ಜಿಲ್ಲೆಯಲ್ಲಿ ಕಣ್ಣು ಮುಚ್ಚಿವೆ 85 ಸಿಸಿ ಟಿವಿ ಕೆಮರಾಗಳು
Team Udayavani, Feb 10, 2018, 10:00 AM IST
ಕಾಸರಗೋಡು: ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಮತ್ತು ಅಹಿತಕರ ಕೃತ್ಯಗಳನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಸ್ಥಾಪಿಸಿದ ಸಿಸಿ ಟಿವಿ ಕೆಮರಾಗಳು ಕಣ್ಣು ಮುಚ್ಚಿವೆ. ಜತೆಗೆ ತನಗೆ ಕೊಟ್ಟ ಕಣ್ಗಾವಲು ಕೆಲಸವನ್ನು ನಿರ್ವಹಿಸಲು ಅಸಮರ್ಥವಾಗಿ ಸುಮ್ಮನೆ ಕುಳಿತಿವೆ. ಈ ಮೂಲಕ ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳನ್ನು ಎಸಗು ವವರಿಗೆ ಭಾರೀ ವರದಾನ ಸಿಕ್ಕಂತಾಗಿದೆ.
ಕಾಸರಗೋಡು ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ 95 ಸಿಸಿ ಟಿವಿ ಕೆಮರಾಗಳನ್ನು ಅಳವಡಿಸಲಾಗಿದ್ದು, ಅವುಗಳಲ್ಲಿ 10 ಕೆಮರಾಗಳು ಮಾತ್ರವೇ ಇದೀಗ ಕಾರ್ಯಾಚರಿಸುತ್ತಿವೆ. ಈ ಮಧ್ಯೆ 81 ಕೆಮರಾಗಳು ಸಮರ್ಪಕವಾಗಿ ಕಾರ್ಯವೆಸಗದೆ ಮೂರು ವರ್ಷಗಳು ಕಳೆದವು. ಕೊಲೆ ಪ್ರಕರಣಗಳು, ದಾಳಿಗಳು, ಕಳ್ಳತನ ಇತ್ಯಾದಿ ನಿರಂತರ ಸುದ್ದಿಯಾಗುತ್ತಿರುವಾಗ ಸಿಸಿ ಟಿವಿ ಕೆಮರಾಗಳು ಕಾರ್ಯವೆಸಗದಿರುವುದು ಪೊಲೀಸ್ ತನಿಖೆಗೆ ತೀವ್ರ ಹಿನ್ನಡೆಯಾಗಿ ಪರಿಣಮಿಸಿದೆ.
2015ನೇ ಡಿಸೆಂಬರ್ ತಿಂಗಳಲ್ಲಿ ಕೆಲಸ ಮಾಡದ ಸಿಸಿ ಟಿವಿ ಕೆಮರಾಗಳನ್ನು ದುರಸ್ತಿಗೊಳಿಸಲು ಕೆಲ್ಟ್ರೋನ್ ಸಂಸ್ಥೆಯನ್ನು ಸಂಪರ್ಕಿಸಿ ಯೋಜನೆ ರೂಪಿಸಲಾಗಿತ್ತಾದರೂ, ಬಳಿಕ ದುರಸ್ತಿಗೆ ಯಾವುದೇ ಕ್ರಮ ಆರಂಭಗೊಂಡಿಲ್ಲ. ಕೆಮರಾಗಳ ದುರಸ್ತಿಗೆ ಕೆಲ್ಟ್ರೋನ್ ಕೇಳಿದ 30 ಲಕ್ಷ ರೂಪಾಯಿ ಹೆಚ್ಚಾಯಿತು ಎಂಬುದು ರಾಜ್ಯ ಸರಕಾರದ ಮತ್ತು ಪೊಲೀಸ್ ಇಲಾಖೆಯ ನಿಲುವು.
ಯಾವುದೇ ಅಹಿತಕರ ಘಟನೆಗಳು ನಡೆದರೂ ಸಿಸಿ ಟಿವಿಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಪೊಲೀಸರು ಹೇಳುತ್ತಾರೆ. ಸ್ವಂತ ಸಿಸಿ ಟಿವಿ ಕೆಮರಾಗಳಿಲ್ಲದೆ ಅಹಿತಕರ ಘಟನೆಗಳು ಸಂಭವಿಸಿದಾಗ ಖಾಸಗಿ ವ್ಯಕ್ತಿಗಳ ಮನೆಗಳಲ್ಲಿ, ಸಂಸ್ಥೆಗಳಲ್ಲಿ ಸ್ಥಾಪಿಸಿದ ಸಿಸಿ ಟಿವಿ ಕೆಮರಾಗಳು ಚಿತ್ರಿಸಿದ ಫೋಟೋಗಳನ್ನೇ ಆಧಾರವಾಗಿರಿಸಿ ಪೊಲೀಸರು ತಪಾಸಣೆ ನಡೆಸಿ ತನಿಖೆಯನ್ನು ಮುಂದುವರಿಸುತ್ತಾರೆ. ಜಿಲ್ಲೆಯಲ್ಲಿ ದಾಳಿಯ ಘಟನೆಗಳು ಮುಂದುವರಿಯುತ್ತಿರುವಾಗ ಪೊಲೀಸರಿಗೆ ಪ್ರಮುಖವಾಗಿ ನೆರವಿಗೆ ಬರುವ ಸಿಸಿ ಟಿವಿ ಕೆಮರಾಗಳನ್ನು ಮರು ಸ್ಥಾಪಿಸಬೇಕೆಂದು ಸಾರ್ವಜನಿಕ ವಲಯ ಕೂಡ ಆಗ್ರಹಿಸಿದೆ.
2014ರಲ್ಲಿ ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ 2.58 ಕೋಟಿ ರೂ.ಗಳನ್ನು ವಿನಿಯೋಗಿಸಿ ಸಿಸಿ ಟಿವಿ ಕೆಮರಾಗಳನ್ನು ಅಳವಡಿಸಲಾಗಿತ್ತು. ಕೆಲ್ಟ್ರೋನ್‌ಗೆ ಇದರ ಹೊಣೆಗಾರಿಕೆ ಕೊಡಲಾಗಿತ್ತು. ಈ ಪೈಕಿ ಚಂದ್ರಗಿರಿ ರಸ್ತೆಯಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದುದರಿಂದ ಆ ರೂಟ್‌ನಲ್ಲಿ ಕೆಮರಾಗಳನ್ನು ಸ್ಥಾಪಿಸಲಾಗಿರಲಿಲ್ಲ.
ಶಾಸಕರ ಪ್ರಾದೇಶಿಕ ನಿಧಿ ಬಳಕೆಗೆ ನಿರ್ಧಾರ ಕಾಸರಗೋಡಿನ ಸೂಕ್ಷ್ಮ ಪರಿಸ್ಥಿತಿಯನ್ನು ಗಮನಿಸಿ ಜಿಲ್ಲಾಡಳಿತ ಮತ್ತು ವಿವಿಧ ರಾಜಕೀಯ ಪಕ್ಷಗಳ ಪ್ರಮುಖರನ್ನು ಒಳಗೊಂಡ ಜಿಲ್ಲಾ ಮಟ್ಟದ ಶಾಂತಿ ಸಮಿತಿಯು ಸಿಸಿ ಟಿವಿ ಕೆಮರಾಗಳನ್ನು ದುರಸ್ತಿಗೊಳಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿತ್ತು. ಈ ತೀರ್ಮಾನದಂತೆ ಮಂಜೇಶ್ವರ, ಕಾಸರಗೋಡು ಮತ್ತು ಕಾಞಂಗಾಡು ಶಾಸಕರ ಪ್ರಾದೇಶಿಕ ಅಭಿವೃದ್ಧಿ ನಿಧಿಯಿಂದ ತಲಾ ಹತ್ತು ಲಕ್ಷ ರೂ. ಹಾಗೂ ಕೇರಳ ಸರಕಾರದ 2 ಕೋಟಿ ರೂ. ವಿನಿಯೋಗಿಸಿ ಕೆಲ್ಟ್ರೋನ್ ಕಂಪೆನಿಗೆ ಮೂರು ವರ್ಷಗಳ ದುರಸ್ತಿ ಕಾಮಗಾರಿ ಸಹಿತ ಹೊಸ ಕೆಮರಾಗಳನ್ನು ಸ್ಥಾಪಿಸಲು ಅನುಮತಿ ನೀಡಲಾಗಿತ್ತು. ಆದರೆ ಈ ನಿರ್ಧಾರ ಕೂಡ ಇದೀಗ ಮೂಲೆಪಾಲಾಗಿರುವುದು ದುರಂತ.
ಹಲವೆಡೆಗಳಲ್ಲಿ ಸಮಾಜದ್ರೋಹಿಗಳು, ಕಿಡಿಗೇಡಿಗಳು ಕೆಮರಾಗಳನ್ನು ಹಾನಿಗೊಳಿಸಿರುವುದಾಗಿ ಮಾಹಿತಿಯಿದೆ. ಹಾನಿಗೀಡಾದ ಕೆಮರಾಗಳನ್ನು ದುರಸ್ತಿಗೊಳಿಸಲು ಇದುವರೆಗೆ ಒಂದು ರೂಪಾಯಿ ಕೂಡ ಬಿಡುಗಡೆಗೊಳಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯ ವಿವಿಧ ಪ್ರಕರಣಗಳ ತನಿಖೆಯಲ್ಲಿ ಸಿಸಿ ಟಿವಿ ಕ್ಯಾಮರಾಗಳು ಅತ್ಯಂತ ಉಪಯುಕ್ತವಾಗುತ್ತಿವೆ ಎಂದು ಪೊಲೀಸರು ಹೇಳುತ್ತಿದ್ದರೂ, ಕೆಮರಾಗಳು ಕೆಟ್ಟುಹೋದಲ್ಲಿ ಪ್ರಮುಖ ಪ್ರಕರಣಗಳ ತನಿಖೆಗೂ ಯಾವುದೇ ಪ್ರಯೋಜನ ಸಿಗುತ್ತಿಲ್ಲ.
ಇದೀಗ ದುರಸ್ತಿ ಕಾರ್ಯಗಳಿಗೆ ಬೃಹತ್ ಮೊತ್ತ ನೀಡಬೇಕಾಗಿದ್ದರೂ, ಕೇವಲ 30 ಲಕ್ಷ ರೂ. ಗಳನ್ನಾದರೂ ಬಿಡುಗಡೆ ಮಾಡಲು ಕೂಡ ಸರಕಾರ ತಯಾರಾಗುತ್ತಿಲ್ಲ. ಈ ಮೊತ್ತವನ್ನು ನೀಡಿದರೂ ಕ್ಯಾಮರಾಗಳನ್ನು ದುರಸ್ತಿಗೊಳಿಸಲು ಸಾಧ್ಯವಿದೆ. ಆದರೆ ಈ ನಿಟ್ಟಿನಲ್ಲಿ ಜಿಲ್ಲೆಯ ಪೊಲೀಸ್ ಇಲಾಖೆ ಕೂಡ ಯಾಕೋ ಗಂಭೀರ ನಿಲುವು ತಳೆದಂತೆ ಕಂಡುಬರುತ್ತಿಲ್ಲ ಎಂಬುದು ಅಚ್ಚರಿಯ ವಿಷಯವಾಗಿದೆ.
1.5 ಕೋಟಿ ರೂ. ಬಿಡುಗಡೆ
ಕಾಸರಗೋಡು ಜಿಲ್ಲೆಯಲ್ಲಿ ಪದೇ ಪದೇ ಕೊಲೆ, ದರೋಡೆ, ಕಳವು, ಕೋಮು ಗಲಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ರಸ್ತೆ ಮತ್ತು ಜಂಕ್ಷನ್‌ಗಳಲ್ಲಿರುವ ಸಿ.ಸಿ. ಟಿ.ವಿ. ಕೆಮರಾಗಳನ್ನು ನವೀಕರಿಸಲಾಗುವುದೆಂದು ಎಡಿಜಿಪಿ ರಾಜೇಶ್ ದಿವಾನ್ ತಿಳಿಸಿದ್ದಾರೆ. ಇದಕ್ಕಾಗಿ ಜಿಲ್ಲೆಗೆ 1.5 ಕೋಟಿ ರೂ. ಸರಕಾರ ಬಿಡುಗಡೆ ಮಾಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ. ಸೈಮನ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Lalbagh: ಇಂದಿನಿಂದ ಕರಾವಳಿ ಉತ್ಸವ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.