ಬದಿಯಡ್ಕ ಬಿರುಸಿನ ಮತದಾನ
Team Udayavani, Apr 23, 2019, 6:47 PM IST
ಕಾಸರಗೋಡು: ಲೋಕಸಭಾ ಚುನಾವಣೆಗೆ ಜಿಲ್ಲೆ ಸಂಪೂರ್ಣ ಸಿದ್ಧಗೊಂಡಿದ್ದು ಬೆಳಗಿನಿಂದಲೇ ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.
ಕಾಸರಗೋಡಿನ ಬದಿಯಡ್ಕದಲ್ಲಿನ ನೆಟ್ಟಣಿಗೆ , ಬೆಳ್ಳೂರು , ಬೆಳಿಂಜ , ಚೆಂಗಳ ಹಾಗೂ ಪೆರಡಾಲ ಪ್ರದೇಶಗಳಲ್ಲಿ ಮತದಾರರು ಅತಿ ಉತ್ಸಾಹದಿಂದ ಮತದಾನ ಮಾಡಿದರು.
ಕಾಸರಗೋಡು ಲೋಕಸಭೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 13,63,937 ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಅವಕಾಶ ಪಡೆದಿದ್ದಾರೆ.
ಬದಿಯಡ್ಕ:ನೆಟ್ಟಣಿಗೆ ಶಾಲೆಯಲ್ಲಿ ಮುಂಜಾನೆಯೇ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ ಚಲಾಯಿಸಿದರು.
ಬದಿಯಡ್ಕ: ಬೆಳ್ಳೂರು ಪಂಚಾಯತಿನ ಜಿಎಚ್‌ಎಸ್ ನಾಟೆಕಲ್ ಶಾಲೆಗೆ ಮತ ಚಲಾಯಿಸಲು ಆಗಮಿಸಿದ ಹಿರಿಯ ಮಹಿಳೆ. ಹಿರಿಯರಿಗೆ ಸರತಿ ಸಾಲಲ್ಲಿ ನಿಲ್ಲದೆ ನೇರವಾಗಿ ಮತಚಲಾಯಿಸುವ ವ್ಯವಸ್ಥೆಯನ್ನು ಎಲ್ಲಾ ಕಡೆಗಳಲ್ಲೂ ಮಾಡಲಾಗಿದೆ.
ಬದಿಯಡ್ಕ: ಬೆಳಿಂಜ ಶಾಲೆಯ 76ನೇ ಬೂತ್‌ನಲ್ಲಿ ಹಕ್ಕು ಚಲಾಯಿಸಲು ಸಾಲಲ್ಲಿ ನಿಂತು ಕಾಯುತ್ತಿರುವ ಪ್ರಜ್ಞಾವಂತ ಪ್ರಜೆಗಳು.
ಬದಿಯಡ್ಕ: ಮುಂಜಾನೆ ಬೆಳಿಂಜ 74ನೇ ಮತಗಟ್ಟೆಯಲ್ಲಿ ಮಹಿಳೆಯರು ಹಾಗೂ ಪುರುಷರು ಮತ ಚಲಾಯಿಸಲು ಸಾಲಲ್ಲಿ ನಿಂತಿರುವ ದೃಶ್ಯ.
ಬದಿಯಡ್ಕ:ಚೆಂಗಳ ಪಂಚಾಯತಿನ ಮಾವಿನಕಟ್ಟೆ ಶಾಲೆಯಲ್ಲಿ ಮತದಾರರು ಅವಕಾಶಕ್ಕಾಗಿ ಕಾಯುತ್ತಿರುವುದು.
ಬದಿಯಡ್ಕ:ಜಿ.ಎಚ್.ಎಸ್ ಪೆರಡಾಲ ಶಾಲೆಯಲ್ಲಿ ಮತದಾನ ಮಾಡಲು ಸಾಲಾಗಿ ನಿಂತಿರುವ ಮಹಿಳೆಯರು ಹಾಗೂ ಪುರುಷರು.
ಬದಿಯಡ್ಕ: ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಜಿವಿಎಚ್‌ಎಸ್‌ಎಸ್ ನೆಲ್ಲಿಕುನ್ನು ಶಾಲೆಯ 141ನೇ ಮತಗಟ್ಟೆಯಲ್ಲಿ ತಮ್ಮ ಮತ ಚಲಾಯಿಸಿದರು.
ಬದಿಯಡ್ಕ:ಮೊಗ್ರಾಲ್ ಶಾಲಾ ಪರಿಸರದಲ್ಲಿ ಮತ ಚಲಾಯಿಸಲು ಆಗಮಿಸಿದ ತಾಯಿ ಮಗುವಿಗೆ ಐಸ್‌ಕ್ರೀಂ ತಿನ್ನಿಸುತ್ತಿರುವುದು.
ಬದಿಯಡ್ಕ:ಮೊಗ್ರಾಲ್ 158ನೇ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಲು ಸರತಿ ಸಾಲಿನಲ್ಲಿ ಕಾಯುತ್ತಿರುವ ಪುರುಷರು ಹಾಗೂ ಮಹಿಳೆಯರು.
ಬದಿಯಡ್ಕ: ಕಾಸರಗೋಡಿನ ಮತಗಟ್ಟೆಯೊಂದರಲ್ಲಿ ತಮ್ಮ ಗುರುತುಚೀಟಿಯನ್ನು ತೋರಿಸುತ್ತಿರುವ ಮಹಿಳೆಯರು.
ಬದಿಯಡ್ಕ:ಏರುತ್ತಿರುವ ಬಿಸಿಲಿನ ಬೇಗೆಯಿಂದಲಾಗಿ ಹೆಚ್ಚಿನ ಮತದಾರರೂ ಆಟೋ ರಿಕ್ಷಾವನ್ನು ಆಶ್ರಯಿಸಿ ಮತಗಟ್ಟೆಗಳಿಗೆ ಆಗಮಿಸುವುದು ಜಿಲ್ಲೆಯಲ್ಲಿ ಕಂಡುಬರುತ್ತಿತ್ತು.
ಬದಿಯಡ್ಕ:ರಾಜ್ಯ ಕಂದಾಯ ಸಚಿವರಾದ ಇ.ಚಂದ್ರಶೇಖರನ್ ತನ್ನ ಕುಟುಂಬದೊಂದಿಗೆ ಕೋಳಿಯಡ್ಕದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಸಿದರು.
ಬದಿಯಡ್ಕ:ರಾಜ್ಯ ಕಂದಾಯ ಸಚಿವರಾದ ಇ.ಚಂದ್ರಶೇಖರನ್ ತನ್ನ ಕುಟುಂಬದೊಂದಿಗೆ ಕೋಳಿಯಡ್ಕದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತ ಚಲಾಯಸಿದರು.
ಉರಿಬಿಸಿಲಿನ ಬೇಗೆಗೆ ತಡೆಯಲಾಗದ ದಾಹ. ಶಾಲೆಯ ಬಾವಿಯಿಂದ ನೀರು ಎಳೆದು ದಾಹ ತಣಿಸುತ್ತಿರುವ ಮಹಿಳೆ. ಜಿಎಲ್‌ಪಿಎಸ್ ಉದ್ಯಾವನದಲ್ಲಿ ಕಂಡು ಬಂದ ದೃಶ್ಯ.
ಬದಿಯಡ್ಕ; ಜಿಎಚ್‌ಎಸ್‌ಎಸ್ ಮಂಗಲ್ಪಾಡಿಯಲ್ಲಿ ಕುಟುಂಬಶ್ರೀ ಉದ್ಯೋಗಸ್ಥರಿಂದ ಊಟದ ವ್ಯವಸ್ಥೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.