![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jun 16, 2019, 6:10 AM IST
ಹೊಸಂಗಡಿ: ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಚೂಂತಾರು ಸರೋಜಿನಿ ಭಟ್ ಪ್ರತಿಪಾuನ ಇದರ ಆಶ್ರಯದಲ್ಲಿ ಜಿಲ್ಲಾ ವೆನ್‌ಲಾಕ್ ಆಸ್ಪತ್ರೆ ಮಂಗಳೂರು ಇದರ ಸಹಕಾರದೊಂದಿಗೆ ಹೊಸಂಗಡಿ ಸುರûಾ ದಂತ ಚಿಕಿತ್ಸಾಲಯದಲ್ಲಿ ರಕ್ತದಾನ ಶಿಬಿರ ಶುಕ್ರವಾರ ನಡೆಯಿತು.
ಶಿಬಿರ ಉದ್ಘಾಟಿಸಿದ ಸಾಮಾಜಿಕ ಮುಂದಾಳು ಗೋಪಾಲ ಶೆಟ್ಟಿ ಅರಿಬೈಲು ಮಾತನಾಡಿ, ರಕ್ತದಾನ ಬಹಳ ಪವಿತ್ರವಾದ ದಾನವಾಗಿದ್ದು, ರಕ್ತದಾನದಿಂದ ಮಾತ್ರ ಹೃದಯಗಳನ್ನು ಬೆಸೆಯಲು ಸಾಧ್ಯ ಎಂದರು.
ಶ್ರೀ ಬ್ರಾಹ್ಮರಿ ಸಮಾಜ ಸೇವಾ ಸಂಸ್ಥೆಯ ಸಂಸ್ಥಾಪಕ ಸುಖೇಶ್ ಬೆಜ್ಜ, ಕಲ್ಲೂರು ಎಜುಕೇಶನ್ ಟ್ರಸ್ಟ್ ನ ಅಬ್ದುಲ್, ಮಂಜೇಶ್ವರ ಯೂತ್ ಮುಸ್ಲಿಂ ಲೀಗ್ ಉಪಾಧ್ಯಕ್ಷ ರಫೀಕ್ ಯು.ಎಮ್, ವೆನ್‌ಲಾಕ್ ಆಸ್ಪತ್ರೆಯ ಹಿರಿಯ ವೈಧ್ಯಾಧಿಕಾರಿ ಶರತ್ ರಾವ್, ಹಿರಿಯ ತಾಂತ್ರಿಕ ತಜ್ಞ ಆಂಟೋನಿ, ಅಶೋಕ್, ಲತಾ ಮುಂತಾದವರು ಉಪಸ್ಥಿತರಿದ್ದರು.
ಚೂಂತಾರು ಸರೋಜಿನಿ ಪ್ರತಿಷ್ಠಾನ ಕಾರ್ಯದರ್ಶಿ ಡಾ| ಮುರಲೀ ಮೋಹನ್ ಚೂಂತಾರು ಪ್ರಾಸ್ತವಿಕವಾಗಿ ಮಾತನಾಡಿದರು. ವೆನ್‌ಲಾಕ್ ಆಸ್ಪತ್ರೆಯ ವೈದ್ಯರು ಮತ್ತು ತಂತ್ರಜ್ಞರು ಈ ಶಿಬಿರವನ್ನು ನಡೆಸಿಕೊಟ್ಟರು. ಬೆಳಗ್ಗೆ 10ರಿಂದ 1 ಗಂಟೆಯ ವರೆಗೆ ನಡೆದ ಈ ಶಿಬಿರದಲ್ಲಿ ಸುಮಾರು 22 ಮಂದಿ ರಕ್ತದಾನ ಮಾಡಿದರು.
ಸುರûಾ ದಂತ ಚಿಕಿತ್ಸಾಲಯದ ರಮ್ಯ, ರಶ್ಮಿ, ರೋಹಿಣಿ, ಯಶಸ್ವಿನಿ ಮತ್ತು ವಾಣಿ ಉಪಸ್ಥಿತರಿದ್ದರು. ರಕ್ತದಾನ ಮಾಡಿದ ಎಲ್ಲಾ ರಕ್ತದಾನಿಗಳಿಗೆ ರಕ್ತದಾನ ಜೀವದಾನ ಎಂಬ ಪುಸ್ತಕವನ್ನು ಉಚಿತವಾಗಿ ಹಂಚಿ ರಕ್ತದಾನದ ಬಗ್ಗೆ ಜಾಗƒತಿ ಮೂಡಿಸಲಾಯಿತು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.