ವಿವಿ ಕಲೋತ್ಸವದಲ್ಲಿ ಸತತ 4ನೇ ಬಾರಿ ಸಹನಾ ಶೆಟ್ಟಿ ಅತ್ಯುತ್ತಮ ನಟಿ


Team Udayavani, Feb 23, 2017, 3:57 PM IST

actress.jpg

ಕಾಸರಗೋಡು: ಪ್ರೇಕ್ಷಕರಿಗೆ ರಸದೌತಣ ಉಣಬಡಿಸಿ  ಈ ಬಾರಿಯೂ  ಕಣ್ಣೂರು ವಿ.ವಿ. ಕಲೋತ್ಸವದಲ್ಲಿ ಸಿ.ಎನ್‌. ಸಹನಾ ಶೆಟ್ಟಿ ಅವರ ನಟನೆ ಸಭಾಂಗಣವನ್ನು ಮೈನವಿರೇಳಿಸಿತು.

ಪೊವ್ವಲ್‌ ಎಲ್‌ಬಿಎಸ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ನಡೆದ ಈ ಸಾಲಿನ ಕಣ್ಣೂರು ವಿವಿ ಕಲೋತ್ಸವದಲ್ಲಿ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ದ್ವಿತೀಯ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಸಹನಾ ಶೆಟ್ಟಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡು ಅತ್ಯುತ್ತಮ ನಟಿ ಕಿರೀಟವನ್ನು ಪಡೆದುಕೊಂಡಿದ್ದಾರೆ. ಸಹನಾ ಶೆಟ್ಟಿಗೆ ವಿವಿ ಕಲೋತ್ಸವದಲ್ಲಿ ಇದು ಸತತ ನಾಲ್ಕನೇ ಬಾರಿ ಅತ್ಯುತ್ತಮ ನಟನೆಗಾಗಿ ಪ್ರಶಸ್ತಿ ಲಭಿಸಿರುವುದು. ಕನ್ನಡ, ತುಳು, ಮಲಯಾಳ ಭಾಷೆ ಬಲ್ಲ ಈ ಪ್ರತಿಭೆ ಭಾಷೆ ಯಾವುದೇ ಆಗಲಿ ನಟನೆಗೆ ಸೈ ಎಂದೆನಿಸಿಕೊಂಡಿದ್ದಾರೆ. ತುಳು ನಾಟಕಗಳಲ್ಲೂ ಅಭಿನಯಿಸುವ ಮೂಲಕ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ದ್ವಿತೀಯ ವರ್ಷ ಕನ್ನಡ ಪದವಿ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೇ ವಿವಿ ಕಲೋತ್ಸವದ ಕನ್ನಡ ನಾಟಕ  ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಲಭಿಸಿತ್ತು. ಅಂದು 2013-14ನೇ ಶೆ„ಕ್ಷಣಿಕ ವರ್ಷ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ನಾಟಕ ತಂಡ ಪ್ರದರ್ಶಿಸಿದ ಹೆಣ್ಣು ಸಮಾಜದ ಕಣ್ಣು ನಾಟಕದಲ್ಲಿ ಸಹನಾ ಅಭಿಯಿಸಿದ ನೀಲಿ ಪಾತ್ರ ತೀರ್ಪುಗಾರರ ಮೆಚ್ಚುಗೆಯನ್ನು  ಪಡೆದಿತ್ತು. 2014-15ನೇ ಸಾಲಿನಲ್ಲಿ ವಿವಿ ಕಲೋತ್ಸವದಲ್ಲಿ ಜೇಡರ ಬಲೆ ನಾಟಕದಲ್ಲಿ ಸಹನಾ ಪಾತ್ರದಲ್ಲಿ ಅಭಿನಯಿಸಿ ಅತ್ಯುತ್ತಮ ನಟಿಯಾಗಿ ಆಯ್ಕೆಯಾಗಿದ್ದರು.

ಕಾಸರಗೋಡು ಸರಕಾರಿ ಕಾಲೇಜಿನಲ್ಲಿ  ಸ್ನಾತಕೋತ್ತರ ಪದವಿ ವ್ಯಾಸಂಗ ಮುಂದುವರಿಸಿದ ಸಹನಾ 2015-16ನೇ ಶೆ„ಕ್ಷಣಿಕ ವರ್ಷ ತಲಶ್ಯೆàರಿಯಲ್ಲಿ ನಡೆದ ಕಲೋತ್ಸವದಲ್ಲಿ ಕಾಸರಗೋಡು  ಸರಕಾರಿ ಕಾಲೇಜಿನ ಕನ್ನಡ ನಾಟಕ ತಂಡ ಪ್ರದಶಿರ್ಸಿದ ದಂಪತಿಗಳು ನಾಟಕದಲ್ಲಿ ರಮ್ಯಾ ಪಾತ್ರವನ್ನು ನಿರ್ವಹಿಸಿದರು.  ಸಮಾಜದಲ್ಲಿ ಸ್ತ್ರೀ ಪಾತ್ರವನ್ನು ಕೇಂದ್ರೀಕರಿಸಿ ಹೆಣೆದ ನಾಟಕದಲ್ಲಿ ಸಹನಾಳ ನಟನೆ ಅತ್ಯುತ್ತಮವಾಗಿ ಪ್ರಶಂಸೆಯನ್ನು ತಂದುಕೊಟ್ಟಿತ್ತು.

ಈ ಬಾರಿ ಪೊವ್ವಲ್‌ನ ಎಲ್‌ಬಿಎಸ್‌ ಕಾಲೇಜಿನಲ್ಲಿ ನಡೆದ ವಿವಿ ಕಲೋತ್ಸವದಲ್ಲಿ ಸೋಮವಾರ ರಾತ್ರಿ ಕಾಸರಗೋಡು ಸರಕಾರಿ ಕಾಲೇಜು ತಂಡ ಪ್ರದರ್ಶಿಸಿದ  ಮನೋ ಮƒಗ ಕನ್ನಡ ನಾಟಕಲ್ಲಿ ಸಹನಾಳ ಅಭಿನಯಕ್ಕೆ ತಕ್ಕ ಫಲವೆಂಬಂತೆ ಅತ್ಯುತ್ತಮ ನಟಿಯಾಗಿ ಆಯ್ಕೆಯಾಗಿದ್ದಾರೆ.

ಶಾಲಾ ದಿನಗಳಲ್ಲೇ ನಟನೆಯಲ್ಲಿ ವಿಶೇಷ ಆಸಕ್ತಿ ತೋರಿಸಿದ್ದ ಸಹನಾರಿಗೆ ರಂಗಭೂಮಿ ಎಂದರೆ ಅಚ್ಚುಮೆಚ್ಚು. ಬೋವಿಕ್ಕಾನ ಬಿಎಆರ್‌ಎಚ್‌ಎಸ್‌ ಶಾಲೆಯ ಹಳೆ ವಿದ್ಯಾರ್ಥಿನಿಯಾದ ಸಹನಾ ಪಾಡಿಯ ನಾರಾಯಣ ಶೆಟ್ಟಿ ಹಾಗೂ ಸುಗುಣ ದಂಪತಿಯ ಪುತ್ರಿಯಾಗಿದ್ದಾರೆ. ಕಾಲೇಜಿನ ಕನ್ನಡ ವಿದ್ಯಾರ್ಥಿಗಳ ಸಾಹಿತ್ಯಕ-ಸಾಂಸ್ಕೃತಿಕ ವೇದಿಕೆಯಾದ ಸ್ನೇಹರಂಗದ ವಿವಿಧ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಸಹನಾ ಕಲಿಕೆಯಲ್ಲಿ ಇನ್ನಷ್ಟು ಸಾಧನೆಯ ಹಾದಿಯಲ್ಲಿದ್ದಾರೆ.

2016-17ನೇ ಶೈಕ್ಷಣಿಕ ವರ್ಷದ ಕಣ್ಣೂರು ವಿವಿ ಕಲೋತ್ಸವದ ಕಾಸರಗೋಡು ಸರಕಾರಿ ಕಾಲೇಜು ತಂಡ ಪ್ರದರ್ಶಿಸಿದ ಮನೋಮƒಗ ನಾಟಕವನ್ನು ಸದಾಶಿವ ಮಾಸ್ತರ್‌  ಪೊಯೆÂ ನಿರ್ದೇಶಿಸಿದ್ದಾರೆ. ಸಹನಾ ಸಹಿತ ಪವಿತ್ರ ಇ., ರಂಜಿನಿ ಸಿ.,  ಜೇಷ್ಮಾ ಲೋಬೋ, ರಾಜರಾಮ ಪಿ., ಪ್ರದೀಪ್‌ ಕುಮಾರ್‌, ಶಿಹಾಬ್‌, ಅಕ್ಷತಾ ಅಭಿನಯಿಸಿದ್ದಾರೆ.

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Police

Kasragodu: ನರ್ಸಿಂಗ್‌ ವಿದ್ಯಾರ್ಥಿನಿ ಸಾವು : ಕ್ರೈಂ ಬ್ರ್ಯಾಂಚ್‌ ತನಿಖೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Suside-Boy

Kasaragodu: ರೈಲಿನಿಂದ ಬಿದ್ದು ವ್ಯಕ್ತಿ ಸಾವು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.