ಪಕ್ಷಿ-ಶಲಭ ಪ್ರೇಮಿಗಳನ್ನು ಸೆಳೆಯುತ್ತಿರುವ ಕಿದೂರು
Team Udayavani, Nov 29, 2018, 2:55 AM IST
ಕಾಸರಗೋಡು: ಗ್ರಾಮೀಣ ಪ್ರದೇಶವಾಗಿರುವ ಕಿದೂರಿನಲ್ಲಿ ಪಕ್ಷಿಧಾಮ ನಿರ್ಮಿಸುವ ಬಗ್ಗೆ ಸಾಕಷ್ಟು ಭರವಸೆಗಳು ಲಭಿಸುತ್ತಿರುವಂತೆ ಈ ಪ್ರದೇಶದಲ್ಲಿ ಅಪೂರ್ವ ಶಲಭಗಳು ಪತ್ತೆಯಾಗಿದ್ದು, ಅವುಗಳ ಗಣತಿಕಾರ್ಯ ನಡೆಯುತ್ತಿದೆ. ಜಿಲ್ಲಾ ಬಯೋಡೈವರ್ಸಿಟಿ ಸಮಿತಿ, ಕುಂಬಳೆ ಪಂಚಾಯತ್ ಹಾಗೂ ಪಕ್ಷಿ ಪ್ರೇಮಿ ತಂಡ ಕಿದೂರು ಇವುಗಳ ಜಂಟಿ ಆಶ್ರಯದಲ್ಲಿ ಕಿದೂರು ಪರಿಸರದಲ್ಲಿ ಚಿಟ್ಟೆ, ಪತಂಗ ಮೊದಲಾದವುಗಳಿಂದ ಕರೆಯಲ್ಪಡುವ ಶಲಭ ಗಣತಿ ಕೈಗೊಳ್ಳಲಾಯಿತು. ಶಲಭ ವೀಕ್ಷಕ ಮುರಳಿ ಮಾಧವ ಪೆಲ್ತಾಜೆ ಅವರ ನೇತೃತ್ವದಲ್ಲಿ ಶಲಭಗಳ ಸರ್ವೆ ನಡೆದಿದ್ದು, ಈ ಕಾರ್ಯಗಳ ಮೂಲಕ ಈ ಪ್ರದೇಶವನ್ನು ಶಲಭ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಅವಕಾಶವೂ ಉಂಟಾಗಿದೆ.
ಶಲಭ ಗಣತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಂಬಳೆ ಗ್ರಾ. ಪಂ. ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್. ಅವರು ಕಾಸರಗೋಡು ಜಿಲ್ಲೆಯಲ್ಲಿ ಸುಮಾರು 161 ವಿಧದ ಪಕ್ಷಿಗಳನ್ನು ಕಾಣಬಹುದಾದ ಏಕೈಕ ಸ್ಥಳ ಎಂದರೆ ಅದು ಕಿದೂರಿನ ಕುಂಟಗೇರಡ್ಕ ಪರಿಸರ. ಕಳೆದ ವರ್ಷ ಪ್ರಸಿದ್ಧ ಪಕ್ಷಿ ಪ್ರೇಮಿ ಸಲೀಂ ಅಲಿ ಅವರ ಜನ್ಮದಿನಾಚರಣೆಯಂಗವಾಗಿ ಕಿದೂರಿನಲ್ಲಿ ಪ್ರಥಮ ಬರ್ಡ್ ಫೆಸ್ಟ್ ಆಯೋಜಿಸಿದ್ದು, ಸತತ ಎರಡನೇ ಬಾರಿಯು ಯಶಸ್ವಿಯಾಗಿ ನಡೆದು ಕೇರಳ ಹಾಗೂ ಕರ್ನಾಟಕದಿಂದ ಸುಮಾರು 60ಕ್ಕಿಂತಲೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದು ಶ್ಲಾಘನೀಯ ಎಂದರು. ಜಿಲ್ಲಾಧಿಕಾರಿಗಳು ವಿಶೇಷ ಮುತುವರ್ಜಿಯಿಂದ ಕಿದೂರು ಪ್ರದೇಶವನ್ನು ಪಕ್ಷಿಧಾಮವನ್ನಾಗಿ ಪರಿವರ್ತಿಸುವ ಬಗ್ಗೆ ಭರವಸೆಯನ್ನು ನೀಡಿದ್ದು, ಈ ಹಿನ್ನೆಲೆಯಲ್ಲಿ ಕಾರ್ಯೋನ್ಮುಖರಾಗಬೇಕಾಗಿದೆ ಎಂದರು.
ಇಲ್ಲಿನ ಪರಿಸರ ಹಾಗೂ ಜನ ಸಂರಕ್ಷಣೆಯ ನಿಟ್ಟಿನಲ್ಲಿ ದೊಡ್ಡದಾದ ಕಾಜೂರು ಪಳ್ಳವನ್ನು ಸಂರಕ್ಷಿಸಿ ನವೀಕರಿಸುವ ಯೋಜನೆಯನ್ನು ಹಮ್ಮಿ ಕೊಳ್ಳಲಾಗಿದೆ. ನಿಸರ್ಗದತ್ತವಾದ ಸಂಪತ್ತುಗಳನ್ನು ಹಾಳುಗೆಡಹದೆ ಅವುಗಳ ಸಂರಕ್ಷಣೆಯನ್ನು ಮಾಡುವ ಜವಾಬ್ದಾರಿ ಪ್ರತಿಯೊಬ್ಬರದ್ದು ಎಂದು ಅವರು ತಿಳಿಸಿದರು. ಬಯೋಡೈವರ್ಸಿಟಿ ಜಿಲ್ಲಾ ಸಮಿತಿ ಸಂಚಾಲಕ ಕೃಷ್ಣನ್, ಸಂಪತ್, ರೋಹನ್, ಜಾನ್ಸನ್ ಸಹಕರಿಸಿದರು. ಶಲಭ ಗಣತಿಯಲ್ಲಿ ಹತ್ತಕ್ಕೂ ಹೆಚ್ಚು ಆಸಕ್ತ ವಿದ್ಯಾರ್ಥಿಗಳು ಭಾಗವಹಿಸಿದರು.
ಗಣತಿಯಲ್ಲಿ ಕೇರಳ – ಕರ್ನಾಟಕ ರಾಜ್ಯಗಳಿಂದ 60 ಮಂದಿ ಪ್ರತಿನಿ ಧಿಗಳು ಭಾಗವಹಿಸಿದರು. ಪರಿಸರ ಹಾಗೂ ಜಲ ಸಂರಕ್ಷಣೆಯ ಅಂಗವಾಗಿ ಕಾಜೂರು ಪಳ್ಳವನ್ನು ಸಂರಕ್ಷಿಸಿ ನವೀಕರಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ನಿಸರ್ಗದತ್ತ ಸಂಪತ್ತುಗಳನ್ನು ಉಳಿಸುವ ಪ್ರಯತ್ನಗಳನ್ನು ನಡೆಸುವುದು ಅನಿವಾರ್ಯ ಎಂದು ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕಾಳಜಿ
ಪ್ರಕೃತಿ ಪ್ರೇಮಿಯಾಗಿರುವ ಜಿಲ್ಲಾಧಿಕಾರಿ ಡಾ| ಸಜಿತ್ ಬಾಬು ಅವರು ಕಿದೂರು ಪರಿಸರದ ಹಕ್ಕಿ-ಚಿಟ್ಟೆ ಹಾಗೂ ಪ್ರಾಕೃತಿಕ ಸಂಪತ್ತು ವೀಕ್ಷಿಸಿ ಈ ಬಗ್ಗೆ ಅತ್ಯಂತ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಹಿನ್ನೆಲೆಯಾಗಿ ಪ್ರವಾಸಿಗರ ಆಕರ್ಷಣೆಗೆ ಸ್ವತಃ ವಿವಿಧೆಡೆ ಭೇಟಿ ನೀಡಿ ಗುರುತಿಸಿದ ಕೇಂದ್ರಗಳಲ್ಲಿ ಕಿದೂರು ಒಂದಾಗಿದೆ. ಇಲ್ಲಿಯ ಪಕ್ಷಿ, ಕೀಟ, ಪ್ರಾಕೃತಿಕ ಕೆರೆಗಳನ್ನು ಅಭಿವೃದ್ಧಿಪಡಿಸಿ ಸಂರಕ್ಷಿತ ಪ್ರವಾಸಿ ಕೇಂದ್ರವಾಗಿ ಮುನ್ನಡೆಸುವ ದೃಷ್ಟಿಯಿಂದ ಜಿಲ್ಲಾ ಧಿಕಾರಿಗಳು ಈಗಾಗಲೇ ಇಲ್ಲಿಗೆ ಹಲವು ಬಾರಿ ಭೇಟಿ ನೀಡಿ ಯೋಜನೆಯ ರೂಪರೇಖೆಗಳನ್ನು ಸ್ವತಂತ್ರವಾಗಿ ನಿಭಾಯಿಸುತ್ತಿದ್ದಾರೆ. ಮೂಲತಃ ಪರಂಪರೆ, ಸಂಸ್ಕೃತಿ, ಪ್ರಕೃತಿ ವಿಷಯಗಳಲ್ಲಿ ಆಸಕ್ತರಾಗಿರುವ ಡಾ| ಸಜಿತ್ ಬಾಬು ಅವರಿಗೆ ಕಿದೂರು ಬಹುಮುಖ ಚಿಂತನೆಗಳ ಕೇಂದ್ರವಾಗಿ ಕಂಡಿರುವುದಾಗಿ ತಿಳಿಸಿರುವರು.
ಅತ್ಯಪೂರ್ವ ಪ್ರದೇಶ
ಕಿದೂರು ಪರಿಸರದ ಪಕ್ಷಿ ಪ್ರಭೇದ, ಚಿಟ್ಟೆಗಳು ಮತ್ತು ಪ್ರಾಕೃತಿಕ ಮಹತ್ವದ ಬಗ್ಗೆ ಹೊರ ಪ್ರಪಂಚಕ್ಕೆ ಮೊತ್ತಮೊದಲು ಪರಿಚಯಿಸಿದವರು ಕುಂಬಳೆಯ ಶಾಲಾ ಶಿಕ್ಷಕರಾದ ರಾಜು ಮಾಸ್ತರ್ ಕಿದೂರು. ಪಕ್ಷಿಪ್ರೇಮಿ ಶಿಕ್ಷಕರೆಂದೇ ಖ್ಯಾತರಾದ ರಾಜು ಮಾಸ್ತರ್ ಸುಮಾರು 3 ವರ್ಷಗಳ ಹಿಂದೆ ಕಿದೂರಿನಲ್ಲಿ ಮೊತ್ತಮೊದಲ ಬಾರಿಗೆ ಜಿಲ್ಲೆಯಲ್ಲೇ ಅತ್ಯಪೂರ್ವ ಹಕ್ಕಿಗಳಿರುವ ಪ್ರದೇಶ ಎಂದು ಗುರುತಿಸಿ ಗಮನ ಸೆಳೆದಿದ್ದರು. ಶಾಲಾ ವಿದ್ಯಾರ್ಥಿಗಳನ್ನು ಕರೆಸಿ ಅವರಿಗೂ ಮಾಹಿತಿ ನೀಡುವಲ್ಲಿ ಆಸಕ್ತರಾಗಿದ್ದರು. ಜತೆಗೆ ಕಳೆದ ವರ್ಷ ಜಿಲ್ಲೆಯಲ್ಲೇ ಮೊದಲ ಬಾರಿಗೆ ಬರ್ಡ್ಸ್ ಫೆಸ್ಟ್ ಆಯೋಜಿಸಿ ಯಶಸ್ವಿಯಾಗಿದ್ದರು.
ಜರ್ಮನ್ ದಂಪತಿಯ ಕುತೂಹಲ
ಕಿದೂರಿನಲ್ಲಿ ನಡೆದ ಶಲಭ ಸರ್ವೆ ಕಾರ್ಯಕ್ರಮದಲ್ಲಿ ಜರ್ಮನ್ ನಿವಾಸಿಗಳಾದ ಆ್ಯಂಡ್ರೋಸ್ ಹಾಗೂ ಮರಿಯಾ ದಂಪತಿ ಭಾಗವಹಿಸಿ ಕುತೂಹಲ ಮೂಡಿಸಿದರು. ಭಾರತದ ಸಂಸ್ಕೃತಿ, ಸಂಪ್ರದಾಯಗಳ ಬಗ್ಗೆ ಆಸಕ್ತರಾದ ಅವರು ಅನಿರೀಕ್ಷಿತವಾಗಿ ಕೇರಳದ ಕಾಸರಗೋಡು ಭಾಗಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಿದೂರಿನಲ್ಲಿ ನಡೆಯುತ್ತಿರುವ ಪಕ್ಷಿಪ್ರೇಮಿ ಚಟುವಟಿಕೆಗಳು ಹಾಗೂ ಇಲ್ಲಿ ವಿಶಾಲವಾಗಿ ಹರಡಿರುವ ಪಾರೆ ಪ್ರದೇಶದ ಬಗ್ಗೆ ಆಸಕ್ತಿಯನ್ನು ಹೊಂದಿ ಇಲ್ಲಿಗೆ ಆಗಮಿಸಿದ್ದರು. ಜತೆಗೆ ಶಲಭಗಳ ಗಣತಿಯಲ್ಲಿ ಭಾಗವಹಿಸಿ ಚಿತ್ರಗಳನ್ನು ಸೆರೆಹಿಡಿದರು. ಬಳಿಕ ಸಮೀಪದ ಬಾಗಿ ಅವರ ಮನೆಗೆ ಭೇಟಿ ನೀಡಿ ಬೀಡಿ ಕಟ್ಟುವ ಕಲೆಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿ ಭಾರತದ ಗ್ರಾಮೀಣ ಗುಡಿ ಕೈಗಾರಿಕೆಗಳ ಬಗ್ಗೆ ನಾವು ಪ್ರಭಾವಿತರಾಗಿದ್ದು, ಅಧ್ಯಯನದ ಆಸಕ್ತಿ ಹೊಂದಿದ್ದೇವೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು
Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ
Kumbale: ವರ್ಕಾಡಿ ಪ್ಲೈವುಡ್ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ
Kasargod: ಬೆಕ್ಕಿಗಾಗಿ ಬಾವಿಗಿಳಿದ ವಿದ್ಯಾರ್ಥಿಯ ರಕ್ಷಣೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.