ಚೆರ್ಕಳ – ಅಡ್ಕಸ್ಥಳ ರಸ್ತೆ ದುರವಸ್ಥೆ: ರಸ್ತೆ ತಡೆ ಚಳವಳಿ, ಬಂಧನ
Team Udayavani, Sep 14, 2017, 7:20 AM IST
ಕಾಸರಗೋಡು: ಚೆರ್ಕಳ – ಅಡ್ಕಸ್ಥಳ ರಸ್ತೆಯ ಶೋಚನೀಯಾವಸ್ಥೆಯನ್ನು ಪರಿಹರಿಸದ ಸಂಬಂಧಪಟ್ಟ ಅಧಿಕಾರಿಗಳ ಕ್ರಮವನ್ನು ಪ್ರತಿಭಟಿಸಿ ಬಿಜೆಪಿ ಹಮ್ಮಿಕೊಂಡ ರಸ್ತೆ ತಡೆ ಚಳವಳಿ ಚೆರ್ಕಳದಲ್ಲಿ ಬುಧವಾರ ನಡೆಯಿತು. ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ಉದ್ಘಾಟಿಸಿದರು.
ಮಂಡಲ ಅಧ್ಯಕ್ಷ ಸುಧಾಮ ಗೋಸಾಡ ಅಧ್ಯಕ್ಷತೆ ವಹಿಸಿದರು. ಹರೀಶ್ ನಾರಂಪಾಡಿ, ಪ್ರಭಾಕರನ್ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾನಗರ ಪೊಲೀಸರು ಚಳವಳಿ ನಿರತರಾದ ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್, ಎಂ. ಸುಧಾಮ, ಹರೀಶ್ ನಾರಂಪಾಡಿ, ಚಂದು ಮಾಸ್ಟರ್, ರಾಜೇಶ್ ಶೆಟ್ಟಿ, ರವೀಂದ್ರ ರೈ ಎಂ., ಮಧುಸೂದನ ಸಹಿತ 10 ಮಂದಿಯನ್ನು ವಿದ್ಯಾನಗರ ಪೊಲೀಸರು ಬಂಧಿಸಿ ಆ ಬಳಿಕ ಬಿಡುಗಡೆಗೊಳಿಸಿದರು.
14ರಂದು ಅಡ್ಕಸ್ಥಳ, 15ರಂದು ಪಳ್ಳತ್ತಡ್ಕ, 16ರಂದು ನೆಲ್ಲಿಕಟ್ಟೆ, 17ರಂದು ಉಕ್ಕಿನಡ್ಕ, 18ರಂದು ಬದಿಯಡ್ಕ ಹಾಗೂ 19ರಂದು ಪೆರ್ಲದಲ್ಲಿ ರಸ್ತೆ ತಡೆ ಸರಣಿ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ ರಾಷ್ಟ್ರೀಯ ಹೆದ್ದಾರಿ ಶೋಚನೀಯಾವಸ್ಥೆಯನ್ನು ಪ್ರತಿಭಟಿಸಿ ಸೆ. 14ರಂದು ಕಾಸರಗೋಡು, ಕುಂಬಳೆ, ಮಂಗಲ್ಪಾಡಿ, ತಲಪ್ಪಾಡಿ ಮೊದಲಾ ದೆಡೆಗಳಲ್ಲಿ ಬಿಜೆಪಿಯಿಂದ ರಸ್ತೆ ತಡೆ ಚಳವಳಿ ನಡೆಯಲಿದೆ.
ಸೆ. 14ರಂದು ಬೆಳಗ್ಗೆ 9.30ಕ್ಕೆ ಹೊಸಂಗಡಿ ಯಲ್ಲಿ ನಡೆಯುವ ರಸ್ತೆ ತಡೆ ಪ್ರತಿಭಟನೆ ಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್ ಉದ್ಘಾಟಿಸುವರು. ಉಪ್ಪಳ ಜಂಕ್ಷನ್‌ನಲ್ಲಿ ನಡೆಯುವ ಪ್ರತಿಭಟನೆಯನ್ನು ಕೆ.ಪಿ. ವಲ್ಸರಾಜ್ ಉದ್ಘಾಟಿಸುವರು. ಕುಂಬಳೆಯಲ್ಲಿ ನಡೆಯುವ ಪ್ರತಿಭಟನೆಯನ್ನು ಬಿಜೆಪಿ ಮಂಜೇಶ್ವರ ಮಂಡಲಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಉದ್ಘಾಟಿಸುವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kasaragod Crime News: ರಸ್ತೆಯಲ್ಲಿ ಬಿಯರ್ ಬಾಟ್ಲಿ ಒಡೆದ ಮೂವರ ಬಂಧನ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kasaragod: ರಸ್ತೆಯಲ್ಲಿ ಬಿಯರ್ ಬಾಟ್ಲಿ ಎಸೆದು ಘರ್ಷಣೆಗೆ ಯತ್ನ; ಕೇಸು ದಾಖಲು
Kasaragod ಅಪರಾಧ ಸುದ್ದಿಗಳು; ತಂಬಾಕು ಉತ್ಪನ್ನಗಳ ಸಹಿತ ಇಬ್ಬರ ಬಂಧನ
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.