ತಮಿಳು ಚಿತ್ರರಂಗದಲ್ಲಿ ಬಿಝಿ ಆದರೂ ಮತದಾನಕ್ಕಾಗಿ ಊರಿಗೆ ಬಂದ ಮಹಿಮಾ
Team Udayavani, Apr 24, 2019, 6:30 AM IST
ಕಾಸರಗೋಡು: ತಮಿಳು ಚಿತ್ರರಂಗದಲ್ಲಿ ಬಿರುಸಿನ ಚಿತ್ರೀಕರಣದ ನಡುವೆಯೂ ಪ್ರಜಾಪ್ರಭುತ್ವ ನೀತಿಯ ಮಹತ್ವ ಅರಿತು ಗಡಿನಾಡು ಕಾಸರಗೋಡಿನ ತಾರೆ ಮಹಿಮಾ ನಂಬ್ಯಾರ್ ಊರಿಗೆ ಆಗಮಿಸಿ ಮತಚಲಾಯಿಸಿದ್ದಾರೆ.
ನಾಯಮ್ಮಾರಮೂಲೆ ತನ್ ಬೀಹುಲ್ ಹೈಯರ್ ಸೆಕೆಂಡರಿ ಶಾಲೆಯ 101ನೇ ನಂಬ್ರ ಮತಗಟ್ಟೆಯಲ್ಲಿ ಮಹಿಮಾ ಮತದಾನ ನಡೆಸಿದ್ದಾರೆ. ಈ ಸಂದರ್ಭ ಮಾತನಾಡಿದ ಅವರು ಮತದಾನ ನಮ್ಮ ಹಕ್ಕು. ಅದು ಸಾಮಾಜಿಕ ಹೊಣೆಗಾರಿಕೆ. ಮತದಾನ ನಡೆಸುವ ಮೂಲಕ ನಾಡನ್ನು ಯಾರು ಆಳಬೇಕು ಎಂದು ನಾವೇ ನಿರ್ಧರಿಸುತೇ¤ವೆ ಎಂದು ಹೇಳಿದರು.
ಅಣ್ಣ ಉಣ್ಣಿಕೃಷ್ಣನ್ ಅವರೊಂದಿಗೆ ಮಹಿಮಾ ಮತದಾನ ನಡೆಸಲು ಆಗಮಿಸಿದ್ದರು. ಸರಕಾರಿ ಸಿಬ್ಬಂದಿಯಾಗಿರುವ ತಂದೆ-ತಾಯಿ ಈ ಹೊಣೆಗಾರಿಕೆಯಲ್ಲಿ ಭಾಗಿಯಾಗುತ್ತಿದ್ದುದನ್ನು ಕಂಡು ಬೆಳೆದ ತಮಗೆ ಬಾಲ್ಯದಿಂದಲೇ ಮತದಾನದ ಬಗ್ಗೆ ಅಪಾರ ಗೌರವವಿದೆ ಎಂದು ತಿಳಿಸಿದರು.
ದಿಲೀಪ್ ನಾಯಕನಾಗಿ ಅಭಿನಯಿಸಿದ್ದ “ಕಾರ್ಯಸ್ಥನ್’ ಎಂಬ ಮಲೆಯಾಳ ಚಿತ್ರದಲ್ಲಿ ನಾಯಕಿಯಾಗಿ ಜನಮನ ಸೆಳೆದಿದ್ದ ಮಹಿಮಾ, ನಾಯಮ್ಮಾರಮೂಲೆ ಶಾಲೆ ಬಳಿಯ ನಿವಾಸಿಯಾಗಿದ್ದಾರೆ. ರೈಲ್ವೇ ಸಿಬ್ಬಂದಿ ಕೆ.ಸುಧಾಕರನ್-ನಾಯಮ್ಮಾರಮೂಲೆ ಶಾಲೆಯ ಶಿಕ್ಷಕಿ ಪಿ.ಸಿ.ವಿದ್ಯಾ ದಂಪತಿ ಪುತ್ರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.