ರಾಜ್ಯದ ಏಕೈಕ ಸರಕಾರಿ ಯುನಾನಿ ಆಸ್ಪತ್ರೆಗೆ ಭಡ್ತಿ ಭಾಗ್ಯ

ಮೊಗ್ರಾಲ್‌ನ ಚಿಕಿತ್ಸಾಲಯ

Team Udayavani, Nov 18, 2019, 5:43 AM IST

17-KBL-1

ಕುಂಬಳೆ: ಕೇರಳ ರಾಜ್ಯದ ಏಕೈಕ ಸರಕಾರಿ ಯುನಾನಿ ಆಸ್ಪತ್ರೆಯು ಕಾಸರಗೋಡು ಜಿಲ್ಲೆಯ ಕುಂಬಳೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮೊಗ್ರಾಲಿನಲ್ಲಿ ಕಾರ್ಯವೆಸಗುತ್ತಿದೆ. ಹಿಂದಿನ ಆರೋಗ್ಯ ಸಚಿವ ಎ.ಸಿ. ಷಣ್ಮುಖದಾಸ್‌ ಅವರು ಕಳೆದ 1991 ರಲ್ಲಿ ಉದ್ಘಾಟಿಸಿದ ಈ ಆಸ್ಪತ್ರೆ ಕಟ್ಟಡಕ್ಕೆ ರಜತ ವರ್ಷದಾಟಿದೆ.

ಈ ತನಕ ಹೊರರೋಗಿಗಳಿಗೆ ಮಾತ್ರಚಿಕಿತ್ಸೆ ನೀಡುತ್ತಿದ್ದ ಹಳೆಯ ಓಬಿರಾಯನ ಕಾಲದ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಆಸ್ಪತ್ರೆಗೆ ಇದೀಗ ಸುವರ್ಣ ಅವಕಾಶ ಬಂದೊದಗಿದೆ. ಕೇಂದ್ರ ರಾಜ್ಯ ಸರಕಾರದ ನ್ಯಾಶನಲ್‌ ಆಯುಷ್‌ ಮಿಷನ್‌ ಯೋಜನೆಯಲ್ಲಿ ಒಳಪಡಿಸಿ ಆಸ್ಪತ್ರೆಯ ಅಭಿವೃದ್ಧಿಗೆ 23 ಲಕ್ಷ ರೂ. ನಿಧಿ ಮಂಜೂರುಗೊಳಿಸಿದೆ. ಈ ಯೋಜನೆಯಲ್ಲಿ ಆಸ್ಪತ್ರೆಯ ಹಳೆಯ ಕಟ್ಟಡವನ್ನು ನವೀಕರಿಸಲಾಗಿದೆ. ಇದರ ಕಾಮಗಾರಿ ಪೂರ್ಣಗೊಂಡಿದೆ. ಆಸ್ಪತ್ರೆಯಲ್ಲಿ ರೋಗಿಗಳನ್ನು ದಾಖಲಿಸಿ ಚಿಕಿತ್ಸೆ ನೀಡುವ ಒಳರೋಗಿ ವಿಭಾಗ ವ್ಯವಸ್ಥೆಯ ಹಾಸಿಗೆ ಹೊಂದಿದ ಆಸ್ಪತ್ರೆಯಾಗಿ ಭಡ್ತಿಗೊಳಿಸಿ ರಾಜ್ಯ ಸರಕಾರ ಅಂಗೀಕರಿಸಿದೆ. ಕುಂಬಳೆ ಗ್ರಾಮ ಪಂಚಾಯತ್‌ ವತಿಯಿಂದ 4 ಲಕ್ಷ ರೂ. ವೆಚ್ಚದಲ್ಲಿ ಲ್ಯಾಬ್‌ ನಿರ್ಮಿಸಿದೆ. ಲ್ಯಾಬ್‌ಟೆಕ್ನಿಶಿಯನ್‌ ಹುದ್ದೆಯನ್ನು ದಿನವೇತನದಲ್ಲಿ ನೇಮಕಗೊಳಿಸಲಾಗಿದೆ.
ಡಾ| ಪ್ರಭಾಕರನ್‌ ಆಯೋಗದ ಕಾಸರಗೋಡು ಅಭಿವೃದ್ಧಿ ಯೋಜನೆಯಲ್ಲಿ ಇದೀಗ 50 ಲಕ್ಷ ರೂ. ಯೋಜನೆಗೆ ತಾಂತ್ರಿಕ ಅನುಮತಿ ದೊರಕಿದೆ. ಆಸ್ಪತ್ರೆಯ ಹಳೆ ಕಟ್ಟಡದ ಹಿಂದಿನ ಭಾಗದಲ್ಲಿ 30 ಹಾಸಿಗೆಯನ್ನು ಹೊಂದಿದ ನೂತನ ಕಟ್ಟಡ ನಿರ್ಮಾಣದ ಕಾಮಗಾರಿ ಮುಂದಿನವಾರ ಆರಂಭವಾಗಲಿರುವುದು.

ರಾಜ್ಯ ಸರಕಾರವು ಮೊಗ್ರಾಲ್‌ ಸರಕಾರಿ ಹಯ್ಯರ್‌ ಸೆಕೆಂಡರಿ ವೊಕೇಶನಲ್‌ ವಿದ್ಯಾಲಯವನ್ನು ಅಂತಾರಾಷ್ಟ್ರ ಮಟ್ಟದ ವಿದ್ಯಾಲಯವಾಗಿ ಪರಿವರ್ತಿ ಸಲು ಲಕ್ಷಗಟ್ಟಲೆ ರೂ. ನಿಧಿ ಮಂಜೂರುಗೊಳಿಸಿ ಇದರ ಕಾಮಗಾರಿ ಭರದಿಂದ ನಡೆಯುತ್ತಿರುವಾಗ ಇದೀಗ ಇಲ್ಲಿನ ಸರಕಾರಿ ಯುನಾನಿ ಆಸ್ಪತ್ರೆಯನ್ನು ನ್ಯಾಶನಲ್‌ ಆಯುಷ್‌ ಮಿಷನ್‌ ಯೋಜನೆಯಲ್ಲಿ ಒಳಪಡಿಸಿರುವುದರಿಂದ ಸ್ಥಳೀಯರು ಹೆಮ್ಮೆ ಪಡುವಂತಾಗಿದೆ.
ಸುಮಾರು 25 ವರ್ಷಗಳಿಂದ ಶಿಥಿಲ ಹಳೆಯ ಕಟ್ಟಡದಲ್ಲಿ ಅವ್ಯವಸ್ಥೆಯಲ್ಲಿ ಕಾರ್ಯಾಚರಿಸುತ್ತಿದ್ದ ಆಸ್ಪತ್ರೆಯ ದುಸ್ಥಿತಿಯನ್ನು ಪರಿಗಣಿಸಿದ ಸರಕಾರದ ನಿಲುವಿಗೆ ಆಸ್ಪತ್ರೆ ಫಲಾನುಭವಿಗಳು ಸಂತಸಪಡುವಂತಾಗಿದೆ.

ಉತ್ತಮ ಸೇವೆ ದೊರಕಲಿದೆ
ಈ ಆಸ್ಪತ್ರೆಗೆ ನಿತ್ಯ ನೂರಕ್ಕೂ ಮಿಕ್ಕಿ ರೋಗಿಗಳು ಚಿಕಿತ್ಸೆಗೆ ಆಗಮಿಸುತ್ತಿರುವರು. ಈ ತನಕ ಕೆಲವೊಂದು ಅವ್ಯವಸ್ಥೆಯಲ್ಲೂ ಸರಕಾರದ ಸೇವೆ ನೀಡಲಾಗಿದೆ. ಹೆಚ್ಚಿನ ಸೇವೆಗಾಗಿ ಇನ್ನೋರ್ವ ವೈದ್ಯರನ್ನು ಸರಕಾರ ನೇಮಕಗೊಳಿಸಿದೆ. ಮುಂದಿನ ದಿನಗಳಲ್ಲಿ ಸಕಲ ಸೌಲಭ್ಯಗಳೊಂದಿಗೆ ಆಸ್ಪತ್ರೆಯ ಸೇವೆ ಸಾರ್ವಜನಿಕರಿಗೆ ದೊರಕಲಿದೆ.
ಡಾ| ಝಕೀರಾಲಿ,
ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ

ಆರೋಪ ಮುಕ್ತವಾಗಲಿ
ರಾಜ್ಯಕ್ಕೆ ಹೆಮ್ಮೆಯಾಗಿರುವ ಮೊಗ್ರಾಲ್‌ ಯುನಾನಿ ಆಸ್ಪತ್ರೆಗೆ ಸರಕಾರದಿಂದ ಮಂಜೂರಾದ ಅಭಿವೃದ್ಧಿ ಯೋಜನೆಯ ಕಾಮಗಾರಿ ಅತ್ಯಂತ ಶೀಘ್ರವಾಗಿ ಉತ್ತಮ ಗುಣಮಟ್ಟದೊಂದಿಗೆ ನಡೆದು ಹಲವು ವರ್ಷಗಳಿಂದ ಆಸ್ಪತ್ರೆಯ ಅವಗಣನೆ ಎಂಬ ಆರೋಪದಿಂದ ಮುಕ್ತವಾಗಬೇಕೆಂಬುದಾಗಿ ಸಾರ್ವಜನಿಕರ ಬೇಡಿಕೆಯಾಗಿದೆ.
-ಮೂಸಾ ಮೊಗ್ರಾಲ್‌
ಮಾಜಿ ಸದಸ್ಯರು ಕುಂಬಳೆ ಗ್ರಾ.ಪಂ.

-ಅಚ್ಯುತ ಚೇವಾರ್‌

ಟಾಪ್ ನ್ಯೂಸ್

bidar

Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ

1-s-v

Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ

congress

Maharashtra ಮತದಾನ ಮುಗಿದ ನಂತರ 7% ಹೆಚ್ಚಳ : ECI ಸ್ಪಷ್ಟಪಡಿಸಬೇಕು ಎಂದ ಕಾಂಗ್ರೆಸ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Mumbai: ಆತ್ಮಹತ್ಯೆಗೂ 15 ನಿಮಿಷದ ಮೊದಲು ತಾಯಿಗೆ ಕರೆ ಮಾಡಿ ಖುಷಿಯಲ್ಲೇ ಮಾತನಾಡಿದ್ದ ಪೈಲೆಟ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

4

Kasaragod: ಕಾರು ಢಿಕ್ಕಿ ಹೊಡೆಸಿ ವ್ಯಾಪಾರಿಯ 2 ಕೆಜಿ ಚಿನ್ನ ದರೋಡೆ

Untitled-5

Kasaragod: ನಗ-ನಗದು ಕಳವು; ಆರೋಪಿ ಬಂಧನ

4

Punjalkatte: ರಾಯಿ; ಯುವಕ ನೇಣು ಬಿಗಿದು ಆತ್ಮಹತ್ಯೆ

Untitled-5

Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ

1-reee

Udupi; ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾಗಿ ರಮೇಶ್‌ ಕಾಂಚನ್‌ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.