ರಾಜ್ಯದಲ್ಲಿ ಬಾಲ್ಯ ವಿವಾಹ ಪ್ರಮಾಣ ಕುಸಿತ
Team Udayavani, Jul 6, 2017, 3:45 AM IST
ಕಾಸರಗೋಡು: ಕೇರಳದಲ್ಲಿ ಬಾಲ್ಯ ವಿವಾಹ ಪ್ರಮಾಣ ಗಣನೀಯವಾಗಿ ಇಳಿದಿದೆ ಎಂದು ರಾಜ್ಯ ಸ್ಥಳೀಯಾಡಳಿತ ಇಲಾಖೆಯ ಲೆಕ್ಕಾಚಾರಗಳು ಸೂಚಿಸುತ್ತವೆ. 2015 ರ ಜನಗಣತಿ ಪ್ರಕಾರ ಕೇರಳದಲ್ಲಿ 15 ರಿಂದ 18 ರ ಮಧ್ಯೆ ಪ್ರಾಯದವರ ಬಾಲ್ಯ ವಿವಾಹ ಶೇ.4.62 ಆಗಿತ್ತು. ಕ್ರೈಸ್ತ ವಿಭಾಗದಲ್ಲಿ ಶೇ.0.17. ಹಿಂದೂಗಳಲ್ಲಿ ಶೇ.1.12 ಮತ್ತು ಮುಸ್ಲಿಂ ವಿಭಾಗದಲ್ಲಿ ಶೇ.3.33 ಆಗಿತ್ತು.
ರಾಷ್ಟ್ರೀಯ ಮಟ್ಟಕ್ಕೆ ಹೋಲಿಸಿದರೆ ಕೇರಳದಲ್ಲಿ ಬಾಲ್ಯವಿವಾಹ ಪ್ರಮಾಣ ಅತೀ ಕಡಿಮೆಯಾಗಿದೆ. ಈ ಬಗ್ಗೆ ಕೇರಳೀಯರು ಹೊಂದಿರುವ ಅರಿವೇ ಬಾಲ್ಯವಿವಾಹ ಇಳಿಯಲು ಕಾರಣವಾಗಿದೆ. ಜನಸಂಖ್ಯೆಯಲ್ಲಿ ಮರಣ ಅನುಪಾತದಲ್ಲಿ ಹಿಂದೂ ವಿಭಾಗದವರು ಮುಂದಿದ್ದಾರೆಂದೂ 2015 ರ ಲೆಕ್ಕಾಚಾರಗಳು ಸೂಚಿಸುತ್ತವೆೆ. 2015 ರಲ್ಲಿ ಕೇರಳದಲ್ಲಿ ನಿಧನ ಹೊಂದಿದವರಲ್ಲಿ ಹಿಂದುಗಳು ಶೇ.60.09. ಕ್ರೈಸ್ತರು ಶೇ.20.16, ಮುಸ್ಲಿಮರು ಶೇ.19.21 ಆಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.