ಹಾವೇರಿಯಲ್ಲಿ ಕಾರು-ಬಸ್ ಢಿಕ್ಕಿ : ಕಾಸರಗೋಡಿನ ಮೂವರ ಸಾವು
Team Udayavani, Dec 28, 2022, 7:09 PM IST
ಕಾಸರಗೋಡು: ಕರ್ನಾಟಕದ ಹಾವೇರಿಯಲ್ಲಿ ಕಾರು ಮತ್ತು ಕರ್ನಾಟಕ ಆರ್.ಟಿ.ಸಿ. ಬಸ್ ಢಿಕ್ಕಿ ಹೊಡೆದು ಕಾಸರಗೋಡು ತಳಂಗರೆಯ ದಂಪತಿ ಹಾಗು ಅವರ ಮೊಮ್ಮಗ ಸಾವಿಗೀಡಾಗಿದ್ದಾರೆ. ಮೂವರು ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಸರಗೋಡು ತಳಂಗರೆ ನುಸ್ರತ್ ನಗರದ ಮೊಹಮ್ಮದ್ ಕುಂಞಿ(65), ಅವರ ಪತ್ನಿ ಆಯಿಷ(62) ಮತ್ತು ಇವರ ಪುತ್ರ ಸಿಯಾದ್ ಅವರ ಪುತ್ರ ಮೊಹಮ್ಮದ್(3) ಸಾವಿಗೀಡಾದರು. ಅಪಘಾತದಲ್ಲಿ ಮೊಹಮ್ಮದ್ ಕುಂಞಿ ಅವರ ಪುತ್ರ ಸಿಯಾದ್, ಅವರ ಪತ್ನಿ,ಪುತ್ರಿ ಆಯಿಷಾ ಗಂಭೀರ ಗಾಯಗೊಂಡಿದ್ದು ಅವರನ್ನು ಅಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಡಿ.27 ರಂದು ಮಧ್ಯಾಹ್ನ ಎರಡು ಗಂಟೆಗೆ ಕರ್ನಾಟಕ ಹನಗಲ್ ಪೊಲೀಸ್ ಠಾಣೆಯ ವ್ಯಾಪ್ತಿಗೊಳಪಟ್ಟ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ.
ಕಾರಿನಲ್ಲಿದ್ದವರು ತೀರ್ಥಾಟನೆಗಾಗಿ ಕಾಸರಗೋಡಿನಿಂದ ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಎದುರಿನಿಂದ ಬರುತ್ತಿದ್ದ ಬಸ್ಸು ಕಾರಿಗೆ ಢಿಕ್ಕಿ ಹೊಡೆಯಿತು.
ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಸ್ಥಳೀಯರು ಕಾರಿನಲ್ಲಿ ಸಿಲುಕಿಕೊಂಡವರನ್ನು ಕಾರಿನ ಬಾಗಿಲನ್ನು ಒಡೆದು ತೆಗೆದು ತತ್‌ಕ್ಷಣ ಸಮೀಪದ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಿದ್ದರೂ ಮೊಹಮ್ಮದ್ ಕುಂಞಿ ಮತ್ತು ಆಯಿಷಾ ಸಾವಿಗೀಡಾದರು. ಗಂಭೀರವಾಗಿ ಗಾಯಗೊಂಡಿದ್ದ ಮೊಮ್ಮಗ ಮೊಹಮ್ಮದ್ ಬಳಿಕ ಆಸ್ಪತ್ರೆಯಲ್ಲಿ ಅಸುನೀಗಿದನು.
ಈ ಅಪಘಾತದಲ್ಲಿ ಸಾವನ್ನಪ್ಪಿದ ಮೊಹಮ್ಮದ್ ಕುಂಞಿ-ಆಯಿಷಾ ದಂಪತಿ ಪುತ್ರರಲ್ಲೋರ್ವನಾದ ಸೈನುಲ್ ಅಬೀದ್ ಅವರನ್ನು 2014 ರಲ್ಲಿ ಕಾಸರಗೋಡು ನಗರದ ಎಂ.ಜಿ.ರಸ್ತೆಯ ಪೀಠೊಪಕರಣ ಅಂಗಡಿಯಲ್ಲಿ ತಂಡವೊಂದು ಇರಿದು ಕೊಲೆಗೈದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasaragod Crime News: ರಸ್ತೆಯಲ್ಲಿ ಬಿಯರ್ ಬಾಟ್ಲಿ ಒಡೆದ ಮೂವರ ಬಂಧನ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kasaragod: ರಸ್ತೆಯಲ್ಲಿ ಬಿಯರ್ ಬಾಟ್ಲಿ ಎಸೆದು ಘರ್ಷಣೆಗೆ ಯತ್ನ; ಕೇಸು ದಾಖಲು
Kasaragod ಅಪರಾಧ ಸುದ್ದಿಗಳು; ತಂಬಾಕು ಉತ್ಪನ್ನಗಳ ಸಹಿತ ಇಬ್ಬರ ಬಂಧನ
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.