ಕಾಸರಗೋಡಿನ ಬೆಳ್ಳೂರು ದೊಂಪತ್ತಡ್ಕ ಕಗ್ಗಲ್ಲು ಕೋರೆ ಪರವಾನಗಿ ನವೀಕರಿಸದಂತೆ ಆಗ್ರಹ
Team Udayavani, Apr 2, 2019, 2:41 PM IST
ಕಾಸರಗೋಡು: ಕಾಸರಗೋಡು ಜಿಲ್ಲೆಯ ಬೆಳ್ಳೂರು ಪಂಚಾಯತಿಗೆ ಒಳಪಟ್ಟ ದೊಂಪತ್ತಡ್ಕ ಕಗ್ಗಲ್ಲು ಕೋರೆಯ ಪರವಾನಗಿ ನವೀಕರಿಸಬಾರದು ಎಂದು ಬಿಜೆಪಿ ಜಿಲ್ಲಾ ಘಟಕ ಆಗ್ರಹಿಸಿದೆ.
ಬೆಳ್ಳೂರು ಗ್ರಾ.ಪಂ. ವ್ಯಾಪ್ತಿಯ ದೊಂಪತ್ತಡ್ಕದಲ್ಲಿ ಕಳೆದ 30 ವರ್ಷಗಳಿಂದ ಎಗ್ಗಿಲ್ಲದೆ ನಡೆಯುತ್ತಿರುವ ಕಗ್ಗಲ್ಲು ಕೋರೆ ಆಸುಪಾಸು ಪ್ರದೇಶಗಳಲ್ಲಿ ನೀರಿನ ಕ್ಷಾಮ, ಭೂ ಸವಕಳಿ ಉಂಟಾಗಿದೆ. ಪ್ರಾಕೃತಿಕ ಹಾಗೂ ಆರೋಗ್ಯ ಸಮಸ್ಯೆಗಳು ತಲೆದೋರಿವೆ. ಕೋರೆ ಪರವಾನಿಗೆ ಮುಗಿದ ನಂತರ ಮುಂದೆ ಪರವಾನಗಿ ನವೀಕರಿಸಬಾರದು ಎಂದು ಒತ್ತಾಯಿಸಿದೆ.
ಮುಳ್ಳೇರಿಯದಲ್ಲಿ ಬಿಜೆಪಿ ಪಂಚಾಯತಿ ಸಮಿತಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್, ರಾಜ್ಯ ಸಮಿತಿ ಸದಸ್ಯ ಸುರೇಶ್ ಕುಮಾರ್ ಶೆಟ್ಟಿ, ಮಂಡಲಾಧ್ಯಕ್ಷ ಸುದಾಮ ಗೋಸಾಡ, ಪ್ರಧಾನ ಕಾರ್ಯದರ್ಶಿಗಳಾದ ಹರೀಶ್ ನಾರಂಪಾಡಿ ಸುಕುಮಾರ ಕುದ್ರೆಪ್ಪಾಡಿ, ಬೆಳ್ಳೂರು ಬಿಜೆಪಿ ಪಂ. ಸಮಿತಿ ಕಾರ್ಯದರ್ಶಿ ಜಯಾನಂದ ಕುಳ, ಜನ ಪ್ರತಿನಿಧಿಗಳಾದ ಶ್ರೀಧರ ಬೆಳ್ಳೂರು, ಶಿವರಾಮ ಎನ್.ಎ., ಮಾಲತಿ ಜೆ.ರೈ, ಮತ್ತಿತರರು ಭಾಗವಹಿಸಿದ್ದರು. ಎಪ್ರಿಲ್ ತಿಂಗಳ ಮೊದಲ ವಾರ ಪಂಚಾಯತಿ ಆಡಳಿತ ಸಮಿತಿ ಸಭೆ ನಡೆಯಲಿದೆ. ಈ ವೇಳೆ ಕಪ್ಪು ಕಲ್ಲಿನ ಕೋರೆಯ ಪರವಾನಗಿ ನವೀಕರಿಸದಂತೆ ನಿರ್ಧಾರ ಕೈಗೊಳ್ಳುವ ಬಗ್ಗೆ ಸೂಚನೆ ಲಭಿಸಿದೆ.
ಕೋರೆಯಲ್ಲಿ ಭಾರಿ ನ್ಪೋಟಕಗಳನ್ನು ಬಳಸಲಾಗುತ್ತಿದೆ. ಇದರಿಂದ, ಶಬ್ದ ಮಾಲಿನ್ಯ , ಭೂ ಕಂಪನ, ಭೂ ಕುಸಿತ, ಸಮೀಪದ ಮನೆ ಗೋಡೆಗಳಲ್ಲಿ ಬಿರುಕು ಉಂಟಾಗಿದ್ದು , ಸ್ಥಳೀಯರು ಹಾಗೂ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ಗಮನ ಸೆಳೆದಿದೆ. ಬೆಳ್ಳೂರು, ಏತಡ್ಕ ಪರಿಸರ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಸ್ಥಳೀಯರು ಈ ಹಿಂದೆ ಭಾರಿ ಪ್ರತಿಭಟನೆ ನಡೆಸಿದ್ದರು. ಕಪ್ಪು ಕಲ್ಲು ಕೋರೆ ಮಾಲೀಕರು ಸ್ಥಳೀಯವಾಗಿ ಜನರ ಬಾಯಿ ಮುಚ್ಚಿಸಲು ಆಮಿಷ ಒಡ್ಡಿದ್ದು , ಹೋರಾಟದ ನೇತೃತ್ವ ವಹಿಸಿದ ಹಲವರಿಗೆ ಬೆದರಿಕೆ, ಹುಸಿ ಆಪಾದನೆ, ಸುಳ್ಳು ದೂರು ನೀಡುತ್ತಿರುವುದಾಗಿಯೂ ಹೇಳಲಾಗುತ್ತಿದೆ.
ಕಳೆದ ಅಕ್ಟೋಬರ್ 10 ರಂದು ಬೆಳ್ಳೂರು ಪಂಚಾಯಿತಿ ಕೋರೆಯ ಪರವಾನಿಗೆ ನವೀಕರಿಸದಿರಲು ಹಾಗೂ ರದ್ದುಗೊಳಿಸಲು ತೀರ್ಮಾನಿಸಿದ್ದರೂ ಕೆಲವೊಂದು ಕಾನೂನು ಅಡಚಣೆಗಳಿಂದ ಅದನ್ನು ಜಾರಿಗೆ ತರಲು ಸಾಧ್ಯವಾಗಿರಲಿಲ್ಲ .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.