ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ರಕ್ತದಾನ ಶಿಬಿರ
Team Udayavani, Apr 9, 2019, 3:08 PM IST
ಬದಿಯಡ್ಕ : ನಿವೇದಿತಾ ಸೇವಾ ಮಿಷನ್ ನೀರ್ಚಾಲು ಹಾಗೂ ಮುಗು ವಾಟರ್ ಶೆಡ್ ಅಶ್ರಯದಲ್ಲಿ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ರಕ್ತದಾನ ಶಿಬಿರ ನಡೆಸಲಾಯಿತು.
ಪ್ರಸಿದ್ಧ ದಂತವೈದ್ಯ ಡಾ. ಮುರಳೀಮೋಹನ ಚೂಂತಾರು ಶಿಬಿರವನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ ಓರ್ವ ವ್ಯಕ್ತಿಯು ಪ್ರತೀ ಆರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರ ಮೂಲಕ ಆರೋಗ್ಯವಂತ ನಾಗಿರುತ್ತಾನೆ. ಯಾವುದೇ ಅಂಜಿಕೆಯಿಲ್ಲದೆ ಆರೋಗ್ಯವಂತ ವ್ಯಕ್ತಿ ರಕ್ತದಾನವನ್ನು ಮಾಡಬಹುದಾಗಿದೆ. ಸಂಘಟನೆಗಳು ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳುವುದರಿಂದ ಅನಿವಾರ್ಯ ಸಂದರ್ಭಗಳಲ್ಲಿ ಜನತೆಗೆ ಉಪಯೋಗವಾಗುತ್ತದೆ ಎಂದು ರಕ್ತದಾನದ ಮಹತ್ವದ ಕುರಿತು ವಿವರಿಸಿದರು.
ನಿವೇದಿತಾ ಸೇವಾ ಮಿಷನ್ ಹಾಗೂ ಮುಗು ವಾಟರ್ ಶೆಡ್‌ನ ಅಧ್ಯಕ್ಷ ಜಯದೇವ ಖಂಡಿಗೆ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ನಿವೃತ್ತ ಮುಖ್ಯೋಪಾಧ್ಯಾಯ ಅಪ್ಪಣ್ಣ ಮಾಸ್ಟರ್ ಹಾಗೂ ತತ್ವಮಸಿ ಪುದುಕೋಳಿಯ ಅಧ್ಯಕ್ಷ ಪುದುಕೋಳಿ ಶ್ರೀಕೃಷ್ಣ ಭಟ್ ಶುಭಾಶಂಸನೆಗೈದರು. ಗೋಪಾಲಕೃಷ್ಣ ಭಟ್ ಚುಳ್ಳಿಕ್ಕಾನ ಮಲ್ಲಡ್ಕ ಸ್ವಾಗತಿಸಿ, ಹರಿಪ್ರಸಾದ್ ಪೆರ್ವ ಧನ್ಯವಾದ ಸಮರ್ಪಿಸಿದರು. ಕಾಸರಗೋಡು ಸರಕಾರಿ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ವಿಭಾಗದ ಡಾ. ಸ್ಮಿತಾ ಹಾಗೂ ತಂಡದವರು ಸಹಕರಿಸಿದರು. 22 ಜನ ದಾನಿಗಳು ರಕ್ತದಾನ ಮಾಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.