Madikeri; ಬಾಡಿಗೆಗೆ ಕೊಳವೆ ಬಾವಿ: ಸಚಿವ ಕೃಷ್ಣ ಬೈರೇಗೌಡ
Team Udayavani, Feb 6, 2024, 11:05 PM IST
ಮಡಿಕೇರಿ: ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುಂಜಾಗ್ರತೆ ವಹಿಸಬೇಕು. ಬರದ ಪರಿಸ್ಥಿತಿ ನಿರ್ವಹಿಸುವ ಸಲುವಾಗಿ ರಾಜ್ಯದಾದ್ಯಂತ ಈಗಾಗಲೇ ಸರಕಾರ ಸುಮಾರು 3 ಸಾವಿರ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಆಧಾರದಲ್ಲಿ ಪಡೆದುಕೊಂಡಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಮಡಿಕೇರಿಯ ಜಿಲ್ಲಾ ಪಂಚಾಯತ್ ಸಭಾಂಗಣ ದಲ್ಲಿ ನಡೆದ ಕಂದಾಯ ಇಲಾಖಾ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ತಾಲೂಕುವಾರು ಕುಡಿಯವ ನೀರಿನ ಸಮಸ್ಯೆ ಎದುರಾಗದಂತೆ ನೋಡಿ ಕೊಳ್ಳಲು, ಟ್ಯಾಂಕರ್‌ಗಳನ್ನು ವ್ಯವಸ್ಥೆ ಮಾಡಿ ಕೊಳ್ಳಬೇಕು. ಈ ಸಂಬಧ ಟೆಂಡರ್ ಕರೆದು ಟ್ಯಾಂಕರ್ ವ್ಯವಸ್ಥೆ ಮಾಡಿಕೊಳ್ಳಬೇಕು. ಕೊನೇ ಕ್ಷಣದಲ್ಲಿ ನೀರಿನಪೂರೈಕೆಯಲ್ಲಿ ಲೋಪವಾಗಬಾರದೆಂದು ಹೇಳಿದರು.
ಪರಿಹಾರ ಬಿಡುಗಡೆ
ರಾಜ್ಯಾದ್ಯಂತ ಫ್ರೂಟ್ ಆ್ಯಪ್ ಮೂಲಕ ನೋಂದಣಿ ಮಾಡಿಕೊಂಡ 31 ಲಕ್ಷ ಬೆಳೆಗಾರರಿಗೆ 650 ಕೋಟಿ ರೂ. ಪರಿಹಾರವನ್ನು ಈಗಾಗಲೆ ಒದಗಿಸಲಾಗಿದೆ. ಇದರ ನಡುವೆಯೂ ಪರಿಹಾರ ದೊರಕದಿರುವ ಪ್ರಕರಣ ಗಳಿದ್ದಲ್ಲಿ, ಅದನ್ನು ಬಗೆಹರಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾಹಿತಿ ನೀಡಿ, ಕೊಡಗು ಜಿಲ್ಲೆಯಲ್ಲಿ ಫ್ರೂಟ್ ಆ್ಯಪ್ ಮೂಲಕ ನೋಂದಣಿ ಮಾಡಿಕೊಂಡ 11,303 ಕೃಷಿಕ ಫಲಾನುಭವಿಗಳಿಗೆ 1.81 ಕೋಡಿ ರೂ. ಪಾವತಿಸಲಾಗಿದೆ ಎಂದು ತಿಳಿಸಿದರು.
ಜಮ್ಮಾಬಾಣೆ ಸಮಸ್ಯೆ ಶೀಘ್ರ ಇತ್ಯರ್ಥ
ಜಮ್ಮಾಬಾಣೆ ಸಮಸ್ಯೆ ಇತ್ಯರ್ಥಕ್ಕೆ ಆಂದೋಲನದ ಮಾದರಿಯಲ್ಲಿ ಕ್ರಮ ಕೈಗೊಳ್ಳ ಲಾಗುತ್ತದೆ ಎಂದು ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ ಭರವಸೆ ನೀಡಿದ್ದಾರೆ.
ಜಮ್ಮಾಬಾಣೆ ಸಮಸ್ಯೆ ನಾಲ್ಕಾರು ವರ್ಷಗಳಿಂದ ಹಾಗೇ ಉಳಿದಿದೆ. ಈ ಬಗ್ಗೆ ಜಿಲ್ಲೆಯ ಶಾಸಕದ್ವಯರು ಆಗ್ರ ಹಿಸಿರುವ ಹಿನ್ನೆಲೆ ಯಲ್ಲಿ ಜಮ್ಮಾಬಾಣೆ ಸಮಸ್ಯೆ ಬಗೆಹರಿಸಲು ಸುದೀರ್ಘ ಚರ್ಚೆ ನಡೆಸಲಾಗಿದೆ ಎಂದರು.
ಎಲ್ಲಿ ಜಮ್ಮಾಬಾಣೆ ಸಮಸ್ಯೆ ಇದೆಯೋ ಅಲ್ಲಿ ತಹಶೀಲ್ದಾರ್ ಸೇರಿ ದಂತೆ ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿಗಳು ಗ್ರಾಮಸಭೆ ನಡೆಸುವ ಮೂಲಕ ತಕರಾರಿಲ್ಲದ ಕಡೆಯಾರು ಸಾಗುವಳಿ ಮಾಡುತ್ತಿದ್ದಾ ರೋ ಅವರ ಹೆಸರಿಗೆ ಹಿಸ್ಸಾ ಪಹಣಿ ಮಾಡಿಕೊಡಬೇಕು ಎಂದ ರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.