ಚಿತ್ತಾರಿಕಲ್: ಸ್ಮಾರ್ಟ್ ಅಂಗನವಾಡಿ ನಿರ್ಮಾಣ
Team Udayavani, Mar 13, 2020, 5:09 AM IST
ಕಾಸರಗೋಡು: ನಾಡಿನೊಂದಿಗೆ ಅಂಗನವಾಡಿಯೂ ಸ್ಮಾರ್ಟ್ ಆಗುತ್ತಿರುವ ಮೂಲಕ ಚಿತ್ತಾರಿಕಲ್ಲು ಪೇಟೆ ಗಮನ ಸೆಳೆಯುತ್ತಿದೆ.
ಜಿಲ್ಲೆಯ ಈಸ್ಟ್ ಏಳೇರಿ ಗ್ರಾಮ ಪಂಚಾಯತ್‌ನ 2ನೇ ವಾರ್ಡ್ ಚಿತ್ತಾರಿಕಲ್ ಪೇಟೆಯಲ್ಲಿರುವ ಅಂಗನವಾಡಿ ಸ್ಮಾರ್ಟ್ ಆಗುತ್ತಿದೆ. ಇಲ್ಲಿರುವ 5 ಸೆಂಟ್ಸ್ ಜಾಗದಲ್ಲಿ ಅಂಗನವಾಡಿಗಾಗಿ ನಿರ್ಮಿಸಲಾಗುತ್ತಿರುವ ಕಟ್ಟಡದಲ್ಲಿ ಸಂಸ್ಥೆಯನ್ನು ಸ್ಮಾರ್ಟ್ ಆಗಿಸುವ ಎಲ್ಲ ವ್ಯವಸ್ಥೆ ನಡೆಸಲಾಗುತ್ತಿದೆ.
2019-20ನೇ ಸಾಲಿನ ಪಂಚಾಯತ್ ಯೋಜನೆ ನಿಧಿಯ 13 ಲಕ್ಷ ರೂ. ಬಳಸಿ ಈಸ್ಟ್ ಏಳೇರಿ ಗ್ರಾಮ ಪಂಚಾಯತ್‌ನ ಈ ಪ್ರಥಮ ಸ್ಮಾರ್ಟ್ ಅಂಗನವಾಡಿ ನಿರ್ಮಿಸಲಾಗುತ್ತಿದೆ. ಪುಟಾಣಿ ಮಕ್ಕಳನ್ನು ಬರಮಾಡಿಕೊಳ್ಳುವ ನಿಟ್ಟಿನಲ್ಲಿ ಗೋಡೆಗಳಲ್ಲಿ ಬಣ್ಣ ಬಣ್ಣದ ಚಿತ್ರಗಳು, ಕಥೆ ಹೇಳುವ ಚಿತ್ರಗಳು, ಬೌದ್ಧಿಕ ಬೆಳವಣಿಗೆಗೆ ಪೂರಕವಾಗಿರುವ ಅನೇಕ ಆಟಿಕೆಗಳು, ಶಿಶು ಸೌಹಾರ್ದ ಶೌಚಾಲಯಗಳು, ಅಂಗಳಕ್ಕೆ ಇಂಟರ್ ಲಾಕ್ ವ್ಯವಸ್ಥೆ, ಸುಭದ್ರ ಆವರಣ ಗೋಡೆ, ಶಾಲೆಯ ಆವರಣದಲ್ಲಿ ತರಕಾರಿ ಕೃಷಿ ಇತ್ಯಾದಿಗಳು ಇಲ್ಲಿನ ಪ್ರಧಾನ ಆಕರ್ಷಣೆಗಳಾಗಿವೆ. ಗ್ರಾಮ ಪಂಚಾಯತ್ ಈ ಎಲ್ಲ ಚಟುವಟಿಕೆಗಳ ಉಸ್ತುವಾರಿ ವಹಿಸಲಿದೆ.
ಹಲವು ಸೇವೆಗಳು
ಪುಟಾಣಿ ಮಕ್ಕಳಲ್ಲದೆ ಫಲಾನುಭವಿ ಗಳಾದ ಯುವಜನತೆ, ಗರ್ಭಿಣಿಯರು, ಹೆತ್ತವರು ಮೊದಲಾದವರಿಗೆ ಬೇರೆ ಬೇರೆ ರೀತಿಯ ಸೇವೆಗಳು ಈ ಅಂಗನವಾಡಿ ಮೂಲಕ ಲಭಿಸಲಿವೆ. ಅಂಗನವಾಡಿ ಫಲಾನುಭವಿಗಳಿಗಾಗಿ ಜನಜಾಗೃತಿ ನಡೆಸುವ ಸೌಲಭ್ಯಗಳನ್ನೂ ಈ ಕಟ್ಟಡದಲ್ಲಿ ನಿರ್ಮಿಸಲಾಗುತ್ತಿದೆ.
ಹೆಚ್ಚುವರಿ ಸೌಲಭ್ಯಗಳ ನಿರೀಕ್ಷೆ
ಅಂಗನವಾಡಿಯ ಈಗಿರುವ ಕಟ್ಟಡದಲ್ಲಿ ಸುಮಾರು 20 ಮಕ್ಕಳು ಇದ್ದಾರೆ. ನೂತನ ಕಟ್ಟಡಕ್ಕೆ ಸ್ಥಳಾಂತರಗೊಳ್ಳುವ ವೇಳೆ ಮಕ್ಕಳ ಸಂಖ್ಯೆ ಹೆಚ್ಚುವ ನಿರೀಕ್ಷೆಯಿದೆ. ಜೊತೆಗೆ ಫಲಾನುಭವಿಗಳಿಗೆ ಹೆಚ್ಚುವರಿ ಸೇವೆ ಲಭ್ಯವಾಗಲಿದೆ.
– ಜೆಸ್ಸಿ ಟಾಂ, ಅಧ್ಯಕ್ಷೆ, ಈಸ್ಟ್ ಏಳೇರಿ ಗ್ರಾಮ ಪಂಚಾಯತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.