ಕವ್ವಾಯಿ ಹೊಳೆಯಲ್ಲಿ ರಂಜಿಸಿದ ದೋಣಿ ಸ್ಪರ್ಧೆ
Team Udayavani, Sep 7, 2017, 9:20 AM IST
ಕಾಸರಗೋಡು: ಜಿಲ್ಲೆಯ ಹಿನ್ನೀರ ಪ್ರಕೃತಿ ಸುಂದರ ಪ್ರದೇಶ ತೃಕ್ಕರಿಪುರದ ಕವ್ವಾಯಿ ನದಿ ತೀರದಲ್ಲಿ ನಡೆದ ಮೂರನೇ ವರ್ಷದ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಸ್ಮಾರಕ ದೋಣಿ ಸ್ಪರ್ಧೆ ಜನಮನ ಸೂರೆಗೊಂಡು ರಂಜಿಸಿತು. ಮೆಟ್ಟಮಲ್ ಬ್ರದರ್ ಸ್ಥಳೀಯ ಕ್ಲಬ್‌ಗಳ ಸಹಕಾರದೊಂದಿಗೆ ಆಯೋಜಿಸಿದ ಉತ್ತರ ಮಲಬಾರ್ ಜಲೋತ್ಸವ ದೋಣಿ ಸ್ಪರ್ಧೆಯಲ್ಲಿ ಕಣ್ಣೂರು – ಕಾಸರಗೋಡು ಜಿಲ್ಲೆಯ ಒಟ್ಟು 22 ಪ್ರತಿಷ್ಠಿತ ತಂಡಗಳು ಭಾಗವಹಿಸಿದ್ದವು.
ಒಂದೂವರೆ ಕಿ.ಮೀ. ದೂರದ ದೋಣಿ ಸ್ಪರ್ಧೆಯನ್ನು ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ಸೈಮನ್ಸ್ ನಿಶಾನೆ ತೋರಿ ಉದ್ಘಾಟಿಸಿದ್ದರು. ಮಂಗಳವಾರ ಬೆಳಗ್ಗೆ ನಡೆದ ವಾಟರ್ ಅಥಾರಿಟಿ ಜಲ ಪ್ರದರ್ಶನವು ನೋಡುಗರನ್ನು ಮನಸೂರೆಗೊಳಿಸಿತು. ಕುಟ್ಟನಾಡ್ ಜಲೋತ್ಸವದ ಹೆಸರುವಾಸಿ ವೀಕ್ಷಕ ವಿವರಣೆಗಾರ ಜೊಸೆಫ್ ಎಳಂಕುಳಂ, ಜೋನಿ ಭಾಗವಹಿಸಿದ್ದರು.
ಕವ್ವಾಯಿ ತೀರದ ದೋಣಿ ಪ್ರದರ್ಶನ ಸ್ಪರ್ಧೆಯು ನದಿ ತೀರವನ್ನು ಮಾಲಿನ್ಯ ಮುಕ್ತವಾಗಿಸಿ ಪ್ರಕೃತಿ ಸೌಂದರ್ಯವನ್ನು ಕಾಪಾಡುವ ಸಂದೇಶ ನೀಡಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿ.ಪಂ. ಅಧ್ಯಕ್ಷ ಎ.ಜಿ.ಸಿ. ಬಶೀರ್, ಶಾಸಕ ಎಂ. ರಾಜಗೋಪಾಲ್ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasaragod Crime News: ರಸ್ತೆಯಲ್ಲಿ ಬಿಯರ್ ಬಾಟ್ಲಿ ಒಡೆದ ಮೂವರ ಬಂಧನ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kasaragod: ರಸ್ತೆಯಲ್ಲಿ ಬಿಯರ್ ಬಾಟ್ಲಿ ಎಸೆದು ಘರ್ಷಣೆಗೆ ಯತ್ನ; ಕೇಸು ದಾಖಲು
Kasaragod ಅಪರಾಧ ಸುದ್ದಿಗಳು; ತಂಬಾಕು ಉತ್ಪನ್ನಗಳ ಸಹಿತ ಇಬ್ಬರ ಬಂಧನ
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.