Sea ಹಠಾತ್ ಉಬ್ಬರ ಸಾಧ್ಯತೆ: ರೆಡ್ ಅಲರ್ಟ್ ಘೋಷಣೆ
Team Udayavani, May 4, 2024, 1:33 AM IST
ಕಾಸರಗೋಡು: ಕೇರಳ ಮತ್ತು ದಕ್ಷಿಣ ತಮಿಳುನಾಡಿನ ಕರಾವಳಿ ಪ್ರದೇಶಗಳಲ್ಲಿ ಹಠಾತ್ ಸಮುದ್ರ ಉಕ್ಕೇರುವ ಸಾಧ್ಯತೆ ಇದೆ ಎಂದು ಹವಾಮಾನ ಸಂಸ್ಥೆ ರೆಡ್ ಅಲರ್ಟ್ ಘೋಷಿಸಿದೆ.
ಈ ಪ್ರಕ್ರಿಯೆ ಶನಿವಾರ ಮತ್ತು ರವಿವಾರ ನಡೆಯುವ ಸಂಭವ ವಿದೆ. ಕರ್ನಾಟಕ ಕರಾವಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣ ಪ್ರಾಧಿಕಾರವು ಹಠಾತ್ ಉಬ್ಬರವಿಳಿತದ ವಿದ್ಯಮಾನಕ್ಕೆ ಸಂಬಂಧಿಸಿ ಮೊದಲ ಬಾರಿಗೆ ರೆಡ್ ಅಲರ್ಟ್ ಘೋಷಿಸಿದೆ.
ಕೇರಳ ಮತ್ತು ದಕ್ಷಿಣ ತಮಿಳುನಾಡಿನ ಕರಾವಳಿ ಪ್ರದೇಶಗಳಲ್ಲಿ ಶನಿವಾರ ಮುಂಜಾನೆ 2.30ರಿಂದ ರವಿವಾರ ರಾತ್ರಿ 11.30ರ ವರೆಗೆ ಅವಧಿಯಲ್ಲಿ ಸಮುದ್ರದಲ್ಲಿ ಹಠಾತ್ ಉಬ್ಬರ ಕಾಣಿಸುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಬೃಹತ್ ಅಲೆಗಳು ಎದ್ದು ಸಮುದ್ರದ ಪ್ರಕ್ಷುಬ್ಧಗೊಳ್ಳುವ ಸಾಧ್ಯತೆಯಿದೆ. ಆದಾಗ್ಯೂ ಇದು ಸುನಾಮಿ ತರಹದ ವಿದ್ಯಮಾನವಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಅವಧಿಯಲ್ಲಿ 0.5ರಿಂದ 1.7 ಮೀಟರ್ ಎತ್ತರದ ಅಲೆಗಳು ಏಳುವ ಸಾಧ್ಯತೆ ಇದೆ. ಮೀನುಗಾರಿಕೆ ಹಡಗು ಗಳನ್ನು ಬಂದರಿನಲ್ಲಿ ಸುರಕ್ಷಿತವಾಗಿ ಲಂಗರು ಹಾಕುವಂತೆ, ಜನರು ಅಪಾಯದ ವಲಯಗಳಿಂದ ದೂರ ವಿರುವಂತೆ ಸೂಚಿಸಲಾಗಿದೆ.
ಘರ್ಷಣೆಯ ಅಪಾಯವನ್ನು ತಪ್ಪಿಸಲು ಬೋಟ್‌ಗಳ ನಡುವೆ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವುದು ಅಗತ್ಯ. ಮೀನುಗಾರಿಕೆ ಉಪಕರಣಗಳ ಸುರಕ್ಷೆ ಬಗ್ಗೆ ಎಚ್ಚರಿಕೆ ವಹಿಸಬೇಕು. ಬೀಚ್ ಪ್ರವಾಸ ಮತ್ತು ಸಮುದ್ರದಲ್ಲಿನ ಚಟುವಟಿಕೆಗಳಿಂದ ಸಂಪೂರ್ಣವಾಗಿ ದೂರವಿರಲು ಸಲಹೆ ನೀಡಲಾಗಿದೆ.
ಡಿಸಿ ಸೂಚನೆ: ಸಮುದ್ರದಲ್ಲಿ ಭಾರೀ ತೆರೆಗಳ ಸಾಧ್ಯತೆಯ ಹಿನ್ನೆಲೆ ಯಲ್ಲಿ ಕಾಸರಗೋಡು ಸಮುದ್ರ ಕಿನಾರೆಗೆ ಪ್ರವಾಸಿ ಗರು ತೆರಳದಂತೆ ಜಿಲ್ಲಾಧಿಕಾರಿ ಮುನ್ನೆಚ್ಚರಿಕೆ ನೀಡಿದ್ದಾರೆ. ಬಿಆರ್‌ಡಿಸಿಯ ಫ್ಲೋಟಿಂಗ್ ಬ್ರಿಜ್‌ಅನ್ನು ತಾತ್ಕಾಲಿಕವಾಗಿ ಮುಚ್ಚುಗಡೆ ಗೊಳಿಸಲಾಗಿದೆ. ಬೇಕಲ್, ಪಳ್ಳಿಕೆರೆ ಬೀಚ್, ಹೊಸದುರ್ಗ, ಕೈಟ್ ಬೀಚ್, ಚಂಬರಿಕ, ಅಳಿತ್ತಲ, ವಲಿಯಪರಂಬ, ಕಣ್ವತೀರ್ಥ ಬೀಚ್‌ಗಳಿಗೆ ಪ್ರವಾಸಿಗರು ತೆರಳದಂತೆ ಸೂಚಿಸಲಾಗಿದೆ.
ತುರ್ತು ಅಗತ್ಯಗಳಿಗೆ ಶಾಲೆಗಳನ್ನು ಸಜ್ಜಾಗಿಡಲು ಆಯಾಯ ತಹಶೀಲ್ದಾರ್‌ಗಳಿಗೆ ನಿರ್ದೇಶ ನೀಡಲಾಗಿದೆ.
ಕಳ್ಳ ಕಡಲ್
ಇಂತಹ ಕಡಲುಬ್ಬರದ ಪ್ರಕ್ರಿಯೆಯನ್ನು ಕಳ್ಳ ಕಡಲ್ ಎಂಬುದಾಗಿ ಸ್ಥಳೀಯ ವಾಗಿ ಕರೆಯಲಾಗುತ್ತದೆ. ಯಾವುದೇ ಸೂಚನೆ ಇರದೆ ಕಡಲಿನ ನೀರು ಏಕಾಏಕಿ ಮೇಲೇರುವುದಕ್ಕೆ ಈ ರೀತಿ ಹೇಳಲಾಗುತ್ತಿದೆ.
ಕರ್ನಾಟಕಕ್ಕೆ ಆರೆಂಜ್ ಅಲರ್ಟ್
ಕರ್ನಾಟಕ ಕರಾವಳಿಯ ಕಿನಾರೆಯ ಕೆಲವು ಕಡೆ ಸಮುದ್ರದಲ್ಲಿ ಹಠಾತ್ ಉಬ್ಬರ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಸಂಸ್ಥೆ ತಿಳಿಸಿದೆ. ಇಲ್ಲಿ 0.5ರಿಂದ 1.5 ಮೀ. ಎತ್ತರದ ಅಲೆಗಳು ಏಳುವ ಸಾಧ್ಯತೆ ಇದೆ. ಆದುದರಿಂದ ಮೀನುಗಾರರು, ಪ್ರವಾಸಿಗರು ಎಚ್ಚರಿಕೆಯಿಂದ ಇರಬೇಕೆಂದು ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.