಾಗ ಬೇಕಾದ ಪರಿಸ್ಥಿತಿ ಎದುರಾಗ ಬೇಕಾಗುತ್ತದೆ. ಕಾಲನಿ ನಿವಾಸಿಗಳು ಸಹ ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಯೋಜನೆಯು ಸಾಕಾರಗೊಂಡರೆ ಬಹುಕಾಲದ ಜನರ ಬೇಡಿಕೆ ಈಡೇರಬಹುದು.

ಪಯಸ್ವಿನಿ ಬತ್ತುವ ಸಾಧ್ಯತೆ
ಭತ್ತದ ಕೃಷಿ, ಅಡಿಕೆ ಕೃಷಿ, ತೆಂಗಿನ ಕೃಷಿ ಮೊದಲಾದವು ನೀರಿಲ್ಲದೆ ಒಣಗ ಬೇಕಾದೀತು. ಕುಡಿಯುವ ನೀರಿಗಾಗಿ ಜನರು ಒದ್ದಾಡಬೇಕಾದೀತು. ನದಿಯಲ್ಲೇ ಬೃಹತ್‌ ಬಾವಿ ಯನ್ನು ತೋಡಿ ನೀರನ್ನು ದೊಡ್ಡ ಯಂತ್ರದ ಮೂಲಕ ಹಾಯಿಸುವ ಯೋಜನೆಯಿಂದ  ಫೆಬ್ರವರಿ-ಮಾರ್ಚ್‌ ತಿಂಗಳಲ್ಲಿಯೇ ಪಯಸ್ವಿನಿ ಬತ್ತುವ ಸಾಧ್ಯತೆ ಇದೆ.

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

arest

Kumbla: ಯುವಕನನ್ನು ಅಪಹರಿಸಿ ಕೊಲೆಗೆ ಯತ್ನ; ಬಂಧನ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

10-madikeri

Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ

8-madikeri

Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.