ಬಿ.ಎಂ.ಎಸ್. 24 ಗಂಟೆ ಧರಣಿ ಸತ್ಯಾಗ್ರಹ ಸಂಪನ್ನ
Team Udayavani, Oct 12, 2018, 6:00 AM IST
ಕಾಸರಗೋಡು: ಆಯುಷ್ಮಾನ್ ಭಾರತ ಯೋಜನೆಗೆ ಕೇರಳ ಸಹಿ ಹಾಕಬೇಕು, ಕಡಿತಗೊಳಿಸಿದ ಸಾಮಾಜಿಕ ಸುರಕ್ಷಾ ಪಿಂಚಣಿಯ ಪ್ರಯೋಜನಗಳನ್ನು ಪುನ: ಸ್ಥಾಪಿಸಬೇಕು, ಪ್ರಳಯವು ಸರಕಾರದ ಸೃಷ್ಟಿಯಾಗಿದೆ.
ನಷ್ಟ ಪರಿಹಾರ ಪ್ರಕ್ರಿಯೆಯಲ್ಲಿ ಜನವಿರೋಧಿ ನೀತಿಗಳನ್ನು ಕೊನೆಗೊಳಿಸಬೇಕು, ಕೆಎಸ್‌ಆರ್‌ಟಿಸಿಯನ್ನು ಖಾಸಗಿ ಮತ್ತು ಸರಕಾರಿ ವಲಯದ ವ್ಯಾಪ್ತಿಗೆ ನೀಡುವ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು, ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿಯಲ್ಲಿ ಸೇರಿಸಲು ಆದ್ಯತೆ ನೀಡಿ, ನಿತ್ಯೋಪಯೋಗಿ ಸಾ.ಗ್ರಿಗಳ ದರ ಕಡಿತಗೊಳಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಬಿಎಂಎಸ್ ಕಾಸರಗೋಡು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕರಂದಕ್ಕಾಡ್ ಶಿವಾಜಿನಗರದಲ್ಲಿ ಆಯೋಜಿಸಿದ 24 ಗಂಟೆಗಳ ಹಗಲಿರುಳು ಧರಣಿ ಸತ್ಯಾಗ್ರಹ ಗುರುವಾರ ಬೆಳಗ್ಗೆ ಸಂಪನ್ನಗೊಂಡಿತು.
ಸಮಾರೋಪ ಸಮಾರಂಭವನ್ನು ಬಿಎಂಎಸ್ ರಾಜ್ಯ ಕಾರ್ಯದರ್ಶಿ ಪಿ. ಶಶಿಧರನ್ ಉದ್ಘಾಟಿಸಿ ಮಾತನಾಡಿದರು. ಬಿಎಂಎಸ್ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷ ಕೆ.ನಾರಾಯಣ ಅಧ್ಯಕ್ಷತೆ ವಹಿಸಿದರು.
ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಕೆ.ಎ. ಶ್ರೀನಿವಾಸನ್, ಜಿಲ್ಲಾ ಉಪಾಧ್ಯಕ್ಷ ಟಿ. ಕೃಷ್ಣನ್, ಎಂ. ಬಾಬು. ಜಿಲ್ಲಾ ಜತೆ ಕಾರ್ಯದರ್ಶಿಗಳಾದ ಸತ್ಯನಾಥ್, ಕೆ.ವಿ. ಬಾಬು, ಭಾಸ್ಕರನ್, ಗೋವಿಂದನ್, ಜಿಲ್ಲಾ ಕೋಶಾಧಿಕಾರಿ ಅನಿಲ್ ಬಿ.ನಾಯರ್, ಬೇಬಿ ಟೀಚರ್, ಓಮನಾ ಮೊದಲಾದವರು ಶುಭಹಾರೈಸಿದರು. ಜಿಲ್ಲಾ ಜತೆ ಕಾರ್ಯದರ್ಶಿ ದಿನೇಶ್ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.