“ಮನೆಯಿಂದಲೇ ಮಕ್ಕಳಿಗೆ ಉತ್ತಮ ಸಂಸ್ಕೃತಿ’
Team Udayavani, Jul 12, 2017, 2:20 AM IST
ಪೆರ್ಲ: ಪೆರ್ಲದ ವಿವೇಕಾನಂದ ಶಿಶುಮಂದಿರದಲ್ಲಿ ವ್ಯಾಸ ಜಯಂತಿ(ಗುರುಪೂರ್ಣಿಮಾ ದಿನಾಚರಣೆ)ಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪುಂಡರೀಕಾಕ್ಷ ಬೆಳ್ಳೂರು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮನೆಯೇ ಮೊದಲ ಪಾಠ ಶಾಲೆ. ತಾಯಿಯೇ ಮೊದಲ ಗುರು. ಮನೆಯಿಂದಲೇ ಮಕ್ಕಳಿಗೆ ಉತ್ತಮ ಸಂಸ್ಕೃತಿ, ಸುವಿಚಾರ ಗಳನ್ನು ಕಲಿಸಬೇಕು. ಇಂತಹ ಶಿಶು ಮಂದಿರಗಳು ಉತ್ತಮ ಸಂಸ್ಕಾರಯುತ ಶಿಕ್ಷಣ ಲಭಿಸುವಂತೆ ಮಾಡುವಲ್ಲಿ ಇನ್ನಷ್ಟು ಸಹಕಾರಿಯಾಗುತ್ತವೆ. ಮಾತೆಯರು ಈ ನಿಟ್ಟಿನಲ್ಲಿ ಗಮನ ಕೊಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಿಶುಮಂದಿರ ಸಮಿತಿ ಅಧ್ಯಕ್ಷ ಶ್ರೀಹರಿ ಭರಣೀಕರ್ ಅವರು ಶಿಶು ಮಂದಿರದ ಶಿಕ್ಷಣದ ಧ್ಯೇಯಗಳನ್ನು ಹೆತ್ತವರಿಗೆ ವಿವರಿಸಿ ಗುರುವಂದನಾ ಕಾರ್ಯಕ್ರಮದ ಔಚಿತ್ಯವನ್ನು ತಿಳಿಸಿ ದರು. ಇನ್ನೋರ್ವ ಅತಿಥಿ ಪೆರ್ಲದ ನಾಲಂದ ಮಹಾವಿದ್ಯಾಲಯದ ಆಡಳಿತಾಧಿಕಾರಿ ಶಿವಕುಮಾರ್ ಕೆ. ಗುರುವಿನ ಮಹತ್ವ ಹಾಗೂ ಯೋಗ್ಯ ಸಂಸ್ಕಾರಗಳ ಆವಶ್ಯಕತೆಯನ್ನು ತಿಳಿಸಿ ದರು. ಮಾತೃ ಮಂಡಳಿಯ ಅಧ್ಯಕ್ಷೆ ಶ್ಯಾಮಲಾ ಪತ್ತಡ್ಕ ಪ್ರಾರ್ಥಿಸಿದರು. ಶಿಶು ಮಂದಿರದ ಮಾತಾಜಿ ಭಗಿನಿ ಲಾವಣ್ಯ ಮಕ್ಕಳೊಂದಿಗೆ ದೀಪ ಜ್ವಲನ ಶ್ಲೋಕ ಹೇಳಿದರು.
ಶಿಶುಮಂದಿರ ಸಮಿತಿಯ ಕಾರ್ತಿಕ್ ಶಾಸ್ತಿÅ ಸ್ವಾಗತಿಸಿದರು. ನಳಿನಿ ಸೈಪಂಗಲ್ಲು ವಂದಿಸಿದರು. ಶಿಶುಮಂದಿರ ಸಮಿತಿಯ ಸುಮಿತ್‌ರಾಜ್, ರಮೇಶ್ ಪಳ್ಳತ್ತಡ್ಕ, ಕೃಷ್ಣರಾಜ ಪುಣಿಂಚತ್ತಾಯ, ಜಯಶ್ರೀ, ಶ್ಯಾಮಲಾ ಪೆರ್ಲ ಮತ್ತು ಪ್ರೇಮಾ ಆಳ್ವ ಉಪಸ್ಥಿತರಿದ್ದರು. ಮಕ್ಕಳು ಹಾಗು ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಹಾಯಕಿ ಹೇಮಾ ಆಚಾರ್ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.