ಸಿಎಂ ಪರಿಹಾರ ನಿಧಿಗೆ 1 ಎಕರೆ ಸ್ಥಳ ಕೊಡುಗೆ
Team Udayavani, Aug 24, 2018, 9:57 AM IST
ಕಾಸರಗೋಡು: ರಾಜ್ಯದ ನೆರೆ ಬಾಧಿತರಿಗೆ ಹೊಸ ಬದುಕು ಕಲ್ಪಿಸಲು ಇಲ್ಲಿನ ವ್ಯಾಪಾರಿಯೊಬ್ಬರು ಸಿಎಂ ಪರಿಹಾರ ನಿಧಿಗೆ ಒಂದು ಎಕರೆ ಜಮೀನನ್ನು ಕೊಡುಗೆ ನೀಡಿ ಮಾದರಿಯಾಗಿದ್ದಾರೆ. ಕಾಂಞಂಗಾಡ್‌ನಲ್ಲಿ ವ್ಯಾಪಾರಿ ಯಾಗಿರುವ ಪಿ.ಎ. ರವೀಂದ್ರನ್ ಅವರು ತನ್ನ ಹಾಗೂ ಪತ್ನಿ ಉಷಾ, ಪುತ್ರ ಅಖೀಲ್ ಅವರ ಹೆಸರಿನಲ್ಲಿರುವ ಹೊಸದುರ್ಗ ತಾಲೂಕಿನ ಉದುಮ ಗ್ರಾಮದ ಸರ್ವೇ ನಂಬ್ರ 44/6/ಎಬಿಇಯಲ್ಲಿ ಒಂದು ಎಕರೆ ಸ್ಥಳದ ದಾಖಲೆ, ನೀಲನಕ್ಷೆ, ತೆರಿಗೆ ರಶೀದಿ ಸಹಿತ ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ಬಾಬು ಅವರಿಗೆ ಹಸ್ತಾಂತರಿಸಿದರು. ಈ ಸ್ಥಳಕ್ಕೆ 75 ಲಕ್ಷ ರೂ. ಮೌಲ್ಯ ಅಂದಾಜಿಸಲಾಗಿದೆ.
ದಾಖಲೆಗಳನ್ನು ಸ್ವೀಕರಿಸಿದ ಡಿಸಿ ಸಂತ್ರಸ್ತರ ನೆರವಿಗಾಗಿ ಭೂಮಿಯನ್ನು ನೀಡುತ್ತಿರುವುದರಿಂದ ಈ ಪ್ರಕ್ರಿಯೆಗೆ ಸ್ಟಾಂಪ್ ಡ್ನೂಟಿ ಅಗತ್ಯವಿಲ್ಲವೆಂದು ತಿಳಿಸಿದರು. ರವೀಂದ್ರನ್ ಮತ್ತು ಪುತ್ರ, ಕುಟುಂಬ ಸದಸ್ಯರು ದಾಖಲೆ ಹಸ್ತಾಂತರ ಸಂದರ್ಭ ಉಪಸ್ಥಿತರಿದ್ದರು.
ತಜ್ಞರ ರವಾನೆ
ನೆರೆ ಪೀಡಿತ ಜಿಲ್ಲೆಗಳಲ್ಲಿ ಸಂತ್ರಸ್ತರಿಗೆ ನೆರ ವಾಗಲು ವಿದ್ಯುತ್, ಪ್ಲಂಬಿಂಗ್, ಕಾಪೆìಂಟರಿ ಮೊದಲಾದ ಕೆಲಸಗಳಲ್ಲಿ ತಜ್ಞರಾಗಿರುವವರನ್ನು ಹರಿತ ಕೇರಳ ಮಿಶನ್ ನೇತೃತ್ವದಲ್ಲಿ ಕಳುಹಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ.
ಕುಕ್ಕೆ ದೇಗುಲದಿಂದ 3 ಕೋ.ರೂ.
ಸುಬ್ರಹ್ಮಣ್ಯ: ರಾಜ್ಯದ ಸಂತ್ರಸ್ತ ರಿಗೆ ನೆರವಾಗುವ ದೃಷ್ಟಿಯಿಂದ ಸಿಎಂ ನೆರೆ ಸಂತ್ರಸ್ತರ ನಿಧಿಗೆ ಕುಕ್ಕೆ ಸುಬ್ರಹ್ಮಣ್ಯ ದೇಗುಲದಿಂದ 3 ಕೋಟಿ ರೂ. ಸಹಾಯಧನವನ್ನು ಗುರುವಾರ ನೀಡಲಾಯಿತು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅವರು ವಿಜಯ ಬ್ಯಾಂಕ್ ಶಾಖಾಧಿ ಕಾರಿಗೆ ಚೆಕ್ ಹಸ್ತಾಂತರಿಸಿದರು. ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ರವೀಂದ್ರ ಎಚ್.ಎಂ., ಬಾಲಕೃಷ್ಣ ಬಲ್ಲೇರಿ, ರಾಜೀವಿ ರೈ ಆರ್., ಮಾಧವ ಡಿ, ವಿಮಲಾ ರಂಗಯ್ಯ, ಶಿವರಾಮ ರೈ ಉಪಸ್ಥಿತರಿದ್ದರು.
ಕೊಡಗು, ಕೇರಳಕ್ಕೆ ಎ.ಜೆ. ವೈದ್ಯರ ತಂಡ
ಮಂಗಳೂರು: ಕೊಡಗು ಹಾಗೂ ಕೇರಳದ ಪ್ರವಾಹ ಸಂತ್ರಸ್ತರ ನೆರವಿಗೆ ಎ.ಜೆ. ಸಮೂಹ ಸಂಸ್ಥೆಯ ಎರಡು ಪರಿಣತ ವೈದ್ಯರ ತಂಡ ಆ. 21ರಂದು ತೆರಳಿತು. ಎ.ಜೆ. ಸಮೂಹ ಸಂಸ್ಥೆಯ ಅಧ್ಯಕ್ಷ ಡಾ| ಎ.ಜೆ. ಶೆಟ್ಟಿ ಮಾರ್ಗದರ್ಶನದಲ್ಲಿ ತಂಡವನ್ನು ಕಳುಹಿಸಿಕೊಡಲಾಯಿತು. ಸಂತ್ರಸ್ತರಿಗೆ ಅಗತ್ಯವಾದ ಸಾಮಗ್ರಿಗಳನ್ನು ಸಂಗ್ರಹಿಸಿ ವೈದ್ಯರ ತಂಡದ ಜತೆಗೆ ಕಳುಹಿಸಿಕೊಡಲಾಗಿದೆ. ಇದರಲ್ಲಿ ಕೇರಳಕ್ಕೆ 12 ವೈದ್ಯರು ಹಾಗೂ ಕೊಡಗಿಗೆ 10 ವೈದ್ಯರ ತಂಡ ತೆರಳಿದೆ.
ಈ ತಂಡಗಳು ಈಗಾಗಲೇ ಕೇರಳದ ಅಲೆಪ್ಪಿ ಮತ್ತು ಕೊಡಗಿ ನಲ್ಲಿ ಕಾರ್ಯ ಪ್ರವೃತ್ತವಾಗಿವೆ. ಎ.ಜೆ. ಸಮೂಹ ಸಂಸ್ಥೆಯ ಅಧ್ಯಕ್ಷ ಡಾ| ಎ.ಜೆ. ಶೆಟ್ಟಿ, ದ.ಕ. ಎಸ್‌ಪಿ ಡಾ| ರವಿಕಾಂತೇ ಗೌಡ ಅವರು ಸಂಸ್ಥೆಯ ಕ್ಯಾಂಪಸ್‌ನಿಂದ ಬೀಳ್ಕೊಟ್ಟರು. ಸಂಸ್ಥೆ ಉಪಾ ಧ್ಯಕ್ಷ ಪ್ರಶಾಂತ್ ಶೆಟ್ಟಿ, ಪಿಆರ್‌ಒ ಅಭಿಲಾಶ್ ಪಿ., ಆಡಳಿತಾಧಿ ಕಾರಿ ಕೆ. ದಯಾನಂದ ಶೆಟ್ಟಿ, ಪರಿಹಾರ ಸಾಮಗ್ರಿ ವಿತರಣ ತಂಡದ ಸಮನ್ವಯಾಧಿಕಾರಿ ಡಾ| ಪ್ರದೀಪ್ ಸೇನಾಪತಿ ಉಪಸ್ಥಿತರಿದ್ದರು.
ಕೇರಳದ ನೆರವಿಗೆ ಫಾ| ಮುಲ್ಲರ್ ವೈದ್ಯರ ತಂಡ
ಮಂಗಳೂರು: ಕೇರಳದ ಪ್ರವಾಹ ಸಂತ್ರಸ್ತರು ಹಾಗೂ ಅವರ ಸೇವೆಯಲ್ಲಿ ನಿರತರಾಗಿರುವ ಸ್ವಯಂಸೇವಕರ ನೆರವಿಗೆ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯರ ತಂಡ ಗುರುವಾರ ತೆರಳಿದೆ. 26 ಮಂದಿ ವೈದ್ಯರ ಸಹಿತ 35 ಜನರ ತಂಡ ಗುರುವಾರ ಸಂಜೆ ಮಂಗಳೂರಿ ನಿಂದ ಹೊರಟಿತು. ತಲಶೇರಿ, ಕೋಯಿಕ್ಕೋಡ್, ಕಣ್ಣೂರು ಧರ್ಮಪ್ರಾಂತದ ಸಹಯೋಗದಲ್ಲಿ ಸಂತ್ರಸ್ತರಿಗೆ ಉಚಿತ ಚಿಕಿತ್ಸೆ ನೀಡಲಿದೆ. ಸ್ವಯಂ ಸೇವಕ ರಿಗೆ ಚಿಕಿತ್ಸೆ, ಜಂತುಗಳ ಉಪಟಳದಿಂದ ಹಾನಿಯಾದ ಜನರಿಗೂ ಚಿಕಿತ್ಸೆ ಒದಗಿಸಲಿದೆ. ಅಗತ್ಯ ಚಿಕಿತ್ಸಾ ಸಲಕರಣೆಗಳನ್ನು ಮತ್ತು ಫಾ| ಮುಲ್ಲರ್ ಕಾಲೇಜಿನಿಂದ ಸಂಗ್ರಹಿಸಿದ ಅಗತ್ಯ ವಸ್ತುಗಳನ್ನು ಕೊಂಡೊಯ್ಯಲಾಗಿದೆ.
ಗುರುವಾರ 2ನೇ ಹಂತದ ಪರಿಹಾರ ಸಾಮಗ್ರಿ ಕಳುಹಿಸಲಾಗಿದೆ. 3ನೇ ಹಂತದಲ್ಲಿ ಕೊಡಗಿನಲ್ಲಿ ಸಹಾಯಕ್ಕೆ ಸಂಸ್ಥೆ ತೆರಳಲಿದೆ. ಆಸ್ಪತ್ರೆ ಆಡಳಿತಾಧಿಕಾರಿ ವಂ| ರುಡಾಲ್ಫ್ ರವಿ ಡೇಸಾ, ವೈದ್ಯಕೀಯ ಕಾಲೇಜಿನ ಡೀನ್ ಡಾ| ಜಯಪ್ರಕಾಶ್ ಆಳ್ವ, ಮೆಡಿಸಿನ್ ವಿಭಾಗದ ಮೇಲ್ವಿಚಾರಕ ಡಾ| ಸಂಜೀವ ರೈ ಉಪಸ್ಥಿತರಿದ್ದರು. ಆಸ್ಪತ್ರೆಯ ನಿರ್ದೇಶಕ ವಂ| ರಿಚರ್ಡ್ ಕುವೆಲ್ಲೋ ಸ್ವಾಗತಿಸಿ, ಕಾಲೇಜಿನ ಆಡಳಿತ ಅಧಿಕಾರಿ ವಂ| ಅಜಿತ್ ಮಿನೇಜಸ್ ವಂದಿಸಿದರು.
ಕಷ್ಟದಲ್ಲಿರುವವರಿಗೆ ನೆರವು ನೀಡುವ ಉದ್ದೇಶದಿಂದ ವೈದ್ಯರ ತಂಡವನ್ನು ಕೇರಳಕ್ಕೆ ಕಳುಹಿಸಿ ಕೊಡುತ್ತಿದ್ದೇವೆ. ನೋವಿನಲ್ಲಿರುವವರಿಗೆ ಸ್ಪಂದಿಸುವುದೇ ನಮ್ಮ ಧ್ಯೇಯ. ತಂಡದಲ್ಲಿರುವ 35 ಜನರೂ ಸ್ವಯಂ ಪ್ರೇರಣೆಯಿಂದ ಮುಂದೆ ಬಂದಿದ್ದಾರೆ.
– ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ
ನಿಯೋಜಿತ ಬಿಷಪ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು
Madikeri: ವೀರ ಸೇನಾನಿಗಳಿಗೆ ಅಗೌರವ: ಆರೋಪಿ ಸೆರೆ
Kumbale: ವರ್ಕಾಡಿ ಪ್ಲೈವುಡ್ ಕಾರ್ಖಾನೆಯಲ್ಲಿ ಬೆಂಕಿ ಅನಾಹುತ: ಬೆಂಕಿ: ಕೋಟ್ಯಂತರ ರೂ. ನಷ್ಟ
Kasargod: ಬೆಕ್ಕಿಗಾಗಿ ಬಾವಿಗಿಳಿದ ವಿದ್ಯಾರ್ಥಿಯ ರಕ್ಷಣೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.