ಕಟ್ಟಡ ಕಾಮಗಾರಿ ವಿಳಂಬ: ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಡಕು
Team Udayavani, Jun 16, 2019, 6:06 AM IST
ಕುಂಬಳೆ: ವಿದ್ಯಾಲಯಗಳನ್ನು ಅಂತರಾಷ್ಟ್ರ ಮಟ್ಟಕೇRರಿಸಿ ವಿದ್ಯಾರ್ಥಿಗಳಿಗೆ ಹೈಟೆಕ್ ಶಿಕ್ಷಣವನ್ನು ಒದಗಿಸುವ ಯೋಜನೆಯನ್ನು ಸರಕಾರ ಕೈಗೆತ್ತಿಕೊಂಡಿದೆ.
ಇದರಂತೆ ರಾಜ್ಯದ 140 ವಿಧಾನಸಭಾ ಕೇÒತ್ರದ ಒಂದೊಂದು ವಿದ್ಯಾಲಯಗಳಿಗೆ 5 ಕೋಟಿ ನಿಧಿ ಮಂಜೂರು ಮಾಡಿದೆ.ಇದರಲ್ಲಿ ಪೀÅ ಪ್ರೈಮರಿಯಿಂದ ಹೈಯರ್ ಸೆಕೆಂಡರಿ ಶಿಕ್ಷಣವನ್ನು ಹೈಟೆಕ್ ಮಾಡುವ ಯೋಜನೆ ಇದರಲ್ಲಿ ಒಳಪಟಿಟಿದೆ.ತರಗತಿ ಕಟ್ಟಡ, ಪ್ರಯೋಗಾಲಯ, ಅಧ್ಯಾಪಕರ ಕೊಠಡಿ ,ಶಾಲಾ ಮೈದಾನ, ಶೌಚಾಲಯ ಇತ್ಯಾದಿ ಯೋಜನೆಯಲ್ಲಿ ಒಳಗೊಂಡಿದೆ.
ರಾಜ್ಯ ಸರಕಾರದ ಈ ಯೋಜನೆಯಂಗವಾಗಿ ಮಂಜೇಶ್ವರ ಮಂಡಲದಲ್ಲಿ ಮೊಗ್ರಾಲ್ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ವಿದ್ಯಾಲಯವನ್ನು ಸರಕಾರ ಮತ್ತು ಶಿಕ್ಷಣ ಇಲಾಖೆ ಆಯ್ಕೆ ಮಾಡಿದೆ.
ಕಟ್ಟಡ ಗುತ್ತಿಗೆದಾರರ ನಿಧಾನವೇ ಪ್ರಧಾನ ನಿಲುವು ಇದಕ್ಕೆ ಕಾರಣವಾಗಿದೆ. ಹಾಲಿ ಶೈಕ್ಷಣಿಕ ವರ್ಷದಲ್ಲಿ ಕಟ್ಟಡ ಪೂರ್ತಿಗೊಳಿಸುವ ಕರಾರಿನಲ್ಲಿ ಗುತ್ತಿಗೆ ಪಡೆಯಲಾಗಿದೆ.
ಕಟ್ಟಡದ ಕಾಮಗಾರಿ ಭರದಿಂದ ಸಾಗುತ್ತಿದೆ ಎನ್ನುತ್ತಾರೆ ಸಂಬಂಧಪಟ್ಟವರು. ಆದರೆ ಕಟ್ಟಡ ಕಾಮಗಾರಿ ಮಾತ್ರ ಮಂದಗತಿಯಲ್ಲಿ ಸಾಗುತ್ತಿದೆ.
ವಿದ್ಯಾರ್ಥಿಗಳ ತರಗತಿ ಶಿಫ್ಟ್
ವಿದ್ಯಾರ್ಥಿಗಳ ತರಗತಿ ಶಿಫ್ಟ್ ಸಂಪ್ರದಾಯದಲ್ಲಿ ಮುಂದುವರಿಯುತ್ತಿದೆ. ಹೈಸ್ಕೂಲು ವಿದ್ಯಾರ್ಥಿಗಳಿಗೆ ಬೆಳಗ್ಗೆ 8.30 ರಿಂದ ಮಧ್ಯಾಹ್ನ 12.40 ರ ತನಕ,ಯುಪಿ ವಿದ್ಯಾರ್ಥಿಗಳಿಗೆ ಅಪರಾಹ್ನ 12.50 ರಿಂದ ಸಂಜೆ 5 ಗಂಟೆ ತನಕ,ಎಲ್.ಪಿ.ವಿದ್ಯಾರ್ಥಿಗಳಿಗೆ ಬೆಳಗ್ಗೆ 10.20 ರಿಂದ ಸಂಜೆ 4.20 ರತನಕ ಮಾತ್ರವಲ್ಲದೆ ಯುಪಿ ಮತ್ತು ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಶನಿವಾರವೂ ವಿಶೇಷ ತರಗತಿಗಳನ್ನು ನಡೆಸುವ ಅನಿವಾರ್ಯತೆ ಕಟ್ಟ ಡ ಪೂರ್ಣಗೊಳ್ಳದ ಕಾರಣ ಉಂಟಾಗಿದೆ.
ಆದುದರಿಂದ ಕಟ್ಟಡ ಕ ಾಮಗಾರಿಗೆ ವೇಗದ ಚಾಲನೆ ನೀಡಿ ಮಕ್ಕಳ ಭವಿಷ್ಯಕ್ಕೆ ಮಾರಕವಾಗಂತೆ ಕಾಪಾಡಬೇಕಾಗಿದೆ.
5 ಕೋಟಿ ನಿಧಿ ಮಂಜೂರು
ಮಂಜೇಶ್ವರ ಉಪಜಿಲ್ಲೆಯ ಎಲ್ಲಾ ಸರಕಾರಿ ಹೈಸ್ಕೂಲುಗಳಿಗೆ ತಲಾ ಒಂದು ಕೋಟಿ ನಿಧಿ ಮಂಜೂರುಗೊಂಡಿದೆ.ಸಾವಿರಕ್ಕಿಂತಲೂ ಅಧಿಕವಿರುವ ವಿದ್ಯಾರ್ಥಿಗಳಿರುವ ವಿದ್ಯಾಲಯಗಳಿಗೆ 3 ಕೋಟಿ ನಿಧಿ ಮಂಜೂರುಗೊಂಡಿದೆ.
ಮಕ್ಕಳಿಗೆ ಸಮವಸ್ತ್ರ,ಮಧ್ಯಾಹ್ನದೂಟ,ಉಚಿತ ಪಾಠ ಪುಸ್ತಕಗಳನ್ನು ನೀಡಿ ಮಕ್ಕಳ ಶಿಕ್ಷಣಕ್ಕೆ ಸ್ಪೂರ್ತಿ ನೀಡಿದೆ. ಯೋಜನೆಯಂತೆ ಮೊಗ್ರಾಲ್ ಸರಕಾರಿ ವಿದ್ಯಾಲಯದ ನೂತನ ಕಟ್ಟಡಕ್ಕೆ ಸರಕಾರದ ವತಿಯಿಂದ 5 ಕೋಟಿ ನಿಧಿ ಮಂಜೂರುಗೊಂಡಿದೆ.
ಇದರಂತೆ ಮೂರು ಅಂತಸ್ತಿನ ಕಾಮಗಾರಿ ನಡೆಯುತ್ತಿದೆ.ಆದರೆ ಸಕಾಲದಲ್ಲಿ ಕಾಮಗಾರಿ ಪೂರ್ತಿಗೊಳ್ಳದ ಕಾರಣ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಡಕಾಗಿದೆ
ಚುನಾವಣೆಯ ನೆಪ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಆನ್ಯರಾಜ್ಯಗಳ ಕೂಲಿಯಾಳುಗಳು ಚುನಾವಣೆಯ ನೆಪದಲ್ಲಿ ಊರಿಗೆ ತೆರಳಿರುವುದರಿಂದ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ.ಕಟ್ಟಡದ ಎರಡು ಬ್ಲಾಕ್‌ಗಳಲ್ಲಿ ಒಂದು ಬ್ಲಾಕಿನ 15 ತರಗತಿಗಳ ಕಟ್ಟಡ ಕಾಮಗಾರಿಯನ್ನು ಪೂರ್ತಿ ಗೊಳಿಸಿದಲ್ಲಿ ವಿದ್ಯಾರ್ಥಿ ಗಳ ಶಿಪ್ಟ್ ಗೆ ಕೊನೆ ಹಾಡಬಹುದು.
-ಮನೋಜ್ ಮುಖ್ಯೊಪಾಧ್ಯಾಯರು, ಜಿ.ವಿ.ಎಚ್.ಎಸ್‌ಎಸ್. ಮೊಗ್ರಾಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.