ತಾಳ ತಪ್ಪುತ್ತಿರುವ ಹರತಾಳ ಬಿಜೆಪಿ ಕರೆಗೆ ಕುಂಬಳೆ, ಉಪ್ಪಳ ಬಂದ್‌!

Team Udayavani, Jul 31, 2017, 6:55 AM IST

30-kbl-9.jpg

ಕುಂಬಳೆ: ಕೇರಳ ರಾಜ್ಯದಲ್ಲಿ ರಾಜಕೀಯ ಕೊಲೆಗಳು ನಿರಂತರವಾಗಿ ಮುಂದುವರಿಯುತ್ತಿದ್ದು ಇದರ ಪ್ರತಿ
ಭಟನೆಗಾಗಿ ರಾಜಕೀಯ ಪಕ್ಷಗಳು ಹರತಾಳದ ಅಸ್ತ್ರ  ಪ್ರಯೋಗಿಸುತ್ತಿರುವುದರಿಂದ ಜನರು ಹೈರಾಣಾಗುತ್ತಿದ್ದಾರೆ.

ರಾತ್ರಿ ಕೊಲೆ ನಡೆದು ಬೆಳಗಾಗುವಷ್ಟರಲ್ಲಿ ಹರತಾಳ ಘೋಷಣೆಯಾಗಿರುತ್ತದೆ. ಇದರಿಂದ ಜನತೆ ತೀವ್ರ ಸಂಕಷ್ಟವನ್ನು ಅನುಭವಿಸಬೇಕಾಗುವುದು. ಹಳ್ಳಿಯಲ್ಲಿ ಕೇವಲ ಖಾಸಗಿ ಬಸ್‌ ಸಂಚಾರವಿರುವ ಪ್ರದೇಶದ ಜನತೆ ಹರತಾಳದ ಕಹಿ ಅನುಭವವಕ್ಕೆ ಸಿಲುಕಬೇಕಾಗಿದೆ.

ಯಾವುದಾದರೊಂದು ಪ್ರದೇಶದಲ್ಲಿ ಕೊಲೆ ಇನ್ನಿತರ ಅಹಿತಕರ ಘಟನೆ ನಡೆದಾಗ ಇಡೀ ರಾಜ್ಯದಲ್ಲಿ ಹರತಾಳ ಘೋಷಿಸಿ ರಾಷ್ಟ್ರೀಯ ನಷ್ಟ ಅನುಭವಿಸಬೇಕಾಗಿದೆ.ಇದರಿಂದ ಜನ ತತ್ತರಿಸುವಂತಾಗುವುದು. ಪೂರ್ವ ನಿಶ್ಚಿತ ಕಾರ್ಯಕ್ರಮಗಳು ಮೊಟಕುಗೊಂಡು ನಷ್ಟ ಅನುಭವಿಸ ಬೇಕಾಗುವುದು. 

ಹರತಾಳದ ಬಳಿಕ ಸರ್ವಪಕ್ಷ ಸಭೆ ಸೇರಿದಾಗ ಹರತಾಳಕ್ಕೆ ವಿರೋಧ ವ್ಯಕ್ತಪಡಿಸುವ ರಾಜ ಕೀಯ ನಾಯಕರೇ ಮುಂದೆ ತನ್ನ ರಾಜಕೀಯ ಪಕ್ಷದ ಹರತಾಳವನ್ನು ಬೆಂಬಲಿಸುವುದು ದುರಂತವಾಗಿದೆ. ಬಂದ್‌ ಮಾಡಬಾರದೆಂಬುದಾಗಿ ಉಚ್ಚ ನ್ಯಾಯಾಲಯ ತೀರ್ಪು ನೀಡಿದ ಬಳಿಕ ಬಂದ್‌ ಹರತಾಳವಾಗಿ ಮಾರ್ಪಟ್ಟಿದೆ.

ಪೂರ್ಣ ಬಂದ್‌
ರಾಜಧಾನಿ ತಿರುವನಂತಪುರದಲ್ಲಿ ಆರ್‌.ಎಸ್‌.ಎಸ್‌.ಕಾರ್ಯವಾಹ ರಾಜೇಶ್‌ ಕೊಲೆಯನ್ನು ಖಂಡಿಸಿ ರವಿವಾರದಂದಿನ ಬಿಜೆಪಿ ಕರೆ ನೀಡಿದ ಹರತಾಳದಲ್ಲಿ ಕುಂಬಳೆ ಉಪ್ಪಳ ಮೊದಲಾದೆಡೆಗಳಲ್ಲಿ ಪೇಟೆ ಪೂರ್ಣ ಬಂದ್‌ ಆಗಿದ್ದು ಜನಸಂಚಾರ ವಿರಳವಾಗಿತ್ತು. ರಜಾ ದಿನವಾದ ಕಾರಣ ಸರಕಾರಿ ಅರೆ ಸರಕಾರಿ ಮತ್ತು ಬ್ಯಾಂಕ್‌, ಶಾಲೆಗಳಿಗೆ ತೆರಳುವವರಿಗೆ ಒಂದು ಬೋನಸ್‌ ರಜೆ ನಷ್ಟವಾಯಿತು. ಸರಕಾರಿ, ಖಾಸಗಿ ಬಸ್‌ ಸಂಚರಿಸದಿದ್ದರೂ ಕೆಲವು ಖಾಸಗಿ ವಾಹನಗಳು ಭಯದಿಂದ ವಿರಳವಾಗಿ ಸಂಚರಿಸಿದವು. ತಾಳ ತಪ್ಪುತ್ತಿರುವ ಹರತಾಳದಿಂದ ರಾಜ್ಯದ ಅಭಿವೃದ್ಧಿ ಕುಂಟಿತವಾಗುತ್ತಿದೆ. ವಿದ್ಯಾಲಯಗಳಲ್ಲಿ ಶಿಕ್ಷಣ ಮಟ್ಟ ಕುಸಿಯುತ್ತಿದೆ ಎಂಬ ಆರೋಪ ಬಲವಾಗಿದೆ.ಆದರೆ ಯಾವ ಪಕ್ಷಗಳೂ ಹರತಾಳದಿಂದ ಹಿಂಜರಿಯಲು ಸಿದ್ಧವಿಲ್ಲ.

ಕೊಲೆಯನ್ನು ಪ್ರತಿಭಟಿಸಿ ಕುಂಬಳೆಯಲ್ಲಿ ಬಿ.ಜೆ.ಪಿ. ವತಿಯಿಂದ ಪ್ರತಿಭಟನೆ ನಡೆಯಿತು. ಪಕ್ಷದ ನಾಯಕರಾದ ಸುರೇಶ್‌ ಕುಮಾರ್‌ ಶೆಟ್ಟಿ, ಕೆ. ವಿನೋದನ್‌, ಎಚ್‌.ಸತ್ಯಶಂಕರ ಭಟ್‌, ಎಂ .ಶಂಕರ ಆಳ್ವ , ಬಾಬು ಗಟ್ಟಿ, ಶಂಕರ ಕುಂಟಂಗರಡ್ಕ, ಕೆ. ರಮೇಶ್‌ ಭಟ್‌, ಕೆ. ಸುಧಾಕರ ಕಾಮತ್‌, ದಿನೇಶ್‌ ಆರಿಕ್ಕಾಡಿ, ಹರೀಶ್‌ ಗಟ್ಟಿ, ಸುಜಿತ್‌ ರೈ, ಅನಿಲ್‌ ಶೆಟ್ಟಿ ಮುಂತಾದವರು ನೇತೃತ್ವ ನೀಡಿದರು.

ಟಾಪ್ ನ್ಯೂಸ್

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Maharashtra Election: Focus on winning the booth: Modi’s Mantra to Workers

Maharashtra Election: ಬೂತ್‌ ಗೆಲ್ಲುವತ್ತ ಗಮನ ಹರಿಸಿ: ಕಾರ್ಯಕರ್ತರಿಗೆ ಮೋದಿ ಕರೆ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

1

Lawyer Jagadish: ಮತ್ತೆ ಬಿಗ್‌ ಬಾಸ್‌ಗೆ ಕಾರ್ಯಕ್ರಮಕ್ಕೆ ಲಾಯರ್‌ ಜಗದೀಶ್‌ ಎಂಟ್ರಿ..!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police

Kumbala: ಸಂತ್ರಸ್ತೆಯ ತಾಯಿ ಆತ್ಮಹ*ತ್ಯೆ: ಸಚಿತಾ ರೈ ವಿರುದ್ಧ ಮತ್ತೊಂದು ದೂರು ದಾಖಲು

Arrest

Madikeri: ಕುಶಾಲನಗರ ಕಳವು ಪ್ರಕರಣ: ಇಬ್ಬರ ಬಂಧನ

Untitled-1

Kasaragod ಅಪರಾಧ ಸುದ್ದಿಗಳು

Untitled-5

Kasaragod: ಮಾನ್ಯ ಅಯ್ಯಪ್ಪ ಭಜನ ಮಂದಿರದಿಂದ ಕಳವು; ಓರ್ವನ ಬಂಧನ

Arrest

Kasaragodu: ಆಸ್ತಿ ವಿವಾದ: ಅಣ್ಣನ ಕೊಲೆ, ಇಬ್ಬರಿಗೆ ಇರಿತ; ತಮ್ಮನ ಸೆರೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.