ಅತ್ಯಾಧುನಿಕ ಮಾದರಿಯ ಸಿಸಿ ಟಿವಿ ಕೆಮರಾಗಳ ಸ್ಥಾಪನೆ
Team Udayavani, Mar 15, 2018, 10:05 AM IST
ಕಾಸರಗೋಡು: ರಾಜ್ಯದ ಪ್ರಧಾನ ನಗರಗಳಲ್ಲಿ ನಡೆಯುತ್ತಿರುವ ಅಪರಾಧ ಕೃತ್ಯಗಳು ಮತ್ತು ರಸ್ತೆ ಅಪಘಾತಗಳನ್ನು ತಡೆಗಟ್ಟಲು ರಸ್ತೆಗಳಲ್ಲಿ ಹಾಗೂ ಪ್ರಮುಖ ಕೇಂದ್ರಗಳಲ್ಲಿ ದೈನಂದಿನ 24 ಗಂಟೆಗಳ ಕಾಲವೂ ಕಾರ್ಯಾಚರಿಸುವ ಅತ್ಯಾಧುನಿಕ ಮಾದರಿಯ ಸಿಸಿ ಟಿವಿ ಕ್ಯಾಮರಾಗಳನ್ನು ಸ್ಥಾಪಿಸುವ ಮಹತ್ವದ ಯೋಜನೆಗೆ ಕೇರಳ ಗೃಹ ಇಲಾಖೆಯು ರೂಪು ನೀಡಿದೆ. ಇದಕ್ಕಾಗಿ 19.60 ಕೋಟಿ ರೂಪಾಯಿಗಳನ್ನು ಸರಕಾರವು ಬಿಡುಗಡೆ ಮಾಡಿದೆ. ಅತಿ ಹೆಚ್ಚು ಜನನಿಬಿಡತೆ ಹೊಂದಿರುವ 439 ರಸ್ತೆ ಬದಿಯ ಹಲವು ಪ್ರದೇಶಗಳಲ್ಲಾಗಿ 1,004 ಸಿಸಿ ಟಿವಿ ಕ್ಯಾಮರಾಗಳನ್ನು ಉದ್ದಿಮೆದಾರರ ಸಹಾಯದೊಂದಿಗೆ ಬ್ಯಾಂಕ್‌ಗಳು, ಎಟಿಎಂ, ಪೆಟ್ರೋಲ್ ಬಂಕ್, ಪ್ರಮುಖ ಬಸ್ ಮತ್ತು ರೈಲು ನಿಲ್ದಾಣಗಳು, ಚಿನ್ನದಂಗಡಿಗಳಲ್ಲಿ ಅಳವಡಿಸಲು ನಿರ್ಧರಿಸಲಾಗಿದೆ.
ಇದಲ್ಲದೆ ಇಂತಹ ಕ್ಯಾಮರಾಗಳನ್ನು ಇನ್ನಷ್ಟು ಹೆಚ್ಚು ಕೇಂದ್ರಗಳಲ್ಲಿ ಸ್ಥಾಪಿಸಲು ಕೂಡ ತೀರ್ಮಾನಿಸಲಾಗಿದೆ. ಆ ಮೂಲಕ ಅಪರಾಧ ಕೃತ್ಯಗಳನ್ನು ನಡೆಸುತ್ತಿರುವವರು ಮತ್ತು ರಸ್ತೆ ಅಪಘಾತಗಳಿಗೆ ಕಾರಣವಾಗುವ ವಾಹನಗಳ ಚಾಲಕರನ್ನು ಸೆರೆಹಿಡಿದು ಅವರಿಗೆ ಕಾನೂನು ಪರ ಶಿಕ್ಷೆ ವಿಧಿಸಲು ಗೃಹ ಖಾತೆ ಮುಂದಾಗಿದೆ. ಕೇರಳದಲ್ಲಿ ಇತ್ತೀಚೆಗೆ ಕೊಲೆ, ದರೋಡೆ, ರಾಜಕೀಯ ಕೊಲೆ, ಹಿಂಸಾಚಾರ, ಮತೀಯ ಗಲಭೆ, ಕಳವು ಮತ್ತು ಅವಘಡಗಳ ಸಂಖ್ಯೆ ಮಿತಿಮೀರುತ್ತಿದ್ದು, ಅದನ್ನು ಸಂಪೂರ್ಣವಾಗಿ ತಡೆಗಟ್ಟುವುದೇ ಅತ್ಯಾಧುನಿಕ ಕ್ಯಾಮರಾಗಳನ್ನು ಸ್ಥಾಪಿಸುವುದರ ಪ್ರಧಾನ ಉದ್ದೇಶವಾಗಿದೆ.
ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಇಂಟರ್ ಗ್ರೇಟೆಡ್ ಡಿಜಿಟಲ್ ಎನ್‌ಪೋರ್ಸ್‌ಮೆಂಟ್ ಸಿಸ್ಟಂ ಜಾರಿಗೊಳಿಸುವ ನಿರ್ಧಾರವನ್ನು ಕೂಡ ಗೃಹ ಇಲಾಖೆ ಕೈಗೊಂಡಿದ್ದು, ಇದರಿಂದ ಸಾರಿಗೆ ಕಾನೂನು ಉಲ್ಲಂಘನೆಯನ್ನು ಸಮರ್ಪಕವಾಗಿ ತಡೆಗಟ್ಟಲು ಸಾಧ್ಯವಾಗಲಿದೆ ಎಂದು ಇಲಾಖೆಯ ಅಧಿಕಾರಿ ವಲಯ ತಿಳಿಸಿದೆ.
ವಿಶೇಷ ಕಂಟ್ರೋಲ್ ರೂಮ್
ರಾಜ್ಯದಲ್ಲಿ ಗೂಂಡಾಗಳನ್ನು ಹತ್ತಿಕ್ಕಲು ಆಧುನಿಕ ಶೈಲಿಯ ವಿಶೇಷ ಕಂಟ್ರೋಲ್ ರೂಮ್‌ಗಳನ್ನು ಸ್ಥಾಪಿಸಲು ಗೃಹ ಖಾತೆ ತೀರ್ಮಾನಿಸಿದೆ. ಕೇರಳದ ಹಲವೆಡೆಗಳಲ್ಲಿ ಅನೇಕ ರೀತಿಯ ಗೂಂಡಾಕೃತ್ಯಗಳು ನಡೆಯುತ್ತಿವೆ. ಮಾದಕದ್ರವ್ಯ ಸಾಗಾಟ, ಭೂ ಮಾಫಿಯಾ, ಹವಾಲಾ ಹಣ, ಕಾಳಧನ, ಲೈಂಗಿಕ ದಂಧೆ, ಮಾನವ ಕಳ್ಳಸಾಗಾಟ, ಅಕ್ರಮ ಹಫ್ತಾ ವಸೂಲಿ, ಮಕ್ಕಳ ಸಾಗಾಟ, ಅವಯವ ಅಪಹರಣ, ಅಪಾರ ಬಡ್ಡಿ ದರದಲ್ಲಿ ಸಾಲ ನೀಡಿ ಮರುಪಾವತಿಸದವರ ಶೋಷಣೆ ಇತ್ಯಾದಿ ನಡೆಯುತ್ತಿರುತ್ತವೆ. ಮಾತ್ರವಲ್ಲದೆ ಕೆಲವು ರಾಜಕೀಯ ಪಕ್ಷಗಳು, ಸಂಘಟನೆಗಳು ಮತ್ತು ವ್ಯಕ್ತಿಗಳು ಗೂಂಡಾಗಳಿಗೆ ಬೆಂಬಲ ನೀಡುತ್ತಿದ್ದಾರೆ. ಇಂತಹ ಗೂಂಡಾ ತಂಡಗಳನ್ನು ಸಂಪೂರ್ಣವಾಗಿ ಹತ್ತಿಕ್ಕುವ ಗುರಿಯೊಂದಿಗೆ ವಿಶೇಷ ಕಂಟ್ರೋಲ್ ರೂಮ್‌ಗಳನ್ನು ಸ್ಥಾಪಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Team India; ದ್ರಾವಿಡ್ ಇದ್ದಾಗ ಎಲ್ಲ ಸರಿಯಿತ್ತು: ಹರ್ಭಜನ್
Team India; ಆಯ್ಕೆಗಾರರ ಕೈಯಲ್ಲಿ ರೋಹಿತ್, ವಿರಾಟ್ ಕೊಹ್ಲಿ ಭವಿಷ್ಯ: ಗಾವಸ್ಕರ್
Thalassery: ಸಿಪಿಎಂ ನಾಯಕನ ಹತ್ಯೆ ಪ್ರಕರಣ: ಆರೆಸ್ಸೆಸ್‌ನ 9 ಸದಸ್ಯರಿಗೆ ಜೀವಾವಧಿ ಶಿಕ್ಷೆ
EVM: ಮತಯಂತ್ರ ತಿರುಚಲು ಸಾಧ್ಯವಿಲ್ಲ, ಅವು ಸುರಕ್ಷಿತ: ರಾಜೀವ್‌ಕುಮಾರ್
Forest Department: ಇದ್ದಲ್ಲಿಯೇ ಅರಣ್ಯ ಅಪರಾಧಗಳ ದಾಖಲು: “ಗರುಡಾಕ್ಷಿ’ಗೆ ಚಾಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.