ಭಾವೀ ಜನಾಂಗಕ್ಕೆ ಸನ್ಮಾರ್ಗದ ದರ್ಶನ ನಮ್ಮೆಲ್ಲರ ಹೊಣೆ : ಕೃಷ್ಣ ಮಣಿಯಾಣಿ
ಅಗಲ್ಪಾಡಿ ಜಯನಗರ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರ : 40ನೇ ವಾರ್ಷಿಕೋತ್ಸವ
Team Udayavani, May 5, 2019, 5:40 PM IST
ಕೃಷ್ಣಮಣಿಯಾಣಿ ಪುತ್ತಿಲ ಅವರು ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಬದಿಯಡ್ಕ: ಭಕ್ತಿ ಮತ್ತು ಪ್ರೀತಿಗೆ ಎಂತಹ ಶತ್ರುಗಳನ್ನೂ ಸಹ ಎದುರಿಸುವ ಶಕ್ತಿಯಿದೆ. ಮನದಲ್ಲಿ ಅಚಲವಾದ ನಿಷ್ಠೆ, ಪರಿಶ್ರಮವಿದ್ದರೆ ದೇವರನ್ನು ಕಾಣಬಹುದು. ಪರಂಪರಾಗತವಾಗಿ ಆಚರಿಸಿಕೊಂಡು ಬಂದಂತಹ ಆಚಾರ ಅನುಷ್ಠಾನಗಳನ್ನು ಉಳಿಸಿ, ಮುಂದಿನ ಜನಾಂಗವನ್ನು ಸನ್ಮಾರ್ಗದಲ್ಲಿ ನಡೆಸಬೇಕಾದ ಕರ್ತವ್ಯ ನಮ್ಮ ಪಾಲಿಗಿದೆ ಎಂಬುದನ್ನು ನಾವು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ ಎಂದು ಧಾರ್ಮಿಕ ಮುಂದಾಳು ಬೆಳ್ತಂಗಡಿ ಪುತ್ತಿಲ ಮೂರುಗೋಳಿಯ ಕೃಷ್ಣ ಮಣಿಯಾಣಿ ಹೇಳಿದರು. ಅವರು ಅಗಲ್ಪಾಡಿ ಜಯನಗರ ಶ್ರೀ ಗೋಪಾಲಕೃಷ್ಣ ಭಜನ ಮಂದಿರದ 40ನೇ ವಾರ್ಷಿಕೋತ್ಸವದ ಧಾರ್ಮಿಕ ಸಭೆಯನ್ನುದ್ದೇಶಿಸಿ ಅವರು ಧಾರ್ಮಿಕ ಭಾಷಣ ಮಾಡಿದರು.
ಮಾನವನಾಗಿ ಹುಟ್ಟಿದ ಮೇಲೆ ಧರ್ಮಾಚರಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದಲ್ಲದೆ, ನಾವು ಮಾಡುವ ಕರ್ತವ್ಯದಲ್ಲಿ ದೇವರನ್ನು ಕಾಣಬೇಕು. ಎಲ್ಲಾ ಧರ್ಮಗಳಿಗೂ ಮುಖ್ಯವಾದ ಸನಾತನ ಧರ್ಮವು ಮನುಕುಲದ ಉದ್ಧಾರಕ್ಕಾಗಿರುವುದಾಗಿದೆ. ಅಂತಹ ಸನಾತನ ಧರ್ಮವನ್ನು ಅರಿತು ನಾವು ಮುಂದಡಿಯಿಡಬೇಕು. ಸನಾತನ ಸಂಸ್ಕಾರಗಳನ್ನು ಉಳಿಸಿ ಬೆಳೆಸುವ ಮೂಲಕ ಮಾತೆಯರು ಮನೆಯನ್ನು ಬೆಳಗುವಲ್ಲಿ ಪ್ರಧಾನ ಕಾರಣರಾಗಬೇಕಾಗಿದೆ.
ಮನೆಯನ್ನು ಬೆಳಗಿಸುವ ಶಕ್ತಿ ಮಾತೆಗಿದೆ. ದೇವರ ಹೆಸರುಗಳನ್ನು ಮಕ್ಕಳಿಗಿಡುವ ಮೂಲಕ ಮನೆಯಲ್ಲಿ ನಿತ್ಯ ದೇವರ ನಾಮಸ್ಮರಣೆಯನ್ನು ಮಾಡುವಲ್ಲಿ ಹಿರಿಯರು ಮುತುವರ್ಜಿ ವಹಿಸಿದ್ದರು. ಆದರೆ ಇಂದು ನಾವು ಆ ಪರಂಪರೆಯನ್ನು ಮರೆಯುತ್ತಾ ಬರುತ್ತಿದ್ದೇವೆ. ಮನೆಯಲ್ಲಿ ಭಜನೆಯ ಮೂಲಕ ದೇವನಾಮ ಸ್ಮರಣೆ ನಡೆದರೆ ಅಲ್ಲಿ ಸಾತ್ವಿಕ ಶಕ್ತಿ ನೆಲೆಗೊಳ್ಳುತ್ತದೆ. ಗುರುಹಿರಿಯರಿಗೆ ಸದಾ ಗೌರವವನ್ನು ಕಾಣುವ ಮನೆ, ಮನ ನಮ್ಮದಾಗಬೇಕು. ಎಲ್ಲಿ ಗುರುಸಾನ್ನಿಧ್ಯವಿರುತ್ತದೋ ಅಲ್ಲಿ ಎಲ್ಲ ಕಾರ್ಯಗಳೂ ಸುಸೂತ್ರವಾಗಿ ನಡೆಯುತ್ತದೆ. ಬಡಜನರ ಸೇವೆಗೆ„ಯುವ ಮೂಲಕ ಪರಮಾತ್ಮನನ್ನು ಒಲಿಸಿಕೊಳ್ಳಬೇಕು ಎಂದರು.
ಶ್ರೀ ಗೋಪಾಲಕೃಷ್ಣ ಭಜನ ಮಂದಿರದ ಅಧ್ಯಕ್ಷ ಬಾಬು ಮಾಸ್ತರ್ ಅಗಲ್ಪಾಡಿ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀಮಂದಿರದ ಸಲಹಾ ಸಮಿತಿ ಸದಸ್ಯ ರಾಮಚಂದ್ರ ಭಟ್ ಉಪ್ಪಂಗಳ, ಕೆ.ವಿ.ರಮೇಶ ಶರ್ಮ ಕುರುಮುಜ್ಜಿ ಶುಭಾಶಂಸನೆಗೆ„ದರು. ಅಗಲ್ಪಾಡಿ ಯಾದವ ಸೇವಾಸಂಘದ ಅಧ್ಯಕ್ಷ ಕುಂಞಿರಾಮ ನಾರಾಯಣ ಮಣಿಯಾಣಿ ಮಾರ್ಪನಡ್ಕ ಉಪಸ್ಥಿತರಿದ್ದರು. ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ ಕಾರ್ಯದರ್ಶಿ ಅಚ್ಚುತ ಮಾಸ್ತರ್ ಅಗಲ್ಪಾಡಿ ವಾರ್ಷಿಕ ವರದಿ ಮಂಡಿಸಿದರು. ಜನಾರ್ಧನ ಮಣಿಯಾಣಿ ಬೆದ್ರುಕೂಡ್ಲು ಧರ್ಮಸ್ಥಳ ಕ್ಷೇತ್ರದ ಸಂದೇಶವನ್ನು ವಾಚಿಸಿದರು.
ಇದೇ ಸಂದರ್ಭದಲ್ಲಿ ಹಿರಿಯರಾದ ಶ್ರೀ ಮಂದಿರದ ಗೌರವಾಧ್ಯಕ್ಷರಾದ ಬಾಬು ಮಣಿಯಾಣಿ ಜಯನಗರ ಮಾರ್ಪನಡ್ಕ ಇವರನ್ನು ಸನ್ಮಾನಿಸಲಾಯಿತು. 2017-18ನೇ ಶೆ„ಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಕಾಸರಗೋಡು ತಾಲೂಕು ಯಾದವ ಸಮುದಾಯದ ವಿದ್ಯಾರ್ಥಿಗಳಾದ ಕು| ಸೌಮ್ಯ ಎನ್., ನಂದು ಕೃಷ್ಣ ಆರ್.ವೈ., ಕು| ಅನಘ ಕೆ.ರಾಮನ್ ಇವರಿಗೆ ದಿ| ಗೋಪಾಲ ಮಾಸ್ತರ್ ಪದ್ಮಾರು ಇವರ ಸ್ಮರಣಾರ್ಥ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.
ಸಾಂಸ್ಕೃತಿಕ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಗೋಪಾಲಕೃಷ್ಣ ಭಜನ ಮಂದಿರದ ಯುವವಿಭಾಗದ ವತಿಯಿಂದ ಪಾತ್ರೆ ಸಮರ್ಪಣೆ, ಭಜನಾ ಸಂಘದವರಿಂದ ಹಾರ್ಮೋನಿಯಂ ಸಮರ್ಪಣೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಜರಗಿತು. ಗೋಪಾಲಕೃಷ್ಣ ಭಜನ ಮಂದಿರದ ಕಾರ್ಯದರ್ಶಿ ರಾಜೇಶ್ ಮಾಸ್ತರ್ ಅಗಲ್ಪಾಡಿ ಸ್ವಾಗತಿಸಿ, ಯಾದವ ಸೇವಾ ಸಂಘದ ಪ್ರ.ಕಾರ್ಯದರ್ಶಿ ನಾರಾಯಣ ಪದ್ಮಾರು ಧನ್ಯವಾದವನ್ನಿತ್ತರು.
ಮಂದಿರದ ಪ್ರಧಾನ ಕಾರ್ಯದರ್ಶಿ ರಮೇಶ್ ಕೃಷ್ಣ ಪದ್ಮಾರ್ ನಿರೂಪಿಸಿದರು. ಕು| ಮಾನಸ ಕಲ್ಲಕಟ್ಟ ಮತ್ತು ಸಂಗಡಿಗರು ಪ್ರಾರ್ಥನಾ ಗೀತೆಯನ್ನು ಹಾಡಿದರು. ಅರುಣೋದಯ ಕಾಲದಲ್ಲಿ ಧ್ವಜಾರೋಹಣ, ಬೆಳಗ್ಗೆ ತಂತ್ರಿವರ್ಯ ಬ್ರಹ್ಮಶ್ರೀ ವೇದಮೂರ್ತಿ ಮಹಾಮಹೋಪಾಧ್ಯಾಯ ಬಳ್ಳಪದವು ಮಾಧವ ಉಪಾಧ್ಯಾಯ ಇವರ ನೇತೃತ್ವದಲ್ಲಿ ಶುದ್ಧಿ ಕಲಶ, ಗಣಪತಿಹವನ, ಲಹರಿ ಭಜನಾ ಸಂಘ ಪೆರ್ಲ ಇವರಿಂದ ಭಜನೆ, ಚಪ್ಪರ ಮದುವೆ ಜರಗಿತು.
ಅಪರಾಹ್ನ ನಮಸ್ತೇ ಇಂಡಿಯಾ ಬೆಂಗಳೂರು ಪ್ರಾಯೋಜಕತ್ವದಲ್ಲಿ ಕೃಷ್ಣಾನಂದ ಶರ್ಮ ಉಪ್ಪಂಗಳ ಇವರಿಂದ ಕೊಳಲು ವಾದನ ಸಂಗೀತ ಕಛೇರಿ, ಗ್ರಾಮ ವಿಕಾಸ ಸಂಗೀತ ತರಬೇತಿ ಕೇಂದ್ರ ಉಬ್ರಂಗಳ ಇವರಿಂದ ಸಂಗೀತಾರ್ಚನೆ. ಸಂಜೆ ವಿವಿಧ ಭಜನಾ ಸಂಘಗಳಿಂದ ಭಜನೆ, ರಾತ್ರಿ ಮಹಾಪೂಜೆ, ಕು| ಮಾನಸ ಹಾಗೂ ಕು| ವೈಷ್ಣವಿ ಕಲ್ಲಕಟ್ಟ ಇವರಿಂದ ಪೂಜಾನƒತ್ಯ ಜರಗಿತು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರ ಪೆರ್ಲದ ಗುರುಗಳಾದ ಸಬ್ಬಣಕೋಡಿ ರಾಮಭಟ್ ನಿರ್ದೇಶನದಲ್ಲಿ ಶ್ರೀ ದುರ್ಗಾಕೃಷ್ಣ ಮಕ್ಕಳ ಮೇಳ ಅಗಲ್ಪಾಡಿ ಜಯನಗರ ಇವರಿಂದ ರಂಗಪ್ರವೇಶ, ಯಕ್ಷಗಾನ ಪ್ರದರ್ಶನ “ಶ್ರೀಕೃಷ್ಣ ಚರಿತಾಮೃತ’ ಪ್ರದರ್ಶನಗೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.