ಸೇವಾ ಭಾರತಿಯಿಂದ ರಕ್ತದಾನ ಶಿಬಿರ
Team Udayavani, Sep 24, 2019, 5:52 AM IST
ಉಪ್ಪಳ : ಜನಾರ್ದನ ಪ್ರತಾಪನಗರ ಅವರ ಸ್ಮರಣಾರ್ಥ ಸೇವಾ ಭಾರತಿ ಮಂಗಲ್ಪಾಡಿ ಹಾಗೂ ಕೆ.ಎಂ.ಸಿ. ಹಾಗೂ ವೆನಾÉಕ್ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರ ಹಾಗೂ ಆರೋಗ್ಯ ಮಾಹಿತಿ ಶಿಬಿರ ಉಪ್ಪಳದ ಐಲ ಶ್ರೀ ದುರ್ಗಾಪರಮೇಶ್ವರಿ ಸಭಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಆರ್.ಎಸ್.ಎಸ್.ನ ಮಂಗಳೂರು ವಿಭಾ ಗದ ಸಂಘ ಚಾಲಕರಾದ ಗೋಪಾಲ ಚೆಟ್ಟಿಯಾರ್ ಅವರು ನಡೆಸಿ ಮಾತನಾಡುತ್ತಾ ಭಾರತ ಅತಿ ಹೆಚ್ಚು ಯುವಕರು ಇರುವ ದೇಶ. ಆದರೂ ಇತ್ತೀಚೆಗೆ ರಕ್ತದ ಆವಶ್ಯಕತೆಯೂ ಹೆಚ್ಚಾಗುತ್ತಿದೆ. ಆ ನಿಟ್ಟಿನಲ್ಲಿ ಎಲ್ಲಾ ಯುವಕರು ರಕ್ತದಾನ ಮಾಡುವಂತಾಗಬೇಕು ಎಂದರು. ರಕ್ತ ನೀಡುವುದರಿಂದ ಯಾವುದೇ ತೊಂದರೆ ಇಲ್ಲ. ಹಾಗಾಗಿ ಈ ಬಾರಿ ರಕ್ತ ನೀಡಿದವರು ಮುಂದಿನ ಬಾರಿ ಹೊಸಬರನ್ನು ರಕ್ತ ನೀಡುವಂತೆ ಪ್ರೇರೇಪಣೆ ನೀಡಬೇಕು ಹಾಗೂ ಸೇವಾ ಭಾರತಿ ಮಂಗಲ್ಪಾಡಿ ವರ್ಷದಲ್ಲಿ ಒಂದಕ್ಕಿಂತ ಹೆಚ್ಚಿನ ಬಾರಿ ಇಂತಹ ಕಾರ್ಯಕ್ರಮ ನಡೆಸುವಂತಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕ್ಯಾಂಪ್ಕೋ ಅಧ್ಯಕ್ಷರಾದ ಎಸ್.ಆರ್. ಸತೀಶ್ಚಂದ್ರ ಅವರು ಮಾತನಾಡುತ್ತ ಇಂದು ಆಯೋಜಿಸಲ್ಪಟ್ಟ ರಕ್ತದಾನ ಶಿಬಿರವು ಸಮಾಜಕ್ಕೋಸ್ಕರ ಬದುಕಿ ತ್ಯಾಗ ಮಾಡಿದವರ ನೆನೆಪಿನಲ್ಲಿ ನಡೆಯುತ್ತಿದೆ. ಭಾರತ ದೇಶ ಇಂದು ಇಡೀ ವಿಶ್ವದಲ್ಲಿ ಇಷ್ಟೊಂದು ಗೌರವ ಹಾಗೂ ಮಾನ್ಯತೆ ಸಿಗಲು ಶಂಕರಾಳ್ವ ಹಾಗೂ ಜನಾರ್ದನ ರಂತಹ ಸಾವಿರ ಸಾವಿರ ಕಾರ್ಯಕರ್ತರ ಪರಿಶ್ರಮ ಹಾಗೂ ತ್ಯಾಗ ಕಾರಣ. ಅಂತಹವರ ತ್ಯಾಗದ ಪ್ರೇರಣೆ ನಿರಂತರ ವಾಗಿ ನಮಗೆ ಸಿಗಲು ಇಂತಹ ರಕ್ತದಾ ನದಂತಹ ಕಾರ್ಯಕ್ರಮ ಆವಶ್ಯಕ ಎಂಬುದಾಗಿ ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಐಲ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ನಾರಾಯಣ ಹೆಗ್ಡೆ ಕೋಡಿಬೈಲು ಅವರು ವಹಿಸಿದ್ದರು. ಕೆ.ಎಂ.ಸಿ. ಹಾಗೂ ವೆನಾÉಕ್ ಆಸ್ಪತ್ರೆ ಮಂಗಳೂರು ಇದರ ಪ್ರತಿನಿಧಿಯಾಗಿ ಡಾ|ರತ್ನಂ ಉಪಸ್ಥಿತರಿದ್ದರು. ಸೇವಾ ಭಾರತಿ ಮಂಗಲ್ಪಾಡಿಯ ಕಾರ್ಯದರ್ಶಿ ಸತೀಶ ಶೆಟ್ಟಿ ಒಡ್ಡಂಬೆಟ್ಟು ಅವರು ಪ್ರಾಸ್ತಾವಿಕ ನುಡಿದು ಸ್ವಾಗತಿಸಿದರು. ರಘು ಚೆರುಗೋಳಿ ವಂದಿಸಿದರು. ಶ್ರೀಧರ ಶೆಟ್ಟಿ ಪರಂಕಿಲ ಕಾರ್ಯಕ್ರಮ ನಿರೂಪಿಸಿದರು. ಒಟ್ಟು 102 ಮಂದಿ ಈ ಕಾರ್ಯಕ್ರಮದಲ್ಲಿ ರಕ್ತದಾನವನ್ನು ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.