ತೆರವುಗೊಳಿಸಿದ ಮಣ್ಣು ಮರಳಿ ರಸ್ತೆಗೆ: ಅಪಘಾತ ಭೀತಿಯಲ್ಲಿ ಚಾಲಕರು

Team Udayavani, May 29, 2019, 6:10 AM IST

road-kasargod

ಬದಿಯಡ್ಕ: ಮಳೆಗಾಲ ಪ್ರಾರಂಭವಾಗು ತ್ತಿದ್ದಂತೆ ರಸ್ತೆಗಳ ತೇಪೆ ಕೆಲಸ ಹಾಗೂ ಕೆಲವೆಡೆಗಳಲ್ಲಿ ರಸ್ತೆಯ ಡಾಮರೀಕರಣ, ಅಗಲೀಕರಣದ ಮೂಲಕ ರಸ್ತೆ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಮಳೆಗಾಲದಲ್ಲಿ ಉಂಟಾಗಬಹುದಾದ ಅಪಘಾತ, ಪ್ರಾಣಹಾನಿಗಳನ್ನು ತಡೆಯುವ ಉದ್ಧೇಶದಿಂದ ನಡೆಯುತ್ತಿರುವ ಕಾಮಗಾರಿಯು ಇನ್ನೊಂದೆಡೆ ರಸ್ತೆ ತಡೆ ಉಂಟುಮಾಡುವ ಪರಿಸ್ಥಿತಿ ಉಕ್ಕಿನಡ್ಕ-ಚೆರ್ಕಳ ರಸ್ತೆಯ ಕೆಲವೆಡೆ ಉಂಟಾಗಿದೆ.

ರಸ್ತೆಯ ಮಣ್ಣು ರಸ್ತೆಗೆ!?
ಉಕ್ಕಿನಡ್ಕ-ಚೆರ್ಕಳ ರಸ್ತೆಯನ್ನು ಅಗಲಗೊಳಿಸುವ ವೇಳೆ ಬಾಕಿ ಉಳಿದ ಮಣ್ಣನ್ನು ಬದಿಯಡ್ಕದಿಂದ ನೆಲ್ಲಿಕಟ್ಟೆಯವರೆಗೆ ರಸ್ತೆಯ ಬದಿಯಲ್ಲಿ ರಾಶಿ ಹಾಕಲಾಗಿದೆ. ಬದಿಯಡ್ಕ-ಚೆರ್ಕಳ ರಸ್ತೆಯ ಎರಡೂ ಭಾಗಗಳಲ್ಲಿ ಮಣ್ಣು ರಾಶಿ ಹಾಕಿರುವುದು ಅಪಾಯಕ್ಕೆ ಕಾರಣವಾಗಲಿದೆ. ಇದು ಮಳೆಗಾಲದಲ್ಲಿ ನೀರಿನೊಂದಿಗೆ ರಸ್ತೆಗೆ ಹರಿದು ಬಂದು ಅಪಾಯ ಸƒಷ್ಟಿಸಲಿದೆ ಎಂದು ಚಾಲಕರು ಆತಂಕ ವ್ಯಕ್ತಪಡಿಸಿದ್ದಾರೆ. ಮೆಕ್ಕಡಾಂ ಡಾಮರೀಕರಣ ಅಂಗವಾಗಿ ಉಕ್ಕಿನಡ್ಕದಿಂದ ಬದಿಯಡ್ಕದವರೆಗೆ ರಸ್ತೆ ಅಗಲಗೊಳಿಸಲಾಗಿತ್ತು. 9 ಮೀಟರ್‌ ಅಗಲದಲ್ಲಿ ಡಾಮರೀಕರಣ ಮಾಡಬೇಕಿದ್ದು ಆನಗತ್ಯವಾಗಿ ಸುಮಾರು 15 ಮೀಟರ್‌ ಅಗಲದಲ್ಲಿ ಮಣ್ಣು ತೆಗೆಯಲಾಗಿದೆ. ಈ ಮಣ್ಣನ್ನು ಅನಂತರ ಲಾರಿಗಳಲ್ಲಿ ತುಂಬಿಸಿ ಬದಿಯಡ್ಕದ ಕೆಡೆಂಜಿಯಿಂದ ನೆಲ್ಲಿಕಟ್ಟೆವರೆಗೆ ರಸ್ತೆ ಬದಿಯಲ್ಲಿ ಹಾಕಲಾಗಿದೆ. ಇದು ಮಳೆಗಾಲದಲ್ಲಿ ರಸ್ತೆಗೆ ಹರಿದು ಬರಲಿದ್ದು, ವಾಹನ ಸಂಚಾರ ಮೊಟಕುಗೊಳ್ಳುವ ಸಾಧ್ಯತೆಯಿದೆಯೆನ್ನಲಾಗಿದೆ. ಬದಿಯಡ್ಕ ಪೆಟ್ರೋಲ್‌ ಪಂಪ್‌ ಬಳಿ, ಬಾಂಜತ್ತಡ್ಕ ತಿರುವು, ನೆಕ್ರಾಜೆ, ಚರ್ಲಡ್ಕ ನೆಲ್ಲಿಕಟ್ಟೆ ಎಂಬೆಡೆಗಳಲ್ಲಿ ಮಣ್ಣು ತುಂಬಿಸಲಾಗಿದೆ.

ಕಾಮಗಾರಿಯ ಆಮೆನಡಿಗೆ
ಮಳೆಗಾಲದ ಮೊದಲು ಉಕ್ಕಿನಡ್ಕ-ಚೆರ್ಕಳ ರಸ್ತೆಯ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆಯಿಲ್ಲ. ಆಮೆಗತಿಯಲ್ಲಿ ನಡೆಯುವ ಉಕ್ಕಿನಡ್ಕದಿಂದ ಪಳ್ಳತ್ತಡ್ಕದವರೆಗೆ ಡಾಮರೀಕರಣ ಮಳೆಗಾಲದ ಮೊದಲು ಇಲ್ಲಿಂದ 2 ಕಿಲೋ ಮೀಟರ್‌ ದೂರದ ಕಾಡಮನೆ ಅಥವಾ ಕರಿಂಬಿಲದ ವರೆಗೆ ಮಾತ್ರ ತಲುಪಲಿದೆ. ಮುಂದಿನ ಕಾಮಗಾರಿ ಮಳೆಗಾಲದ ಅನಂತರವೇ ನಡೆಯಲಿದೆಯೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ರಸ್ತೆ ಬದಿಯಲ್ಲಿ ಮಣ್ಣು ರಾಶಿ ಹಾಕಿರುವುದರಿಂದ ಹಾಗೂ ಅದು ಮಳೆಗಾಲದಲ್ಲಿ ರಸ್ತೆಗೆ ಕೆಸರಾಗಿ ಹರಿದು ಬರುವ ಸಾಧ್ಯತೆ ಇರುವುದರಿಂದ ಕೆಲವು ಚಾಲಕರು ಲೋಕೋಪಯೋಗಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಆದರೆ ಅವರು ಈ ಬಗ್ಗೆ ಗಮನ ಹರಿಸಿಲ್ಲವೆನ್ನಲಾಗಿದೆ.

ಇಲ್ಲಿ ಸಮಸ್ಯೆಗಳು ಮುಗಿಯುವುದೇ ಇಲ್ಲ
ಜನರ ಬಹುಕಾಲದ ಬೇಡಿಕೆಯಂತೆ ಈ ರಸ್ತೆಯ ಕಾಮಗಾರಿ ಪ್ರಾರಂಭವಾಗಿದ್ದು ಮಣ್ಣಿನ ಸಮಸ್ಯೆಯಿಂದ ಚೆರ್ಕಳ-ಪೆರ್ಲ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡರೆ ಅದು ಇನ್ನೊಂದು ಸಮಸ್ಯೆಯಾಗಿ ಕಾಡಲಿದೆ. ಸದಾ ಒಂದಲ್ಲ ಒಂದು ಸಮಸ್ಯೆಯ‌ ಆಗರವಾಗಿರುವ ಈ ರಸ್ತೆಯ ಸಮಸ್ಯೆ ಪೂರ್ಣವಾಗಿ ಕೊನೆಯಾಗುವ ದಿನಗಳು ಇನ್ನೂ ದೂರವಿದೆ ಎಂಬುದು ಇದರಿಂದ ಸಾಬೀತಾದಂತಾಗಿದೆ.

– ಅಖೀಲೇಶ್‌ ನಗುಮುಗಂ

ಟಾಪ್ ನ್ಯೂಸ್

6-

Kundapura: ಸುಜ್ಞಾನ್‌ ಪಿಯು ಕಾಲೇಜು: ಸಂಬ್ರಮದ ಕ್ರಿಸ್‌ಮಸ್‌ ಆಚರಣೆ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ

Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

Shivaraj Kumar: ಶಿವರಾಜ್‌ ಕುಮಾರ್‌ ಅವರ ಆಪರೇಷನ್‌ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ

5-mudigere

Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ; 25ಕ್ಕೂ ಅಧಿಕ ಸಾ*ವು

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

6-

Kundapura: ಸುಜ್ಞಾನ್‌ ಪಿಯು ಕಾಲೇಜು: ಸಂಬ್ರಮದ ಕ್ರಿಸ್‌ಮಸ್‌ ಆಚರಣೆ

Theft Case: ಬೀಗ ಹಾಕಿದ್ದ ಮನೆಗೆ ಕನ್ನ: ಓರ್ವ ಸೆರೆ

Theft Case: ಬೀಗ ಹಾಕಿದ್ದ ಮನೆಗೆ ಕನ್ನ: ಓರ್ವ ಸೆರೆ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ

ಡಿ. 31: ಸಾಸ್ತಾನ ಟೋಲ್‌ ವಿರುದ್ಧ ಬೃಹತ್‌ ಪ್ರತಿಭಟನೆಗೆ ಸಿದ್ಧತೆ-ಅಂಗಡಿ-ಮುಂಗಟ್ಟು ಬೆಂಬಲ

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ

Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.